ಭೀಕರ ಅಪಘಾತಕ್ಕೆ ಬಲಿಯಾದ ಯುವಕ
ಒಬ್ಬರ ಒಳಿತಿಗಾಗಿ ಹೋಗಿ ಮತ್ತೊಬ್ಬ ಬಲಿಯಾದ
ರಸ್ತೆ ಅಪಘಾತ ತಡೆಯಲು ಹೋಗಿ ಸಾವನ್ನಪ್ಪಿದ ಯುವಕ
ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ಸತ್ತು ಬಿದ್ದಿದ್ದ ನಾಯಿಯನ್ನ ಎತ್ತಲು ಹೋಗಿ ಭೀಕರ ಅಪಘಾತ ಯುವಕ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೂನೇಗಲ್ ಬಳಿ ಈ ದುರ್ಘಟನೆ ನಡೆದಿದೆ.
ಯುವಕರು ಹೆದ್ದಾರಿಯಲ್ಲಿ ಅಪಘಾತಗಳಾಗುತ್ತೆ ಅಂತ ಸತ್ತ ನಾಯಿಯನ್ನ ಎತ್ತಲು ಹೋಗಿದ್ದರು. ಈ ವೇಳೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ.
ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನಗಿಲ್ಲ ರಿಲೀಫ್.. ಜಾಮೀನು ಸಿಕ್ಕರೂ ಮತ್ತೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ
ಸತ್ತ ನಾಯಿ ತೆರವು ಮಾಡುವ ವೇಳೆ ಯುವಕನಿಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ನಂತರ ಹಲವು ವಾಹನಗಳಿಗೆ ಟಿಪ್ಪರ್ ಲಾರಿ ಗುದ್ದಿದೆ. ಮೃತ ವ್ಯಕ್ತಿಯನ್ನು ಸಾಮಸೇನಹಳ್ಳಿ ಗ್ರಾಮದ 30 ವರ್ಷದ ಪ್ರಭು ಎಂದು ಗುರುತಿಸಲಾಗಿದೆ.
ಮಲ್ಲೇನಹಳ್ಳಿಯ ಕಾರ್ತಿಕ್ ಎನ್ನುವಾತನಿಗೆ ಗಂಭೀರ ಗಾಯವಾಗಿದ್ದು, ಗಾಯಾಳುವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಸ್ಕಾರ್ಪಿಯೋ ಕಾರು ಹಾಗೂ ಬೈಕ್ ಜಖಂಗೊಂಡಿದೆ.
ಇದನ್ನೂ ಓದಿ: ಜೈಲಲ್ಲಿ ಬರೋಬ್ಬರಿ 100 ದಿನ ಕಳೆದ ದಾಸ; ನಟ ದರ್ಶನ್ಗೆ ಜಾಮೀನು ಸಿಗೋದು ಯಾವಾಗ?
ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಹೆದ್ದಾರಿಯಲ್ಲಿ ನಾಯಿ ಸತ್ತು ಬಿದ್ದಿತ್ತು. ಬೈಕ್ ನಿಲ್ಲಿಸಿ ನಾಯಿಯನ್ನ ತೆಗೆಯಲು ಯುವಕರು ಮುಂದಾಗಿದ್ದರು. ಈ ವೇಳೆ ಅತಿ ವೇಗದಿಂದ ಬಂದ ಟಿಪ್ಪರ್ ಲಾರಿ ಯುವಕನಿಗೆ ಡಿಕ್ಕಿ ಹೊಡೆದು ನಂತರ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ