newsfirstkannada.com

ಬೌಲರ್ಸ್​ ಪರ್ಫಾಮೆನ್ಸ್​ ಮೇಲೆ ನಿಂತಿದೆ RCB ಭವಿಷ್ಯ.. KKR ವಿರುದ್ಧ ಸೋತರೇ ಫ್ಲೇ ಆಫ್ ಏನಾಗುತ್ತೆ?

Share :

Published April 21, 2024 at 2:32pm

  ಈಡನ್​​ ಗಾರ್ಡನ್ಸ್​ನಲ್ಲಿ ಗೋ ಗ್ರೀನ್​ ಅಡಿ ಗ್ರೀನ್ ಜರ್ಸಿಯಲ್ಲಿ RCB ಕಣಕ್ಕೆ

  ಇದು ಆರ್​​ಸಿಬಿ ಬೌಲರ್ಸ್​- ಕೆಕೆಆರ್​ ಬ್ಯಾಟರ್ಸ್​ ನಡುವೆ ಬಿಗ್​ ಬ್ಯಾಟಲ್

  ಸಾಲಿಡ್​​ ಫಾರ್ಮ್​ನಲ್ಲಿ ಘರ್ಜಿಸುತ್ತಿರುವ ಕೋಲ್ಕತ್ತಾ ಬ್ಯಾಟ್ಸ್​ಮನ್​ಗಳು

ಸೋಲಿನಿಂದ ಕಂಗೆಟ್ಟಿರೋ ಆರ್​​ಸಿಬಿ ಇಂದು ಮತ್ತೊಂದು ಅಗ್ನಿ ಪರೀಕ್ಷೆಗೆ ಸಜ್ಜಾಗಿದೆ. ಆರ್​​ಸಿಬಿ ಪ್ಲೇ ಆಫ್​ಗೆ ತಲುಪುತ್ತಾ.? ಇಲ್ವಾ.? ಅನ್ನೋ ಪ್ರಶ್ನೆಗೆ ಇಂದೇ ಉತ್ತರ ಸಿಗಲಿದೆ. ಕೆಕೆಆರ್​ ತಂಡವನ್ನ ಮಣಿಸಿದ್ರೆ, ಆರ್​​ಸಿಬಿ ಪ್ಲೇ ಆಫ್​ ಆಸೆ ಜೀವಂತವಾಗಿರಲಿದೆ. ಆದ್ರೆ, ಆರ್​​ಸಿಬಿ ಗೆಲ್ಲುತ್ತಾ ಅನ್ನೋದೆ ಎಲ್ಲರನ್ನ ಕಾಡ್ತಿರೋ ಪ್ರಶ್ನೆಯಾಗಿದೆ.

ಐಪಿಎಲ್​ ಟೂರ್ನಿಯ ಮತ್ತೊಂದು ಮೆಗಾಫೈಟ್​​ಗೆ ವೇದಿಕೆ ಸಜ್ಜಾಗಿದೆ. ಕೊಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿಂದು ಆರ್​​ಸಿಬಿ- ಕೆಕೆಆರ್​​ ಮುಖಾಮುಖಿಯಾಗ್ತಿವೆ. ಕಳೆದ ಪಂದ್ಯದಲ್ಲಿ ಸೋತಿದ್ರೂ ಕೂಡ ಟೂರ್ನಿಯಲ್ಲಿ ಧಮ್​ದಾರ್​ ಪರ್ಫಾಮೆನ್ಸ್​ ನೀಡ್ತಿರುವ ಕೆಕೆಆರ್​​, ಗೆಲುವಿನ ಟ್ರ್ಯಾಕ್​ಗೆ ವಾಪಾಸ್ಸಾಗೋ ಆತ್ಮವಿಶ್ವಾಸದಲ್ಲಿದೆ. ಆದ್ರೆ, ಆರ್​​​ಸಿಬಿ ಕಥೆ ಅಯೋಮಯವಾಗಿದೆ.

ಇದನ್ನೂ ಓದಿ: RCB ಕ್ಯಾಪ್ಟನ್​ ಫಾಫ್​ ಡುಪ್ಲೆಸಿ ಫೇಲ್ಯೂರ್ ಆಗ್ತಿರೋದು ಎಲ್ಲಿ..? ಅದಕ್ಕೆ ಇಲ್ಲಿವೆ ಆ 5 ರೀಸನ್ಸ್!

ಡು ಆರ್​ ಡೈ ಕದನ, ಇಂದೂ ಸೋತ್ರೆ ಆರ್​​​ಸಿಬಿ ಖೇಲ್​ ಖತಂ.!

ಹೊಸ ಅಧ್ಯಾಯ ಅಂತ ಐಪಿಎಲ್​ ಸೀಸನ್​ ಸ್ಟಾರ್ಟ್​ ಮಾಡಿದ ಆರ್​​ಸಿಬಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆಡಿದ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿರೋ ಆರ್​​ಸಿಬಿ, ಪಾಯಿಂಟ್ಸ್​​ ಟೇಬಲ್​ನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ. ರನ್​ರೇಟ್​​​ ಕೂಡ ಪಾತಾಳಕ್ಕೆ ಕುಸಿದಿದ್ದು, ಇಂದಿನ ಪಂದ್ಯ ಡು ಆರ್​​ ಡೈ ಆಗಿ ಮಾಡರ್ಪಟ್ಟಿದೆ. ಇಂದು ಸೋತ್ರೆ, ಫ್ಲೇ ಆಫ್​ ಡೋರ್​​ ಬಹುತೇಕ ಮುಚ್ಚಲಿದೆ.

RCB ಬೌಲರ್ಸ್​​ VS KKR​ ಬ್ಯಾಟರ್ಸ್.. ಬಿಗ್​​ ಬ್ಯಾಟಲ್​.!

ಇಂದಿನ ಪಂದ್ಯದಲ್ಲಿ ಆರ್​​ಸಿಬಿ ಬೌಲರ್ಸ್​ ಹಾಗೂ ಕೆಕೆಆರ್​ ಬ್ಯಾಟರ್ಸ್​ ನಡುವೆ ಬಿಗ್​ ಬ್ಯಾಟಲ್​ ನಡೆಯೋದು ಕನ್​​ಫರ್ಮ್​. ಆರ್​​ಸಿಬಿ ಬೌಲರ್ಸ್​​​ ಕಳಪೆ ಫಾರ್ಮ್​ನಿಂದ ನೊಂದು ಬೆಂದಿದ್ರೆ, ಕೆಕೆಆರ್​ನ ಬ್ಯಾಟರ್ಸ್​ ಸಾಲಿಡ್​​ ಫಾರ್ಮ್​ನಲ್ಲಿ ಘರ್ಜಿಸ್ತಿದ್ದಾರೆ. ಕೊಲ್ಕತ್ತಾ ಈಡನ್​​ ಗಾರ್ಡನ್​ ಮೈದಾನ ಕೂಡ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚು ನೆರವಾಗ್ತಿದೆ. ಹೀಗಾಗಿ ಇಂದಿನ ಪಂದ್ಯದ ಸೋಲು-ಗೆಲುವು ಆರ್​​ಸಿಬಿ ಬೌಲರ್ಸ್​​ ಪರ್ಫಾಮೆನ್ಸ್​ ಮೇಲೆ ನಿಂತಿದೆ.

ಚಿನ್ನಸ್ವಾಮಿಯಲ್ಲಿ ಸಿದ್ಧವಾಗಿದೆ ರಣತಂತ್ರ, ವರ್ಕೌಟ್​ ಆಗುತ್ತಾ.?

ಸನ್​ರೈಸರ್ಸ್​ ಹೈದ್ರಾಬಾದ್​ ಎದುರು ಹೀನಾಯ ಮುಖಭಂಗ ಅನುಭವಿಸಿದ ಆರ್​​ಸಿಬಿ, ಮೊನ್ನೆಯವರೆಗೆ ಚಿನ್ನಸ್ವಾಮಿಯಲ್ಲಿ ಕಠಿಣ ಅಭ್ಯಾಸ ನಡೆಸಿತು. ತಪ್ಪುಗಳ ಮೇಲೆ ಪ್ಲೇಯರ್ಸ್​ ವರ್ಕೌಟ್​ ಮಾಡಿದ್ರೆ, ಕ್ಯಾಪ್ಟನ್​ ಫಾಫ್​ ಡುಪ್ಲೆಸಿ, ಕೋಚ್​​ ಆ್ಯಂಡಿ ಪ್ಲವರ್​​ ರಣತಂತ್ರ ಹೆಣೆಯೋದ್ರಲ್ಲಿ ಬ್ಯುಸಿಯಾಗಿದ್ರು. ಆರ್​​ಸಿಬಿ ತಂಡದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆಯಾಗೋದು ಬಹುತೇಕ ಕನ್​ಫರ್ಮ್​ ಆಗಿದೆ. ಮೊಹಮ್ಮದ್​ ಸಿರಾಜ್​ ಕಮ್​ಬ್ಯಾಕ್​ ಮಾಡೋ ಸಾಧ್ಯತೆಯಿದೆ. ಆದ್ರೆ, ಗ್ಲೆನ್​ ಮ್ಯಾಕ್ಸ್​ವೆಲ್​ ಕಣಕ್ಕಿಳಿಯೋದು ಅನುಮಾನವೇ.

ಕೊಹ್ಲಿ VS ಗಂಭೀರ್​ ಮುಖಾಮುಖಿ.. ಕದನ ಕುತೂಹಲ.!

ವಿರಾಟ್​ ಕೊಹ್ಲಿ -ಗೌತಮ್ ಗಂಭೀರ್​.. ಈ ಡೆಲ್ಲಿ​ ಬಾಯ್ಸ್​​ ಮುಖಾಮುಖಿ ಕ್ರಿಕೆಟ್​ ಲೋಕದ ಕುತೂಹಲ ಹೆಚ್ಚಿಸಿದೆ. ಕಳೆದ ಕೆಲ ಸೀಸನ್​ಗಳಿಂದ ಇವರಿಬ್ರ ನಡುವಿನ ಸ್ಲೆಡ್ಜಿಂಗ್​ ವಾರ್​ ಪಂದ್ಯಕ್ಕೆ ಹೈವೋಲ್ಟೆಜ್​ ಟಚ್​ ನೀಡ್ತಿತ್ತು. ಆದ್ರೆ, ಈ ಸೀಸನ್​ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಇಬ್ಬರು ಹಗ್​ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೆ ದೂಡಿದ್ರು. ಹೀಗಾಗಿ ಇಂದಿನ ಮುಖಾಮುಖಿಯಲ್ಲಿ ಏನ್​ ಆಗುತ್ತೆ ಅನ್ನೋ ಸಹಜವಾದ ಕುತೂಹಲವಿದೆ.

ಇದನ್ನೂ ಓದಿ: ಕಿಂಗ್​ ಕೊಹ್ಲಿ ಅಂದ್ರೆ KKRಗೆ ಭಯ.. ಈಡನ್ ಗಾರ್ಡನ್ಸ್​​ನಲ್ಲಿ ವಿರಾಟ್​ ವಿಶ್ವರೂಪದ ರೆಕಾರ್ಡ್​ ಹೇಗಿದೆ?

2019ಕ್ಕೆ ಕೊನೆ.. ಈಡನ್​ ಗಾರ್ಡನ್​ನಲ್ಲಿ ಗೆದ್ದಿಲ್ಲ RCB.!

ಈವರೆಗೆ ಈಡನ್​ ಗಾರ್ಡನ್​ನಲ್ಲಿ 11 ಬಾರಿ ಆರ್​​ಸಿಬಿ -ಕೆಕೆಆರ್​ ಮುಖಾಮುಖಿಯಾಗಿವೆ. ಈ ಪೈಕಿ ಆರ್​​ಸಿಬಿ ಗೆದ್ದಿರೋದು 4 ಬಾರಿ ಮಾತ್ರ. 7 ಪಂದ್ಯಗಳಲ್ಲಿ ಸೋಲುಂಡಿದೆ. 2019ರ ಬಳಿಕವಂತೂ ಈಡನ್​ ಗಾರ್ಡನ್​ನಲ್ಲಿ ಗೆಲುವು ಅನ್ನೋದನ್ನ ಆರ್​​ಸಿಬಿ ನೋಡೆ ಇಲ್ಲ.

ಬದಲಾಗಲಿದೆ ಜೆರ್ಸಿ.. ಅದೃಷ್ಟ ಖುಲಾಯಿಸುತ್ತಾ.?

ಇಂದಿನ ಪಂದ್ಯದಲ್ಲಿ ಆರ್​​ಸಿಬಿ ಹೊಸ ಜೆರ್ಸಿ ತೊಟ್ಟು ಕಣಕ್ಕಿಳಿಯಲು ಸಜ್ಜಾಗಿದೆ. ಗೋ ಗ್ರೀನ್​ ಅಭಿಯಾನದಡಿಯಲ್ಲಿ ಗ್ರೀನ್​ ಜೆರ್ಸಿ ತೊಟ್ಟು ಆರ್​​ಸಿಬಿ ಕಣಕ್ಕಿಳಿಯಲಿದೆ. ಬದಲಾದ ಜೆರ್ಸಿಯಿಂದ ಅದೃಷ್ಟ ಖುಲಾಯಿಸಿ ಸೋಲಿನ ಸರಪಳಿಗೆ ಫುಲ್​ ಸ್ಟಾಫ್​ ಬೀಳುತ್ತಾ ಎಂಬ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೌಲರ್ಸ್​ ಪರ್ಫಾಮೆನ್ಸ್​ ಮೇಲೆ ನಿಂತಿದೆ RCB ಭವಿಷ್ಯ.. KKR ವಿರುದ್ಧ ಸೋತರೇ ಫ್ಲೇ ಆಫ್ ಏನಾಗುತ್ತೆ?

https://newsfirstlive.com/wp-content/uploads/2024/04/RCB_VIRAT.jpg

Load More