Advertisment

ಬೇಡಿದರೂ, ಕಾಡಿದರೂ ವಾಪಸ್ ಬರ್ತಾನಾ.. ಮಗನ ಫೋಟೋ ನೋಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ-ತಾಯಿ ಹೇಳಿದ್ದೇನು?

author-image
Gopal Kulkarni
Updated On
ನಟ ದರ್ಶನ್​ಗಾಗಿ ರಾಯರ ಮೊರೆ ಹೋದ ಪತ್ನಿ; ಗಂಡನ ರಿಲೀಸ್​ಗಾಗಿ ವಿಜಯಲಕ್ಷ್ಮೀ ಪಾದಪೂಜೆ!
Advertisment
  • ದರ್ಶನ್ ಹಾಗೂ ಪಟಾಲಂ ಟೀಮ್​ನ ಕ್ರೌರ್ಯದ ಅನಾವರಣ ಮಾಡಿದ ಫೋಟೋ
  • ಕ್ರೌರ್ಯತೆ ಎಲ್ಲ ಸೀಮೆಗಳನ್ನು ದಾಟಿದ ಕುರುಹುಗಳಾಗಿ ನಿಂತಿವೆ ಆ ಎರಡೇ ಫೋಟೋ
  • ಮಗನ ಮೇಲೆ ನಡೆದ ಭೀಕರ ಹಲ್ಲೆಯನ್ನು ಕಂಡು ಕಣ್ಣೀರಿಟ್ಟ ಹೆತ್ತೊಡಲು ಹೇಳಿದ್ದೇನು?

ಬೆಂಗಳೂರು:  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಎರಡು ದಿನಗಳಿಂದ ಅನೇಕ ಬೆಳವಣಿಗೆಗಳು ಆಗುತ್ತಿವೆ. ಪೊಲೀಸರು ದರ್ಶನ್ ಮತ್ತು ಗ್ಯಾಂಗ್​ ಕಂಬಿಯಿಂದ ಖಾಯಂ ಆಗಿ ಅಟ್ಟುವ 3991 ಪುಟಗಳ ಬೃಹತ್ ಚಾರ್ಜ್​ಶೀಟ್​ನ್ನೇ ರೆಡಿ ಮಾಡಿ ಕೂತಿದ್ದಾರೆ. ಇದರ ನಡುವೆ ಈ ಗ್ಯಾಂಗ್ ಡಿಲೀಟ್ ಮಾಡಿದ್ದ ಹಲ್ಲೆಯ ಫೋಟೋ ರಿಟ್ರೀವ್ ಮಾಡಿಕೊಳ್ಳಲಾಗಿದ್ದು. ದರ್ಶನ್ ಮತ್ತು ಆ ಪರಮಪಾಪಿಗಳ ಗ್ಯಾಂಗ್​ ನಡೆಸಿದ ಕ್ರೌರ್ಯದ ಒಂದೊಂದೇ ಕುರುಹುಗಳ ಸಾಕ್ಷಿಯಾಗಿ ನಿಂತಿವೆ ಫೋಟೋಗಳು.

Advertisment

publive-image

ಕುಡಿದ ಮೇಲೆ ಒಬ್ಬ ಮನುಷ್ಯ ಇಲ್ಲವೇ ಒಂದು ಗ್ಯಾಂಗ್ ಅಮಾನವೀಯತೆಯ, ಕ್ರೌರ್ಯದ ಯಾವ ಸೀಮೆಯನ್ನು ಮುಟ್ಟಬಹುದು ಎನ್ನುವುದುಕ್ಕೆ ಈ ಫೋಟೋಗಳೇ ಸಾಕ್ಷಿ. ಕ್ರೂರ ಪ್ರಾಣಿಗಳಲ್ಲೂ ಹುಡುಕಿದರೆ ಅವುಗಳ ಎದೆಯ ಯಾವುದೋ ಒಂದು ಮೂಲೆಯಲ್ಲಿ ಒಂದು ಕರುಣೆ, ದಯೆ ಎಂಬ ಅಂಶ ಸಿಗಬಹುದು. ಆದ್ರೆ ಈ ಗ್ಯಾಂಗ್ ಮಾಡಿದ ರಾಕ್ಷಸಿ ಕೃತ್ಯವಿದೆಯಲ್ಲ. ಇದು ಎಲ್ಲ ಪೈಶಾಚಿಕ ಕೃತ್ಯಗಳ ಗಡಿಯನ್ನೇ ದಾಟಿದೆ. ಆ ಪೈಶಾಚಿಕೆಯನ್ನು ಬಿಂಬಿಸುವ ಫೋಟೋ ಕಂಡ ರೇಣುಕಾಸ್ವಾಮಿ ಹೆತ್ತವರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಇದನ್ನೂ ಓದಿ:ಪ್ರತೀಕಾರ ತೀರಿಸಿಕೊಳ್ಳಲು ರೀತಿ ನೀತಿ ಬೇರೆ ಇವೆ.. ದರ್ಶನ್​ ಬಗ್ಗೆ ಉಮಾಪತಿಗೌಡ ಖಡಕ್ ಮಾತು; ಏನಂದ್ರು?

ಒಬ್ಬ ವ್ಯಕ್ತಿಗೆ ಎಂದಿಗೂ ಹೊರಲಾಗದ ಭಾರ ಅಂದ್ರೆ ಅದು ಮಗನ ಕಳೆಬರಹ. ಅದನ್ನು ರೇಣುಕಾಸ್ವಾಮಿ ತಂದೆ ಈಗಾಗಲೇ ಹೊತ್ತಿದ್ದಾರೆ. ಅದರ ಜೊತೆಗೆ ಬದುಕಿನುದ್ದಕ್ಕೂ ಕಾಡುವ ಪುತ್ರಶೋಕವನ್ನು ಎದೆಯಲ್ಲಿ ಹೊತ್ತಿದ್ದಾರೆ. ಮಗನ ದುರಂತ ಸಾವು ಕಂಡ ಈ ಎರಡು ಜೀವಗಳು ಅಕ್ಷರಶಃ ಕುಗ್ಗಿ ಹೋಗಿದ್ವು. ಆದ್ರೀಗ ಘಟನೆಯ ದಿನ ರೇಣುಕಾಸ್ವಾಮಿಯ ಪರಿ ಪರಿಯಾಗಿ ಬೇಡಿಕೊಂಡ ಫೋಟೋ ನೋಡಿ ರೇಣುಕಾಸ್ವಾಮಿ ತಂದೆ ಮತ್ತು ತಾಯಿ ಮನಸ್ಸು ಛಿದ್ರ ಛಿದ್ರವಾಗಿದೆ. ಅಯ್ಯೋ ಮಗ ಕೇಳಿದ್ರೂ ಬಿಡಲಿಲ್ಲ, ಬೇಡಿದ್ರೂ ಬಿಡಲಿಲ್ಲ, ಎಂಥಾ ರಾಕ್ಷಸರಿವರು ಅಂತ ಆ ಜೀವಗಳು ನೊಂದು ಬೆಂದು ಹೋಗಿವೆ.

Advertisment

ಇದನ್ನೂ ಓದಿ:ದರ್ಶನ್​​ ಭೇಟಿ ಮಾಡಲು ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ.. ಕೈಯಲ್ಲಿ ಇದ್ದಿದ್ದು ಏನು?

ದರ್ಶನ್ ಕ್ರೌರ್ಯ ಬಿಚ್ಚಿಡ್ತಿವೆ ಈ ಎರಡು ಫೋಟೋಗಳು!
ಎರಡೇ ಎರಡು ಫೋಟೋಗಳು ದರ್ಶನ್ ಆ್ಯಂಡ್ ಗ್ಯಾಂಗ್​ ರೇಣುಕಾಸ್ವಾಮಿ ಮೇಲೆ ತೋರಿದ್ದ ಕ್ರೌರ್ಯಕ್ಕೆ ಸಾಕ್ಷಿ ನುಡಿಯುತ್ತಿವೆ. ಘಟನೆಯ ದಿನ ರೇಣುಕಾಸ್ವಾಮಿ ಅನುಭವಿಸಿದ ಯಮ ಯಾತನೆ ಎಂತಾದ್ದು ಅನ್ನೋದು ಈ ಫೋಟೋಗಳು ನೋಡಿದ್ರೆ ಸಾಕು ಗೊತ್ತಾಗುತ್ತೆ. ಒಂದು ಫೋಟೋದಲ್ಲಿ ಬರಿ ಮೈಯಲ್ಲಿ ಕೂತು ರೇಣುಕಾಸ್ವಾಮಿ ಕೈ ಮುಗಿದು ಕೇಳಿಕೊಳ್ತಿದ್ರೆ. ಇನ್ನೊಂದು ಫೋಟೋದಲ್ಲಿ ರೇಣುಕಾಸ್ವಾಮಿ ನೆಲದ ಮೇಲೆ ಬಿದ್ದಿದ್ದಾನೆ. ಈ ಎರಡೇ ಫೋಟೋಗಳು ಡಿ ಗ್ಯಾಂಗ್​ ಅಟ್ಟಹಾಸಕ್ಕೆ ಕೈ ಗನ್ನಡಿ ಹಿಡಿದಿವೆ.

publive-image

ಕ್ರೌರ್ಯತೆಯ ಫೋಟೋ ನೋಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ-ತಾಯಿ

ಈ ಫೋಟೋಗಳು ದರ್ಶನ್ ಆ್ಯಂಡ ಗ್ಯಾಂಗ್​ನ ಕ್ರೌರ್ಯದ ತೀವೃತೆ ಎಷ್ಟಿತ್ತು ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ. ಆದ್ರೆ ಇದೇ ಫೋಟೋಗಳು ಈಗ ರೇಣುಕಾಸ್ವಾಮಿ ತಂದೆ ತಾಯಿಯ ಮನಸ್ಸನ ಘಾಸಿ ಮಾಡಿದೆ. ಅಯ್ಯೋ ಮಗನ ಜೊತೆ ಇಷ್ಟೆಲ್ಲ ಕ್ರೌರ್ಯ ನಡೆದಿತ್ತ ಅಂತ ಹೆತ್ತ ಜೀವಗಳು ಕಣ್ಣೀರು ಸುರಿಸಿವೆ.

Advertisment

publive-image

ಕಣ್ಣೀರು ಬತ್ತಿ ಹೋಗಿದೆ, ಜೀವಂತ ಹೆಣವಾಗಿದ್ದೇವೆ
ಮೇಲೆ ಉಲ್ಲೇಖಿಸಿದ ಶಬ್ದಗಳು ರೇಣುಕಾಸ್ವಾಮಿ ತಂದೆ ತಾಯಿಯ ಬಾಯಿಂದ ಹೊರಬಂದ ಅಕ್ರೋಶಭರಿತ ದುಃಖದ ಮಾತುಗಳು. ರೇಣುಕಾಸ್ವಾಮಿ ಹತ್ಯೆಯಾದ ದಿನದಿಂದ ಈ ಕುಟುಂಬ ಅಕ್ಷರಶಃ ಕಣ್ಣೀರಿನಲ್ಲೇ ಕೈ ತೊಳೆಯುತ್ತಿದೆ. ಮಗನ ದಾರುಣ ಸಾವು ರೇಣುಕಾಸ್ವಾಮಿ ತಂದೆಯನ್ನ ಕುಗ್ಗಿಸಿಬಿಟ್ಟಿದೆ. ನಿತ್ಯ ಕಣ್ಣೀರು ಸುರಿಸಿ ಕಣ್ಣೀರು ಕೂಡ ಬತ್ತಿ ಹೋಗಿದೆ. ಮಗನ ನೆನಪ್ಪಲ್ಲೆ ಕೊರಗುತ್ತಿರುವ ಈ ಜೀವ ನಾವು ಜೀವಂತ ಹೆಣವಾಗಿದ್ದೇವೆ ಅಂತ ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ:ಹಗ್ಗದಿಂದ ಕಟ್ಟಿ ಹಾಕಿ ಲಾಠಿ ಪುಡಿಯಾಗೋ ಹಾಗೆ ಹಲ್ಲೆ; ದರ್ಶನ್ ಗ್ಯಾಂಗ್ ಭೀಕರತೆ ಬಿಚ್ಚಿಟ್ಟ 3 ಫೋಟೋ ಇಲ್ಲಿವೆ

publive-image

ಇವರು ಮನುಷ್ಯರಲ್ಲ ನಿಜವಾದ ರಾಕ್ಷಸರು
ಒಂದೇ ಒಂದು ಜೋರಾದ ಏಟಿಗೆ ತತ್ತರಿಸಿ ಬೀಳುವ ಸಣಕಲ, ಪೇಲವ ದೇಹ ರೇಣುಕಾಸ್ವಾಮಿಯದ್ದು. ಅಂತಹದ್ರಲ್ಲಿ, 10-13 ಜನ ಸೇರಿ ಕೈಗೆ ಸಿಕ್ಕ ವಸ್ತುಳಿಂದೆಲ್ಲಾ ರೇಣುಕಾಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಇವರ ರಾಕ್ಷಸತನಕ್ಕೆ ಬೆಂಡಾಗಿ ಹೋಗಿದ್ದ ರೇಣುಕಾಸ್ವಾಮಿ ನರಳಿ ನರಳಿ ಜೀವ ಬಿಟ್ಟಿದ್ದ. ಕೈ ಮುಗಿದು ಕೇಳಿಕೊಂಡಿದ್ರು ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನ ಬಿಟ್ಟಿರಲಿಲ್ಲ. ನನ್ನ ಮಗನನನ್ನ ಹಿಂಡಿ ಹಿಪ್ಪೆ ಮಾಡಿದವರು ನಿಜಕ್ಕೂ ಮನುಷ್ಯರೇ ಅಲ್ಲ ಅವರು ರಾಕ್ಷಸರು. ತಪ್ಪಾಯ್ತು ಅಂತ ಅಂಗಲಾಚಿದ್ದಾನೆ ಅದ್ರೂ

Advertisment

ಅವರ ಮನಸ್ಸು ಕರಗಿಲ್ಲ ಅಂತ ನೋವು ಹೊರ ಹಾಕಿದ್ದಾರೆ.
ಇಲ್ಲಿ ರೇಣುಕಾಸ್ವಾಮಿ ಪಾಲಕರು ಮಗನ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದ್ರೆ ಸಾಯಿಸೋ ಮಟ್ಟಕ್ಕೆ ಹೋಗುವ ಬದಲು ಎರಡು ಕಪಾಳಕ್ಕೆ ಬಿಗಿದು ಬುದ್ಧಿ ಹೇಳಿ ಕಳಿಸಿದ್ರೆ ಸಾಕಿತ್ತು. ಒಬ್ಬರಿಗೂ ಮಾನವೀಯತೆ ಇರಲಿಲ್ವಾ? ಸ್ವಲ್ಪ ಮನುಷ್ಯತ್ವ ತೋರಿಸಿದ್ರೂ ಸಾಕಾಗಿತ್ತು. ನಮ್ಮ ಮಗ ನಮ್ಮ ಜೊತೆಯಲ್ಲಿ ಇರ್ತಿದ್ದ ಅಂತ ರೇಣುಕಾಸ್ವಾಮಿ ತಂದೆ ಮನಸ್ಸಲ್ಲಿದ್ದ ನೋವನ್ನ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಅಂಗಲಾಚಿ, ಚೀರಾಡಿದ ರೇಣುಕಾಸ್ವಾಮಿ.. ಒಂದಲ್ಲ 10ಕ್ಕೂ ಹೆಚ್ಚು ಫೋಟೋ ರಿಟ್ರೀವ್‌; ಏನಿದರ ರಹಸ್ಯ?

publive-image

ಅವಳು ಹೆಣ್ಣಲ್ಲ ರಾಕ್ಷಸಿ... ಕರುಣೆ ಬರಲಿಲ್ವಾ|?
ಇವತ್ತು ರೇಣುಕಾಸ್ವಾಮಿ ಕೊಲೆಗಾಗಲಿ ಅಥವಾ ದರ್ಶನ್ ಕಂಬಿ ಹಿಂದೆ ಬಂಧಿಯಾಗೊದಕ್ಕೇ ಆಗಲಿ,  ಮೂಲ ಕಾರಣ ರೀಲ್ಸ್​ ರಾಣಿ ಮೇಕಪ್​ ಸುಂದ್ರಿ ಪವಿತ್ರಾ ಗೌಡ. ಈ ಪವಿತ್ರಾ ಗೌಡ ವಿರುದ್ಧವೂ ಕೆಂಡ ಕಾರಿರುವ ರೇಣುಕಾಸ್ವಾಮಿ ತಂದೆ. ಹೆಣ್ಣು ಅಂದ್ರೆ ಮಾತೃ ಹೃದಯದವಳು ಅಂತಾರೆ. ಕರುಣಾಮಯಿ ಅಂತಾರೆ. ಅಷ್ಟು ಬೇಡಿಕೊಂಡರು ಆ ಹೆಣ್ಮಗಳಿಗೆ ಕರುಣೆ ಬರಲಿಲ್ವಾ. ಯಾವ ಪದ ಬಳಸಬೇಕು ಗೊತ್ತಾಗ್ತಿಲ್ಲ, ಅಂತ ಆಕ್ರೋಶ ಹೊರ ಹಾಕಿದ್ದಾರೆ.

Advertisment

ಇದ್ದೊಬ್ಬ ಮಗನನ್ನ ಕಳೆದುಕೊಂಡಿದ್ದೇವೆ; ಹೆತ್ತವರ ಒಡಲ ಉರಿ
ಆ ತಂದೆ ತಾಯಿಗೆ ರೇಣುಕಾಸ್ವಾಮಿ ಒಬ್ಬನೇ ಮಗ. ಇದ್ದೊಬ್ಬ ಮಗ ಚೆನ್ನಾಗಿರಲಿ ಅಂತ ಮದುವೆ ಕೂಡ ಮಾಡಿದ್ರು. ಇನ್ನೂ 2 ತಿಂಗಳ ಕಳೆದಿದ್ರು ರೇಣುಕಾಸ್ವಾಮಿ ಪತ್ನಿ ಹೆರಿಗೆಯೂ ಆಗಿರ್ತಿತ್ತು. ಸಂತೋಷವಾಗಿದ್ದ ಕುಟುಂಬದ ನೆಮ್ಮದಿಯನ್ನ ಬಡುಮೇಲು ಮಾಡಿರುವ ಡಿ ಗ್ಯಾಂಗ್ ರೇಣುಕಾಸ್ವಾಮಿ ಜೀವ ತೆಗೆದು ಅಟ್ಟಹಾಸ ಮೆರೆದಿತ್ತು. ಈಗ ಹೆತ್ತ ಕರುಳು ಇದ್ದೊಬ್ಬ ಮಗನನ್ನ ಕಳ್ಕೊಂಡಿದ್ವಿ. ದಿನ ಬೆಳಗಾದ್ರೆ ಕಣ್ಣೀರಲ್ಲೇ ಕಾಲ ಕಳೆಯುಂವಂತಾಗಿದೆ ಅಂತ ಸಂಕಟ ಪಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment