ಪ್ಲೇ ಆಫ್ಗೆ ಹೋಗಲು ಆರ್ಸಿಬಿ ಟೀಮ್ಗೆ ಇದೆ ಸುವರ್ಣಾವಕಾಶ!
ಆರ್ಸಿಬಿ ಮಾಡಬೇಕಿರೋ ಕೆಲಸ, ಉಳಿದ ಒಂದು ಪಂದ್ಯ ಗೆಲ್ಲೋದು
ಜತೆಗೆ ಚೆನ್ನೈ, ಹೈದರಾಬಾದ್ ಟೀಮ್ ಎಲ್ಲಾ ಪಂದ್ಯಗಳು ಸೋಲುವುದು
ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನದಲ್ಲಿದ್ದ ಆರ್ಸಿಬಿ 5ನೇ ಸ್ಥಾನಕ್ಕೆ ಜಿಗಿದಿದೆ. ನೆಟ್ ರನ್ ರೇಟ್ ಭಾರೀ ಸುಧಾರಣೆ ಕಂಡಿದ್ದು, ಸಿಎಸ್ಕೆ ವಿರುದ್ಧ ಗೆದ್ದರೆ ಪ್ಲೇ ಆಫ್ಗೆ ಆರ್ಸಿಬಿ ಹೋಗೋದು ಕನ್ಫರ್ಮ್ ಆಗಿದೆ.
ಪ್ಲೇ ಆಫ್ಗೆ ಹೋಗಲು ಆರ್ಸಿಬಿ ಏನು ಮಾಡಬೇಕು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾನು ಆಡಿರೋ 13 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಗಳಿಸಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದು ಆರ್ಸಿಬಿ ರನ್ ರೇಟ್ +0.387 ಇದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿ ಕೇವಲ 18 ರನ್ನಿಂದ ಗೆದ್ದರೆ ಸಾಕು ಪ್ಲೇ ಆಫ್ಗೆ ಹೋಗೋದು ಪಕ್ಕಾ. ಒಂದು ವೇಳೆ ಚೇಸಿಂಗ್ ಮಾಡಿದ್ರೂ ಇನ್ನೂ 11 ಬಾಲ್ ಬಾಕಿ ಇರುವಂತೆ ಆರ್ಸಿಬಿ ಮ್ಯಾಚ್ ಗೆಲ್ಲಲೇಬೇಕು.
ಆರ್ಸಿಬಿ ಮೊದಲರ್ಧ ಸೀಸನ್ನಲ್ಲಿ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು 7ರಲ್ಲಿ ಸೋತು ಕೊನೆ ಸ್ಥಾನದಲ್ಲಿ ಇತ್ತು. ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿದ ಆರ್ಸಿಬಿ ಬರೋಬ್ಬರಿ 5 ಪಂದ್ಯಗಳು ಸತತವಾಗಿ ಗೆದ್ದು ತನ್ನ ಪ್ಲೇ ಆಫ್ಗೆ ಹೋಗೋ ಚಾನ್ಸ್ ಹೆಚ್ಚಿಸಿಕೊಂಡಿದೆ.
ಇದನ್ನೂ ಓದಿ: ಪ್ಲೇ ಆಫ್ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್ಸಿಬಿ ಎಷ್ಟು ರನ್ಗಳಿಂದ ಗೆಲ್ಲಬೇಕು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್