ಕಿವೀಸ್ ಎದೆ ನಡುಗಿಸಿದ್ದ ರಿಷಬ್ ಪಂತ್.. ಇಂಜುರಿಯಾದ್ರೂ ಅತ್ಯದ್ಭುತ ಇನ್ನಿಂಗ್ಸ್ ಕಟ್ಟಿದ್ದ ಫೈಟರ್

author-image
Bheemappa
Updated On
ಕಿವೀಸ್ ಎದೆ ನಡುಗಿಸಿದ್ದ ರಿಷಬ್ ಪಂತ್.. ಇಂಜುರಿಯಾದ್ರೂ ಅತ್ಯದ್ಭುತ ಇನ್ನಿಂಗ್ಸ್ ಕಟ್ಟಿದ್ದ ಫೈಟರ್
Advertisment
  • ರಿಷಬ್​ ಪಂತ್ ರಗಡ್​ ಆಟಕ್ಕೆ ಬೆಚ್ಚಿ ಬಿದ್ದಿದ್ದ ಕಿವೀಸ್ ಪ್ಲೇಯರ್ಸ್
  • ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫೈಟರ್​ ಪಂತ್​ ಹೋರಾಟ ಹೇಗಿತ್ತು?
  • ಪಂತ್​ ಕೆಚ್ಚೆದೆಯ ಹೋರಾಟಕ್ಕೆ ಒಂದು ಸಲಾಂ ಹೇಳಲೇಬೇಕು..!

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋತು ಹೋಗಿದೆ. ಆದ್ರೆ, ಟೀಮ್​ ಇಂಡಿಯಾದ ಫೈಟ್​ಬ್ಯಾಕ್​ ಮಾತ್ರ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ಅದ್ರಲ್ಲೂ ಫೈಟರ್​ ಪಂತ್​ ನಡೆಸಿದ ಕೆಚ್ಚೆದೆಯ ಹೋರಾಟಕ್ಕೆ ಒಂದು ಸಲಾಂ ಹೇಳಲೇಬೇಕು. ರಿಷಬ್​ ಪಂತ್​ ಟೀಮ್​ ಇಂಡಿಯಾಗೆ ಯಾಕೆ ಬೇಕು ಅನ್ನೋದಕ್ಕೆ ಚಿನ್ನಸ್ವಾಮಿಯಲ್ಲಿ ನಿನ್ನೆ ಆಡಿದ ಇನ್ನಿಂಗ್ಸ್​ ಬೆಸ್ಟ್​ ಎಕ್ಸಾಂಪಲ್​.

ನ್ಯೂಜಿಲೆಂಡ್​ ವಿರುದ್ಧದ ಪಂದ್ಯದ 3ನೇ ದಿನದಾಟ ಕೊನೆಯ ಎಸೆತದಲ್ಲಿ ಎದುರಾಗಿದ್ದ ಶಾಕ್​ ಟೀಮ್​ ಇಂಡಿಯಾ ಅಭಿಮಾನಿಗಳನ್ನ ಆತಂಕಕ್ಕೆ ದೂಡಿತ್ತು. ಸಾಲಿಡ್ ಬ್ಯಾಟಿಂಗ್​ ನಡೆಸ್ತಾ ಇದ್ದ ವಿರಾಟ್​ ಕೊಹ್ಲಿಯ ಪತನವಾಯಿತು. ಇಷ್ಟೇ ಅಲ್ಲ, ಆವಾಗಲೇ ಇನ್ನಿಂಗ್ಸ್​​ ಸೋಲಿನ ಭೀತಿಯೂ ಕಾಡಿತ್ತು.

ಇದನ್ನೂ ಓದಿ: IND vs NZ; ರೋಹಿತ್ ಟೀಮ್​ಗೆ ಶಾಕ್ ಕೊಟ್ಟ ನ್ಯೂಜಿಲೆಂಡ್.. ಟಾಮ್ ಲ್ಯಾಥಮ್ ಪಡೆಗೆ ಭರ್ಜರಿ ಜಯ

publive-image

ಫೈಟರ್​ ಪಂತ್​ ಹೋರಾಟ.! ಆತಂಕ ದೂರ.. ದೂರ.!

3ನೇ ದಿನದಾಟದ ಅಂತ್ಯದಲ್ಲಿ ಕಾಡಿದ್ದ ಆತಂಕ, 4ನೇ ದಿನದಾಟದ ಆರಂಭದಲ್ಲೇ ದೂರಾಯ್ತು. ಇದ್ರ ಹಿಂದಿನ ರೀಸನ್​​ ಫೈಟರ್​​ ರಿಷಬ್​ ಪಂತ್​. ಬೆಂಗಳೂರು ಟೆಸ್ಟ್​ ಪಂದ್ಯ 2ನೇ ದಿನದಾಟದಲ್ಲಿ ಪಂತ್​​ ಇಂಜುರಿಗೆ ತುತ್ತಾಗಿದ್ರು. ಜಡೇಜಾ ಎಸೆದ ನೇರವಾಗಿ ಪಂತ್​, ಮಂಡಿಗೆ ಬಂದು ಬಡಿದಿತ್ತು. ಭೀಕರ ಕಾರು ಅಪಘಾತದಲ್ಲಿ ಸಿಲುಕಿದ್ದಾಗ ಸರ್ಜರಿಗೆ ಒಳಗಾಗಿದ್ರಲ್ಲ ಅದೇ ಕಾಲಿಗೆ ಚೆಂಡು ಬಡಿದಿತ್ತು. ಪಂತ್​​ ಮುಖದ ಭಾವವೇ ಆ ನೋವಿನ ತೀವ್ರತೆ ಎಷ್ಟಿತ್ತು ಅಂತಾ ಹೇಳ್ತಿತ್ತು. ಆಗ ಎಲ್ಲರೂ ಹೇಳಿದ್ದು ಒಂದು ಮಾತು PANT IN DANGER ಅಂತಾ.

2ನೇ ದಿನದಾಟದಲ್ಲಿ ಮೈದಾನದಿಂದ ಹೊರ ನಡೆದಿದ್ದ ಪಂತ್​, 3ನೇ ದಿನ ಫೀಲ್ಡಿಂಗ್​ಗೂ ಬಂದಿರಲಿಲ್ಲ. ಆದ್ರೆ, 4ನೇ ದಿನದ ಆರಂಭದಲ್ಲೇ ಬ್ಯಾಟ್ ಹಿಡಿದು ಅಖಾಡಕ್ಕಿಳಿದ ಪಂತ್​ ಉಗ್ರಾವತಾರ ತೊರಿದರು. ಆ ಆಟ ನೋಡಿದ ಮೇಲೆ ಅನ್ನಿಸಿದ್ದು, ಪಂತ್​ ಇನ್​ ಡೇಂಜರ್​​ ಅಲ್ಲ. ಈ ಪಂತೇ ಡೇಂಜರ್​ ಅಂತಾ.

9 ಬೌಂಡರಿ, 5 ಸಿಕ್ಸರ್​​.. ಬಳಲಿ ಬೆಂಡಾದ ಬೌಲರ್ಸ್​.!

ಕೊಹ್ಲಿ ವಿಕೆಟ್​ ಪಡೆದು ಆತ್ಮವಿಶ್ವಾಸದಲ್ಲಿದ್ದ ನ್ಯೂಜಿಲೆಂಡ್​ಗೆ ಪಂತ್​ ಶಾಕ್​ ನೀಡಿದ್ದರು. ಕಿವೀಸ್​ನ ಅಟ್ಯಾಕಿಂಗ್​ ಆಟಕ್ಕೆ ಕೌಂಟರ್​ ಅಟ್ಯಾಕ್​ ನಡೆಸಿದ ಪಂತ್​​, ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸಿದ್ದರು. ಕಿವೀಸ್​ ಬೌಲರ್​ಗಳನ್ನ ಬೆಂಡೆತ್ತಿದ ಪಂತ್​, ಕಂಪ್ಲೀಟ್​ ಡಾಮಿನೇಶನ್​ ಸಾಧಿಸಿದರು. ಚಿನ್ನಸ್ವಾಮಿ ಅಂಗಳದಲ್ಲಿ ಅಗ್ರೆಸ್ಸಿವ್​ ಆಟವಾಡಿದ​ ಪಂತ್​​, ಫೆಂಟಾಸ್ಟಿಕ್​​ ಇನ್ನಿಂಗ್ಸ್​ ಕಟ್ಟಿದ್ರು. ಪಂತ್​ ಮೈದಾನದಲ್ಲಿ ಆರ್ಭಟಿಸ್ತಾ ಇದ್ರೆ, ಸ್ಟ್ಯಾಂಡ್​​ನಲ್ಲಿದ್ದ ಫ್ಯಾನ್ಸ್ ಹುಚ್ಚೆದ್ದು ಕುಣಿದರು.

ಒಂದೆಡೆ ಮೈದಾನದಲ್ಲಿ ಪಂತ್​ ಘರ್ಜಿಸ್ತಾ ಇದ್ರೆ, ಇನ್ನೊಂದೆಡೆ ಟೀಮ್​ ಇಂಡಿಯಾ ಪಾಳಯದಲ್ಲಿ ಸೋಲಿನ ಭೀತಿ ದೂರಾಗಿ ಗೆಲುವಿನ ಕನಸು ಚಿಗುರಿತ್ತು. ಪಂತ್​ರ ಅತ್ಯದ್ಭುತ ಇನ್ನಿಂಗ್ಸ್​ ನೋಡಿದ ಮೇಲೆ ಫ್ಯಾನ್ಸ್​ ಗೆಲುವು ನಮ್ಮದೇ ಅನ್ನೋ ತಿರ್ಮಾನಕ್ಕೆ ಬಂದಾಗಿತ್ತು. 9 ಬೌಂಡರಿ, 5 ಸಿಕ್ಸರ್​ ಒಳಗೊಂಡ 99 ರನ್​ಗಳ ಇನ್ನಿಂಗ್ಸ್​ ಹಂಗಿತ್ತು.

ಇದನ್ನೂ ಓದಿ: 25 ಸಾವಿರ ಸರ್ಕಾರಿ ಉದ್ಯೋಗಗಳಿಗೆ ಆಹ್ವಾನ.. ಇದಕ್ಕೆ ಇವರು ಮಾತ್ರ ಅಪ್ಲೇ ಮಾಡಬೇಕು; ಯಾಕೆ ಗೊತ್ತಾ?

publive-image

ಸಾಲಿಡ್​ ಇನ್ನಿಂಗ್ಸ್ ​ಮೂಲಕ ಫ್ಯಾನ್ಸ್​ನ ರಂಜಿಸಿ, ಟೀಮ್​ ಇಂಡಿಯಾದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದ ​ ಪಂತ್​, ಅಂತ್ಯದಲ್ಲಿ ಅನುಭವಿಸಿದ್ದು ನಿರಾಸೆ. ಶತಕಕ್ಕೆ 1 ರನ್​ ಬೇಕಿದ್ದಾಗ ದುರಾದೃಷ್ಟಕರ ರೀತಿಯಲ್ಲಿ ಪಂತ್​ ಔಟ್ ಆದರು. ಈ ವಿಕೆಟ್​ ಪತನ ಫ್ಯಾನ್ಸ್​ಗೆ​ ಉಂಟು ಮಾಡಿದ ನಿರಾಸೆ ಅಷ್ಟಿಷ್ಟಲ್ಲ..

ಪಂತ್​ ಕ್ರಿಸ್​ನಲ್ಲಿದ್ದಷ್ಟು ಹೊತ್ತು ಟೀಮ್​ ಇಂಡಿಯಾ ಗೆಲ್ಲುತ್ತೆ ಅನ್ನೋದ್ರಲ್ಲಿ ಯಾರಿಗೂ ಡೌಟೇ ಇರಲಿಲ್ಲ. ಆದ್ರೆ, ಪಂತ್​ ಔಟಾಗಿದ್ದೇ ಔಟಾಗಿದ್ದು, ಟೀಮ್​ ಇಂಡಿಯಾ ಪಾಳಯದಲ್ಲಿ ಗೆಲುವಿನ ಆಸೆ ಕಮರಿ ಹೋಯಿತು. ಈ ಸೋಲು-ಗೆಲುವಿನ ಹೊರತಾಗಿ ತಂಡ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ, ಇಂಜುರಿಯ ನೋವಿನ ನಡುವೆ ಬಂದು ಕೆಚ್ಚೆದೆಯ ಹೋರಾಟ ನಡೆಸಿದ ಪಂತ್​ಗೆ ಸಲಾಂ ಹೇಳಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment