ಸುದೀಪ್​ ಬೆನ್ನಲ್ಲೇ ದರ್ಶನ್​ ಪ್ರಕರಣದ ಬಗ್ಗೆ ತುಟಿ ಬಿಚ್ಚಿದ ರಿಯಲ್​ ಸ್ಟಾರ್​! ಏನಂದ್ರು?

author-image
AS Harshith
Updated On
ಸುದೀಪ್​ ಬೆನ್ನಲ್ಲೇ ದರ್ಶನ್​ ಪ್ರಕರಣದ ಬಗ್ಗೆ ತುಟಿ ಬಿಚ್ಚಿದ ರಿಯಲ್​ ಸ್ಟಾರ್​! ಏನಂದ್ರು?
Advertisment
  • ನಿಶ್ಪಕ್ಷವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ
  • ಪೊಲೀಸರು ಸಾಕ್ಷಿಗಳನ್ನು ಸಾರ್ವಜನಿಕವಾಗಿ ತೆರೆದಿಡಬೇಕು
  • ಇಡೀ ಕರ್ನಾಟಕ ಮಾತ್ರವಲ್ಲ, ಭಾರತವೇ ಬೆರಗಾಗಿ ನೋಡುತ್ತಿದೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್​ ವಿಚಾರವಾಗಿ ನಟ ದರ್ಶನ್​ ಆ್ಯಂಡ್​​ ಟೀಂ ಅರೆಸ್ಟ್​ ಆಗಿ ತನಿಖೆ ನಡೆಯುತ್ತಿದೆ. ಆದರೆ ನಟನೋರ್ವನ ಕೈಯಾರೆ ನಡೆದ ಈ ಭೀಕರ ಹತ್ಯೆ ಬಗ್ಗೆ ಸ್ಯಾಂಡಲ್​ವುಡ್​ನ ಬಹುತೇಕ ತಾರೆಯರು ಮಾತು ಬಿಚ್ಚಿರಲಿಲ್ಲ. ಕೆಲವೇ ಕೆಲವು ನಟರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದರು. ಆದರೀಗ ನಟ ಸುದೀಪ್​ ಬೆನ್ನಲ್ಲೇ ರಿಯಲ್​ ಸ್ಟಾರ್​ ಉಪೇಂದ್ರರವರು ರೇಣುಕಾಸ್ವಾಮಿ ಹತ್ಯೆ ಬಗ್ಗೆ ಮನಬಿಚ್ಚಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಹಾಕುವ ಮೂಲಕ ತಮ್ಮ ಪಾರದರ್ಶಕತೆಯನ್ನು ತೆರೆದಿಟ್ಟಿದ್ದಾರೆ.

publive-image

ಇದನ್ನೂ ಓದಿ: ಯಶಸ್ಸು, ಕೆಟ್ಟ ಸಂಗಡಿಗರ ಸಹವಾಸದಿಂದ ದರ್ಶನ್ ಹಾಳಾದ! ಅಂದು ಸಿನಿಮಾದ ರೀಲ್ ಸುಟ್ಟಾಕ್ತೀನಿ ಎಂದಿದ್ದ!  

ಇನ್​ಸ್ಟಾಗ್ರಾಂನಲ್ಲಿ ನಟ ಉಪೇಂದ್ರ ಅವರು ದರ್ಶನ್​ ಪ್ರಕರಣದ ಬಗ್ಗೆ ಪೋಸ್ಟ್​ ಹಂಚಿಕೊಂಡಿದ್ದಾರೆ. ಅದರಲ್ಲಿ ‘ದರ್ಶನ್ - ರೇಣುಕಾ ಸ್ವಾಮಿ - ಪಾರದರ್ಶಕ ವಿಚಾರಣೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್ ಬಂಧನ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಬೆರಗಾಗಿ ನೋಡುತ್ತಿದೆ’.

‘ಈ ಹೈ-ಪ್ರೊಫೈಲ್ ಕೇಸ್ ನ ವಿಚಾರಣೆಯಲ್ಲಿ ನಿಶ್ಪಕ್ಷವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೇಣುಕಾ ಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟಿವಿ, ಮಾಧ್ಯಮಗಳಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನಗಳು ಕಾಡುತ್ತಿದೆ. ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ. ಏಕೆಂದರೆ, ಯಾವುದೇ ಕೇಸ್ ಆದರೂ ಆ ಕೇಸ್ ನ ವಿಚಾರಣೆಯ ವಿಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂಧಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು. (ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದು ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು )( ಕಾನೂನು ಸುಧಾರಣೆಗಳು #CriminalJusticeReforms )’

ಇದನ್ನೂ ಓದಿ: ದರ್ಶನ್​ ಪ್ರಕರಣದಲ್ಲಿ ಹ್ಯಾಸ ನಟನಿಗೂ ಢವ ಢವ.. ಅರೆಸ್ಟ್​ ಆಗೋ ಭಯದಲ್ಲಿದ್ದಾರಂತೆ ಈ ತಾರೆ!

‘ಅದೇ ರೀತಿ ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ ಆ ಕೇಸ್ ನ ವಿಚಾರಣೆಯ ವಿಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು. ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು, ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ. ಆಗ ರೇಣುಕಾ ಸ್ವಾಮಿ ಕುಟುಂಬಕ್ಕೆ, ಜನರಿಗೆ, ಟಿವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೆೇ ಪೋಲೀಸ್ ಮತ್ತು ಟಿವಿ ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನವನ್ನು ಕದ್ದಿರೋದು ಈತ! ವಿಚಾರಣೆ ವೇಳೆ ಕೊನೆಗೂ ಸಿಕ್ಕಿಬಿದ್ದ ನೋಡಿ

ಸದ್ಯ ಇವರ ಪೋಸ್ಟ್​ ನೋಡಿ ಅನೇಕರು ಕಾಮೆಂಟ್​ ಹಾಕಿದ್ದಾರೆ. ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದು ಬರೆದುಕೊಂಡಿದ್ದಾರೆ. ಸದ್ಯ ದರ್ಶನ್​ ಪ್ರಕರಣದ ಕುರಿತು ಕೋರ್ಟ್​ 4 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಿದೆ. ಮತ್ತೆ ಪೊಲೀಸರು ಆರೋಪಿಗಳನ್ನು ಸ್ಥಳ ಮಹಜರು ಮಾಡುವ ಮೂಲಕ ಮತ್ತಷ್ಟು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment