newsfirstkannada.com

RCBvsDC: ಇಂದು ಆರ್​ಸಿಬಿ ಪಂದ್ಯ ಸ್ಥಗಿತವಾಗೋದು ಪಕ್ಕಾ? ಈ ಮಾತನ್ನ ನಾವು ಹೇಳ್ತಿಲ್ಲ, ಇವ್ರೇ ಹೇಳ್ತಿದ್ದಾರೆ ಕೇಳಿ

Share :

Published May 12, 2024 at 12:09pm

  ಇಂದು ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ ಚಿನ್ನಸ್ವಾಮಿ ಕ್ರೀಡಾಂಗಣ

  ಇಂದು ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್​ ನಡುವೆ ಜಿದ್ದಾಜಿದ್ದಿ

  ಪ್ಲೇ ಆಫ್​ಗಾಗಿ ಹೋರಾಡುತ್ತಿವೆ ಇತ್ತಂಡಗಳು.. ಗೆಲ್ಲೋದ್ಯಾರು?

ಇಂದು ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ. ಕಾರಣ ಅಭಿಮಾನಿಗಳ ನೆಚ್ಚಿನ ಪಂದ್ಯ ಆರ್​ಸಿಬಿ ಇಂದು ಡೆಲ್ಲಿ ತಂಡವನ್ನು ಎದುರಿಸುತ್ತಿದೆ. ಮಾತ್ರವಲ್ಲದೆ ಇಂದಿನ ಬೆಂಗಳೂರು ಪಂದ್ಯ ಭಾರೀ ಕುತೂಹಲ ಕೆರಳಿಸಿದ್ದು, ಎರಡು ತಂಡಗಳ ಹಣೆ ಬರಹವೇ ಬದಲಾಗಲಿದೆ.

ಹೌದು. ಇಂದಿನ ಪಂದ್ಯ ಬೆಂಗಳೂರು ಮತ್ತು ಡೆಲ್ಲಿ ತಂಡಕ್ಕೆ ಬಹಳ ಮುಖ್ಯವಾಗಿದೆ. ಯಾಕಂದ್ರೆ ಪ್ಲೇ ಆಫ್​ಗೆ ಹೋಗಲು ಇತ್ತಂಡಗಳು ಸೆಣೆಸಾಡುತ್ತಿವೆ. ನಾ ಮುಂದು, ತಾ ಮುಂದು ಎಂಬ ಗುರಿಯನ್ನು ಹೊಂದಿದೆ. ಆದರೆ ಬೆಂಗಳೂರಲ್ಲಿ ಪಂದ್ಯ ನಡೆಯುತ್ತಿರೋ ಕಾರಣ ಇಂದಿನ ಪಂದ್ಯ ಸ್ಥಗಿತವಾಗೋ ಸಾಧ್ಯತೆ ಇದೆ. ಹಾಗಂತ ನಾವು ಹೇಳುತ್ತಿಲ್ಲ. ಹವಾಮಾನ ಇಲಾಖೆಯೇ ಹೇಳುತ್ತಿದೆ.

ಕಳೆದ ಎರಡು ಮೂರು ದಿನಗಳಿಂದ ಕರ್ನಾಟಕದ ವಾತಾವರಣಗಳು ಬದಲಾಗಿದೆ. ರಾಜ್ಯದ ವಿವಿಧ ಭಾಗಗಲ್ಲಿ ಮಳೆಯ ತಂಪಾದ ಹನಿಯನ್ನು ಚಿಮುಕಿಸುತ್ತಿದ್ದು, ಬೆಂಗಳೂರಲ್ಲೂ ಇಂದು ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇಂದು ವಾತಾವರಣ ಹೇಗಿದೆ?

ಭಾರತೀಯ ಹವಾಮಾನ ಇಲಾಖೆ ಬೆಂಗಳೂರಲ್ಲಿ ಇನ್ನೂ ಕೆಲವು ದಿನ ಸಾಧಾರಣ ಹಾಗೂ ಮಧ್ಯಮ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ. ಮೇ 13ರವರೆಗೂ ಬೆಂಗಳೂರು ನಗರಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: IPL2024: ಫ್ಲೇ ಆಫ್​ ಕನಸು ಕಾಣುತ್ತಿವೆ RCB, CSK, DC.. ಹಣೆಬರಹ ಬದಲಾಗಬೇಕಾದ್ರೆ ಹೀಗೆ ಮಾಡಲೇಬೇಕು.

ಉಷ್ಣಾಂಶ ಕುಸಿಯಲಿದೆ

ಹಿರಿಯ ಹವಾಮಾನ ವಿಜ್ಞಾನಿ ಸಿ.ಎಸ್ ಪಾಟೀಲ್ ಅವರು ಕರ್ನಾಟಕದಲ್ಲಿ ಒಂದು ವಾರಗಳ ಕಾಲ ಜೋರಾದ ಬಿರುಗಾಳಿ, ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಗಾಳಿಯ ವೇಗೆ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿರಲಿದೆ. ಬೆಂಗಳೂರಲ್ಲಿ ಮುಂದಿನ ವಾರವೂ ಸಾಧಾರಣ ಮಳೆ ಮುಂದುವರಿಯಲಿದ್ದು, ವಾತಾವರಣದಲ್ಲಿ ಉಷ್ಣಾಂಶ ಕುಸಿಯಲಿದೆ ಎಂದಿದ್ದಾರೆ.

ಇದನ್ನೂ ಓದಿ: ಸೂಪರ್ ಸಂಡೇ.. ಫ್ಯಾನ್ಸ್​ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!

ಝೆಲ್ಲೋ ಅಲರ್ಟ್‌

ಏಪ್ರಿಲ್ ತಿಂಗಳಲ್ಲಿ ಬೆಂಗಳೂರಲ್ಲಿ ಮಳೆ ಸಂಪೂರ್ಣವಾಗಿ ಮಾಯವಾಗಿತ್ತು. ಆದರೆ ಮೇ ತಿಂಗಳಲ್ಲಿ ರಾಜ್ಯದಲ್ಲಿ 7 ಸೆಂಟಿಮೀಟರ್‌ನಷ್ಟು ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿಯೇ ಬೆಂಗಳೂರಿಗೆ ಝೆಲ್ಲೋ ಅಲರ್ಟ್‌ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCBvsDC: ಇಂದು ಆರ್​ಸಿಬಿ ಪಂದ್ಯ ಸ್ಥಗಿತವಾಗೋದು ಪಕ್ಕಾ? ಈ ಮಾತನ್ನ ನಾವು ಹೇಳ್ತಿಲ್ಲ, ಇವ್ರೇ ಹೇಳ್ತಿದ್ದಾರೆ ಕೇಳಿ

https://newsfirstlive.com/wp-content/uploads/2024/05/RCB-vs-DC.jpg

Load More