/newsfirstlive-kannada/media/post_attachments/wp-content/uploads/2024/09/RISHAB_PANT-4.jpg)
ಟೀಂ ಇಂಡಿಯಾ ಸ್ಟಾರ್ ರಿಷಬ್ ಪಂತ್ IPL-2024ರಲ್ಲಿ ದೆಹಲಿ ಕ್ಯಾಪಿಟಲ್ಸ್‌ನ ನಾಯಕನಾಗಿ ಕಾಣಿಸಿಕೊಂಡರು. ಪಂತ್ ನಾಯಕತ್ವದಲ್ಲಿ ಡೆಲ್ಲಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದು ಹೊರಬಿದ್ದಿತು.
ಐಪಿಎಲ್ 2025ರ ಮೊದಲು ದೆಹಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್​​ಗೆ ಗೇಟ್​ಪಾಸ್ ನೀಡಲಾಗಿದೆ ಇದೀಗ ನಾಯಕ ರಿಷಬ್ ಪಂತ್ ಸರದಿ ಎನ್ನಲಾಗುತ್ತಿದೆ. ಅಂತೆಯೇ ಇದೀಗ ಪಂತ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ. ಹರಾಜಿನಲ್ಲಿ ನಾನು ಎಷ್ಟು ಮೊತ್ತಕ್ಕೆ ಸೇಲ್ ಆಗ್ತೇನೆ ಎಂದು ಅಭಿಮಾನಿಗಳ ಕೇಳಿದ್ದಾರೆ. ಈ ಪೋಸ್ಟ್​ ಬೆನ್ನಲ್ಲೇ ಪಂತ್ ಕುರಿತ ಊಹಾಪೋಹಗಳು ಹೆಚ್ಚಾಗಿವೆ. ಹರಾಜಿಗೆ ಹೋದರೆ ನಾನು ಮಾರಾಟವಾಗಬಹುದೇ ಅಥವಾ ಇಲ್ಲವೇ ಮತ್ತು ಎಷ್ಟು ಬೆಲೆಗೆ? ಎಂದು ಅಭಿಮಾನಿಗಳನ್ನು ಕೇಳಿದ್ದಾರೆ.
ಇದನ್ನೂ ಓದಿ:ಕ್ರೀಸ್​ನಲ್ಲಿ ಹೊಸ ವೆಪನ್ ಹುಡುಕಿಕೊಂಡ ರಿಷಬ್ ಪಂತ್; ಇನ್ಮೇಲೆ ಔಟ್ ಮಾಡೋದು ಸುಲಭ ಇಲ್ಲ
ಪಂತ್ ಅವರ ಈ ಪೋಸ್ಟ್‌ಗೆ ಕಾಮೆಂಟ್‌ಗಳ ಮೂಲಕ ಅಭಿಮಾನಿಗಳು ಯೋಗ್ಯತೆಯನ್ನು ತಿಳಿಸಿದ್ದಾರೆ. ಒಬ್ಬ ಬಳಕೆದಾರ 20 ಕೋಟಿಗಿಂತ ಹೆಚ್ಚು ಎಂದು ಬರೆದಿದ್ದಾರೆ. ಇನ್ನೊಬ್ಬರು ನೀವು ಅಮೂಲ್ಯರು. ನೀವು ದಂತಕಥೆ. ಮತ್ತೊಬ್ಬ ಬಳಕೆದಾರ, ಮಾರಾಟ ಮಾಡದಿರುವ ಪ್ರಶ್ನೆಯೇ ಇಲ್ಲ. 20 ಕೋಟಿಯ ಹತ್ತಿರ ಎಂದು ಬರೆದಿದ್ದಾರೆ.
ಇದನ್ನೂ ಓದಿ:ಅಶ್ವಿನ್ ಶತಕ ವೈಭವಕ್ಕೆ ರಿಷಬ್ ಪಂತ್ ಮಾಡಿದ ಪಾಠ ಕಾರಣ..! ಸತ್ಯ ಬಿಚ್ಚಿಟ್ಟ ಸ್ಟಾರ್..!
If go to the auction. will I be sold or not and for how much ??
— Rishabh Pant (@RishabhPant17) October 11, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ