ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸೋಲಿಗೆ ಕಾರಣ ಯಾರು ಎಂದು ಹೇಳಿದ ರೋಹಿತ್ ಶರ್ಮಾ..!

author-image
Ganesh
Updated On
ಬಿಸಿಸಿಐ ಮಹತ್ವದ ನಿರ್ಧಾರ; ಭಾರತ 3ನೇ ಟೆಸ್ಟ್​​ ಸೋತರೆ ರೋಹಿತ್​​ಗೆ ಕ್ಯಾಪ್ಟನ್ಸಿಯಿಂದ ಕೊಕ್​​
Advertisment
  • ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್​ ಸರಣಿ
  • ಎರಡನೇ ಟೆಸ್ಟ್ ಪಂದ್ಯವನ್ನೂ ಗೆದ್ದು ಬೀಗಿದ ನ್ಯೂಜಿಲೆಂಡ್
  • 2ನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾಗೆ 113 ರನ್​ಗಳ ಹಿನ್ನಡೆ

ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ಬೆನ್ನಲ್ಲೇ ಪಂದ್ಯ ಸೋಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಕಾರಣ ನೀಡಿದ್ದಾರೆ.

ಸೋಲಿನಿಂದ ನಮಗೆ ನಿರಾಸೆ ಆಗಿದೆ. ಸೋಲನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಚೆನ್ನಾಗಿ ಆಡಿದ ಕ್ರೆಡಿಟ್ ನ್ಯೂಜಿಲೆಂಡ್‌ಗೆ ನೀಡಬೇಕು. ಅವರು ನಮಗಿಂತ ಉತ್ತಮವಾಗಿ ಆಡಿದ್ದಾರೆ. ನಾವು ಕೆಲವು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ನಾವು ಫೇಲ್ ಆಗಿದ್ದೇವೆ. ಅವಕಾಶಗಳನ್ನು ಉಪಯೋಗಪಡಿಸಿಕೊಳ್ಳಲು, ಸವಾಲುಗಳಿಗೆ ಪ್ರತಿಕ್ರಿಯಿಸಲು ವಿಫಲರಾಗಿದ್ದೇವೆ. ಪರಿಣಾಮ ನಾವು ಸೋಲನ್ನು ಅನುಭವಿಸಬೇಕಾಯಿತು. ಗೆಲ್ಲಲು ಬೌಲರ್ಸ್ 20 ವಿಕೆಟ್​ಗಳನ್ನು ಉರುಳಿಸಬೇಕು. ಬ್ಯಾಟ್ಸ್‌ಮನ್‌ಗಳು ರನ್ ಬೋರ್ಡ್​ ಹೆಚ್ಚಿಸಬೇಕು ಎಂದರು.

ಇದನ್ನೂ ಓದಿ:2ನೇ ಟೆಸ್ಟ್​​​ಗೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​​; ಪಂದ್ಯದಿಂದ ಸ್ಟಾರ್​​ ಪ್ಲೇಯರ್​​ ಔಟ್​​

ಪಿಚ್​ ಮೇಲೆ ಪಂದ್ಯ ಅವಲಂಬಿತವಾಗಿರಲಿಲ್ಲ. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ನಾವು ಅದ್ಭುತವಾಗಿ ಬ್ಯಾಟ್ ಬೀಸಿದ್ದರೆ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಮುಂದಿನ ಟೆಸ್ಟ್ ಪಂದ್ಯವನ್ನು ಗೆಲ್ಲುತ್ತೇವೆ. ಸೋಲು ನಮ್ಮೆಲ್ಲ ವೈಫಲ್ಯ. ಸಾಮೂಹಿಕ ವೈಫಲ್ಯರ, ನಾನು ಬ್ಯಾಟ್ಸ್‌ಮನ್ ಅಥವಾ ಬೌಲರ್‌ಗಳನ್ನು ದೂಷಿಸುವವನಲ್ಲ ಎಂದಿದ್ದಾರೆ.

ಇದನ್ನೂ ಓದಿ:ರಾಹುಲ್​​ಗೆ ರಾಹುಕಾಲ; 2ನೇ ಟೆಸ್ಟ್​​ನಲ್ಲಿ ಕನ್ನಡಿಗನ ಸ್ಥಾನದ ಮೇಲೆ ಕಣ್ಣಿಟ್ಟ ಸ್ಟಾರ್​ ಕ್ರಿಕೆಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment