/newsfirstlive-kannada/media/post_attachments/wp-content/uploads/2025/05/Blessing_Muzarabani-r.jpg)
ಪ್ಲೇ ಆಫ್ ಫೈಟ್ಗೂ ಮುನ್ನ ಆರ್ಸಿಬಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದೆ. ಲುಂಗಿ ಎನ್ಗಿಡಿ ಸ್ಥಾನಕ್ಕೆ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿಯನ್ನ ಆಯ್ಕೆ ಮಾಡಿಕೊಂಡಿದೆ. ಇದ್ರ ಬೆನ್ನಲ್ಲೇ ಆರ್ಸಿಬಿ ಮ್ಯಾನೇಜ್ ಮೆಂಟ್ ಟ್ರೋಲ್ಗೆ ಆಹಾರವಾಗಿದೆ. ಹಾಗಾದ್ರೆ, ಮುಝರ್ಬಾನಿ ಬೆಸ್ಟ್ ಆಯ್ಕೆ ಅಲ್ವಾ, ಆರ್ಸಿಬಿ ಈ ವೇಗಿಗೆ ಮಣೆ ಹಾಕಿದ್ಯಾಕೆ?.
ಐಪಿಎಲ್ನ ಪ್ಲೇ ಆಫ್ ಹಂತದ ಪಂದ್ಯಗಳಿಗೆ ಕೌಂಟ್ಡೌನ್ ಸ್ಟಾರ್ಟ್ ಆದ ಬೆನ್ನಲ್ಲೇ ಫ್ರಾಂಚೈಸಿಗಳಿಗೆ ಪ್ರಮುಖ ಆಟಗಾರರ ಅಲಭ್ಯತೆಯ ಟೆನ್ಶನ್ ಕಾಡ್ತಿದೆ. ಮಹತ್ವದ ಘಟ್ಟದಿಂದ ಕೆಲ ಆಟಗಾರರು ಹೊರ ಬೀಳಲಿದ್ದು, ಅವರ ಸ್ಥಾನಕ್ಕೆ ರಿಪ್ಲೇಸ್ಮೆಂಟ್ ಪ್ಲೇಯರ್ಗಳ ಆಯ್ಕೆ ಫ್ರಾಂಚೈಸಿಗಳ ವಲಯದಲ್ಲಿ ನಡೀತಿದೆ. ಇದೇ ರೀತಿ ನ್ಯಾಷನಲ್ ಡ್ಯೂಟಿ ಕಾರಣಕ್ಕೆ ತಂಡ ತೊರೆಯುತ್ತಿರೋ ವೇಗಿ ಲುಂಗಿ ಎನ್ಗಿಡಿ ಸ್ಥಾನಕ್ಕೆ ಆರ್ಸಿಬಿ ಕೂಡ ಹೊಸ ಆಟಗಾರನನ್ನ ಆಯ್ಕೆಮಾಡಿದೆ. ಆರ್ಸಿಬಿಯ ಈ ಆಯ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಶಾಕ್ ನೀಡಿದೆ.
/newsfirstlive-kannada/media/post_attachments/wp-content/uploads/2025/05/𝗕𝗹𝗲𝘀𝘀𝗶𝗻𝗴_𝗠𝘂𝘇𝗮𝗿𝗮𝗯𝗮𝗻𝗶_2.jpg)
ಲುಂಗಿ ಎನ್ಗಿಡಿ ಸ್ಥಾನಕ್ಕೆ ಸರ್ಪ್ರೈಸ್ ಪಿಕ್ ಮಾಡಿದ ಆರ್ಸಿಬಿ.!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಿನ್ನೆಲೆಯಲ್ಲಿ ಲುಂಗಿ ಎನ್ಗಿಡಿ ಪ್ಲೇ ಆಫ್ ಪಂದ್ಯಗಳಿಂದ ಹೊರ ಬೀಳಲಿದ್ದಾರೆ. ಈ ಸ್ಥಾನಕ್ಕೆ ಆರ್ಸಿಬಿ ಮ್ಯಾನೇಜ್ಮೆಂಟ್ ಬ್ಲೆಸಿಂಗ್ ಬ್ಲೆಸ್ಸಿಂಗ್ ಮುಜರಬಾನಿಯನ್ನ ಆಯ್ಕೆ ಮಾಡಿದೆ. ಇದು ಅಭಿಮಾನಿಗಳ ವಲಯದಲ್ಲಿ ಸರ್ಪ್ರೈಸ್ ಮೂಡಿಸಿದ್ದಲ್ಲದೇ, ಜಿಂಬಾಬ್ವೆ ವೇಗಿಯನ್ನ ಪಿಕ್ ಮಾಡಿದ ಬೆನ್ನಲ್ಲೇ ಮ್ಯಾನೇಜ್ಮೆಂಟ್ ಸಾಕಷ್ಟು ಟ್ರೋಲ್ಗೆ ಒಳಗಾಗ್ತಿದೆ. ಆದ್ರೆ, ಆರ್ಸಿಬಿ ಮ್ಯಾನೇಜ್ಮೆಂಟ್ ಸಾಕಷ್ಟು ಲೆಕ್ಕಾಚಾರ ಹಾಕಿಯೇ ಈ ಪಿಕ್ ಮಾಡಿದೆ.
T20ಯಲ್ಲಿ ಸಾಲಿಡ್ ರೆಕಾರ್ಡ್, ಹೈಟ್ ಅಡ್ವಾಂಟೇಜ್.!
ಆರ್ಸಿಬಿಯ ನಯಾ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಟಿ20 ಫಾರ್ಮೆಟ್ನಲ್ಲಿ ಸಾಲಿಡ್ ರೆಕಾರ್ಡ್ ಹೊಂದಿದ್ದಾರೆ. ಬರೋಬ್ಬರಿ 6.8 ಅಡಿ ಎತ್ತರದ ಮುಜರಬಾನಿಗೆ ವೇರಿಯೇಷನ್ ಬೌಲಿಂಗ್ ಹೆಸರುವಾಸಿ. ತನ್ನ ಹೈಟ್ನ ಅಡ್ವಾಂಟೇಜ್ನಿಂದಲೇ ಬೌನ್ಸಿ ಟ್ರ್ಯಾಕ್ಗಳಲ್ಲಿ ಬ್ಯಾಟ್ಸ್ಮನ್ಗಳಿಗೆ ಟ್ರಬಲ್ ಮಾಡಬಲ್ಲರು.
RCB ಹೆಡ್ ಕೋಚ್ ಆ್ಯಂಡಿ ಫ್ಲವರ್ ಪಕ್ಕಾ ಶಿಷ್ಯ.!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚರಿಷ್ಮಾ ಬದಲಿಸಿರೋ ಕೋಚ್ ಆ್ಯಂಡಿ ಫ್ಲವರ್ರ ಪಕ್ಕಾ ಶಿಷ್ಯ ಈ ಬ್ಲೆಸ್ಸಿಂಗ್ ಮುಜರಬಾನಿ. ಇಬ್ಬರೂ ಜಿಂಬಾಬ್ವೆಯವರು ಮ್ಯಾನೇಜ್ಮೆಂಟ್ ಕೋಟಾ ಅದಕ್ಕೆ ಅವಕಾಶ ಅನ್ಕೋಬೇಡಿ. ಟ್ಯಾಲೆಂಟ್ ಇರೋದಕ್ಕೆ ಚಾನ್ಸ್ ಸಿಕ್ಕಿರೋದು. ಲೆಜೆಂಡ್ ಹೀತ್ ಸ್ಟ್ರೈಕ್ ಬಳಿಕ ಜಿಂಬಾಬ್ವೆಗೆ ಸಿಕ್ಕ ದಿ ಬೆಸ್ಟ್ ಬೌಲರ್ ಎಂಬ ಖ್ಯಾತಿಯನ್ನ ಮುಜರಬಾನಿ ಹೊಂದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಎಕಾನಮಿಕಲ್ ಬೌಲಿಂಗ್ನಿಂದಲೇ ಹವಾ ಸೃಷ್ಟಿಸಿದ್ದಾರೆ.
T20Iನಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ಪ್ರದರ್ಶನ
T20 ಇಂಟರ್ನ್ಯಾಷನಲ್ಸ್ನಲ್ಲಿ ಜಿಂಬಾಂಬ್ವೆ ಪರ 114 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಬ್ಲೆಸ್ಸಿಂಗ್ ಮುಜರಬಾನಿ 127 ವಿಕೆಟ್ ಕಬಳಿಸಿದ್ದಾರೆ. 7.24ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿರುವ ಜಿಂಬಾಬ್ವೆ ವೇಗಿ, 8 ರನ್ ನೀಡಿ 3 ವಿಕೆಟ್ ಉರುಳಿಸಿರೋದು ಬೆಸ್ಟ್ ಸಾಧನೆಯಾಗಿದೆ.
ಏಷ್ಯನ್ ಕಂಡಿಷನ್ಸ್ನಲ್ಲಿ ಅದ್ಭುತ ಬೌಲಿಂಗ್.!
ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಏಷ್ಯನ್ ಕಂಡಿಷನ್ಸ್ನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಎಕಾನಮಿಯನ್ನ ಕಾಯ್ದುಕೊಳ್ಳೋದ್ರ ಜೊತೆಗೆ ವಿಕೆಟ್ ಬೇಟೆಯಾಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್, ಯುಎಇನಲ್ಲಿ ನಡೆಯೋ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ಅದ್ಭುತ ಆಟವಾಡಿದ್ದಾರೆ. ಅಲ್ಲಿನ ಪ್ಲೇಯಿಂಗ್ ಕಂಡಿಷನ್ಸ್ಗೂ ಭಾರತದ ಪ್ಲೇಯಿಂಗ್ ಕಂಡಿಷನ್ಸ್ಗೂ ಸಾಮ್ಯತೆ ಇದೆ. ಆರ್ಸಿಬಿಯ ಆಯ್ಕೆ ಹಿಂದೆ ಈ ಲೆಕ್ಕಾಚಾರವೂ ಇದೆ.
PSLನಲ್ಲಿ ಮುಝರಬಾನಿ ಪ್ರದರ್ಶನ
ಪಾಕಿಸ್ತಾನ್ ಸೂಪರ್ ಲೀಗ್ 2 ತಂಡಗಳನ್ನ ಪ್ರತಿನಿಧಿಸಿರುವ ಮುಝರಬಾನಿ 15 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. 21 ವಿಕೆಟ್ಗಳನ್ನ ಉರುಳಿಸಿದ್ದು 7.79ರ ಎಕಾನಮಿ ಕಾಯ್ದುಕೊಂಡಿದ್ದಾರೆ. 18 ರನ್ ನೀಡಿ 3 ವಿಕೆಟ್ ಉರುಳಿಸಿರೋದು ಈವರೆಗಿನ ಬೆಸ್ಟ್ ಸ್ಪೆಲ್ ಆಗಿದೆ.
ಇದನ್ನೂ ಓದಿ: KL ರಾಹುಲ್ಗೆ ಏನಾಯಿತು.. ಇಂದಿನ ಮಹತ್ವದ ಪಂದ್ಯದಲ್ಲಿ ಆಡ್ತಾರಾ?
/newsfirstlive-kannada/media/post_attachments/wp-content/uploads/2025/05/𝗕𝗹𝗲𝘀𝘀𝗶𝗻𝗴_𝗠𝘂𝘇𝗮𝗿𝗮𝗯𝗮𝗻𝗶.jpg)
ILT20ಯಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ಪ್ರದರ್ಶನ
UAEನಲ್ಲಿ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ 17 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರೋ ಬ್ಲೆಸ್ಸಿಂಗ್ ಮುಜರಬಾನಿ 22 ವಿಕೆಟ್ ಉರುಳಿಸಿದ್ದಾರೆ. 7.10ರ ಎಕಾನಮಿ ಹೊಂದಿದ್ದು, 25 ರನ್ ನೀಡಿ 3 ವಿಕೆಟ್ ಕಬಳಿಸಿದ್ದು ಬೆಸ್ಟ್ ಸಾಧನೆಯಾಗಿದೆ.
ಲಕ್ನೋ ನೆಟ್ ಬೌಲರ್ ಆಗಿದ್ದ ಬ್ಲೆಸಿಂಗ್ ಮುಝರಬಾನಿ.!
ಈ ಹಿಂದೆ ಆ್ಯಂಡಿ ಫ್ಲವರ್ ಲಕ್ನೋ ಸೂಪರ್ ಜೈಂಟ್ಸ್ನ ಹೆಡ್ಕೋಚ್ ಆಗಿದ್ದ ಅವಧಿಯಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ತಂಡದ ನೆಟ್ ಬೌಲರ್ ಆಗಿದ್ದರು. ಸದ್ಯ ಇಂಟರ್ನ್ಯಾಷನಲ್ ಟಿ20ಯಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ಆಡೋ ಗಲ್ಫ್ ಜೈಂಟ್ಸ್ ತಂಡಕ್ಕೆ ಇದೇ ಆ್ಯಂಡಿ ಫ್ಲವರ್ ಹೆಡ್ಕೋಚ್ ಆಗಿದ್ದಾರೆ. ಈ ವೇಗಿಯ ಸಾಮರ್ಥ್ಯ ಆ್ಯಂಡಿ ಫ್ಲವರ್ಗೆ ಚೆನ್ನಾಗಿ ತಿಳಿದಿದೆ. ಈ ಎಲ್ಲಾ ಲೆಕ್ಕಾಚಾರ ಹಾಕಿಯೇ ಆರ್ಸಿಬಿ ಜಿಂಬಾಬ್ವೆ ವೇಗಿಗೆ ಸೈನ್ ಮಾಡಿದೆ. ಮ್ಯಾನೇಜ್ಮೆಂಟ್ ನಂಬಿಕೆಯನ್ನ ಬ್ಲೆಸ್ಸಿಂಗ್ ಮುಜರಬಾನಿ ಉಳಿಸಿಕೊಳ್ತಾರಾ?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us