Advertisment

ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!

author-image
Ganesh
Updated On
ಪಾಕ್ ವಿರುದ್ಧದ ಪಂದ್ಯಕ್ಕೂ ಮೊದಲೇ ದೊಡ್ಡ ಆಘಾತ.. ಕ್ಯಾಪ್ಟನ್ ರೋಹಿತ್ ಆಡೋದು ಡೌಟ್..!
Advertisment
  • ನಿನ್ನೆಯ ಪಂದ್ಯದಲ್ಲಿ ಅರ್ಧಕ್ಕೆ ನಿರ್ಗಮಿಸಿದ ರೋಹಿತ್
  • ಐರ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
  • ಸ್ಫೋಟಕ ಬ್ಯಾಟಿಂಗ್ ಆಡಿರುವ ಪಂತ್, ರೋಹಿತ್

ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ ಗೆಲ್ಲುವ ಅಭಿಯಾನ ಆರಂಭಿಸಿದೆ. ಜೂನ್ 9 ರಂದು ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಹೈವೋಲ್ಟೇಜ್ ಪಂದ್ಯವನ್ನು ಆಡಲಿದೆ. ಆದರೆ ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ, ಗಾಯಗೊಂಡಿದ್ದು ಆತಂಕ ಮೂಡಿಸಿದೆ.

Advertisment

ಐರ್ಲೆಂಡ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಹಿಟ್​ಮ್ಯಾನ್.. ಐರ್ಲೆಂಡ್​​ ಪರವಾಗಿ ವೇಗಿ ಜೋಶ್ ಲಿಟ್ಲ್​ ಅವರು 9ನೇ ಓವರ್ ಎಸೆಯಲು ಬಂದಿದ್ದರು. ಜೋಶ್ ಎಸೆದ 2ನೇ ಬಾಲ್​​ ಕೈತೋಳಿಗೆ ತಾಗಿದ ಪರಿಣಾಮ ಗಾಯಗೊಂಡಿದ್ದಾರೆ. ಹೀಗಿದ್ದೂ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ 10ನೇ ಓವರ್ ಮುಗಿಯುತ್ತಿದ್ದಂತೆಯೇ ರಿಟೈರ್ಟ್​​ ಹರ್ಟ್​ ಆದರು.

ಇದನ್ನೂ ಓದಿ:ಬೆನ್ನು ಬಿಡದ ಬೇತಾಳದಂತೆ ಕಾಡಿದ ದುರಾದೃಷ್ಟ.. 11 ವರ್ಷದಲ್ಲಿ 9 ಪಂದ್ಯ.. ಕಪ್​ ನಮ್ದಲ್ಲ..!

37 ಬಾಲ್​ಗಳನ್ನು ಎದುರಿಸಿರುವ ರೋಹಿತ್ ಶರ್ಮಾ ಮೂರು ಸಿಕ್ಸರ್​, ನಾಲ್ಕು ಬೌಂಡರಿಯೊಂದಿಗೆ 52 ರನ್​​ಗಳನ್ನ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ ರೋಹಿತ್ ಗಾಯಗೊಂಡಿರೋದು ತಂಡಕ್ಕೆ ಆತಂಕ ಹೆಚ್ಚಿಸಿದೆ. ವರದಿಗಳ ಪ್ರಕಾರ, ಗಾಯ ಚಿಕ್ಕದಾಗಿದೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಲಾಗಿದೆ. ಇನ್ನು ಪಂದ್ಯ ಮುಗಿದ ಮೇಲೆ ಮಾತನಾಡಿರುವ ರೋಹಿತ್ ಶರ್ಮಾ, ಲೈಟಾಗಿ ನೋಯುತ್ತಿದೆ ಎಂದಿದ್ದಾರೆ.

Advertisment

ನಿನ್ನೆಯ ಪಂದ್ಯದಲ್ಲಿ ಮೊದಲು ಐರ್ಲೆಂಡ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಭಾರತೀಯ ಬೌಲರ್​​ಗಳ ದಾಳಿಗೆ ನಡುಗಿದ ಐರ್ಲೆಂಡ್ 16 ಓವರ್​ಗೆ ಎಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 96 ರನ್​​ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ಭಾರತ 12.2 ಓವರ್​​ನಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ಕ್ರಮವಾಗಿ 1, 2 ರನ್​ಗಳಿಸಿ ನಿರಾಸೆ ಮೂಡಿಸಿದರು. ​

ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್​ ಬೇರೆಯದ್ದೇ ಕತೆ ಹೇಳ್ತಿದೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment