newsfirstkannada.com

RCB ಕ್ಯಾಪ್ಟನ್​ ಫಾಫ್​ ಡುಪ್ಲೆಸಿ ಫೇಲ್ಯೂರ್ ಆಗ್ತಿರೋದು ಎಲ್ಲಿ..? ಅದಕ್ಕೆ ಇಲ್ಲಿವೆ ಆ 5 ರೀಸನ್ಸ್!

Share :

Published April 21, 2024 at 1:58pm

  ಪಂದ್ಯದಿಂದ ಪಂದ್ಯಕ್ಕೆ ಎಕ್ಸ್​​ಪೆರಿಮೆಂಟ್​​​ ಮೇಲೆ ಎಕ್ಸ್​​ಪೆರಿಮೆಂಟ್!

  ಐಪಿಎಲ್​​​ನಲ್ಲಿ RCBಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಫಲ

  ಗ್ಲೆನ್​​ ಮ್ಯಾಕ್ಸ್​ವೆಲ್​​, ಕ್ಯಾಮರೂನ್ ಗ್ರೀನ್​​ ತಂಡದಲ್ಲಿ ಫ್ಲಾಪ್ ಶೋ

ಏನಾಗಿದೆ ಆರ್​ಸಿಬಿಗೆ?. ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಗೆ ಏನಾಗಿದೆ?. ಸದ್ಯ ಈ ಪ್ರಶ್ನೆ ಆರ್​ಸಿಬಿ ಅಭಿಮಾನಿಗಳನ್ನ ಕಾಡ್ತಿದೆ. ಯಶಸ್ವಿಯಾಗಿ ತಂಡ ಮುನ್ನಡೆಸಬೇಕಿದ್ದ ಫಾಫ್​​ ಸೋಲಿನ ಪ್ರಪಾತಕ್ಕೆ ತಳ್ಳಿದ್ದೇಗೆ?. ಕ್ಯಾಪ್ಟನ್​​ ಆಗಿ ಡುಪ್ಲೆಸಿ ಫೇಲ್ಯೂರ್ ಕಾಣ್ತಿರೋದ್ಯಾಕೆ?. ಆ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ​ ಉತ್ತರವಿದೆ.

ಕ್ಯಾಪ್ಟನ್ ಡುಪ್ಲೆಸಿಯಿಂದಲೇ RCB ಗೆ ಇಂತಹ ದುಸ್ಥಿತಿ

ಮೇ 18..! ಆರ್​​ಸಿಬಿ 17ನೇ ಐಪಿಎಲ್​ನಲ್ಲಿ ಫಸ್ಟ್ ಮ್ಯಾಚ್​ ಗೆದ್ದ ದಿನ. ಅದೇ ಕೊನೆ. ಅಲ್ಲಿಂದ ಇಲ್ಲಿತನಕ ರೆಡ್​ ಆರ್ಮಿ ಒಂದೂ ಪಂದ್ಯ ಗೆದ್ದಿಲ್ಲ. ಒಂದೂ ತಿಂಗಳಲ್ಲಿ ಸತತ 5 ಸೋಲುಂಡು ತೀವ್ರ ಮುಖಭಂಗಕ್ಕೆ ತುತ್ತಾಗಿದೆ. ಕ್ಯಾಪ್ಟನ್ ಡುಪ್ಲೆಸಿ ನಾಯಕತ್ವಕ್ಕೆ ಛೀಮಾರಿ ಹಾಕ್ತಿದ್ದಾರೆ. ಹಾಗಾದ್ರೆ ನಾಯಕನಾಗಿ ಡುಪ್ಲೆಸಿ ಫೇಲ್ಯೂರ್ ಆಗ್ತಿರೋದ್ಯಾಕೆ?. ಅದಕ್ಕೆ ಕಾರಣಗಳು ಏನು?.

ಇದನ್ನೂ ಓದಿ: ಕತ್ತೆಗಳ ಹಾಲಿನಿಂದ ಲಕ್ಷ.. ಲಕ್ಷ ಹಣ ಸಂಪಾದನೆ.. ಈ ವ್ಯಕ್ತಿಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಡಿಮ್ಯಾಂಡ್ ರೀಸನ್​ ನಂ.1- ಆಯ್ಕೆಯಲ್ಲಿ ಗೊಂದಲ.. ಪರ್ಫೆಕ್ಷನ್​ ಇಲ್ಲ

ನಾಯಕನಾದವನಿಗೆ ಮೊದಲು ಆಡುವ 11 ಬಳಗದ ಬಗ್ಗೆ ಕ್ಲಾರಿಟಿ ಇರಬೇಕು. ಆದ್ರೆ ಆ ವಿಚಾರದಲ್ಲಿ ಫಾಫ್ ಡುಪ್ಲೆಸಿ ಎಡವುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಎಕ್ಸ್​​ಪೆರಿಮೆಂಟ್​​​ ಮೇಲೆ ಎಕ್ಸ್​​ಪೆರಿಮೆಂಟ್ ಮಾಡ್ತಿದ್ದಾರೆ. ಇದ್ರಿಂದ ತಂಡದಲ್ಲಿ ಆಟಗಾರರಿಗೆ ಸ್ಥಾನದ ಅಭದ್ರತೆ ಕಾಡ್ತಿದೆ. ಇದು ತಂಡದ ರಿಸಲ್ಟ್​ ಮೇಲೆ ಪರಿಣಾಮ ಬೀರುತ್ತಿದೆ.

ರೀಸನ್​ ನಂ.2- ಸಮರ್ಥ ಮಿಡಲ್​ ಆರ್ಡರ್ ಕಟ್ಟುವಲ್ಲಿ ವಿಫಲ

ಪ್ರಸಕ್ತ ಐಪಿಎಲ್​​​ನಲ್ಲಿ ಆರ್​ಸಿಬಿ ಮಧ್ಯಮ ಕ್ರಮಾಂಕ ಸಂಪೂರ್ಣ ನೆಲಕಚ್ಚಿದೆ. ರಜತ್ ಪಟೀದಾರ್​​​, ಅನೂಜ್ ರಾವುತ್​​​, ಸೌರವ್ ಚೌಹಾಣ್​​​​​ ಹಾಗೂ ಲೋಮ್​ರೋರ್​​ ಅಸ್ಥಿರ ಪ್ರದರ್ಶನ ನೀಡ್ತಿದ್ದಾರೆ. ಪಟೀದಾರ್​​ ಬಿಟ್ರೆ ಮಿಕ್ಕವರಿಗೆ ಅಂತರಾಷ್ಟ್ರೀಯ ಕ್ರಿಕೆಟ್​ ಅನುಭವವಿಲ್ಲ. ಇಂತವರಿಗೆ ಮಧ್ಯಮ ಕ್ರಮಾಂಕದ ಜವಾಬ್ದಾರಿ ನೀಡಿ ಡುಪ್ಲೆಸಿ ಕೈಸುಟ್ಟುಕೊಳ್ತಿದ್ದಾರೆ.

ರೀಸನ್​ ನಂ.3- ರಿಸ್ಕ್​​ ತೆಗೆದುಕೊಳ್ಳಲು ಹಿಂದೇಟು

ಪಂದ್ಯ ಸೋಲಲಿ, ಗೆಲ್ಲಲಿ.. ಕ್ಯಾಪ್ಟನ್​​ ಆದವರು ರಿಸ್ಕ್​​ ತೆಗೆದುಕೊಳ್ಳಲು ಸಿದ್ಧವಿರಬೇಕು. ಆದ್ರೆ ಕ್ಯಾಪ್ಟನ್ ಡುಪ್ಲೆಸಿ ಹಿಂದೇಟು ಹಾಕ್ತಿದ್ದಾರೆ. ಗ್ಲೆನ್​​ ಮ್ಯಾಕ್ಸ್​ವೆಲ್​​, ಕ್ಯಾಮರೂನ್ ಗ್ರೀನ್​​ ಅಟ್ಟರ್ ಫ್ಲಾಪ್ ಶೋ ನೀಡಿದ್ರೂ, ಅವರ ಬದಲಿ ಬೇರೆ ಆಟಗಾರರನ್ನ ಆಡಿಸಲಿಲ್ಲ. 6ನೇ ಪಂದ್ಯದಲ್ಲಿ ಕೊನೆಗೆ ಗ್ರೀನ್ ಬದಲಿ ವಿಲ್ ಜ್ಯಾಕ್ಸ್ ಆಡಿಸಿದ್ರು. ಮಯಾಂಕ್​ ಡಾಗರ್​​​​​​​ ಇಂಪ್ರೆಸ್ಸಿವ್​​​ ಬೌಲಿಂಗ್ ಮಾಡ್ತಿಲ್ಲ. ಇದು ಗೊತ್ತಿದ್ರೂ ವಿಕೆಟ್ ಟೇಕರ್​​ ಕರಣ್ ಶರ್ಮಾರನ್ನ ಆಡಿಸುವ ಪ್ರಯತ್ನ ಮಾಡಿಲ್ಲ. ಅಲ್ಲದೇ ಮಹಿಪಾಲ್ ಲೊಮ್​​ರೋರ್​​ರನ್ನ ಬರೀ ಇಂಫ್ಯಾಕ್ಟ್​ ಪ್ಲೇಯರ್ ಆಗಿ ಆಡಿಸ್ತಿದ್ದಾರೆ.

ರೀಸನ್​ ನಂ.4- ಹರಾಜಿನಲ್ಲಿ ಉತ್ತಮ ಪಿಕ್​ ಇಲ್ಲ.. ಬ್ಯಾಲೆನ್ಸ್ ಮಾಯ!

ಫಾಫ್ ಡುಪ್ಲೆಸಿ 2022 ರಿಂದ ಆರ್​ಸಿಬಿ ಫ್ರಾಂಚೈಸಿ ಜೊತೆಗಿದ್ದಾರೆ. ಹರಾಜಿನಲ್ಲಿ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅಧಿಕಾರ ಇರುತ್ತೆ. ಜತೆಗೆ ಪ್ಲೇಯರ್​​​​​ ರಿಟೆನ್ಷನ್​ ವೇಳೆಯು ಸಲಹೆ ನೀಡಬಹುದು. ಇಷ್ಟು ಅಧಿಕಾರ ಇದ್ರು ಹರಾಜಿನಲ್ಲಿ ಉತ್ತಮ ಆಟಗಾರರನ್ನ ಖರೀದಿಸಲಿಲ್ಲ. ಬೇರೆ ಫ್ರಾಂಚೈಸಿಗಳಿಗೆ ಬೇಡವಾದ ಪ್ಲೇಯರ್ಸ್​ ಕೊಂಡುಕೊಂಡು ತಂಡದ ಬ್ಯಾಲೆನ್ಸ್​ ತಪ್ಪಿಸಿದ್ದಾರೆ.

ಇದನ್ನೂ ಓದಿ: IPLನಲ್ಲಿ ಅತ್ಯಂತ ದೊಡ್ಡ ರೆಕಾರ್ಡ್​ಗೆ ಕೈ ಹಾಕಿದ SRH.. ನಂ-3 ಕುರಿತು ಟ್ರಾವಿಸ್ ಹೆಡ್, ಅಭಿಷೇಕ್ ಏನಂದ್ರು ಗೊತ್ತಾ? 

ರೀಸನ್​ ನಂ.5- ಆಟಗಾರರನ್ನ ಹುರಿದುಂಬಿಸದ ಫಾಫ್​

ಆನ್​ಫೀಲ್ಡ್​ನಲ್ಲಿ ಆಟಗಾರರ ಜೊತೆ ಉತ್ತಮವಾಗಿ ಬೆರೆಯುವ ಡುಪ್ಲೆಸಿ, ಡ್ರೆಸ್ಸಿಂಗ್ ರೂಮ್​​ನಲ್ಲಿ ಅಂತರ ಕಾಯ್ದುಕೊಳ್ತಾರೆ. ತಂಡ ಸೋತ್ರೂ, ಗೆದ್ರೂ, ಆಟಗಾರರ ಉತ್ತಮವಾಗಿ ಆಡಿದ್ರೂ, ಆಡದಿದ್ರೂ ಹುರಿದುಂಬಿಸಲ್ಲ. ಇದರಿಂದ ಆಟಗಾರರ ಆತ್ಮಸ್ಥೈರ್ಯ ಕುಗ್ಗುತ್ತೆ. ಆದ್ರೆ ಅದೇ ಡೆಲ್ಲಿ ಕ್ಯಾಪಿಟಲ್ಸ್​​​, ಗುಜರಾತ್ ಟೈಟನ್ಸ್ ಹಾಗೂ ಮುಂಬೈ ತಂಡದಲ್ಲಿ ನಾಯಕರಾದವರು ಆಟಗಾರರನ್ನ ಹುರಿದುಂಬಿಸಿ, ಮಾನಸಿಕವಾಗಿ ಸಿದ್ಧಗೊಳಿಸ್ತಾರೆ.

ಇದನ್ನೂ ಓದಿ: ಕಿಂಗ್​ ಕೊಹ್ಲಿ ಅಂದ್ರೆ KKRಗೆ ಭಯ.. ಈಡನ್ ಗಾರ್ಡನ್ಸ್​​ನಲ್ಲಿ ವಿರಾಟ್​ ವಿಶ್ವರೂಪದ ರೆಕಾರ್ಡ್​ ಹೇಗಿದೆ?

ಇದಿಷ್ಟೇ ಅಲ್ಲದೇ ಆನ್​ಫೀಲ್ಡ್​​​ನಲ್ಲಿ ಫೀಲ್ಡ್​ ಸೆಟ್ಟಿಂಗ್​​​, ಬೌಲಿಂಗ್​​​ ಚೇಂಜಸ್​​​ನಲ್ಲಿ ಪ್ರಮಾದ ಎಸಗುತ್ತಿದ್ದಾರೆ. ಇದರಿಂದ ಆರ್​ಸಿಬಿಗೆ ಗೆಲುವು ಗಗನಕುಸುಮವಾಗಿದೆ. ಇಂದಿನ ಪಂದ್ಯಲ್ಲಾದ್ರು ಡುಪ್ಲೆಸಿಸ್ ಮಿಸ್ಟೇಕ್ಸ್ ತಿದ್ದಿಕೊಂಡು ತಂಡವನ್ನ ಗೆಲುವಿನ ಟ್ರ್ಯಾಕ್​​​ಗೆ ತರ್ತಾರಾ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಕ್ಯಾಪ್ಟನ್​ ಫಾಫ್​ ಡುಪ್ಲೆಸಿ ಫೇಲ್ಯೂರ್ ಆಗ್ತಿರೋದು ಎಲ್ಲಿ..? ಅದಕ್ಕೆ ಇಲ್ಲಿವೆ ಆ 5 ರೀಸನ್ಸ್!

https://newsfirstlive.com/wp-content/uploads/2024/04/RCB_CAPTIAN.jpg

Load More