Advertisment

ಮಗನ ಕಳೆದುಕೊಂಡಿದ್ದು ರೇಣುಕಾಸ್ವಾಮಿ ಹೆತ್ತವರಷ್ಟೇ ಅಲ್ಲ.. ದರ್ಶನ್‌ನಿಂದ ಅನಾಥರಾದ ತಾಯಂದಿರೆಷ್ಟು?

author-image
Gopal Kulkarni
Updated On
ಮಗನ ಕಳೆದುಕೊಂಡಿದ್ದು ರೇಣುಕಾಸ್ವಾಮಿ ಹೆತ್ತವರಷ್ಟೇ ಅಲ್ಲ.. ದರ್ಶನ್‌ನಿಂದ ಅನಾಥರಾದ ತಾಯಂದಿರೆಷ್ಟು?
Advertisment
  • ಇದು ಅಭಿಮಾನದ ಅಂಧತ್ವದಲ್ಲಿ ನಡೆದವರ ಕುಟುಂಬಗಳ ಕಣ್ಣೀರಿನ ಕಥೆ
  • ಹೂ ಕಟ್ಟಿ ಹೊಟ್ಟೆ ಹೊರೆಯುತ್ತಿದೆ ಆರೋಪಿ ಅನುಕುಮಾರ್ ಕುಟುಂಬ
  • ಮೋಸದಿಂದ ಕರೆದುಕೊಂಡು ಹೋಗಿದ್ದಾರೆಂದು ಜಗದೀಶ್ ತಾಯಿ ಕಣ್ಣೀರು

ರೇಣುಕಾಸ್ವಾಮಿಗೆ ನೀಡಿದ ಚಿತ್ರಹಿಂಸೆಯಿದೆಲ್ಲ ಅದು ನರಕದಲ್ಲಿ ನೀಡುವ ಶಿಕ್ಷೆಗಳನ್ನು ನಾಚಿಸುವಂತಿದೆ. ಮನುಷ್ಯ ಮೃಗವೇ ಆದಲ್ಲಿ ಹೇಗೆ ವರ್ತಿಸಬಹುದು ಅನ್ನೊದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಒಂದು ಕೊಲೆ ಕೇವಲ ರೇಣುಕಾಸ್ವಾಮಿ ಕುಟುಂಬವನ್ನು ಮಾತ್ರ ಅನಾಥವಾಗಿ ಮಾಡಿಟ್ಟಿಲ್ಲ. ಅಭಿಮಾನದ ಅತಿರೇಕವನ್ನು ನೆತ್ತಿ ಮೇಲಿಟ್ಟುಕೊಂಡು ಮೆರೆದ ಅನೇಕರ ಕುಟುಂಬಗಳು ಕೂಡ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಜೈಲು ಸೇರಿರುವ ಮಕ್ಕಳನ್ನ ನೋಡಲಾಗದೇ, ಮಾತನಾಡಿಸಲಾಗದ ಕುಟುಂಬಗಳಿಗೆ ದುಃಖವೊಂದೆ ಆಸರೆಯಾಗಿದೆ. ಅದ್ರಲ್ಲೂ ರೇಣುಕಸ್ವಾಮಿ ಕೊಲೆಯ ಚಾರ್ಜ್​ಶೀಟ್ ಸಲ್ಲಿಕೆಯಾದ ಮೇಲೆ ಈ ದುಃಖ ದುಪ್ಪಟ್ಟು ಆಗಿದ್ದು, ನಮ್ಮ ಮಕ್ಕಳನ್ನ ಕಾಪಾಡಿ ಅಂತ ಗೋಳಾಡ್ತಿದ್ದಾರೆ.

Advertisment

publive-image

ಇದನ್ನೂ ಓದಿ: 25 ನಿಮಿಷ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತಾಡಿದ ದರ್ಶನ್; ಧೈರ್ಯ ಕಳೆದುಕೊಂಡ ದಾಸನಿಗೆ ಹೇಳಿದ್ದೇನು?

ದರ್ಶನ್ ಅನ್ನೋ ಸ್ಟಾರ್ ನಟನ ಹಿಂದೆ ಹೋದವರ ಇವತ್ತು ಕತ್ತಲ ದಿನ ಕಳೆಯುವ ಪರಿಸ್ಥಿತಿಯಿದೆ. ಹೊರಗಡೆ ಇದ್ದಾಗ ಕಷ್ಟವೋ ಸುಖವೋ ದುಡ್ಕೊಂಡು ಜೀವನ ನಡೆಸ್ತಿದ್ರು. ಆದರೆ ಈಗ, ಅಭಿಮಾನ ಅನ್ನೋ ಅಂಧಕಾರಕ್ಕೆ ಬಿದ್ದು ಬಡವರ ಮಕ್ಕಳು ಜೈಲಿನಲ್ಲಿ ಬಂಧಿಯಾಗಿದ್ದಾರೆ. ದುಡ್ಡಿದ್ದವರು ದುಡಿಯೋ ದಾರಿ ತೋರಿಸ್ತಾರೆ ಅಂತ ಮಕ್ಕಳು ಹೋದ್ರು. ಆದ್ರೀಗ ಅವರು ಆರಾಮಾಗಿ ಇದ್ದಾರೆ. ನಮ್ಮ ಮಕ್ಕಳ ಗತಿಯೇನು ಅಂತ ದರ್ಶನ್​ ಪಟಾಲಂ ಕುಟುಂಬಗಳು ಕಣ್ಣೀರು ಸುರಿಸುತ್ತಿವೆ.

publive-image

ಅಭಿಮಾನಿ ಅಂತ ಹೋದವನು ಜೈಲು ಸೇರಿದ! ಅನುಕುಮಾರ್ ತಾಯಿ ಕಣ್ಣೀರು!

ಅಭಿಮಾನ ಒಂದು ಸಿನಿಮಾ ನೋಡಿ ಬಂದು ಸಂತಸಪಟ್ಟು, ಎದುರಾದ ತನ್ನ ಹೀರೋ ಜೊತೆಗೆ ಒಂದು ಸೆಲ್ಫಿಯೋ ಇಲ್ಲವೇ ಒಂದು ಆಟೋಗ್ರಾಫೋ ತೆಗೆದುಕೊಳ್ಳುವುದಕ್ಕೆ ಸೀಮಿತವಾದ್ರೆ ಅದು ಚೆಂದ. ಅತಿರೇಕದ ಅಭಿಮಾನದಿಂದ ಏನೆಲ್ಲಾ ಆಗಬಹುದು ಅನ್ನೋದಕ್ಕೆ ಇವತ್ತು ದರ್ಶನ್ ಹಿಂದೆ ಸಾಲು ಸಾಲಾಗಿ ಒಳಗೆ ಹೋಗಿರುವ ಅವನ ಪಟಾಲಂ ಟೀಮೇ ಸಾಕ್ಷಿ. ದರ್ಶನ್ ಒಬ್ಬ ಸ್ಟಾರ್​ ನಟ. ಹಣವಂತ.. ಇದೇ ಕಾರಣಕ್ಕೆ ದರ್ಶನ್​​​ನನ್ನ ನಂಬಿ ಚಿತ್ರದುರ್ಗದ ಅನುಕುಮಾರ್ ದಾಸ ಹೇಳಿದಕ್ಕೆಲ್ಲ ಓಕೆ ಬಾಸ್ ಅಂದಿದ್ದ. ಆದರಿವತ್ತು ಬಾಸ್ ನಂಬಿ ಹೋದ ಅನುಕುಮಾರ ಬದುಕೇ ಬರ್ಬಾದ್ ಆಗಿದೆ. ಮಗ ಏನೋ ಅಭಿಮಾನದ ಮೋಹಕ್ಕೆ ಬಿದ್ದು ಜೈಲು ಸೇರಿದ್ದಾನೆ. ಆದ್ರೆ ಇವರ ಮನೆಯವರ ಪರಿಸ್ಥಿತಿಗೆ ಹೊಣೆ ಯಾರು? ಅವತ್ತು ದುಡಿದು ಅವತ್ತೆ ಊಟ ಮಾಡಿ ಬದುಕುವಂತ ಕುಟುಂಬಗಳು. ಈಗ ಮಗನಿಗೆ ಬೇಲ್ ಕೊಡಿಸೋದು ಇರಲಿ.. ಮಗ ಇರೋ ಜೈಲಿಗೆ ಹೋಗಿ ನೋಡ್ಕೊಂಡು ಬರೋದಕ್ಕೂ ಕೂಡ ಕಷ್ಟ ಪಡ್ತಿವೆ.

Advertisment

ಇದನ್ನೂ ಓದಿ: ಜೈಲಲ್ಲಿ ದಾಸನ ದಶಾವತಾರ.. ಸೆಲ್‌ನಿಂದ ಬೇಸರದಲ್ಲೇ ಹೊರ ಬಂದ ದರ್ಶನ್‌; 10 ಫೋಟೋ ಇಲ್ಲಿವೆ!

ದುಡಿಯವ ಮಗ ಜೈಲಲ್ಲಿ! ಹೂ ಕಟ್ಟಿದ್ರೆ ತಾಯಿ ಜೀವನ!
ಅನುಕುಮಾರ್ ಕುಟುಂಬದ ಶೋಚನಿಯ ಸ್ಥಿತಿ ಇದು. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಕತ್ತಲ ಕೋಣೆ ಸೇರಿರುವ ಅನುಕುಮಾರ್ ತಾಯಿ ನಿತ್ಯ ಹೂ ಕಟ್ಟಿದ್ರೆನೆ ಅವತ್ತಿನ ಊಟ. ನಿತ್ಯ ಅರ್ಧಕೆಜಿ ಹೂ ತಂದು ಆ ಹೂವನ್ನ ಕಟ್ಟಿ ಮಾರಿ ಅನುಕುಮಾರ್ ತಾಯಿ ಜೀವನ ನಡೆಸ್ತಿದ್ದಾರೆ. ಈಗ ಚಾರ್ಜ್​ಶೀಟ್​ನಲ್ಲಿ ಮಗನ ಪಾತ್ರವನ್ನ ಉಲ್ಲೇಖಿಸಿರುವ ಬಗ್ಗೆ ಮಾತನಾಡಿರುವ ಅನು ತಾಯಿ, ನಮಗೆ ತಿನ್ನೋಕೆ ಮುದ್ದೆ ಕೂಡ ಇಲ್ಲ.. ಹೀಗಿರುವ ಬೇಲ್ ಎಲ್ಲಿಂದ ತರೋಣ, ಅಭಿಮಾನ ಅಂತ ಕರೆದುಕೊಂಡು ಹೋಗಿದ್ದಾರೆ ಅವರೇ ಬಿಡಿಸಿಕೊಂಡು ಬರಲಿ ಅಂತ ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ:ಡಿ-ಗ್ಯಾಂಗ್​​ ಪಾರ್ಟಿ ಮರುಸೃಷ್ಟಿಯ ಫೋಟೋ ರಿವೀಲ್; ವಿನಯ್, ದರ್ಶನ್​, ಚಿಕ್ಕಣ್ಣ ಅಕ್ಕಪಕ್ಕ..!

Advertisment

ಮಗ ಜೈಲು ಸೇರಿರುವ ಸುದ್ದಿ ಕೇಳಿಯೇ ಅನುಕುಮಾರ ತಂದೆ ಹೃದಾಯಾಘಾತದಿಂದ ಸಾವನ್ನಪ್ಪಿದ್ರು. ಜೈಲಿನಿಂದ ಬಂದು ಮಗ ಅಂತಿಮ ಕಾರ್ಯ ನೇರವೇರಿಸುವಂತ ಪರಿಸ್ಥಿತಿ ಬಂದಿತ್ತು. ಈಗ ಇದ್ದೊಬ್ಬ ತಾಯಿಯೂ ಹೂ ಕಟ್ಟಿ ಜೀವನ ಸಾಗಿಸ್ತಿದ್ದಾರೆ. ಹೀಗೆ ಆದ್ರೆ ಈ ಕುಟುಂಬಗಳ ಭವಿಷ್ಯಕ್ಕೆ ಆಸರೆ ಯಾರು ಅನ್ನೋದೆ ಈಗ ಕಾಡ್ತಿರುವ ಪ್ರಶ್ನೆ.

publive-image

ನನ್ನ ‌ಮಗನನ್ನು ಮೋಸ ಮಾಡಿ ಕರ್ಕೊಂಡು ಹೋಗಿದ್ದಾರೆ.
ಒಂದ್ಕಡೆ ಅನು ತಾಯಿಯ ಗೋಳಾಟ. ಇನ್ನೊಂದೆಡೆ ಆರೋಪಿ ಜಗದೀಶ್ ಕುಟುಂಬದ ಕಣ್ಣೀರಿನ ಕತೆ. ಮಗ ಜೈಲು ಸೇರಿದ್ದನ್ನ ಕಂಡು ಕಣ್ಣೀರು ಸುರಿಸಿರುವ ಜಗದೀಶ್ ತಾಯಿ ಸುಲೋಚನಮ್ಮ, ನಮ್ಮ ಮಗನಿಗೆ ಮೋಸ ಮಾಡಿ ಕರ್ಕೊಂಡು ಹೋಗಿದ್ದಾರೆ. ದರ್ಶನ್ ಮೇಲಿನ ಅಭಿಮಾನಕ್ಕೆ ನನ್ನ ಮಗ ಹೋದ. ಅಮಾಯಕನನ್ನ ಅನ್ಯಾಯವಾಗಿ ಈ ಕೇಸ್​ನಲ್ಲಿ ಸಿಕ್ಕಿಹಾಕಿಸಿದ್ದಾರೆ ಅಂತ ಅಳಲು ತೋಡಿಕೊಂಡಿದ್ದಾರೆ.

ಜಗದೀಶ್ ಮನೆಗೂ ಕೂಡ ಅವನೇ ಆಸರೆಯಾಗಿದ್ದ. ಬಾಡಿಗೆ ಕಾರ್ ಓಡಿಸಿಕೊಂಡು ಹೇಗೋ ಜೀವನ ಸಾಗಿಸ್ತಿದ್ದ. ಜಗದೀಶ್ ಓಡಿಸ್ತಿದ್ದ ಆಟೋ ಕೂಡ ಪೊಲೀಸರ ವಶದಲ್ಲಿದೆ. ದುಡಿಯುವ ಮಗ ಜೈಲಲ್ಲಿದ್ದಾನೆ. ಹೀಗಾಗಿ ಈ ಜಗದೀಶ ಕುಟುಂಬದ ಪರಿಸ್ಥಿತಿಯೂ ತುಂಬಾ ಶೋಚನಿಯವಾಗಿದೆ. ಮಗನ ಪಾಡು ನೆನೆದು ಕಂಗಲಾಗಿರುವ ಜಗದೀಶ್ ತಾಯಿ ನಮ್ಮ ಮನೆಯ ಪರಿಸ್ಥಿತಿ ಚೆನ್ನಾಗಿಲ್ಲ, ನಮಗೆ ಗಂಜಿ ಕಾಸೋರು ಕೂಡ ಯಾರು ಇಲ್ಲ. ಮೋಸದ ಕೆಲಸ ಮಾಡಿ ನನ್ನ ಮಗನನ್ನ ಜೈಲಿಗೆ ಹಾಕಿದ್ದಾರೆ. ದರ್ಶನ್ ಇದ್ದೋರಿಗೊಂದು ಇಲ್ಲದವರಿಗೊಂದು ಮಾಡಬಾರದು. ದಯವಿಟ್ಟು ನಮ್ಮ ಮಗನನ್ನ ಬಿಡಿಸಿ ಅಂತ ಗೋಳಿಟ್ಟಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment