newsfirstkannada.com

RCBvsCSK ಪಂದ್ಯಕ್ಕೆ ಎಲ್ಲರ ಆಶೀರ್ವಾದವಿದೆ.. ಆದ್ರೆ ಅವನೊಬ್ಬನ ಆಶೀರ್ವಾದ ಬೇಕಷ್ಟೆ! ಯಾರವನು?

Share :

Published May 16, 2024 at 1:41pm

    ನಾಳೆಯೊಂದೇ ಬಾಕಿ.. ನಾಳಿದ್ದು ರಣ ರೋಚಕ ಪಂದ್ಯಕ್ಕೆ ಸಾಕ್ಷಿ

    ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಮತ್ತು ಚೆನ್ನೈ ತಂಡದ ನಡುವಿನ ಜಟಾಪಟಿ

    ಫ್ಯಾನ್ಸ್​ ತುದಿಗಾಲಿನಲ್ಲಿ ಕಾದು ಕುಳಿತಿರುವ ಪಂದ್ಯಕ್ಕೆ ಆತನ ಆಶೀರ್ವಾದ ಬೇಕಷ್ಟೆ!

RCBvsCSK: ಮೇ 18. ಆ ದಿನಕ್ಕಾಗಿ ಎಲ್ಲರೂ ಕಾದು ಕುಳಿತ್ತಿದ್ದಾರೆ. ಕಾರಣ ಅಭಿಮಾನಿಗಳ ನೆಚ್ಚಿನ ಆರ್​​ಸಿಬಿ vs ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಡುವಿನ ಗೆಲುವಿನ ಹೋರಾಟವಿದು. ಈ ರಣ ರೋಚಕ ಪಂದ್ಯಕ್ಕೆ ಎಲ್ಲರೂ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಪಂದ್ಯ ಏರ್ಪಡಲಿದೆ. ಐಪಿಎಲ್​ನಲ್ಲಿ ಇವೆರಡು ತಂಡಗಳ ನಡುವಿನ ಪೈಫೋಟಿಗೆ ಅಭಿಮಾನಿಗಳು ಅಂದು ಟಿವಿ ಮುಂದೆ, ಸ್ಟೇಡಿಯಂ ಮುಂದೆ ಹಾಜರಾಗೋದು ಪಕ್ಕಾ. ಒಟ್ಟಿನಲ್ಲಿ ಪ್ಲೇ ಆಫ್​ಗೆ ಹೋಗಲು ಅಂದು ಇತ್ತಂಡಗಳು ಸೆಣೆಸಾಡಲಿವೆ. ಹಾಗಾಗಿ ಮೇ18ರ ಪಂದ್ಯಕ್ಕೆ ಪುಟಾಣಿ ಮಕ್ಕಳಿಂದ ಹಿಡಿದು ಹಿರಿ ಜೀವಗಳು ಕೂಡ ಕಾದು ಕುಳಿತ್ತಿದ್ದಾರೆ.

ಈತನ ಆಶೀರ್ವಾದ ಬೇಕಷ್ಟೆ

ಪಂದ್ಯವೇನೋ ಬೆಂಗಳೂರಿನಲ್ಲಿ ನಡೆಯುತ್ತದೆ ನಿಜ. ಈ ಪಂದ್ಯಕ್ಕೆ ಎಲ್ಲರ ಆಶೀರ್ವಾದ ಇರುವುದು ಸಹ ನಿಜ. ಆದರೆ ವರುಣ ದೇವನ ಆಶಿರ್ವಾದ ಬೇಕಷ್ಟೆ. ಆತ ಕೃಪೆ ತೋರಿಸಿದರೆ ಚಿನ್ನಸ್ವಾಮಿಯಲ್ಲಿ ನಡೆಯುವ ಆರ್​ಸಿಬಿ ಮತ್ತು ಚೆನ್ನೈ ಪಂದ್ಯ ಕಣ್ಣಾರೆ ಕಾಣಬಹುದಾಗಿದೆ. ಆದರೆ ಹವಾಮಾನ ಇಲಾಖೆಯ ಮುನ್ಸೂಚನೆ ಕೊಂಚ ಕ್ರಿಕೆಟ್​ ಫ್ಯಾನ್ಸ್​ ಮನದಲ್ಲಿ ಭಯ ಆವರಿಸುವಂತೆ ಮಾಡಿದೆ.

ಇದನ್ನೂ ಓದಿ: ಅಮ್ಮಾ, ಬಾಯಾರಿಕೆ ಆಗ್ತಿದೆ.. ನೀರು ಎಂದುಕೊಂಡು ಆ್ಯಸಿಡ್​ ಕುಡಿದು ಮಗು ಸಾವು

ಅಷ್ಟಕ್ಕೂ ಹವಾಮಾನ ಇಲಾಖೆ ಏನು ಹೇಳಿದೆ?

ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಇಂದು ರಾತ್ರಿ ಭರ್ಜರಿ ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 5 ದಿನಗಳಿಂದಲೂ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದ್ದು, ಇಂದು ಕೂಡ ವರುಣನ ಆರ್ಭಟ ಜೋರಾಗಿ ಇರಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಅಂತು..ಇಂತು..ಬಂತು ಎಲೆಕ್ಟ್ರಿಕ್ ನ್ಯಾನೋ ಕಾರು.. ಒಂದು ಬಾರಿ ಚಾರ್ಜ್​ ಮಾಡಿದ್ರೆ 300km ಚಲಿಸುತ್ತೆ ಕಣ್ರಿ.. ಬೆಲೆ?

ಮೇ 20 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ನೀಡಿದ ಐಎಂಡಿ

ಈ ವಾರ ಪೂರ್ತಿ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ. ಮೇ 20 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ಇದೆ. ಬೆಂಗಳೂರಿನ ಎಲ್ಲೆಡೆ ರಾತ್ರಿ 10 ಗಂಟೆ ಮೇಲೆ ವಿದ್ಯುತ್​ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಕೂಡ ತಿಳಿಸಿದೆ. ಬನಶಂಕರಿ, ಬಸವನಗುಡಿ, ಜಯನಗರ, ಕೋರಮಂಗಲ, ಕೆಆರ್​ ಮಾರುಕಟ್ಟೆ, ಜೆಸಿ ರಸ್ತೆ, ಮೆಜೆಸ್ಟಿಕ್, ಗಿರಿನಗರ, ಶ್ರೀನಿವಾಸನಗರ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕರೆಂಟ್​ ಇರಲ್ಲ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCBvsCSK ಪಂದ್ಯಕ್ಕೆ ಎಲ್ಲರ ಆಶೀರ್ವಾದವಿದೆ.. ಆದ್ರೆ ಅವನೊಬ್ಬನ ಆಶೀರ್ವಾದ ಬೇಕಷ್ಟೆ! ಯಾರವನು?

https://newsfirstlive.com/wp-content/uploads/2024/05/RCB-Kohli-1.jpg

Load More