Advertisment

ದರ್ಶನ್​ಗೂ ಪವಿತ್ರಾಗೂ ಇರೋ ಸಂಬಂಧವೇನು? ಸ್ನೇಹಿತೇನಾ? ಪ್ರಿಯತಮೇನಾ? ಚಾರ್ಜ್​​ಶೀಟ್​​ನಲ್ಲೇನಿದೆ?

author-image
Bheemappa
Updated On
ಜೊತೆಯಲ್ಲಿ ಬಂದವರು ಒಂದೇ ಜೈಲಿನಲ್ಲಿ ಇಲ್ಲ.. ಪವಿತ್ರ ಗೌಡಗೆ ಕಾಡುತ್ತಿದೆ ಒಂಟಿತನ..
Advertisment
  • ಈ ಪ್ರಕರಣದಲ್ಲಿ ಪವಿತ್ರಾ ಹೆಸರು ಬಂದರಂತೆ ದಾಸ ಮಾಡಿದ್ದೇನು..?
  • ದರ್ಶನ್‌ಗೂ ಪವಿತ್ರಾ ಗೌಡಗೂ ಇರೋ ಸಂಬಂಧ ರಿವೀಲ್ ಆಗಿದೆ
  • ಪತ್ನಿಗೆ ಹೊಡೆದಿದ್ದ ದರ್ಶನ್‌, ಪವಿತ್ರಾ ಗೌಡಗಾಗಿ ಇಷ್ಟೆಲ್ಲ ಮಾಡಿದ್ದೇಕೆ?

ಫ್ರೆಂಡಾ? ಪ್ರಿಯತಮೆಯಾ? ಪವಿತ್ರಾ ಬಗ್ಗೆ ದರ್ಶನ್‌ ಶಾಕಿಂಗ್‌ ಹೇಳಿಕೆ!. ಪತ್ನಿಗೆ ಹೊಡೆದಿದ್ದ ದರ್ಶನ್‌, ಪವಿತ್ರಾ ಗೌಡಗಾಗಿ ಇಷ್ಟೆಲ್ಲ ಮಾಡಿದ್ದೇಕೆ? ಆಕೆ ಹೆಸ್ರು ಬರಕೂಡದು. ದರ್ಶನ್‌ ಹುಕುಂ ಹಿಂದಿದೆ ಮಹಾ ರಹಸ್ಯ!.

Advertisment

ರೇಣುಕಾಸ್ವಾಮಿ ಮೇಲಿನ ಕ್ರೌರ್ಯಕಾಂಡ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಡಿಗ್ಯಾಂಗ್‌ ಮೇಲೆ ಸಾರ್ವಜನಿಕರಿಂದಲೂ ಆಕ್ರೋಶದ ಕಿಡಿಗಳು ಹೊರಬರ್ತಿವೆ. ಸ್ಟಾರ್‌ ನಟನಾಗಿದ್ರೂ ದರ್ಶನ್‌ ಅಷ್ಟೊಂದು ನಿರ್ದಯಿಯಾಗಿ, ರಾಕ್ಷಸರಾಗಿ ನಡೆದ್ಕೊಂಡಿದ್ದು ಏಕೆ? ಅನ್ನೋ ಪ್ರಶ್ನೆಗೆ ಕೇಳಿಬರ್ತಿರೋ ಉತ್ತರ ಪವಿತ್ರಾ ಗೌಡ. ಪತ್ನಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ದರ್ಶನ್‌ ಗೆಳತಿಗಾಗಿ ಎಲ್ಲವನ್ನು ಮಾಡಿದ್ದಾರೆ. ಹಾಗಾದ್ರೆ, ದರ್ಶನ್‌ಗೂ ಪವಿತ್ರಾ ಗೌಡಗೂ ಇರೋ ಸಂಬಂಧ ಏನು?. ಪವಿತ್ರಾ ಹೆಸರು ಎಲ್ಲಿಯೂ ಬರಬಾರದು ಅಂತಾ ದರ್ಶನ್‌ ಹುಕುಂ ಹೊರಡಿಸಿದ್ದು ಯಾಕಾಗಿ?.

ಇದನ್ನೂ ಓದಿ: ಮಕ್ಕಳಿಗೆ ಐಸ್​ ಕ್ರೀಂ ಕೊಡಿಸುವ ಮುನ್ನ ಹುಷಾರ್​.. ಪೋಷಕರು ಓದಲೇಬೇಕಾದ ಸ್ಟೋರಿ

publive-image

ರೇಣುಕಾಸ್ವಾಮಿಯ ಭೀಕರ ಹತ್ಯೆಯಿಂದ ಇಂದು ಅವರ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ದರ್ಶನ್‌ ಜೊತೆ ಸೇರಿ ಪಟ್ಟಣಗೆರೆಯಲ್ಲಿ ರಾಕ್ಷಸರಾದವರ ಕುಟುಂಬದವರು ದುಃಖದಲ್ಲಿದ್ದಾರೆ. ಅಯ್ಯೋ ನನ್‌ ಮಗ ದರ್ಶನ್‌ಗಾಗಿ ಎಂಥಾ ಕೆಲ್ಸ ಮಾಡಿ ಬಿಟ್ಟ ಅಂತಾ ಆ ಕುಟುಂಬವ್ರು ನೋವಲ್ಲಿದ್ದಾರೆ. ಇನ್ನು ದರ್ಶನ್‌ಗಾಗಿ ಪತ್ನಿ ವಿಜಯಲಕ್ಷ್ಮಿ ತಿರುಗಾಡದ ದೇವಸ್ಥಾನವೆ ಇಲ್ಲ. ಹಾಗೇ ದರ್ಶನ್‌ ಸಿನಿಮಾಗಾಗಿ ಕೋಟಿ ಕೋಟಿ ಝಣ ಝಣ ಕಾಂಚಾಣ ಹಾಕಿದ ನಿರ್ಮಾಪಕರು ದಿಕ್ಕೇ ತೋಚದ ಸ್ಥಿತಿಯಲ್ಲಿದ್ದಾರೆ. ಬಟ್‌, ಇಷ್ಟೆಲ್ಲ ಆಗಿದ್ದು ರೇಣುಕಾಸ್ವಾಮಿಯ ಕಿಡ್ನಾಪ್‌, ಮರ್ಡರ್‌, ಸಾಕ್ಷ್ಯನಾಶದಿಂದ. ಕೋಟಿ ಕೋಟಿ ಸಂಭಾವನೆ ಪಡೀತಿದ್ದ ಸ್ಟಾರ್‌ ನಟ ದರ್ಶನ್‌ ಯಾಕೆ? ಈ ಕೆಲ್ಸ ಮಾಡಿದ್ರು? ಅಂತಾ ಕೇಳಿದ್ರೆ ಕೇಳಿ ಬರೋ ಉತ್ತರ ಎಲ್ಲವೂ ಪವಿತ್ರಾಗಾಗಿ. ಪೊಲೀಸ್ರು ಕೋರ್ಟ್‌ಗೆ ಸಲ್ಲಿಕೆ ಮಾಡಿರೋ 3991 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಅಷ್ಟಕ್ಕೂ ಪವಿತ್ರಾ ಗೌಡಗೂ? ದರ್ಶನ್‌ಗೂ? ಏನ್‌ ಸಂಬಂಧ?

Advertisment

ಪತ್ನಿಗೆ ಹೊಡೆದಿದ್ದ ದರ್ಶನ್‌, ಪವಿತ್ರಾಗಾಗಿ ಇಷ್ಟೆಲ್ಲ ಮಾಡಿದ್ದೇಕೆ?

ದರ್ಶನ್‌ ಅಂಡ್‌ ಗ್ಯಾಂಗ್‌ ಜೈಲು ಸೇರಿದಾಗಿಂದ ದರ್ಶನ್‌ಗೂ? ಪವಿತ್ರಾ ಗೌಡಗೂ? ಏನ್‌ ಸಂಬಂಧ ಅನ್ನೋ ಪ್ರಶ್ನೆ ಖಂಡಿತವಾಗಿಯೂ ಇತ್ತು. ಅದ್ಕೆ ಒಬ್ಬರು ಒಂದೊಂದ್‌ ರೀತಿಯಲ್ಲಿ ಹೇಳ್ತಿದ್ರು. ಬಟ್‌, ಬೆಂಗಳೂರು ಪೊಲೀಸ್‌ ಆಯುಕ್ತರಾದ ಬಿ.ದಯಾನಂದ ಅವ್ರು ದರ್ಶನ್‌ ಆರೆಸ್ಟ್‌ ಆಗ್ತಾ ಇದಂತೆ ಅವರ ಪತ್ನಿ ಪವಿತ್ರಾ ಗೌಡ ಅನ್ನು ಅರೆಸ್ಟ್‌ ಮಾಡಲಾಗಿದೆ ಅನ್ನೋ ಸುಳಿವು ಕೊಟ್ಟಿದ್ರು. ಬಟ್‌, ಇಂತಾ ಸಂದರ್ಭದಲ್ಲಿ ಸಿಡಿದೆದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕಮಿಷನರ್‌ಗೆ ಪತ್ರ ಬರೆದಿದ್ದರು. ದರ್ಶನ್‌ನ ಧರ್ಮಪತ್ನಿ ನಾನು. ದರ್ಶನ್‌ಗೆ ಪವಿತ್ರಾ ಗೌಡ ಪತ್ನಿ ಅಲ್ಲ ಅಂತಾ ಹೇಳಿದ್ರು. ಇದ್ರಿಂದ ದರ್ಶನ್‌ಗೆ ಪವಿತ್ರಾ ಫ್ರೆಂಡಾ? ಪ್ರಿಯತಮೆಯಾ? ಇಲ್ಲವೇ ಪತ್ನಿಯಾ? ಅನ್ನೋ ಚರ್ಚೆ ಸಾರ್ವಜನಿಕರಲ್ಲಿ, ದಾಸನ ಅಭಿಮಾನಿಗಳಲ್ಲಿ ಮತ್ತೆ ಶುರುವಾಗಿತ್ತು. ಬಟ್‌, ಪೊಲೀಸ್ರು ಸಲ್ಲಿಸಿರೋ ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ ಶಾಕಿಂಗ್‌ ಸ್ಟೇಟ್‌ಮೆಂಟ್‌ ದಾಖಲಾಗಿದೆ. ಪವಿತ್ರಾ ಗೌಡಗೂ ತಮ್ಗೂ ಯಾವ್‌ ಎಂತಾ ಬಾಂಧವ್ಯ ಅನ್ನೋದನ್ನು ತೆರೆದಿಟ್ಟಿದ್ದಾರೆ.

ದರ್ಶನ್‌ ಅಂಡ್‌ ಗ್ಯಾಂಗ್‌ ಅರೆಸ್ಟ್‌ ಆಗ್ತಾ ಇದ್ದಂತೆ ಪೊಲೀಸ್ರು ಒಂದೊಂದೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾ ಹೋಗಿದ್ದಾರೆ. ಪ್ರತಿಯೊಬ್ಬ ಆರೋಪಿಯಿಂದಲೂ ಪ್ರತ್ಯೇಕ ಹೇಳಿಕೆಯನ್ನು ಪಡೆದಿದ್ದಾರೆ. ಅವರಿಗೆ ಇರೋ ಅನುಮಾನದ ಆಧಾರದ ಮೇಲೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ದಾರೆ. ಅದೇ ರೀತಿ ದರ್ಶನ್‌ಗೆ ಪೊಲೀಸ್‌ ತನಿಖಾಧಿಕಾರಿಗಳು ನಿಮ್ಗೂ ಪವಿತ್ರಾಗೂ? ಏನು ಸಂಬಂಧ? ಅಂತಾ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ದರ್ಶನ್‌ ಕೊಟ್ಟ ಉತ್ತರ ಏನು ಗೊತ್ತಾ?. ತಾನು ಮತ್ತು ಪವಿತ್ರಾ ಗೌಡ ಕೆಲವು ವರ್ಷಗಳಿಂದ ಲಿವಿಂಗ್ ಇನ್ ರಿಲೇಷನ್ ಶಿಪ್‌ನಲ್ಲಿದ್ದೇವೆ ಅಂದಿದ್ದಾರೆ. ಇಂತಾವೊಂದ್‌ ಸೇಟ್‌ಮೆಂಟ್‌ ಸ್ವತಃ ದರ್ಶನ್‌ ಕೊಟ್ಟಿದ್ದಾರೆ. ಇದ್ರಿಂದ ದರ್ಶನ್‌ಗೂ? ಪವಿತ್ರಾಗೌಡಗೂ? ಏನ್‌ ಬಂಧ ಅನ್ನೋದ್‌ ಚಾರ್ಜ್‌ಶೀಟ್‌ನಲ್ಲಿಯೇ ಬಟಾಬಯಲಾಗಿದೆ.

ರೇಣುಕಾಸ್ವಾಮಿ ಕಿಡ್ನಾಪ್‌, ಮರ್ಡರ್‌, ಸಾಕ್ಷ್ಯನಾಶ

ಪೊಲೀಸ್ರು ದರ್ಶನ್‌ ಬಳಿ ಪವಿತ್ರಾ ಗೌಡಗೂ? ನಿಮ್ಗೂ ಏನ್‌ ಸಂಬಂಧ ಅಂತಾ ಕೇಳೋದಕ್ಕೂ ಒಂದು ಕಾರಣವಿತ್ತು. ಯಾಕಂದ್ರೆ, ರೇಣುಕಾಸ್ವಾಮಿ ಕಿಡ್ನಾಪ್‌, ಮರ್ಡರ್‌, ಸಾಕ್ಷ್ಯನಾಶ. ಇದೆಲ್ಲವೂ ದರ್ಶನ್‌ ಮಾಡಿದ್ದೇ ಪವಿತ್ರಾ ಗೌಡಗಾಗಿ ಆಗಿತ್ತು. ಹಾಗಾದ್ರೆ, ದರ್ಶನ್‌ ಯಾಕೆ ಆ ಕೆಲ್ಸ ಮಾಡಿದ್ರು?. ಅದ್ಕೂ ಮುನ್ನ ದರ್ಶನ್‌ ಪಟ್ಟಣಗೆರೆ ಶೆಡ್‌ನಲ್ಲಿ ರಾಕ್ಷಸನಾಗಲು ಕಾರಣವಾಗಿದ್ದು ಏನು ಅಂದ್ರೆ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಮಾಡಿದ್ದ ಮೆಸೇಜ್‌.

Advertisment

publive-image

ಇದು ರೇಣುಕಾಸ್ವಾಮಿ ಮತ್ತು ಪವಿತ್ರಾ ಗೌಡ ನಡುವೆ ಇನ್‌ಸ್ಟಾ ಗ್ರಾಮ್‌ನಲ್ಲಿ ನಡೆಯೋ ಚಾಟಿಂಗ್‌. ಅಶ್ಲೀಲ ಮೆಸೇಜ್‌ಗಳು, ಅಶ್ಲೀಲ ಕಾಮೆಂಟ್‌ಗಳು ಇವೆ. ಬಟ್‌, ರೇಣುಕಾಸ್ವಾಮಿಗೆ ಮುಹೂರ್ತ ಇಡ್ಬೇಕು ಅಂತಾ ಪವಿತ್ರಾ ಗೌಡ ಅಂದೇ ಖತರ್ನಾಕ್‌ ಪ್ಲಾನ್‌ ಮಾಡ್ತಾಳೆ. ಅದೇನ್‌ ಅಂದ್ರೆ, ತನ್ನ ನಂಬರ್‌ ಬದಲು ಪವನ್‌ಗೆ ತನ್ನ ಹೆಸರಲ್ಲಿ ಚಾಟ್‌ ಮಾಡು ಅಂತಾ ಪವನ್‌ ನಂಬರ್‌ ಕೊಟ್ಟಿರುತ್ತಾಳೆ. ಅಲ್ಲಿಂದ ಪವಿತ್ರಾ ಗೌಡ ನಂಬರ್‌ ಅಂತಾ ರೇಣುಕಾಸ್ವಾಮಿ ಪವನ್‌ ಜೊತೆ ಚಾಟ್‌ ಮಾಡಲು ಶುರು ಮಾಡ್ತಾನೆ.

ಇದನ್ನೂ ಓದಿ: ನಟ ನಾಗಶೇಖರ್ ಕಾರ್​ ಅಪಘಾತ; ಮರಕ್ಕೆ ಡಿಕ್ಕಿ ಹೊಡೆದು ಆ್ಯಕ್ಸಿಡೆಂಟ್​; ಆಮೇಲೇನಾಯ್ತು?

ಇದೆಲ್ಲ ದರ್ಶನ್‌ ಕಿವಿಗೆ ಬೀಳುತ್ತೆ. ಆರಂಭದಲ್ಲಿ ರೇಣುಕಾಸ್ವಾಮಿ ಫೇಕ್‌ ಅಕೌಂಟ್‌ನಲ್ಲಿ ಅಶ್ಲೀಲ ಮೆಸೇಜ್‌ ಮಾಡ್ತಾನೆ ಅನ್ನೋದನ್ನು ವಿನಯ್‌ಗೆ ಪವನ್‌ ಹೇಳ್ತಾನೆ. ವಿನಯ್‌ಯಿಂದ ಅದು ದರ್ಶನ್‌ ಕಿವಿಗೆ ಬೀಳುತ್ತೆ. ಅದೊಂದ್‌ ರೀತಿಯಲ್ಲಿ ದಾಸನ ಕಿವಿಗೆ ಕಾದ ಸೀಸ ಬಿಟ್ಟಹಾಗೆ ಆಗುತ್ತೆ. ಆ ಕ್ಷಣವೇ ದರ್ಶನ್‌ ಕ್ರುದ್ಧನಾಗಿ ರೇಣುಕಾಸ್ವಾಮಿಗೆ ಗತಿ ಕಾಣಿಸ್ಬೇಕು ಅಂತಾ ನಿರ್ಧಾರಕ್ಕೆ ಬರ್ತಾರೆ ಎನ್ನಲಾಗಿದೆ.

Advertisment

ನಂಬರ್‌-01 ಕಿಡ್ನ್ಯಾಪ್‌!

ಅಂದು ದರ್ಶನ್ ಅಲಿಯಾಸ್‌ ಡಿಬಾಸ್‌ ಉದ್ದೇಶ ರೇಣುಕಾಸ್ವಾಮಿ ಮೇಲೆ ಭೀಕರ ಹಲ್ಲೆ ಮಾಡ್ಬೇಕು. ಸಾಯಿಸ್ಬೇಕು ಅನ್ನೋ ಪ್ಲಾನ್‌ ಇತ್ತೋ ಇಲ್ವೋ? ಆದ್ರೆ, ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರ್ಕೊಂಡ್‌ ಬರೋ ಪ್ಲಾನ್‌ ಮಾತ್ರ ಪಕ್ಕಾ ಆಗಿತ್ತು. ದರ್ಶನ್‌ ಏನ್‌ ಮಾಡ್ತಾರೆ ಅಂದ್ರೆ, ರೇಣುಕಾಸ್ವಾಮಿ ಎಲ್ಲಿಯವನು? ಏನ್‌ ಮಾಡ್ತಾನೆ? ಅನ್ನೋ ಮಾಹಿತಿ ತಿಳ್ಕೊತಾರೆ. ತಕ್ಷಣವೇ ಚಿತ್ರದುರ್ಗದ ದರ್ಶನ್‌ ಸಂಘದ ಅಧ್ಯಕ್ಷ ರಘುಗೆ ಕಾಲ್‌ ಮಾಡ್ತಾರೆ. ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡ್ಕೊಂಡ್‌ ಬೆಂಗಳೂರಿಗೆ ಬರುವಂತೆ ಆಜ್ಞೆ ಮಾಡ್ತಾರೆ. ಹೇ ತಮ್‌ ಬಾಸ್‌ ಹೇಳಿದ್ದಾರೆ ಅಂತಾ ರಘು ಸ್ವಾಮಿನಿಷ್ಠೆ ತೋರಿಸಲು ಮುಂದಾಗ್ತಾರೆ. ಹಾಗೇ ರಘು ಜೊತೆ ಅನುಕುಮಾರ್‌ ಮತ್ತು ಜಗ್ಗ ಸೇರಿಕೊಳ್ತಾರೆ. ಅವರೆಲ್ಲ ಸೇರಿ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡ್ಕೊಂಡ್‌ ಪಟ್ಟಣಗೆರೆ ಶೆಡ್​ಗೆ ಕರ್ಕೊಂಡ್‌ ಬರ್ತಾರೆ. ಇದು ಪವಿತ್ರಾಗಾಗಿ ದರ್ಶನ್‌ ಮಾಡಿಸಿರೋ ಕಿಡ್ನಾಪ್‌. ಪೊಲೀಸ್‌ ತನಿಖೆಯಿಂದ ಇದು ಗೊತ್ತಾಗಿದೆ.

ಪವಿತ್ರಾಗೆ ವಿಡಿಯೋ ಕಾಲ್

  • ರೇಣುಕಾಸ್ವಾಮಿ ಸಿಕ್ಕ ಖುಷಿಯಲ್ಲಿ ಪವಿತ್ರಾಗೆ ದರ್ಶನ್ ಕರೆ!
  • ಪ್ಲಾನ್​ನಂತೆ ಕಿಡ್ನ್ಯಾಪ್ ಮಾಡಿ ಶೆಡ್​ನಲ್ಲಿ ಇಟ್ಟಿದ್ದೇವೆ ಎಂದಿದ್ದ
  • ನಾನೇ ಬಂದು ನಿನ್ನನ್ನ ಕರೆದುಕೊಂಡು ಹೋಗುತ್ತೇನೆಂದು ಕರೆ!
  • ಆಗ ಪವಿತ್ರಾ ಸಮತಾಗೆ ಕರೆ ಮಾಡಿ ಇದೇ ವಿಚಾರ ಹೇಳಿದ್ದಳು!
  • ಆತನಿಗೆ ಬುದ್ಧಿ ಕಲಿಸೋಕೆ ಹೋಗುತ್ತಿದ್ದೇನೆ ಎಂದಿದ್ದ ಪವಿತ್ರಾ!
  • ಕರೆದುಕೊಂಡು ದರ್ಶನ್ ಬರ್ತಾರಂತೆ ಅಂತಲೂ ಹೇಳಿದ್ದಳು!
  • ಪವಿತ್ರಾ ಮನೆಗೆ ದರ್ಶನ್, ವಿನಯ್, ಪ್ರದೂಶ್, ಪವನ್, ನಾಗರಾಜ್!

publive-image

ನಿನಗೋಸ್ಕರ.. ಪವಿತ್ರಾ ನಿನಗೋಸ್ಕರ ಅಂತಾ ದರ್ಶನ್‌ ಆದೇಶದಂತೆ ಇದೆಲ್ಲವೂ ನಡೆಯುತ್ತೆ. ಪಕ್ಕಾ ಪ್ಲಾನ್‌ ಮಾಡ್ಕೊಂಡ್‌ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಲಾಗುತ್ತೆ. ಹಾಗೇ ಶೆಡ್‌ಗೆ ಕರ್ಕೊಂಡ್‌ ಬರಲಾಗುತ್ತೆ. ಬಟ್‌, ಮುಂದೆ ಆಗಿದ್ದು ಮಾತ್ರ ಕ್ರೌರ್ಯಕಾಂಡ. ಮಾನವ ಕುಲವೇ ಬೆಚ್ಚಿ ಬೀಳೋ ಕ್ರೌರ್ಯಕಾಂಡ.

Advertisment

ಇದನ್ನೂ ಓದಿ:ಫಿಲಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಜೂನಿಯರ್ NTR ಸಹೋದರ.. ಬಾಲಯ್ಯನ ಫ್ಯಾನ್ಸ್​ ಫುಲ್ ಖುಷ್!

ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡ್ತಿದ್ದ ಕೆಟ್ಟ ಕೆಟ್ಟ ಮೆಸೇಜ್‌ಗಳು ದರ್ಶನ್‌ಗೆ ತಲೆ ಗಿರ್‌ ಅನಿಸಿದ್ದು ಸತ್ಯ. ಆದ್ರೆ, ರೇಣುಕಾಸ್ವಾಮಿಗೆ ಪಾಠ ಕಳಿಸಲು ಬೇರೆ ಮಾರ್ಗಗಳು ಇದ್ವು. ಆದ್ರೆ, ಪವಿತ್ರಾ ಗೌಡಗಾಗಿ ದರ್ಶನ್‌ ರಾಕ್ಷಸ ಅವತಾರ ತಾಳುತ್ತಾರೆ. ಈ ನಡುವೆ ರೇಣುಕಾಸ್ವಾಮಿ ಯಾವಾಗ ಸಾವನ್ನಪ್ಪಿದ್ದಾರೆ ಅನ್ನೋದ್‌ ಗೊತ್ತಾಗುತ್ತೋ?, ಪವಿತ್ರಗಾಗಿಯೇ ದರ್ಶನ್‌ ಮತ್ತೊಂದು ಹುಕುಂ ಹೊರಡಿಸ್ತಾರೆ. ಅದೇನು?.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment