Advertisment

ದುಬಾರಿಯಾದ ಚಾರ್ಜ್​ಶೀಟ್​​! ಪೊಲೀಸ್​ ಇಲಾಖೆಗೆ ದರ್ಶನ್​ ತನಿಖೆಗೆ ಎಷ್ಟು ಲಕ್ಷ ಖರ್ಚು ಮಾಡಿದೆ ಗೊತ್ತಾ?

author-image
AS Harshith
Updated On
ದುಬಾರಿಯಾದ ಚಾರ್ಜ್​ಶೀಟ್​​! ಪೊಲೀಸ್​ ಇಲಾಖೆಗೆ ದರ್ಶನ್​ ತನಿಖೆಗೆ ಎಷ್ಟು ಲಕ್ಷ ಖರ್ಚು ಮಾಡಿದೆ ಗೊತ್ತಾ?
Advertisment
  • 90 ಸಾವಿರ ಪುಟಗಳ ಚಾರ್ಜ್​ಶೀಟ್​ ಸಿದ್ಧಪಡಿಸಿದ ಪೊಲೀಸರು
  • ಪೊಲೀಸ್​​ ಇಲಾಖೆಯೂ ಇದಕ್ಕಾಗಿ ಖರ್ಚು ಮಾಡಿದೆಷ್ಟು ಗೊತ್ತಾ?
  • ದರ್ಶನ್​ಗೆ ಸಂಕಷ್ಟ ಪಕ್ಕನಾ? ತನಿಖೆ ಹೇಗೆ ನಡೆದಿದೆ ಗೊತ್ತಾ?

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ​​ಅಂತಿಮ ಹಂತದಲ್ಲಿದ್ದು, ಇಂದು ಚಾರ್ಜ್​​ಶೀಟ್​ ಸಲ್ಲಿಸಲು ಪೊಲೀಸರು ಸಜ್ಜಾಗಿದ್ದಾರೆ. ಆದರೆ ಅಚ್ಚರಿ ಸಂಗತಿ ಎಂದರೆ ಪೊಲೀಸ್​​ ಇಲಾಖೆಯೂ ಚಾರ್ಜ್​ಶೀಟ್​ಗಾಗಿ ₹1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ.

Advertisment

ಇದನ್ನೂ ಓದಿ: ದರ್ಶನ್ ಕೇಸ್​ಗೆ ಬಿಗ್ ಟ್ವಿಸ್ಟ್ ಕೊಡಲು ಪೊಲೀಸರು ನಿರ್ಧಾರ; ಆರೋಪಿಗಳಿಗೆ ಮತ್ತೆ ಢವಢವ..!

publive-image

ರೇಣುಕಾಸ್ವಾಮಿ ಕೊಲೆ ಕೇಸ್​ನ ಚಾರ್ಜ್​ಶೀಟ್​ ದುಬಾರಿ ಎಂದೆನಿಸಿಕೊಂಡಿದೆ. ಪೊಲೀಸ್​ ಇಲಾಖೆಯು ಪ್ರಕರಣದ ತನಿಖೆಗೆ ₹5 ಲಕ್ಷ ಹಣ ಖರ್ಚು ಮಾಡಿದೆ ಎಂದು ತಿಳಿದುಬಂದಿದೆ. ಕೊಲೆ ಪ್ರಕರಣದ ಸಂಬಂಧ 22 ಬಂಡಲ್ ಚಾರ್ಚ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಒಟ್ಟಾರೆ 90 ಸಾವಿರ ಪುಟಗಳಿಗೆ 90 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಉಳಿದ ಹತ್ತು ಸಾವಿರ ರೂಪಾಯಿ ಕವರ್ ಬೈಂಡಿಂಗ್​​ಗೆ ಎಂದು ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.

publive-image

ಇದನ್ನೂ ಓದಿ: ಹಾಯ್‌ ಚಿನ್ನ.. ದರ್ಶನ್ ವಿಡಿಯೋ ಕಾಲ್ ಕೇಸ್‌ಗೆ ಹೊಸ ಟ್ವಿಸ್ಟ್; ಧರ್ಮ ಬಾಯ್ಬಿಟ್ಟ ಸ್ಫೋಟಕ ಸತ್ಯ; ಏನದು?

Advertisment

17 ಆರೋಪಿಗಳಿಗೂ ಒಂದೊಂದು ಕಾಪಿ ಚಾರ್ಜ್​ಶೀಟ್ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಮತ್ತು ವಕೀಲರಿಗೆ ಸೇರಿ ಒಟ್ಟು 22 ಸೆಟ್ ಬೇಕು. 3 ದಿನಗಳಿಂದ ಚಾರ್ಜ್​ಶೀಟ್​ನಲ್ಲಿ ಯಾವುದೇ ತಪ್ಪಾಗದ ರೀತಿ ಎಚ್ಚರವಹಿಸಲಾಗಿದೆ. ಚಾರ್ಜ್​ಶೀಟ್​ ಸೇರಿ ತನಿಖೆಯ ಒಟ್ಟು ಖರ್ಚು 6 ಲಕ್ಷ 45 ಸಾವಿರ ರೂಪಾಯಿಯಾಗಿದೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment