/newsfirstlive-kannada/media/post_attachments/wp-content/uploads/2024/06/darshan-13-2.jpg)
ಹುಬ್ಬಳ್ಳಿಯಲ್ಲಿ ದರ್ಶನ್​ ನಟನೆಯ ರಾಬರ್ಟ್​ ರಿಲೀಸ್​ ಇವೆಂಟ್​ ನಡೆಯುತ್ತದೆ. ಹೈದರಾಬಾದ್​ ಮೂಲದ ಕಂಪನಿ ಜೊತೆ ಟೈಯಪ್​ ಆಗುತ್ತೆ. ಅವತ್ತು ಕುಡಿದಿದ್ದ ಬಿಲ್​ 8-9 ಲಕ್ಷ ಕಟ್ಟುತ್ತೇವೆ. ಆದ್ರೂ ಕೂಡ ನನಗೂ ಅವರಿಗೆ ಎಣ್ಣೆ ಕಡಿಮೆ ಆಯ್ತು ಅಂತ ಗಲಾಟೆ ಆಗುತ್ತದೆ. ಅವತ್ತು ಅನಿಸುತ್ತೆ ನನಗೆ ಯಾಕಯ್ಯ ಬೇಕಾಗಿತ್ತು. ರಾಜನಂಗೆ ಇದ್ದೆ ಸಿನಿಮಾ ಮಾಡಿಬಿಟ್ಟು ಎಣ್ಣೆ ಸಪ್ಲೆಯರ್​ ಆಗ್ಬಿಟ್ಟೆ ಎಂದು ದೊಡ್ಡ ಗಲಾಟೆ ನಡೆಯುತ್ತದೆ. ಅವತ್ತು ಹರಿಕೃಷ್ಣ ಸರ್​ ಇಬ್ಬರಿಗೂ ಸಮಾಧಾನ ಮಾಡುತ್ತಾರೆ ಎಂದು ಹಳೆಯ ಘಟನೆಯನ್ನು ನಿರ್ಮಾಪಕ ಉಮಾಪತಿ ಗೌಡ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್​ನ ಮ್ಯಾನೇಜರ್​ ಆತ್ಮಹತ್ಯೆ.. ಅಂದು ರಕ್ತಕಾರಿ ಅನಾಥವಾಗಿ ಬಿದ್ದಿತ್ತು ಆತನ ಮೃತದೇಹ
ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ ರಾಬರ್ಟ್​​ ನಿರ್ಮಾಪಕ ಉಮಾಪತಿ ಗೌಡರವರು, ಕೊರೋನಾ ಸಮಯದಲ್ಲಿ ರಾಬರ್ಟ್​ ರಿಲೀಸ್​​ಗೆ ಕಷ್ಟವಾಗಿತ್ತು. ಅಂದು ಮಾಧ್ಯಮದವರ ಸಹಾಯ ಕೇಳುತ್ತೇವೆ. ಅವತ್ತು ಎಲ್ಲಾ ಚಾನೆಲ್​ ನಮ್ಮನ್ನ ಪರಿಗಣನೆಗೆ ತೆಗೆದುಕೊಂಡು 24 ಗಂಟೆ ಪ್ರಸಾರ ಮಾಡಿ ಗೆಲುವಿಗೆ ಕಾರಣಕರ್ತರಾಗಿದ್ದೀರಾ ಎಂದು ಹೇಳುತ್ತಾ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಾವಿನ ಗುಂಡಿಗೆ ಬಿದ್ದ ಮಗು.. ಅಯ್ಯೋ.. ಈ ನೋವು, ಆಕ್ರಂದನ ಯಾವ ಪೋಷಕರಿಗೂ ಬಾರದಿರಲಿ
ರಾಬರ್ಟ್​ ಸಿನಿಮಾ ಸಮಯದಲ್ಲೂ ದರ್ಶನ್​ ವರ್ತನೆ ಬಗ್ಗೆ ಮಾತನಾಡಿದ ಅವರು, ಘಟನೆಗಳು ನಡೆದಿತ್ತು. ಆ ಸಮಯದಲ್ಲಿ ಕುಳಿತುಕೊಮಡು ಚರ್ಚೆ ಮಾಡಿ ಸಂಧಾನ ಮಾಡುವ ಕಾರ್ಯ ಮಾಡಿದೆವು ಎಂದು ಉಮಾಪತಿ ಗೌಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us