ಕಥೆ ಮುಗೀತು ಅಂದವರಿಗೆ ರಾಯಲ್ ಸವಾಲ್
ಚೆನ್ನೈ ಎದುರು ಆರ್ಸಿಬಿ ಗೆದ್ದರೆ ಸಾಕಾ? ಲಕ್ನೋ ಕತೆ?
ಡೆಲ್ಲಿ, ಹೈದ್ರಾಬಾದ್ ತಂಡಗಳ ಕಥೆ ಏನು? ಇಲ್ಲಿದೆ ಮಾಹಿತಿ
ಫಿನಿಕ್ಸ್ನಂತೆ ಆರ್ಸಿಬಿ ಎದ್ದು ಬಂದ ಬೆನ್ನಲ್ಲೇ ಪ್ಲೇ ಆಫ್ ಲೆಕ್ಕಾಚಾರ ಜೋರಾಗಿದೆ. ಕ್ಯಾಲ್ಕ್ಯುಲೇಟರ್ ಹಿಡಿದು ಫ್ಯಾನ್ಸ್ ಲೆಕ್ಕಾಚಾರ ಹಾಕ್ತಿದ್ದಾರೆ. ಡೆಲ್ಲಿ ವಿರುದ್ದ ಭರ್ಜರಿಯಾಗಿ ಗೆದ್ದ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡುತ್ತಾ? ಸಿಎಸ್ಕೆ ಎದುರು ಸಾಮಾನ್ಯ ಗೆಲುವು ಸಾಕಾ? ಅದ್ದೂರಿ ಗೆಲುವು ಬೇಕಾ? ಪ್ಲೇ ಆಫ್ ಲೆಕ್ಕಾಚಾರದ ಕಂಪ್ಲೀಟ್ ಕಹಾನಿ ಇಲ್ಲಿದೆ.
ಐಪಿಎಲ್ ಸೀಸನ್ 17 ಹಿಂದೆದಿಗಿಂತಲೂ ರಣರೋಚಕ ಘಟ್ಟ ತಲುಪಿದೆ. ಬಲಾಢ್ಯ ತಂಡಗಳ ನಡುವೆ ಪ್ಲೇ ಆಫ್ ಎಂಟ್ರಿಗಾಗಿ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಎಲ್ರೂ ಆರ್ಸಿಬಿ ಕಥೆ ಮುಗಿದೇ ಹೋಯ್ತು ಅಂದುಕೊಂಡಿದ್ರು. ಆದ್ರೆ ಎಲ್ಲರ ಲೆಕ್ಕಾಚಾರಕ್ಕೆ ರಾಯಲ್ ಚಾಲೆಂಜ್ ಮಾಡಿ ಆರ್ಸಿಬಿ ರಣರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದೆ. ಆರ್ಸಿಬಿ ಕ್ಯಾಂಪ್ನಲ್ಲೀಗ ಪ್ಲೇ ಆಫ್ ಕನಸು ಚಿಗುರೊಡೆದಿದೆ.
ಇದನ್ನೂ ಓದಿ:ಸಣ್ಣ ವಿಚಾರಕ್ಕೆ ಕಿರಿಕ್.. ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ
ಕೆಲವೊಮ್ಮೆ ನಿರೀಕ್ಷೆ ಮಾಡದಂತ ಘಟನೆಗಳು ನಡೆಯುತ್ತವೆ. ದುರಾದೃಷ್ಟಕರವಾದ ಘಟನೆಗಳೂ ನಡೆಯುತ್ತವೆ. ಇವತ್ತು ನಾನು ಇಲ್ಲಿರೋದಕ್ಕೆ ಕಾರಣ ಇನ್ನೂ 1% ಅವಕಾಶವಿದೆ. ಕೆಲವೊಮ್ಮೆ ಈ ಅವಕಾಶ ಸಾಕು. ನೀವು ಆ 1% ಅವಕಾಶದ ಬಗ್ಗೆ ಹೇಗೆ ಯೋಚಿಸ್ತಿರಿ ಅನ್ನೋದು ಮುಖ್ಯವಾಗುತ್ತೆ-ವಿರಾಟ್ ಕೊಹ್ಲಿ
ಚೊಚ್ಚಲ WPLನಲ್ಲಿ RCB ಮಹಿಳಾ ತಂಡ ಸೋತು ಸುಣ್ಣವಾಗಿತ್ತು. ಆಗ ಡ್ರೆಸ್ಸಿಂಗ್ ರೂಮ್ಗೆ ತೆರಳಿದ್ದ ಕಿಂಗ್ ಕೊಹ್ಲಿ, ಈ ಹಿಂದೆ ಆಡಿದ ಮಾತುಗಳಿವು. ಆ ಸೀಸನ್ನಲ್ಲಿ ಈ ಆತ್ಮವಿಶ್ವಾಸದ ಮಾತುಗಳು ಮಹಿಳಾ ತಂಡದ ಪಾಲಿಗೆ ವರ್ಕೌಟ್ ಆಗ್ಲಿಲ್ಲ. ಈ ಬಾರಿ ಆರ್ಸಿಬಿ ಕ್ಯಾಂಪ್ನಲ್ಲಿ ಈ ಮಾತು ನೂರಕ್ಕೆ ನೂರರಷ್ಟು ವರ್ಕೌಟ್ ಆಗಿದೆ. ಸತತ ಸೋಲಿನಿಂದ ಕಂಗೆಟ್ಟು ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿದ್ದ ಆರ್ಸಿಬಿ ಪ್ಲೇ ಆಫ್ ರೇಸ್ಗೆ ಎಂಟ್ರಿ ಕೊಟ್ಟಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್.. ಟೀಂ ಇಂಡಿಯಾಗೆ ಕ್ಯಾಪ್ಟನ್ ರೋಹಿತ್ ಶರ್ಮಾನೇ ಕಂಟಕ..!
ಫಿನಿಕ್ಸ್ನಂತೆ ಎದ್ದು ಬಂದ ರಾಯಲ್ ಚಾಲೆಂಜರ್ಸ್..!
ಪಾಯಿಂಟ್ಸ್ ಟೇಬಲ್ನಲ್ಲಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಂಪ್ ಆಗಿದ್ದ ಆರ್ಸಿಬಿ ಇದೀಗ 5ನೇ ಸ್ಥಾನಕ್ಕೆ ಜಿಗಿದಿದೆ. ಡೆಲ್ಲಿ ವಿರುದ್ಧದ ಗೆಲುವು ಪ್ಲೇ ಆಫ್ ಎಂಟ್ರಿಯ ಅವಕಾಶವನ್ನ ಇನ್ನಷ್ಟು ಹೆಚ್ಚಿಸಿದೆ. ಮುಂದಿನ ಪಂದ್ಯದಲ್ಲಿ ಗೆದ್ರೆ, ಪ್ಲೇ ಆಫ್ಗೆ ಲೆಕ್ಕಾಚಾರ ಎಲ್ಲೆಡೆ ಶುರುವಾಗಿದೆ. ಅಸಲಿಗೆ ಸಿಎಸ್ಕೆ ವಿರುದ್ಧ ಗೆದ್ರೆ, ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡೋಕೆ ಆಗಲ್ಲ.. ಅಲ್ಲೂ ಅದೃಷ್ಟ ಕೈ ಹಿಡಿಯಲೇಬೇಕಿದೆ.
ಪ್ಲೇ ಆಫ್ ಎಂಟ್ರಿಗೆ ಶುರುವಾಯ್ತು ಜಿದ್ದಾಜಿದ್ದಿನ ಪೈಪೋಟಿ..!
ನಿನ್ನೆಯ ಪಂದ್ಯದಲ್ಲಿ ಗೆದ್ದಿರುವ ಗುಜರಾತ್ ಕೂಡ ಇದೀಗ ಪ್ಲೇ ಆಫ್ ರೇಸ್ಗೆ ಕಾಲಿಟ್ಟಿದೆ. ಆದ್ರೆ, ರನ್ರೇಟ್ ಲೆಕ್ಕಾಚಾರದಲ್ಲಿ ಗುಜರಾತ್ ಹಾಗೂ ಡೆಲ್ಲಿಗೆ ಅವಕಾಶ ತೀರಾ ಕಡಿಮೆಯಿದೆ./ ನಿನ್ನೆಯ ಪಂದ್ಯದಲ್ಲಿ ಸೋತ ಗುಜರಾತ್ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ. ರನ್ರೇಟ್ ಲೆಕ್ಕಾಚಾರದಲ್ಲಿ ಡೆಲ್ಲಿಗೆ ಅವಕಾಶ ತೀರಾ ಕಡಿಮೆಯಿದೆ. ಸಾಲಿಡ್ ಫಾರ್ಮ್ನಲ್ಲಿರೋ ಸನ್ರೈಸರ್ಸ್ ಹೈದ್ರಾಬಾದ್ ಮುಂದಿನ 1 ಪಂದ್ಯದಲ್ಲಿ ಗೆದ್ರೆ ಸೇಫ್ ಆಗಲಿದೆ. ಉಳಿದ 1 ಸ್ಥಾನಕ್ಕೆ ಲಕ್ನೋ, ಚೆನ್ನೈ, ಬೆಂಗಳೂರು ತಂಡಗಳ ನಡುವೆ ಪೈಪೋಟಿಯಿದೆ.
ಇದನ್ನೂ ಓದಿ:ಪ್ಲೇ ಆಫ್ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್ಸಿಬಿ ಎಷ್ಟು ರನ್ಗಳಿಂದ ಗೆಲ್ಲಬೇಕು?
ಲಕ್ನೋ ಸೋಲಿಗೆ ಶುರುವಾಯ್ತು ಪ್ರಾರ್ಥನೆ
6 ಪಂದ್ಯ ಪಾಯಿಂಟ್ಸ್ ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್ ಇನ್ನುಳಿದ 2 ಪಂದ್ಯ ಗೆದ್ರೆ ಆರ್ಸಿಬಿ ಕನಸು ನುಚ್ಚುನೂರಾಗಲಿದೆ. ಇಂದು ನಡೆಯೋ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬರುವ ಮುಂಬೈ ಎದುರಿನ ಬ್ಯಾಟಲ್ನಲ್ಲಿ ಲಕ್ನೋ ಸೋತ್ರೆ, ಆರ್ಸಿಬಿ ಪ್ಲೇ ಆಫ್ ಎಂಟ್ರಿಯ ಆಸೆ ಜೀವಂತವಾಗಿರಲಿದೆ. ಅದೃಷ್ಟ ಕೈ ಹಿಡಿದು ಲಕ್ನೋ ಸೋತ್ರೂ ಸಿಎಸ್ಕೆ ಎದುರು ಭರ್ಜರಿ ಗೆಲುವಿನ ಅಗತ್ಯತೆ ಆರ್ಸಿಬಿಗಿದೆ.
ಮೇ 18.. ಆರ್ಸಿಬಿಯ ಟಾರ್ಗೆಟ್ ಕೂಡ 18..!
ಅಂದುಕೊಂಡತೆ ಲಕ್ನೋ, ಡೆಲ್ಲಿ ತಂಡಗಳು ಪ್ಲೇ ಆಫ್ ರೇಸ್ನಿಂದ ಔಟಾದ್ರೆ ಮೇ 18ರಂದು ನಡೆಯೋ ಸಿಎಸ್ಕೆ VS ಆರ್ಸಿಬಿ ಕದನ ಎಲಿಮಿನೇಟರ್ ಸ್ವರೂಪ ಪಡೆದುಕೊಳ್ಳಲಿದೆ. ಈ ಪಂದ್ಯದಲ್ಲಿ ಆರ್ಸಿಬಿಗೆ ಸಾಮಾನ್ಯ ಗೆಲುವು ಸಾಕಾಗಲ್ಲ.. ರನ್ರೇಟ್ ಹೆಚ್ಚಿಸಿಕೊಳ್ಳಬೇಕಂದ್ರೆ, ಭರ್ಜರಿ ಗೆಲುವು ಬೇಕು. ಉದಾಹರಣೆಗೆ ಮೊದಲು ಬ್ಯಾಟಿಂಗ್ ನಡೆಸಿ 200 ರನ್ಗಳಿಸಿದ್ರೆ, 18 ರನ್ ಅಂತರದಲ್ಲಿ ಗೆಲ್ಲಬೇಕಿದೆ. ಒಂದು ವೇಳೆ ಚೇಸಿಂಗ್ ಮಾಡಿದ್ರೆ, 18.1 ಓವರ್ಗಳಲ್ಲಿ ಗುರಿ ಮುಟ್ಟಬೇಕು. ಆಗ ಮಾತ್ರ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡಲಿದೆ.
ಇದನ್ನೂ ಓದಿ:LSG vs DC ಮಧ್ಯೆ ಹೈ-ವೋಲ್ಟೇಜ್ ಪಂದ್ಯ; ಆರ್ಸಿಬಿ ಪ್ಲೇ ಆಫ್ಗೆ ಇವತ್ತು ಯಾವ ತಂಡ ಗೆದ್ದರೆ ಉತ್ತಮ..?
ಸತತ 6 ಸೋಲುಗಳನ್ನು ಕಂಡು ಇದೀಗ ಸತತವಾಗಿ 5 ಪಂದ್ಯ ಗೆದ್ದಿರೋ ಆರ್ಸಿಬಿ ಆಟ ಮೊದಲಿನಂತಿಲ್ಲ. ಜೊತೆಗೆ ಲಾಯಲ್ ಅಭಿಮಾನಿಗಳ ಪ್ರಾರ್ಥನೆಯೋ ಏನೋ, ಆ ದೇವರು ಕೂಡ ಆರ್ಸಿಬಿ ಬೆಂಬಲಕ್ಕೆ ನಿಂತಂತಿದೆ. ಪ್ರತಿ ಪಂದ್ಯದಲ್ಲೂ ಅದೃಷ್ಟ ಕೈ ಹಿಡಿದಿದೆ. ಈ ಅದೃಷ್ಟದಾಟ ನೋಡಿದ್ರೆ, ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡೋದಲ್ಲ.. ಕಪ್ ಗೆದ್ರೂ ಆಶ್ಚರ್ಯಪಡಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್