/newsfirstlive-kannada/media/post_attachments/wp-content/uploads/2024/04/WILL-JACKS-5.jpg)
ಗುಜರಾತ್ ವಿರುದ್ಧ ವಿಲ್​ ಜಾಕ್ಸ್​ ಸಿಡಿಸಿದ ಸಿಡಿಲಬ್ಬರದ ಶತಕಕ್ಕೆ ಕ್ರಿಕೆಟ್ ಲೋಕ ಬೆರಗಾಗಿದೆ. ಎಲ್ಲೆಡೆ ಪವರ್​​ ಹಿಟ್ಟರ್ ಗುಣಗಾನ ನಡೀತಿದೆ. ಯಂಗ್​ ಬ್ಯಾಟರ್​​ ವಿಲ್​ ಜಾಕ್ಸ್​​​ ಬರೀ ಐಪಿಎಲ್ ಅಷ್ಟೇ ಅಲ್ಲ. ಆಡಿದ ಎಲ್ಲಾ ಟಿ20 ಲೀಗ್​ಗಳಲ್ಲಿ ಸೆಂಚುರಿ ಭರಾಟೆ ನಡೆಸಿದ್ದಾರೆ.
ವಿಲ್​ ಜಾಕ್ಸ್​​​​​​​, ವಿಲ್​ ಜಾಕ್ಸ್​​​, ವಿಲ್​​ ಜಾಕ್ಸ್​​. ಸದ್ಯ ಕ್ರಿಕೆಟ್​ ಲೋಕದಲ್ಲಿ ಈ ವಿಲಿಯಮ್​​​​ ಜಾರ್ಜ್​ ಜಾಕ್ಸ್​ನದ್ದೇ ಜಪ ನಡೀತಿದೆ. ವಾಟ್ಸಾಪ್​​​​​​​, ಫೇಸ್​​ಬುಕ್​​​​​​​​​​​​​ ಹಾಗೂ ಇನ್​ಸ್ಟಾಗ್ರಾಮ್ ನಲ್ಲಿ ಜಾಕ್ಸ್​ ಆರಾಧನೆ ನಡೀತಿದೆ. ಗುಜರಾತ್​ ಎದುರು ಸ್ಫೋಟಕ ಸೆಂಚುರಿ ಸಿಡಿಸಿ ಇಂಟರ್​​ನೆಟ್​ನಲ್ಲಿ ಧೂಳೆಬ್ಬಿಸಿದ್ದಾರೆ. ಕ್ಲೀನ್​ ಹಿಟ್ಟಂಗ್​ ಶಾಟ್ಸ್​​, ನಿರ್ಭಿತ ಆಟ, ಅಗ್ರೆಸ್ಸಿವ್​ ಅಪ್ರೋಚ್​​ನಿಂದ ಎಲ್ಲರ ದಿಲ್ ಗೆದ್ದಿದ್ದಾರೆ.
ಸ್ಫೋಟಕ ಶತಕ ಸಿಡಿಸೋದ್ರಲ್ಲಿ ವಿಲ್​ ಜಾಕ್ಸ್​ ಪಂಟರ್​​
ಐಪಿಎಲ್​ ಅಖಾಡದಲ್ಲಿ ಜಾಕ್ಸ್​ ಶತಕೋತ್ಸವವನ್ನು ನೋಡಿ ಎಲ್ಲರೂ ಖುಷ್​ ಆಗಿದ್ದಾರೆ. ಅಸಲಿಗೆ ಈ ಡೇಂಜಸರ್​ ವಿಲ್ ಜಾಕ್ಸ್​​​ ಸ್ಫೋಟಕ ಶತಕದಿಂದ ಕ್ರಿಕೆಟ್ ಲೋಕವವನ್ನು ಬೆರಗಾಗಿಸ್ತಿರೋದು ಇದೇ ಮೊದಲೇನಲ್ಲ. ಇಂತಹ ಧಮ್​ದಾರ್​​​​​​​​​ ಸೆಂಚುರಿ ಹೊಡೆಯೋದ್ರಲ್ಲಿ ಜಾಕ್ಸ್ ನಿಸ್ಸೀಮ. ಈತನನ್ನ ಹೊಡಿಬಡಿ ಗೇಮ್​​​ನ ಸೆಂಚುರಿ ಸ್ಪೆಷಲಿಸ್ಟ್​ ಅಂದರೂ ತಪ್ಪಲ್ಲ. ಯಾಕಂದ್ರೆ ಬೆಂಕಿ ಬ್ಯಾಟರ್​​​​​ ಆಡಿದ ಎಲ್ಲಾ ಟಿ20 ಲೀಗ್​​​​​ಗಳಲ್ಲಿ ಶತಕದ ಹೆಗ್ಗುರುತು ಮೂಡಿಸಿದ್ದಾರೆ.
ಇದನ್ನೂ ಓದಿ:ಟೀಕೆ ಟೀಕೆ ಟೀಕೆ.. ಕೊಹ್ಲಿ ಕಂಡ್ರೆ ಅದ್ಯಾಕೆ ಹಿಂಗೆ ಆಡ್ತಾರೋ.. ಆದರೆ ಕಿಂಗ್ ಕೊಹ್ಲಿ ಉತ್ತರ ಮಾತ್ರ ಬೆಂಕಿ..!
/newsfirstlive-kannada/media/post_attachments/wp-content/uploads/2024/04/WILL-JACKS-6.jpg)
ಸೌತ್ ಆಫ್ರಿಕಾ 20 ಲೀಗ್​ನಲ್ಲಿ ಜಬರ್ದಸ್ತ್​​​ ಶತಕ
ಇದೇ ವರ್ಷ ನಡೆದ ಸೌತ್ ಆಫ್ರಿಕಾ ಟ್ವೆಂಟಿ ಲೀಗ್​ ಸೀಸನ್​​​​​​​2 ರಲ್ಲಿ ವಿಲ್​ ಜಾಕ್ಸ್​​ ಜಬರ್ದಸ್ತ್​​ ಸೆಂಚುರಿ ಸಿಡಿಸಿ ಶೈನ್ ಆಗಿದ್ರು. ಡರ್ಬನ್ಸ್​​​​​​ ಸೂಪರ್​ ಜೈಂಟ್ಸ್​ ಬೌಲರ್​ಗಳಿಗೆ ನರಕ ದರ್ಶನ ಮಾಡಿಸಿದ್ದ ವಿಲ್​ ಜಾಕ್ಸ್​ 41 ಎಸೆತಗಳಲ್ಲಿ ಶತಕ ಪೂರೈಸಿದ್ರು.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್​​​ನಲ್ಲಿ ಭರ್ಜರಿ ಸೆಂಚುರಿ
ನೀರು ಕುಡಿದಷ್ಟೇ ಸುಲಭವಾಗಿ ಸೆಂಚುರಿ ಬಾರಿಸೋ ವಿಲ್ ಜಾಕ್ಸ್​​​ ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​​ನಲ್ಲಿ ಕೂಡ ವಿಸ್ಫೋಟಕ ಸೆಂಚುರಿ ಹೊಡೆದಿದ್ರು. ಕೇವಲ 50 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿ ಪ್ರೇಕ್ಷಕರಿಗೆ ಫುಲ್ಸ್ ಮೀಲ್ಸ್ ಮನರಂಜನೆ ನೀಡಿದ್ರು.
ದಿ ಹಂಡ್ರೆಡ್​ ಲೀಗ್​​​ನಲ್ಲಿ ಅಮೋಘ ಶತಕದಾಟ
ಇಂಗ್ಲೆಂಡ್​ನ ಹಂಡ್ರೆಂಡ್ ಲೀಗ್​ನಲ್ಲಿ ವಿಲ್ ಜಾಕ್ಸ್​​​​ ಬೊಂಬಾಟ್​ ಶತಕ ಸಿಡಿಸಿದ್ದಾರೆ. 47 ಎಸೆತಗಳಲ್ಲಿ ಶತಕ ಬಾರಿಸಿದ ಜಾಕ್ಸ್​ ಎದುರಾಳಿಗೆ ಸೋಲಿನ ದರ್ಶನ ಮಾಡಿಸಿದ್ರು. ಇದಿಷ್ಟೇ ಅಲ್ಲದೇ ದುಬೈನ T10 ಲೀಗ್ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ಕೇವಲ 25 ಎಸೆತಗಳಲ್ಲಿ ಶತಕ ಸಿಡಿಸಿ ಕ್ರಿಕೆಟ್ ಲೋಕವನ್ನು ಬೆರಗಾಗಿಸಿದ್ರು. ಇದೀಗ ಐಪಿಎಲ್​ನಲ್ಲಿ ಆರ್ಭಟಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/04/RCB_Will_Jacks.jpg)
ಆರ್​ಸಿಬಿ ತಂಡ ಪ್ಲೇಆಫ್​​ಗೆ ಹೋಗಬೇಕಾದ್ರೆ ಮುಂದಿನ ಪಂದ್ಯ ಎಲ್ಲಾ ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆಲ್ಲಬೇಕಿದೆ. ಜೊತೆಗೆ ಅದೃಷ್ಟ ಕೈಹಿಡಿಯಬೇಕಿದೆ. ಇಂತಹ ಟಫ್​​ಟೈಮ್​ನಲ್ಲೆ ವಿಲ್ ಜಾಕ್ಸ್​​ ಅಸಲಿ ಖದರ್​ಗೆ ಮರಳಿರೋದು ತಂಡಕ್ಕೆ ಬಲ ಬಂದಂತಾಗಿದೆ. ಮುಂದಿನ ಪಂದ್ಯಗಳಲ್ಲೂ ಜಾಕ್ಸ್​ ಇಂತಹದ್ದೇ ಪರ್ಫಾಮೆನ್ಸ್​ ಮುಂದುವರೆಸಲಿ ಅನ್ನೋದು ಆರ್​​ಸಿಬಿ ಫ್ಯಾನ್ಸ್​ ಆಶಯವಾಗಿದೆ.
ಇದನ್ನೂ ಓದಿ:ಪಾಂಡ್ಯಗೆ ಮತ್ತೊಂದು ಆಘಾತ.. ಸ್ಟಾರ್ ಆಟಗಾರನಿಂದ ಟೀಂ ಇಂಡಿಯಾದ ಉಪನಾಯಕನ ಪಟ್ಟ ಟೇಕ್ ಓವರ್..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us