2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿ ಆರ್ಸಿಬಿ ಕ್ಯಾಪ್ಟನ್ ಫಾಫ್ ಬ್ಯಾಟಿಂಗ್ನಲ್ಲಿ ವೈಫಲ್ಯ..!
ಮತ್ತೆ ಡಿಕೆ ಅಥವಾ ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಪ್ಟನ್ಸಿ ಪಟ್ಟ
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ 17ನೇ ಸೀಸನ್ ಶುರುವಾಗಿದೆ. ಕಳೆದ ತಿಂಗಳು ಮಾರ್ಚ್ 22ನೇ ತಾರೀಕಿನಿಂದಲೇ ಶುರುವಾದ ಈ ಸೀಸನ್ನಲ್ಲಿ ಇದುವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ಪಂದ್ಯಗಳು ಆಡಿವೆ. ಈ ಪೈಕಿ ಕೇವಲ ಒಂದು ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದಿದ್ದು, ಇನ್ನುಳಿದ 4 ಮ್ಯಾಚ್ಗಳಲ್ಲಿ ಸೋತಿದೆ. ಇದಕ್ಕೆ ಕಾರಣ ಆರ್ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯ. ಅದರಲ್ಲೂ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಅಂತೂ 5 ಪಂದ್ಯಗಳಲ್ಲೂ ಹೇಳಿಕೊಳ್ಳುವ ಪ್ರದರ್ಶನವೇನು ನೀಡಿಲ್ಲ. ಹಾಗಾಗಿ ನಾಯಕತ್ವದ ಒತ್ತಡಕ್ಕೆ ಸಿಲುಕಿ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇನ್ನು, ಈಗಾಗಲೇ ತನ್ನ ಒತ್ತಡದ ಬಗ್ಗೆ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಓಪನ್ ಆಗಿ ಮಾತಾಡಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್ಮೆಂಟ್ ವಿರಾಟ್ ಕೊಹ್ಲಿಗೆ ಮತ್ತೆ ಕ್ಯಾಪ್ಟನ್ ಆಗಿ ಎಂದು ಒತ್ತಡ ಹಾಕುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಮತ್ತೆ ಕೊಹ್ಲಿ ಆರ್ಸಿಬಿ ಕ್ಯಾಪ್ಟನ್ ಆಗ್ತಾರಾ? ಅನ್ನೋ ಚರ್ಚೆ ಶುರುವಾಗಿದೆ.
If I were part of the RCB management, I would immediately announce Virat Kohli as the captain to save the season. If he refused, I would request Dinesh Karthik to lead the team as Faf looks clueless, to say the least. pic.twitter.com/aHs2qf59re
— Abhishek (@vicharabhio) April 6, 2024
ಐಪಿಎಲ್ ಪ್ರಾರಂಭವಾದ 2008ರಿಂದಲೂ ಕೊಹ್ಲಿ ಆರ್ಸಿಬಿ ಜೊತೆ ಇದ್ದಾರೆ. ಅನಿಲ್ ಕುಂಬ್ಳೆ ನಿವೃತ್ತಿ ಹೊಂದಿದ ಬಳಿಕ 2011ರಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿ ನಾಯಕರಾದರು. ಆದರೆ, ಒಮ್ಮೆಯೂ ಕೊಹ್ಲಿ ಐಪಿಎಲ್ ಟೂರ್ನಿ ಗೆಲ್ಲಲು ಸಾಧ್ಯವಾಗಿಲ್ಲ.
ದಿನೇಶ್ ಕಾರ್ತಿಕ್, ವಿರಾಟ್ಗೆ ನಾಯಕತ್ವದ ಪಟ್ಟ!
ವಿರಾಟ್ ಕೊಹ್ಲಿ 2022 ಟಿ20 ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿದರು. ಬಳಿಕ ಐಪಿಎಲ್ನಲ್ಲೂ ಆರ್ಸಿಬಿ ಕ್ಯಾಪ್ಟನ್ಸಿಗೂ ವಿದಾಯ ಹೇಳಿದ್ರು. ಕೆಲ ಮಾಧ್ಯಮ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತೆ ಆರ್ಸಿಬಿ ಕ್ಯಾಪ್ಟನ್ ಆಗೋ ಸಾಧ್ಯತೆ ಇದೆ. ಇಷ್ಟೇ ಅಲ್ಲ ಅಭಿಮಾನಿಗಳು ಕೂಡಲೇ ಕೊಹ್ಲಿಯನ್ನು ಕ್ಯಾಪ್ಟನ್ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಆಗುತ್ತಿರೋ ಅವಮಾನದಿಂದ ಕೊಹ್ಲಿ ಅಥವಾ ದಿನೇಶ್ ಕಾರ್ತಿಕ್ ಆರ್ಸಿಬಿ ಕ್ಯಾಪ್ಟನ್ಸಿ ಪಟ್ಟ ಸಿಗಲಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿದ್ರಾ ಫಾಫ್ ಡುಪ್ಲೆಸಿಸ್? ಆರ್ಸಿಬಿ ನಾಯಕ ಬೇಸರ ಹೊರಹಾಕಿದ್ದೇಕೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ