ಮೊದಲ ಎರಡು ಎಸೆತಗಳನ್ನೇ ಸಿಕ್ಸರ್ ಸಿಡಿಸಿದ್ದ ಹಿಟ್ಮ್ಯಾನ್
ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ಗೆ ಕಂಗಲಾದ ಬಾಂಗ್ಲಾ ಪ್ಲೇಯರ್ಸ್
ಕಡಿಮೆ ಎಸೆತದಲ್ಲಿ ಹಾಫ್ಸೆಂಚುರಿ ಸಿಡಿಸಿರುವ ಬ್ಯಾಟ್ಸ್ಮನ್ಸ್
ಮೊಮಿನುಲ್ ಹಕ್ ಅವರ ಸೆಂಚುರಿ ನೆರವಿನಿಂದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾ 233 ರನ್ಗಳಿಗೆ ಆಲೌಟ್ ಆಗಿದೆ. ಸದ್ಯ ಬ್ಯಾಟಿಂಗ್ ಆರಂಭಿಸಿರುವ ಟೀಮ್ ಇಂಡಿಯಾ 1 ವಿಕೆಟ್ ಕಳೆದುಕೊಂಡಿದೆ. ಆದರೆ ಪಂದ್ಯದಲ್ಲಿ ಓಪನರ್ಸ್ ಆದ ಕ್ಯಾಪ್ಟನ್ ರೋಹಿತ್, ಯಶಸ್ವಿ ಜೈಸ್ವಾಲ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಉತ್ತರಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದೆ. ಮೊದಲ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 74 ಓವರ್ಗಳಲ್ಲಿ 233 ರನ್ಗೆ ಆಲೌಟ್ ಆಗಿದೆ. ಆರಂಭಿಕ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ನಲ್ಲಿ ವಿಫಲವಾದರು. ಆದರೆ ಮೊಮಿನುಲ್ ಹಕ್ ಅವರು ಉತ್ತಮ ಬ್ಯಾಟಿಂಗ್ನಿಂದ ತಂಡಕ್ಕೆ ನೆರವಾದರು. ಮೊಮಿನುಲ್ ಹಕ್ 17 ಬೌಂಡರಿ 1 ಸಿಕ್ಸರ್ ಸಮೇತ 107 ರನ್ ಸಿಡಿಸಿ ಔಟ್ ಆಗದೇ ಉಳಿದರು. ಆದರೆ ಉಳಿದ ಬ್ಯಾಟ್ಸ್ಮನ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ದರಿಂದ ಬಾಂಗ್ಲಾ ಅಲ್ಪ ಮೊತ್ತ ಗಳಿಸಿತು.
ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ಬಳಿಕ ಬ್ಯಾಟಿಂಗ್ಗೆ ಆಗಮಿಸಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಅವರು ವಿಶ್ವದಾಖಲೆಯ ಆಟವಾಡಿದರು. ಇಡೀ ಟೆಸ್ಟ್ ಇತಿಹಾಸದಲ್ಲೇ ಅತಿವೇಗದ ಹಾಫ್ಸೆಂಚುರಿ ಅಂದರೇ ಕೇವಲ 18 ಬಾಲ್ಗಳಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಇಂಗ್ಲೆಂಡ್ನ ಬೆನ್ ಡಕೆಟ್ ಮತ್ತು ಆಲಿ ಪೋಪ್ ಅವರ ವರ್ಲ್ಡ್ ರೆಕಾರ್ಡ್ ಅನ್ನು ಬ್ರೇಕ್ ಮಾಡಿದರು. ಈ ಇಬ್ಬರು 26 ಎಸೆತಗಳಲ್ಲಿ ಹಾಫ್ಸೆಂಚುರಿ ಸಿಡಿಸಿದ್ದರು. ಆದರೆ ಹಿಟ್ಮ್ಯಾನ್ ರೋಹಿತ್ ಮೊದಲ 2 ಎಸೆತಗಳನ್ನೇ ಸಿಕ್ಸರ್ ಬಾರಿಸಿದರು. ಹೀಗಾಗಿ ಕೇವಲ 6 ಎಸೆತಳಲ್ಲಿ 19 ರನ್ ಸಿಡಿಸಿದರು. ಇನ್ನು ಜೈಸ್ವಾಲ್ ಕೇವಲ 13 ಬಾಲ್ನಲ್ಲಿ 30 ರನ್ ಬಾರಿಸಿದರು. ಕೇವಲ 18 ಬಾಲ್ಗಳಲ್ಲಿ 50 ರನ್ ಗಳಿಸಿ ಇಬ್ಬರು ವಿಶ್ವದಾಖಲೆಗೆ ಕಾರಣವಾದರು.
ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್ ರಿಟೈನ್.. ಫ್ರಾಂಚೈಸಿಯಿಂದ ಕ್ಯಾಪ್ಟನ್ಗೆ ಬಿಗ್ ಶಾಕ್?
ಸದ್ಯ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ 1 ವಿಕೆಟ್ಗೆ 127 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ. ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್ ಸಿಡಿಸಿ ಆಡುವಾಗ ಕ್ಲೀನ್ ಬೋಲ್ಡ್ ಆಗಿದ್ದಾರೆ. ಯಶಸ್ವಿ ಜೈಸ್ವಾಲ್ ಸೆಂಚುರಿ ಸಿಡಿಸುವ ಹೊಸ್ತಿನಲ್ಲಿದ್ದಾರೆ. ಶುಭ್ಮನ್ ಗಿಲ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ.
Rohit Sharma Carnage pic.twitter.com/4GdlNqSl5r
— The Ripper (@solleti_siva) September 30, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ