RCBಗೆ ಟಕ್ಕರ್ ಕೊಡೋ ಬೌಲರ್ ಲಕ್ನೋ ಟೀಮ್ನಲ್ಲಿನಿದ್ದಾನೆ
ಮಯಾಂಕ್ ಯಾದವ್ ಬೌಲಿಂಗ್ನ ಸ್ಪೀಡ್ ಎಷ್ಟು ಇದೆ ಗೊತ್ತಾ?
ವಿಶ್ವ ಕ್ರಿಕೆಟ್ ಶ್ರೇಷ್ಟ ದಿಗ್ಗಜರ ಬಾಯಲ್ಲೂ ಮಯಾಂಕ್ನದ್ದೆ ಮಾತು
ಈತ ಕೇಳಿದ್ದು ವೆಸ್ಟ್ ಇಂಡೀಸ್ ದಿಗ್ಗಜ ಕರ್ಟ್ಲಿ ಅಂಬ್ರೋಸ್ ಕಥೆಯನ್ನ. ಆರಾಧಿಸಿದ್ದು ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಅನ್ನ. ಕೊನೆಯಲ್ಲಿ ಆಗಿದ್ದು ತಲೆಗೆ ಹೊಡೆಯೋ ಬೌಲರ್. 21 ವರ್ಷದ ಯಂಗ್ಗನ್ ಸದ್ಯ ಕ್ರಿಕೆಟ್ ಲೋಕದ ಸೆನ್ಸೇಷನ್. ಅಭಿಮಾನಿಗಳಿಂದ ಹಿಡಿದು ವಿಶ್ವ ಕ್ರಿಕೆಟ್ ಲೋಕ ಕಂಡ ಶ್ರೇಷ್ಟ ದಿಗ್ಗಜರವರೆಗೆ ಎಲ್ಲರ ಬಾಯಲ್ಲೂ ಈತನದ್ದೇ ಮಾತು.. ಈತನದ್ದೇ ಚರ್ಚೆ.
ಆಡಿರೋದು ಮೊದಲ ಐಪಿಎಲ್ ಪಂದ್ಯ. ಹಾಕಿರೋದು 4 ಓವರ್ ಮಾತ್ರ. ಆದ್ರೆ ಈತನ ಹೆಸರು ಸಪ್ತ ಸಾಗರದಾಚೆ ಸೌಂಡ್ ಮಾಡ್ತಿದೆ. ಅಬ್ಬಬ್ಬಾ.. ಏನ್ ಪರ್ಫಾಮೆನ್ಸ್ ಅಂತೀರಾ, ಕ್ರಿಕೆಟ್ ಕಂಡ ದಿಗ್ಗಜರೇ ವಾರೆವ್ಹಾ ಅಂತಿದ್ದಾರೆ. ಡೆಬ್ಯೂ ಮಾಡಿದ ಮೊದಲ ಪಂದ್ಯದಲ್ಲೇ ಸೆನ್ಸೇಷನಲ್ ಪ್ರದರ್ಶನ ನೀಡಿರುವ ಯುವ ವೇಗಿ ಮಯಾಂಕ್ ಯಾದವ್ ಇಂದು ಆರ್ಸಿಬಿಗೆ ರಾಯಲ್ ಚಾಲೆಂಜ್ ಹಾಕಲು ಸಜ್ಜಾಗಿದ್ದಾರೆ.
‘ಡೆಲ್ಲಿ ಎಕ್ಸ್ಪ್ರೆಸ್’ ವೇಗಕ್ಕೆ ಕ್ರಿಕೆಟ್ ಲೋಕವೇ ದಂಗು.!
ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ವೇಗಿ ಮಯಾಂಕ್ ಯಾದವ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಾಡಿದ್ದು ಪ್ಯೂರ್ ಮ್ಯಾಜಿಕ್. 21 ವರ್ಷದ ಈ ಹುಡುಗ ಬಾಲ್ ಹಿಡಿದು ದಾಳಿಗಿಳಿದಾಗ ಯಾರೂ ವಿಶೇಷವಾದ ಗಮನ ಕೊಡಲಿಲ್ಲ. ಆದ್ರೆ, 2ನೇ ಓವರ್ನಲ್ಲಿ ಮೊದಲ ಎಸೆತ ಎಸೆದಿದ್ದೇ ತಡ ಇಡೀ ಕ್ರಿಕೆಟ್ ದಂಗಾಗಿ ಬಿಡ್ತು.
2ನೇ ಓವರ್ನಲ್ಲಿ ಮೊದಲ ಎಸೆತಕ್ಕೆ ಇಡೀ ವಿಶ್ವವೇ ಮಾತಾಡ್ತಿದೆ
ಇದೇ ಬಿರುಗಾಳಿಯಂತಾ ಎಸೆತಕ್ಕೆ ಕ್ರಿಕೆಟ್ ಲೋಕ ಕ್ಲೀನ್ ಬೋಲ್ಡ್ ಆಗಿರೋದು. ಗಂಟೆಗೆ ಬರೋಬ್ಬರಿ 155.8 ಕಿಲೋ ಮೀಟರ್ ವೇಗದಲ್ಲಿ ಎಸೆತ ಎದುರಾಗುತ್ತೆ ಅಂತಾ ಬಹುಷಃ ಶಿಖರ್ ಧವನ್ ಕನಸಲ್ಲೂ ಎಣೆಸಿರಲಿಲ್ಲ ಅನ್ಸುತ್ತೆ. ಈ ಬಾರಿ ಐಪಿಎಲ್ನಲ್ಲಿ ಕ್ರಿಕೆಟ್ ಲೋಕದ ಶ್ರೇಷ್ಟ ವೇಗಿಗಳು ಆಡ್ತಿದ್ದಾರೆ. ಅನುಭವಿಗಳ ದಂಡೇ ಇದೆ. ಕೋಟಿ ಕೋಟಿ ಕಮಾಯ್ ಮಾಡಿದವರೂ ಇದ್ದಾರೆ. ಇರ್ವರ್ಯಾರೂ ಮಾಡದ ಸಾಧನೆಯನ್ನ ಆ ಒಂದು ಎಸೆತದಲ್ಲೇ ಮಯಾಂಕ್ ಮಾಡಿದ. ವೇಗದ ಎಸೆತ ಅಂದ್ರೆ ಇದು ಅಂತಾ ತೋರಿಸಿಬಿಟ್ಟ.
2024ರ ಐಪಿಎಲ್ನಲ್ಲಿ ವೇಗದ ಬೌಲಿಂಗ್
ಮಯಾಂಕ್ ಯಾದವ್ ಗಂಟೆಗೆ 155.8 ಕಿಲೋ ಮೀಟರ್ ವೇಗದಲ್ಲಿ ಎಸೆದ ಎಸೆತ ಈ ಸೀಸನ್ನಲ್ಲಿ ದಾಖಲಾದ ಅತ್ಯಂತ ವೇಗದ ಎಸೆತವಾಗಿದೆ. ಇದನ್ನ ಹೊರತುಪಡಿಸಿದ್ರೆ, ನಾಂಡ್ರೆ ಬರ್ಗರ್ 153, ಗೆರಾಲ್ಡ್ ಕೋಟ್ಜಿ 152.3, ಅಲ್ಜಾರಿ ಜೋಸೆಫ್ 151.2 ಹಾಗೂ ಮಥಿಶಾ ಪತಿರಣ 150.9 ವೇಗದಲ್ಲಿ ಬೌಲಿಂಗ್ ಹಾಕಿದ್ದಾರೆ.
ಬಿರುಗಾಳಿಯಂಥಾ ಬೌಲಿಂಗ್ಗೆ ಲೆಜೆಂಡ್ಸ್ ಕ್ಲೀನ್ಬೋಲ್ಡ್.!
ಇದೊಂದು ಎಸೆತ ಮಾತ್ರವಲ್ಲ.. ಡೆಬ್ಯೂ ಪಂದ್ಯದಲ್ಲಿ ಮಯಾಂಕ್ ಯಾದವ್ ಬೌಲಿಂಗ್ ವೇಗ ಕಡಿಮೆಯಾಗಲೇ ಇಲ್ಲ. ಕನ್ಸಿಸ್ಟೆಂಟ್ ಆಗಿ 150 ಸರಾಸರಿಯಲ್ಲಿ ಸ್ಪೆಲ್ ಹಾಕಿದ್ರು. ಈ ಕನ್ಸಿಸ್ಟೆಂಟ್ ವೇಗಕ್ಕೆ ಲೆಜೆಂಡ್ಸ್ ದಂಗಾಗಿದ್ದಾರೆ. ಡೇಲ್ ಸ್ಟೇನ್, ಬ್ರೇಟ್ ಲೀ, ಟಾಮ್ ಮೂಡಿ, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್ ಸೇರಿದಂತೆ ಎಲ್ರೂ ಸಲಾಂ ಅಂತಿದ್ದಾರೆ.
ಟ್ಯಾಲೆಂಟ್ ಇದ್ರೂ ಚಾನ್ಸ್ಗಾಗಿ ಕಾದಿದ್ದು 2 ವರ್ಷ.!
ಆರಂಭದಲ್ಲಿ ಮಯಾಂಕ್ ಟ್ಯಾಲೆಂಟ್ ಗುರುತಿಸಿದ್ದು, ಲಕ್ನೋ ತಂಡದ ಸಹಾಯಕ ಕೋಚ್ ಆಗಿದ್ದ ವಿಜಯ್ ದಹಿಯಾ. ಡೊಮೆಸ್ಟಿಕ್ ಸರ್ಕ್ಯೂಟ್ನಲ್ಲಿ ಮಯಾಂಕ್ ಯಾದವ್ ಪ್ರದರ್ಶನ ನೋಡಿ ಇಂಪ್ರೆಸ್ ಆಗಿದ್ದ. ದಹಿಯಾ 2022ರ ಮೆಗಾ ಆಕ್ಷನ್ನಲ್ಲಿ ತಂಡ ಖರೀದಿಸುವಂತೆ ಮಾಡಿದ್ರು. 20 ಲಕ್ಷಕ್ಕೆ ಲಕ್ನೋ ಸೇರಿದ ಯುವ ವೇಗಿಗೆ ಮೊದಲ ಸೀಸನ್ನಲ್ಲಿ ಬೆಂಚ್ ಸೀಮಿತವಾಗಿದ್ರು.
ಇದನ್ನೂ ಓದಿ: RCB vs LSG; ನೆನಪಿರಲಿ, ಇಂದು ಲಕ್ನೋ ವಿರುದ್ಧ ಸೇಡಿನ ಸಮರ.. ಅಂದಿನ ಬೆಂಕಿ ಇಂದು ಧಗಧಗಿಸುತ್ತಾ?
ಕರಿಯರ್ ಬಚಾವ್ ಮಾಡಿದ್ದು ಕನ್ನಡಿಗ ರಾಹುಲ್.!
ಕಳೆದ ಸೀಸನ್ನ ಐಪಿಎಲ್ಗೂ ಮುನ್ನ ಇಂಜುರಿಗೆ ತುತ್ತಾದ ಮಯಾಂಕ್ ಟೂರ್ನಿಯಿಂದ ಹೊರ ಬಿದ್ರು. ಇದೇ ವೇಳೆ ಲಕ್ನೋ ಫ್ರಾಂಚೈಸಿ ಮಯಾಂಕ್ನ ತಂಡದಿಂದಲೇ ರಿಲೀಸ್ ಮಾಡೋ ನಿರ್ಧಾರ ಮಾಡಿತ್ತು. ಆದ್ರೆ, ಕ್ಯಾಪ್ಟನ್ ರಾಹುಲ್ ಮಯಾಂಕ್ ಬೆಂಬಲಕ್ಕೆ ನಿಂತು, ತಂಡದಲ್ಲೇ ಇರುವಂತೆ ನೋಡಿಕೊಂಡ್ರು. ಈ ಸೀಸನ್ನಲ್ಲಿ ಚಾನ್ಸ್ ಕೊಟ್ರು. ಸಿಕ್ಕ ಗೋಲ್ಡನ್ ಅವಕಾಶವನ್ನ ಬಾಚಿಕೊಂಡ ಮಯಾಂಕ್, ಮೊದಲ ಪಂದ್ಯದಲ್ಲೇ ನಂಬಿಕೆ ಉಳಿಸಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಮಿಂಚಿನ ಪರ್ಫಾಮೆನ್ಸ್ ನೀಡಿರುವ ಈ ಮಯಾಂಕ್ ಇಂದು ಆರ್ಸಿಬಿ ಎದುರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಟ್ರ್ಯಾಕ್ಗೆ ಬರಲು ಪರದಾಡ್ತಿರೋ ಆರ್ಸಿಬಿ ಬ್ಯಾಟರ್ಸ್ ಮಯಾಂಕ್ ಯಾದವ್ ಬೌಲಿಂಗ್ ನಿಜಕ್ಕೂ ಚಾಲೆಂಜಿಗ್ ಆಗಲಿದೆ. ಈ ಸವಾಲನ್ನ ಆರ್ಸಿಬಿ ಬ್ಯಾಟರ್ಸ್ ಮೀರ್ತಾರಾ.? ಕಾದು ನೋಡೋಣ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ