newsfirstkannada.com

×

ಕೊನೆಗೂ ದರ್ಶನ್ ಕಾಯುತ್ತಿದ್ದ ದಿನ ಬಂದೇ ಬಿಡ್ತು.. ವಕೀಲರಿಂದ ಮಹತ್ವದ ನಿರ್ಧಾರ

Share :

Published September 21, 2024 at 2:29pm

Update September 21, 2024 at 2:34pm

    A2 ಆರೋಪಿ ನಟ ದರ್ಶನ್ ಸಿಗುತ್ತಾ ಮುಕ್ತಿ

    ಜೈಲಿಂದ ಹೊರ ಬರುತ್ತಾರಾ ಆರೋಪಿ ದರ್ಶನ್

    57ನೇ ಸಿಸಿಹೆಚ್ ಕೋರ್ಟ್​​ಗೆ ವಕೀಲರಿಂದ ಅರ್ಜಿ ಸಲ್ಲಿಕೆ

ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ A2 ಆರೋಪಿ ನಟ ದರ್ಶನ್​ ಜಾಮೀನು ಕೋರಿ ಅರ್ಜಿ ಹಾಕಿದ್ದಾರೆ. ಸೆಷನ್ಸ್ ಕೋರ್ಟ್​​ಗೆ  ಅರ್ಜಿ ಸಲ್ಲಿಸಿದ್ದಾರೆ. ಬಂಧನವಾಗಿ ನೂರು ದಿನ ಕಳೆದ ಬಳಿಕ ಜಾಮೀನು ಅರ್ಜಿ ಹಾಕಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ದರ್ಶನ್​ ಮತ್ತು ಗ್ಯಾಂಗ್​ ಕೊಲೆ ಮಾಡಿದ್ದರು. ಬಳಿಕ ಬಂಧನಕ್ಕೊಳಗಾದ ನಟ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಜೈಲಲ್ಲಿ ಸಿಗರೇಟು, ವಿಡಿಯೋ ಕರೆ, ಟೀ ಪಾರ್ಟಿ ಮಾಡಿದ ಘಟನೆ ಬೆಳಕಿಗೆ ಬಂದಂತೆ ಅಲ್ಲಿಂದ ಬಳ್ಳಾರಿ ಜೈಲಿಗೆ ಶಿಫ್ಟ್​​ ಆದರು. ಆದರೀಗ ಬಿಡುಗಡೆಗಾಗಿ ಜಾಮೀನು ಕೋರಿ ನಟ ದರ್ಶನ್ ಅರ್ಜಿ ಹಾಕಿದ್ದಾರೆ.

ಇದನ್ನೂ ಓದಿ: ಜೈಲಲ್ಲಿ ದರ್ಶನ್​ ಗರಂ.. ಖಡಕ್​ ಆಗಿ ಉತ್ತರಿಸಿದ ಜೈಲಾಧಿಕಾರಿಗಳು.. ಅಷ್ಟಕ್ಕೂ ಆಗಿದ್ದೇನು?

ಜಾಮೀನು ಅರ್ಜಿ ಸಲ್ಲಿಕೆ ಬಗ್ಗೆ ದರ್ಶನ್ ವಕೀಲರಿಂದ ಮಾಹಿತಿ ಪಡೆದಿದ್ದಾರೆ. ಪೋನ್ ಕರೆ ಮೂಲಕ ಬಳ್ಳಾರಿ ಹೈ ಸೆಕ್ಯುರಿಟಿ ಸೆಲ್‌ನಿಂದ ದರ್ಶನ್ ಮಾಹಿತಿ ಪಡೆದಿದ್ದಾರೆ. ಪ್ರಿಸನ್ ಕಾಲ್ ಸಿಸ್ಟಂ ಅಡಿ ಪೋನ್ ಕರೆ ಮಾಡಿ ಮಾಹಿತಿ ಪಡೆದ್ದಾರೆ.

ದರ್ಶನ್ ಪರ ವಕೀಲರು 57ನೇ ಸಿಸಿಹೆಚ್ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತ ಆರೋಪಿ ಬಿಡುಗಡೆ ಭಾಗ್ಯ ಯಾವಾಗ ಸಿಗುತ್ತೋ ಎಂದು ಕಾಯುತ್ತಿದ್ದಾರೆ.

ಇದನ್ನೂ ಓದಿ: ಐಫೋನ್​ನಲ್ಲೇ ‘ಜೊಂಬಿ’ ಶೂಟಿಂಗ್​​.. ₹555 ಕೋಟಿ ಬಿಗ್​ ಬಜೆಟ್​ನಲ್ಲಿ​ ಹಾಲಿವುಡ್ ​ಮೂವಿ!

ಬಳ್ಳಾರಿಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ದರ್ಶನ್​​ ಊಟ, ನಿದ್ದೆ, ಚೇರ್​ ಹೀಗೆ ಹಲವು ಸೌಲಭ್ಯಗಳಿಂದ ತಲೆ ಕೆಡಿಸಿಕೊಂಡಿದ್ದಾರೆ. ಅತ್ತ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತ ಊಟ ಸೇರದೆ ಒದ್ದಾಡುತ್ತಿರುವ ದರ್ಶನ್​ ಭೇಟಿ ಮಾಡಲು ಬಂದ ಪತ್ನಿ, ತಾಯಿ, ವಕೀಲರ ಬಳಿ ಹೊರಬರುವ ಸಂಗತಿ ಬಗ್ಗೆ ಮಾತನಾಡುತ್ತಿದ್ದರು. ಇದೀಗ ಕೊನೆಗೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ದರ್ಶನ್ ಕಾಯುತ್ತಿದ್ದ ದಿನ ಬಂದೇ ಬಿಡ್ತು.. ವಕೀಲರಿಂದ ಮಹತ್ವದ ನಿರ್ಧಾರ

https://newsfirstlive.com/wp-content/uploads/2024/09/Darshan-4-1.jpg

Load More