newsfirstkannada.com

ಎರಡು ಕಡೆ ಇದೆ ಟೆನ್ಷನ್​.. RCB ಖೆಡ್ಡಾಕ್ಕೆ ಕೆಡವಲು ಚೆನ್ನೈ ಬಳಿ ಇವೆಯಾ ಸ್ಪೆಷಲ್​ ಪ್ಲಾನ್​ಗಳು?

Share :

Published May 18, 2024 at 7:08pm

Update May 18, 2024 at 7:10pm

    ವಿಶೇಷ ಯೋಜನೆ ರೂಪಿಸಿದ್ದೇವೆ ಎಂದ ಬೌಲಿಂಗ್ ಕೋಚ್

    ಎರಡೂ ತಂಡಗಳು ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಲ್ಲ

    ಕೆಲವು ಪ್ಲೇಯರ್ಸ್​ ಇಂಜುರಿಯಿಂದ 2 ತಂಡದಲ್ಲಿ ಆಡುತ್ತಿಲ್ಲ!

17ನೇ ಐಪಿಎಲ್​​​​​​ನಲ್ಲಿ 4ನೇ ತಂಡವಾಗಿ ಪ್ಲೇ ಆಫ್​​​​ಗೆ ಎಂಟ್ರಿಕೊಡೋ ಟೀಮ್​ ಯಾವುದು?. ಈ ಮಿಲಿಯನ್ ಡಾಲರ್​ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ರಾಜಸ್ಥಾನ್, ಕೆಕೆಆರ್ ಹಾಗೂ ಹೈದ್ರಾಬಾದ್ ಜೊತೆ ಸೆಣಸಾಡಲು ಬದ್ಧವೈರಿ ಸಿಎಸ್​ಕೆ ಹಾಗೂ ಆರ್​ಸಿಬಿ ನಡುವೆ ಚಿನ್ನಸ್ವಾಮಿಯಲ್ಲಿ ದಂಗಲ್​ ಏರ್ಪಟ್ಟಿದೆ. ಇಲ್ಲಿ ಇರೋದೊಂದೇ ಚಾನ್ಸ್​​​.

ಆರ್​ಸಿಬಿ ಹಾಗೂ ಚೆನ್ನೈ ಎರಡೂ ತಂಡಗಳು ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಲ್ಲ. ಹಾಗಾಗಿ MUST WIN GAMEನಲ್ಲಿ ಯಾರು ಗೆಲ್ತಾರೆ ಅನ್ನೋದು ಸಾಕಷ್ಟು ಕೌತುಕತೆ ಹೆಚ್ಚಿಸಿದೆ. ಬೆಂಗಳೂರನ್ನು ಖೆಡ್ಡಾಗೆ ಕೆಡವಲು ಚೆನ್ನೈ ಬಳಿ ಸ್ಪೆಷಲ್​​​ ಪ್ಲಾನ್​ಗಳನ್ನ ಮಾಡಬಹುದು.

ಇದನ್ನೂ ಓದಿ: ಪ್ರತಿಷ್ಠೆಯ ಕಣವಾದ RCB vs CSK ಪಂದ್ಯ.. ದಾಖಲೆ ಬರೆಯಲು ರೆಡಿಯಾದ ಕೊಹ್ಲಿ, MS ಧೋನಿ; ಏನೇನು?

ಆರ್​ಸಿಬಿ ಡಿಫರೆಂಟ್ ಸ್ಟ್ರಾರ್ಟಜಿ ರೂಪಿಸಿ ಚೆನ್ನೈಗೆ ಸೋಲಿನ ಬರೆ ಮುಟ್ಟಿಸಲು ಚಿಂತಿಸ್ತಿದೆ. ಆದ್ರೆ ಅತ್ತ ಬಲಾಢ್ಯ ಸಿಎಸ್​ಕೆ ತಂಡ ಆರ್​ಸಿಬಿಗೆ ಸ್ಪೆಷಲ್​​ ಯೋಜನೆ ರೂಪಿಸಿ ಅವರ ನೆಲದಲ್ಲಿ ಖೆಡ್ಡಾಗೆ ಕೆಡವಲು ಹವಣಿಸ್ತಿದೆ. ಆರ್​ಸಿಬಿ ತಂಡವನ್ನ ನಾವು ಗೌರವಿಸುತ್ತೇವೆ. ಫಲಿತಾಂಶ ನಮ್ಮ ನಿಯಂತ್ರಣದಲ್ಲಿಲ್ಲ. ಉತ್ತಮ ಸಿದ್ಧತೆ ನಡೆಸಿದ್ದು ವಿಶೇಷ ಯೋಜನೆ ರೂಪಿಸಿದ್ದೇವೆ. ಆರ್​ಸಿಬಿ ನಮ್ಮನ್ನ ಸೋಲಿಸಲು ಪ್ರಯತ್ನಿಸಲಿದೆ. ನಾವು ಚೆನ್ನಾಗಿ ಆಡುತ್ತೇವೆ ಎಂದು ಚೆನ್ನೈ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಹೇಳಿದ್ದಾರೆ.

ಸಿಎಸ್​ಕೆ ಕಾಡಲಿದ್ಯಾ ಸ್ಟಾರ್ ಬೌಲರ್ಸ್​ ಅಲಭ್ಯತೆ..?

ಡು ಆರ್ ಡೈ ಕದನದಲ್ಲಿ ಸಿಎಸ್​ಕೆಗೆ ಸ್ಟಾರ್ಸ್​ ಬೌಲರ್ಸ್​ ಗೈರು ದೊಡ್ಡ ಸೆಟ್​​ಬ್ಯಾಕ್ ಆಗಿದೆ. ಮಥೀಶ ಪತಿರಣ, ದೀಪಕ್ ಚಹರ್ ಹಾಗೂ ಮುಸ್ತಾಫಿಜುರ್​​ ರೆಹಮಾನ್​​ ಅಲಭ್ಯತೆ ಕಾಡ್ತಿದೆ. ಬೌಲಿಂಗ್ ಕೋಚ್​​​​ ಡ್ವೇನ್​ ಬ್ರಾವೋ ಆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲ ಬೌಲರ್​ಗಳನ್ನ ಸಿದ್ಧಗೊಳಿಸಿದ್ದೇವೆ. ಪ್ರತಿಯೊಬ್ಬರೂ ಸಾಮರ್ಥ್ಯ ಹೊಂದಿದ್ದು, ಎದುರಿಸಲು ಸಜ್ಜಾಗಿದ್ದಾರೆ. ಸ್ಟಾರ್ ಬೌಲರ್​ಗಳು ಸೀಸನ್​​​ ಪೂರ್ತಿ ಆಡದಿರೋದಕ್ಕೆ ಬೇಸರವಿದೆ. ಕೆಲವರು ಇಂಜುರಿಯಿಂದ ಆಡುತ್ತಿಲ್ಲ. ಅವರ ಸ್ಥಾನ ತುಂಬಬಲ್ಲ ಆಟಗಾರರರು ಇದ್ದಾರೆ ಎಂದು ಬ್ರಾವೋ ಹೇಳಿದ್ದಾರೆ.

ಇದನ್ನೂ ಓದಿ: ನಂ​-18 ಅಂದ್ರೆ ವಿರಾಟ್​ ಧಗಧಗ ಉರಿತಾರೆ.. ಮೇ 18ರಂದೇ​ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?

ಈ ಕದನಕ್ಕೂ ಮುನ್ನ ಯೆಲ್ಲೋ ಆರ್ಮಿ ಹಾಗೂ ರೆಡ್​​ ಆರ್ಮಿ ತಂತ್ರ-ಪ್ರತಿತಂತ್ರ ಭಾರಿ ಸದ್ದು ಮಾಡ್ತಿದೆ. ಆದ್ರೆ ಆನ್​ಫೀಲ್ಡ್​ನಲ್ಲಿ ಯಾರ ಪ್ಲಾನ್ ವರ್ಕ್​ ಆಗುತ್ತೆ, ಆರ್​ಸಿಬಿಯದ್ದಾ, ಸಿಎಸ್​ಕೆಯದ್ದಾ ಎನ್ನುವುದು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಎರಡು ಕಡೆ ಇದೆ ಟೆನ್ಷನ್​.. RCB ಖೆಡ್ಡಾಕ್ಕೆ ಕೆಡವಲು ಚೆನ್ನೈ ಬಳಿ ಇವೆಯಾ ಸ್ಪೆಷಲ್​ ಪ್ಲಾನ್​ಗಳು?

https://newsfirstlive.com/wp-content/uploads/2024/05/VIRAT_KOHLI_DHONI-2.jpg

Load More