newsfirstkannada.com

RCB vs CSK ಫ್ಯಾನ್ಸ್​ಗೆ ಮನರಂಜನೆ ಗ್ಯಾರಂಟಿ.. ಪಂದ್ಯಕ್ಕೆ ಈ ಇಬ್ಬರೆ ಸೆಂಟರ್​ಆಫ್ ಅಟ್ರ್ಯಾಕ್ಷನ್

Share :

Published May 18, 2024 at 5:34pm

Update May 18, 2024 at 7:21pm

    ವಿರಾಟ್ ಕೆರಳಿ ನಿಂತರೇ ಇವತ್ತು ದಾಖಲೆಗಳು ಆಗೋದು ಗ್ಯಾರಂಟಿ

    RCB vs CSK ಇತಿಹಾಸ ಕೆದಕಿದ್ರೆ ಗುರು-ಶಿಷ್ಯರ ಫೈಟ್ ಗೊತ್ತಾಗುತ್ತೆ

    ಎಂಎಸ್​ ಧೋನಿಯನ್ನು ಕಟ್ಟಿ ಹಾಕೋದು ಆರ್​ಸಿಬಿಗೆ ಬಿಗ್ ಚಾಲೆಂಜ್

ಎಂಎಸ್​​​​​​ ಧೋನಿ ಹಾಗೂ ಕಿಂಗ್ ಕೊಹ್ಲಿ. ಇಬ್ಬರೂ ದಿಗ್ಗಜರು ಇದ್ದ ಕಡೆ ಮನರಂಜನೆಗೆ ಬರವಿಲ್ಲ. ದಿಗ್ಗಜ ದ್ವಯರ ಆರ್ಭಟಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಇಂದು ನಡೆಯುವ ಚೆನ್ನೈ ಹಾಗೂ ಆರ್​ಸಿಬಿ ಪಂದ್ಯದಲ್ಲಿ ಇವರೇ ಸೆಂಟರ್​ಆಫ್ ಅಟ್ರ್ಯಾಕ್ಷನ್. ಈ ಇಬ್ಬರೂ ನಾನಾ, ನೀನಾ ಅಂತ ತೊಡೆ ತಟ್ಟಲು ಸಜ್ಜಾಗಿದ್ದಾರೆ.

ಆರ್​ಸಿಬಿ ವರ್ಸಸ್​​​ ಸಿಎಸ್​ಕೆ ನಡುವಿನ ಮೆಗಾ ಬ್ಯಾಟಲ್ ಇನ್ನೇನು ಪ್ರಾರಂಭವಾಗಲಿದೆ. ಇದು ಪ್ಲೇಆಫ್ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಪಂದ್ಯ. ಹೀಗಾಗಿ ಭಾರೀ ಕೌತುಕತೆ ಮನೆ ಮಾಡಿದೆ. ಜೊತೆಗೆ ದಿಗ್ಗಜ ಕಿಂಗ್ ಕೊಹ್ಲಿ ವರ್ಸಸ್ ಮಾಸ್ಟರ್​ಮೈಂಡ್ ಧೋನಿ ಪರಸ್ಪರ ಮುಖಾಮುಖಿಯಾಗುತ್ತಿದ್ದು, ಇಡೀ ಕ್ರಿಕೆಟ್ ಲೋಕದ ಚಿತ್ತ, ಆರ್​ಸಿಬಿ ವರ್ಸಸ್​​​ ಸಿಎಸ್​ಕೆ ಪಂದ್ಯದ ಮೇಲೆ ನೆಟ್ಟಿದೆ.

ಇಬ್ಬರಿಗೂ ಪ್ರತಿಷ್ಠೆ. ಗುರು-ಶಿಷ್ಯರಲ್ಲಿ ಗೆಲ್ಲೋದ್ಯಾರು..?

ಇಂದಿನ ಬ್ಯಾಟಲ್​ ಕಿಂಗ್ ಕೊಹ್ಲಿ ವರ್ಸಸ್​ ಲಜೆಂಡ್ ಧೋನಿ ಕದನವಾಗಿ ಮಾರ್ಪಟ್ಟಿದೆ. ಯಾಕಂದ್ರೆ ಇಬ್ಬರಿಗೂ ಇದು ಪ್ರತಿಷ್ಠೆಯ ಕದನ. ಹಾಗಾಗಿ ಚಿನ್ನಸ್ವಾಮಿಯಲ್ಲಿ ಗುರು-ಶಿಷ್ಯರಿಂದ ಪೈಸಾ ವಸೂಲಿ ಪ್ರದರ್ಶನ ಮೂಡಿ ಬರೋದು, ಪಕ್ಕಾ. ಆರ್​ಸಿಬಿ ವರ್ಸಸ್ ಚೆನ್ನೈ ಇತಿಹಾಸ ಕೆದಕಿದ್ರೆ ಅದು ಕ್ಲಿಯರ್ ಆಗಿ ಗೊತ್ತಾಗುತ್ತೆ.

IPL ನಲ್ಲಿ ಸಿಎಸ್​​ಕೆ ವಿರುದ್ಧ ಕಿಂಗ್ ಕೊಹ್ಲಿ

ಕಿಂಗ್ ಕೊಹ್ಲಿ ಸಾಂಪ್ರದಾಯಿಕ ಎದುರಾಳಿ ಸಿಎಸ್​ಕೆ ವಿರುದ್ಧ ಒಟ್ಟು 32 ಪಂದ್ಯಗಳನ್ನ ಆಡಿದ್ದಾರೆ. 124.9ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ದು, 1,006 ರನ್​​​ ಚಚ್ಚಿದ್ದಾರೆ. 9 ಹಾಫ್​ಸೆಂಚುರಿ ಬಾರಿಸಿದ್ರೆ, 90 ರನ್ ಕೊಹ್ಲಿಯ ಬೆಸ್ಟ್​ ಸ್ಕೋರ್ ಆಗಿದೆ.

ಇದನ್ನೂ ಓದಿ: ನಂ​-18 ಅಂದ್ರೆ ವಿರಾಟ್​ ಧಗಧಗ ಉರಿತಾರೆ.. ಮೇ 18ರಂದೇ​ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?

ಕಿಂಗ್ ಕೊಹ್ಲಿಯಂತೆ ಧೋನಿ ಕೂಡ ಆರ್​ಸಿಬಿ ವಿರುದ್ಧ ಸಾಲಿಡ್​ ರೆಕಾರ್ಡ್ಸ್ ಹೊಂದಿದ್ದಾರೆ. ರೆಡ್​​​ ಆರ್ಮಿ ಬೌಲರ್​ಗಳನ್ನ ನಿರ್ದಯವಾಗಿ ದಂಡಿಸಿ, ರನ್ ಸರಮಾಲೆ ಕಟ್ಟಿದ್ದಾರೆ. ಇಂತಹ ಫಿನಿಶರ್​​ನನ್ನ ಇಂದು ಕಟ್ಟಿಹಾಕೋದು ಆರ್​ಸಿಬಿಗೆ ಬಿಗ್ ಚಾಲೆಂಜ್ ಆಗಿದೆ.

IPL ನಲ್ಲಿ ಆರ್​​ಸಿಬಿ ವಿರುದ್ಧ ಧೋನಿ

ಸದ್ಯ ಅದ್ಭುತ ಫಾರ್ಮ್​ನಲ್ಲಿರೋ ಧೋನಿ, ಆರ್​ಸಿಬಿ ಎದುರು ಇಲ್ಲಿ ತನಕ 35 ಪಂದ್ಯಗಳನ್ನ ಆಡಿದ್ದಾರೆ. 839 ರನ್ ದಾಖಲಿಸಿದ್ರೆ, 140.7 ಇವರ ಬ್ಯಾಟಿಂಗ್ ಸ್ಟ್ರೈಕ್​ರೇಟ್ ಆಗಿದೆ. ಮಾಹಿ 4 ಅರ್ಧಶತಕಗಳನ್ನ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಧೋನಿ ಆರ್​ಸಿಬಿ ವಿರುದ್ಧವೇ ಅತ್ಯಧಿಕ 43 ಸಿಕ್ಸರ್​ಗಳನ್ನ​​​ ಸಿಡಿಸಿದ್ದಾರೆ.

ಇದನ್ನೂ ಓದಿ: ಪ್ರತಿಷ್ಠೆಯ ಕಣವಾದ RCB vs CSK ಪಂದ್ಯ.. ದಾಖಲೆ ಬರೆಯಲು ರೆಡಿಯಾದ ಕೊಹ್ಲಿ, MS ಧೋನಿ; ಏನೇನು?

ಚಿನ್ನಸ್ವಾಮಿಯಲ್ಲಿ ಕಿಂಗ್ ಕೊಹ್ಲಿ, ಧೋನಿ ದರ್ಬಾರ್​​​..!

ರನ್ ಗಳಿಕೆ ಜೊತೆ ಚಿನ್ನಸ್ವಾಮಿ ಮೈದಾನ ಇಬ್ಬರಿಗೂ ಫೇವರಿಟ್​​​. ಇಲ್ಲಿ ಯಾವಾಗ ಮ್ಯಾಚ್ ನಡೆದ್ರೂ, ಕಿಂಗ್ ಕೊಹ್ಲಿ ಹಾಗೂ ಧೋನಿ ಅಬ್ಬರಿಸಿ ಬೊಬ್ಬಿರಿದ್ದಾರೆ.

ಚಿನ್ನಸ್ವಾಮಿಯಲ್ಲಿ ಕೊಹ್ಲಿ-ಧೋನಿ

ತವರಿನ ಅಂಗಳದಲ್ಲಿ ಕೊಹ್ಲಿ, ಚೆನ್ನೈ ವಿರುದ್ಧ 10 ಪಂದ್ಯಗಳನ್ನ ಆಡಿದ್ದಾರೆ. 73 ರನ್ ಗರಿಷ್ಠ ಸ್ಕೋರ್ ಆದ್ರೆ, 280 ರನ್ ಗಳಿಸಿದ್ದಾರೆ. ಹಾಗೇ140.70 ಸ್ಟ್ರೈಕ್​ರೇಟ್​​​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ಧೋನಿ ಆರ್​ಸಿಬಿ ಎದುರು 11 ಪಂದ್ಯಗಳನ್ನ ಆಡಿದ್ದು, ಅಜೇಯ 84 ಗರಿಷ್ಠ ರನ್​​​​​​ ಆಗಿದೆ. 174.26 ಸ್ಟ್ರೈಕ್​ರೇಟ್​ನಲ್ಲಿ 413 ರನ್​​​ ಕಲೆಹಾಕಿದ್ದಾರೆ. ಚಿನ್ನಸ್ವಾಮಿ ದಂಗಲ್ ಕಿಂಗ್ ಕೊಹ್ಲಿ ವರ್ಸಸ್ ಧೋನಿ ಕಾಳಗವಾಗಿ ಮಾರ್ಪಟ್ಟಿದೆ. ಈ ದಿಗ್ಗಜರ ಕದನದಲ್ಲಿ ಗೆಲ್ಲೋದ್ಯಾರು, ಯಾರಿಗೆ ಯಾರು ಚಮಕ್​ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB vs CSK ಫ್ಯಾನ್ಸ್​ಗೆ ಮನರಂಜನೆ ಗ್ಯಾರಂಟಿ.. ಪಂದ್ಯಕ್ಕೆ ಈ ಇಬ್ಬರೆ ಸೆಂಟರ್​ಆಫ್ ಅಟ್ರ್ಯಾಕ್ಷನ್

https://newsfirstlive.com/wp-content/uploads/2024/05/DHONI_KOHLI.jpg

Load More