newsfirstkannada.com

ಡೆಲ್ಲಿ ಸಂಹಾರಕ್ಕೆ RCBಯ ‘ಡೇರ್ ಡೆವಿಲ್’​ ರೆಡಿ.. ಕ್ಯಾಪಿಟಲ್ಸ್​ ನಿದ್ದೆಗೆಡಿಸಿದೆ ಕಿಂಗ್ ಕೊಹ್ಲಿ ಸೆನ್ಷೆಷನಲ್ ರೆಕಾರ್ಡ್ಸ್

Share :

Published May 12, 2024 at 11:28am

    ಕೊಹ್ಲಿ ವರ್ಸಸ್​ ಡೆಲ್ಲಿ ಅಂಕಿ-ಅಂಶಗಳು ಏನೇನು ಹೇಳುತ್ತಾವೆ..?

    ಡೆಲ್ಲಿ ಕ್ಯಾಪಿಟಲ್ಸ್​​​​​​​​​​​​​​​​​​ ಪಾಲಿಗಂತೂ ವಿರಾಟ್​ ಕೊಹ್ಲಿ ವಿಲನ್ ಆಗ್ತಾರೆ​

    ಕೊಹ್ಲಿಯಿಂದ ಜಬರ್ದಸ್ತ್​​ ಸೆಂಚುರಿ ಬಂದ್ರು ಇಲ್ಲಿ ಆಶ್ಚರ್ಯವಿಲ್ಲ

ಕಿಂಗ್ ಕೊಹ್ಲಿ ಎಂದೆಂದಿಗೂ ಎದುರಾಳಿಗೆ ಸಿಂಹಸ್ವಪ್ನ. ಅದ್ರಲ್ಲೂ ಈ ಬಾರಿಯ ಐಪಿಎಲ್​ನಲ್ಲಂತೂ ವಿರಾಟ್ ಬೌಲರ್​ಗಳಿಗೆ ಕಾಟ ಕೊಟ್ಟಷ್ಟು ಮತ್ಯಾವ ಬ್ಯಾಟ್ಸ್​​ಮನ್​​​ ಕೂಡ ಕೊಟ್ಟಿಲ್ಲ. ಇಂತಹ ದುಸ್ವಪ್ನಕಾರನ ಕಣ್ಣು ಈಗ ಡೆಲ್ಲಿ ಕ್ಯಾಪಿಟಲ್ಸ್ ಸಂಹಾರದ ಮೇಲೆ ನೆಟ್ಟಿದೆ. ರನ್ ಮಾಸ್ಟರ್​​ನನ್ನ ಹೇಗಪ್ಪಾ ಕಟ್ಟಿಹಾಕೋದು ಅಂತ ಡೆಲ್ಲಿಗೆ ದಿಕ್ಕೇ ತೋಚದಂತಾಗಿದೆ.

ಆರ್​ಸಿಬಿ ವರ್ಸಸ್​​​ ಡೆಲ್ಲಿ ಕ್ಯಾಪಿಟಲ್ಸ್​​ ಇಂದಿನ ಐಪಿಎಲ್​​ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ. ಯಾಕಂದ್ರೆ ಇದು ಜಸ್ಟ್​​​ ಬರೀ ಒಂದು ಮ್ಯಾಚ್​ ಅಷ್ಟೇ ಅಲ್ಲ. ಅಳಿವು-ಉಳಿವಿನ ಪ್ರಶ್ನೆ. ಪ್ಲೇ ಆಫ್​ ದೃಷ್ಟಿಯಿಂದ ಗೆಲುವು ಇಬ್ಬರಿಗೂ ಅನಿವಾರ್ಯವಾಗಿದೆ. ಸ್ವಲ್ಪ ಯಾಮಾರಿದ್ರೂ ಗಂಟುಮೂಟೆ ಕಟ್ಟಬೇಕು. ಈ ಡಿಸೈಡರ್​ ಪಂದ್ಯದಲ್ಲಿ ಕಿಂಗ್​​ ಕೊಹ್ಲಿನೇ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು , ವಿರಾಟ್​​ ವೈಭವಕ್ಕೆ ಎಲ್ಲರೂ ಕಾದು ಕುಳಿತಿದ್ದಾರೆ.

ಇದನ್ನೂ ಓದಿ: ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ

ಕೊಹ್ಲಿ ರೋರಿಂಗ್​ ಪಕ್ಕಾ..ಡೆಲ್ಲಿಗೆ ಸೋಲು ಕಟ್ಟಿಟ್ಟ ಬುತ್ತಿ..!

ಇಂದು ಚಿನ್ನಸ್ವಾಮಿಯಲ್ಲಿ ನಡೆಯುತ್ತಿರೋದು ಡೆಲ್ಲಿ ವರ್ಸಸ್​ ಆರ್​ಸಿಬಿ ಬ್ಯಾಟಲ್ ಅಲ್ಲ. ಬದಲಿಗೆ ಡೆಲ್ಲಿ ವರ್ಸಸ್ ಡೇರ್ ಡೆವಿಲ್​ ಕೊಹ್ಲಿ ವಾರ್​​​. ಮಹತ್ವದ ಪಂದ್ಯದಲ್ಲಿ ರನ್ ಮಾಸ್ಟರ್​ ತಂಡಕ್ಕೆ ಗೆಲುವು ದಕ್ಕಿಸಿಯೇ ಕೊಡಲು ಪಣತೊಟ್ಟಿದ್ದಾರೆ. ಅದ್ರಲ್ಲಿ ವಿರಾಟ್​​​ ಸಕ್ಸಸ್​ ಕಾಣೋದು ಹಂಡ್ರೆಂಡ್​​ ಪರ್ಸಂಟ್​​ ಸತ್ಯ ಕೂಡ.

ಡೆಲ್ಲಿ ವಿರುದ್ಧ ಕೊಹ್ಲಿ ಆಡಿರೋ ಇತಿಹಾಸ ಕೆದಕಿದ್ರೆ ಭಯಾನಕವಾಗಿದೆ. ಪ್ರತಿ ಬಾರಿ ಎದುರಾಗಲೆಲ್ಲ ದಂಡೆತ್ತಿ ಹೋಗಿ ಬೆಂಡೆತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಯಾರ ಮೇಲೂ ಈ ಪರಿ ಅಬ್ಬರಿಸಿಲ್ಲ. ಅಷ್ಟು ಹೈ ಎನರ್ಜಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಕೊಹ್ಲಿ ವರ್ಸಸ್​ ಡೆಲ್ಲಿ ಅಂಕಿ-ಅಂಶಗಳೇ ಅದಕ್ಕೆ ಬೆಸ್ಟ್ ಎಕ್ಸಾಂಪಲ್​​.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊಹ್ಲಿ..!

ಕಿಂಗ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಈವರೆಗೆ 28 ಪಂದ್ಯಗಳನ್ನ ಆಡಿದ್ದಾರೆ. 133.76 ರ ಸ್ಟ್ರೈಕ್​ರೇಟ್​​ನಲ್ಲಿ ಬರೋಬ್ಬರಿ 1030 ರನ್​ ಚಚ್ಚಿದ್ದಾರೆ. 10 ಅರ್ಧಶತಕ ಹೊಡೆದಿದ್ದಾರೆ. ಸಿಎಸ್​ಕೆ ವಿರುದ್ಧ 1006 ರನ್​ ಹೊಡೆದಿರುವ ವಿರಾಟ್​, ಕೆಕೆಆರ್ ವಿರುದ್ಧ 962 ಹಾಗೂ ಮುಂಬೈ ವಿರುದ್ಧ 855 ರನ್​​​ ಕಲೆ ಹಾಕಿದ್ದಾರೆ. ಆದ್ರೆ, ಡೆಲ್ಲಿ ಕ್ಯಾಪಿಟಲ್ಸ್​​​​​​​​​​​​​​​​​​ ಪಾಲಿಗಂತೂ ಕೊಹ್ಲಿ ವಿಲನ್​ ಆಗಿದ್ದಾರೆ.

ಹೋಮ್​ಗ್ರೌಂಡ್​ನಲ್ಲಿ ವಿರಾಟ್​ ವಿರಾಜಮಾನ..!

ಚಿನ್ನಸ್ವಾಮಿ ಮೈದಾನದಲ್ಲಿ ಇಂದಿನ ಪಂದ್ಯ ನಡೀತಿದೆ. ಇದು ಹೇಳಿ ಕೇಳಿ ಕೊಹ್ಲಿಯ ಕಿಂಗ್​ಡಮ್​​​. ಇಲ್ಲಿ ವಿರಾಟ್ ಅಬ್ಬರಕ್ಕೆ ಬ್ರೇಕ್ ಹಾಕೋದು ಯಾರಿಂದಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಎದುರಾಳಿ ತಂಡಗಳನ್ನ ಸಿಂಹಸ್ವಪ್ನರಾಗಿ ಕಾಡಿದ್ದಾರೆ.

ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ..!

ಹೋಮ್​​​ಗ್ರೌಂಡ್ ಚಿನ್ನಸ್ವಾಮಿಯಲ್ಲಿ ವಿರಾಟ್ 87 ಪಂದ್ಯಗಳಲ್ಲಿ ಆಡಿದ್ದಾರೆ. 2966 ರನ್ ಕೊಳ್ಳೆ ಹೊಡೆದಿದ್ದು, 141.91 ಬ್ಯಾಟಿಂಗ್​ ಸ್ಟ್ರೈಕ್​ರೇಟ್ ಆಗಿದೆ. 22 ಹಾಫ್​ಸೆಂಚುರಿ ಹಾಗೂ 4 ಅಮೋಘ ಶತಕಗಳು ಮೂಡಿ ಬಂದಿವೆ.

ಇದನ್ನೂ ಓದಿ: ಸೂಪರ್ ಸಂಡೇ.. ಫ್ಯಾನ್ಸ್​ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!

ಪ್ರಸಕ್ತ ಐಪಿಎಲ್​​ನಲ್ಲಿ ಕಿಂಗ್​ ಕೊಹ್ಲಿ ಧೂಳೆಬ್ಬಿಸಿದ್ದಾರೆ. 12 ಪಂದ್ಯಗಳಲ್ಲೆ 635 ರನ್ ಚಚ್ಚಿದ್ದಾರೆ. ಹೋಮ್​ಗ್ರೌಂಡ್​ನಲ್ಲಿ ವಿರಾಟ್​ ಆಲ್​ವೇಸ್​ ಡೇಂಜರಸ್​​. ಇನ್ನೊಂದೆಡೆ ಡೆಲ್ಲಿ ವಿರುದ್ಧವೂ ​​ಸೆನ್ಷೆಷನಲ್ ರೆಕಾರ್ಡ್ಸ್ ಹೊಂದಿದ್ದಾರೆ. ಹೀಗಾಗಿ ಡಿಸೈಡರ್​​ ಮ್ಯಾಚ್​ನಲ್ಲಿ ಕಿಂಗ್ ಕೊಹ್ಲಿಯಿಂದ ಜಬರ್ದಸ್ತ್​​ ಸೆಂಚುರಿ ಮೂಡಿ ಬಂದ್ರೂ ಆಶ್ಚರ್ಯವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಡೆಲ್ಲಿ ಸಂಹಾರಕ್ಕೆ RCBಯ ‘ಡೇರ್ ಡೆವಿಲ್’​ ರೆಡಿ.. ಕ್ಯಾಪಿಟಲ್ಸ್​ ನಿದ್ದೆಗೆಡಿಸಿದೆ ಕಿಂಗ್ ಕೊಹ್ಲಿ ಸೆನ್ಷೆಷನಲ್ ರೆಕಾರ್ಡ್ಸ್

https://newsfirstlive.com/wp-content/uploads/2024/05/VIRAT_KOHLI-3.jpg

Load More