newsfirstkannada.com

‘ಡಿಯರ್​ ರಾಹುಲ್​ ಭಾಯ್​..’ ಇದ್ದಕ್ಕಿದ್ದಂತೆ ರೋಹಿತ್​ ಶರ್ಮಾ ಭಾವುಕ.. ಹೃದಯದಾಳದಿಂದ ಕ್ಯಾಪ್ಟನ್ ಹೇಳಿದ್ದೇನು?

Share :

Published July 10, 2024 at 1:02pm

  ನಿರ್ಗಮಿತ ಕೋಚ್​​ಗೆ ನಾಯಕನ ನುಡಿ ನಮನ

  ಒಂದೇ ಗುರಿ, ಎರಡು ಮನಸು, ಕಪ್​ ಗೆಲ್ಲೋ ಪಣ

  ಸೋತಾಗ ಸಂತೈಸಿ, ಗೆದ್ದಾಗ ಸಂಭ್ರಮಿಸಿದ್ದ ದ್ರಾವಿಡ್

ಇಷ್ಟು ದಿನ ವಿಶ್ವಕಪ್​ ಗೆದ್ದ ಸಂಭ್ರಮದಲ್ಲಿದ್ದ ರೋಹಿತ್​ ಶರ್ಮಾ ಇದ್ದಕ್ಕಿದ್ದಂತೆ ಭಾವುಕರಾಗಿದ್ದಾರೆ. ಕಳೆದ 3 ವರ್ಷದಿಂದ ಸಾಥ್​ ಕೊಟ್ಟಿದ್ದ, ಕೋಚ್​​ ರಾಹುಲ್​ ದ್ರಾವಿಡ್​ ನಿರ್ಗಮನ ರೋಹಿತ್​ ಶರ್ಮಾ ಮನಸನ್ನ ಕಲುಕಿದೆ. ನಿರ್ಗಮಿತ ಕೋಚ್​ಗೆ ಕ್ಯಾಪ್ಟನ್​ ರೋಹಿತ್​ ಬರೆದಿರೋ ಭಾವುಕ ಪತ್ರ ಎಂಥವರ ಮನಸ್ಸಿನ್ನೂ ತಟ್ಟುವಂತಿದೆ.

ಕೋಟ್ಯಂತರ ಭಾರತೀಯರ ಪ್ರಾಥನೆ ಫಲಿಸಿ, ಕನಸು ನನಸಾಗಿ 11 ದಿನಗಳಾಯ್ತು. ಬಾರ್ಬಡೋಸ್​​ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನ ರೋಹಿತ್​ ಶರ್ಮಾ ಪಡೆ ಹೆಮ್ಮೆಯಿಂದ ಹಾರಾಡಿಸಿದ ಆ ಕ್ಷಣ, ಭಾರತೀಯ ಕ್ರಿಕೆಟ್ ಲೋಕದ ಅವಿಸ್ಮರಣೀಯ ಕ್ಷಣ. ಟೀಮ್​ ಇಂಡಿಯಾ T20 ಚಾಂಪಿಯನ್​ ಆಗೋದ್ರೊಂದಿಗೆ ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. ದೇಶದ ಕೋಟಿ-ಕೋಟಿ ಮನಸುಗಳು ಖುಷಿಯಲ್ಲಿ ತೇಲಾಡಿವೆ. ಈ ಕೋಟಿ-ಕೋಟಿ ಜನರ ಖುಷಿಯ ಹಿಂದೆ ಈ ಇಬ್ಬರ ಶ್ರಮವಿದೆ. ಅವರೇ ಕೋಚ್ ರಾಹುಲ್​ ದ್ರಾವಿಡ್​ ಅಂಡ್ ಕ್ಯಾಪ್ಟನ್​ ರೋಹಿತ್​ ಶರ್ಮಾ

ಡಿಯರ್​ ರಾಹುಲ್​ ಭಾಯ್​.. ರೋಹಿತ್ ​ಭಾವುಕ
ವಿಶ್ವಕಪ್​ ಗೆಲುವಿನೊಂದಿಗೆ ಟೀಮ್​ ಇಂಡಿಯಾ ಜೊತೆಗಿನ ರಾಹುಲ್​ ದ್ರಾವಿಡ್​​ ನಂಟು ಅಂತ್ಯ ಕಂಡಿದೆ. ಕೋಚ್​ ಹುದ್ದೆಗೆ ದ್ರಾವಿಡ್​ ಗೆಲುವಿನ ವಿದಾಯ ಹೇಳಿದ್ದಾರೆ. ಇನ್ಮುಂದೆ ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನಲ್ಲಿ ದ್ರಾವಿಡ್​ ಇರಲ್ಲ. ರೋಹಿತ್​ಗೆ ದ್ರಾವಿಡ್​ ಭಾಯ್​ ಸಿಗಲ್ಲ. ಈ ವಿಚಾರ ಕ್ಯಾಪ್ಟನ್ ರೋಹಿತ್​ರನ್ನ ಭಾವುಕವಾಗಿಸಿದೆ. ದ್ರಾವಿಡ್​ಗೆ ರೋಹಿತ್​ ಬರೆದಿರೋ ಭಾವುಕ ಪತ್ರವೇ ಈ ಕಥೆಯನ್ನ ಹೇಳ್ತಿದೆ.

ಇದನ್ನೂ ಓದಿ:ಐದು ಕೋಟಿ ಹಣ ನನಗೆ ಬೇಡ ಎಂದ ದ್ರಾವಿಡ್.. ಅದಕ್ಕೆ ಕಾರಣವೂ ಇದೆ.. ಮತ್ತೊಮ್ಮೆ ಹೃದಯಗೆದ್ದ ಕನ್ನಡಿಗ..!

ಡಿಯರ್​​ ರಾಹುಲ್​ ಭಾಯ್​
ನನ್ನೊಳಗಿನ ಭಾವನೆಯನ್ನ ಹೇಳಲು ಸರಿಯಾದ ಪದಗಳನ್ನ ಬಳಸಲು ಪ್ರಯತ್ನಪಟ್ಟಿದ್ದೇನೆ. ಪ್ರಯತ್ನದಲ್ಲಿ ನಾನು ಯಶಸ್ಸು ಕಂಡಂತಿಲ್ಲ.

ಬೇರೆಯವರಂತೆ ನಾನೂ ಚಿಕ್ಕಂದಿನಿಂದಲೂ ನಿಮ್ಮನ್ನ ನೋಡಿಕೊಂಡು ಬೆಳೆದಿದ್ದೇನೆ. ನಾನು ತುಂಬಾ ಅದೃಷ್ಟವಂತ. ನಿಮ್ಮ ಜೊತೆ ಹತ್ತಿರದಿಂದ ಕೆಲಸ ಮಾಡೋ ಅವಕಾಶ ಸಿಕ್ತು. ಈ ಆಟ ಕಂಡ ಅಗ್ರಗಣ್ಯರು ನೀವು. ನಮ್ಮ ಕೋಚ್​ ಆದಾಗ ನಾವು ಆರಾಮವಾಗಿರಲಿ, ನಿಮ್ಮೊಂದಿಗೆ ನಮಗೆ ಅನಿಸಿದ್ದನ್ನ ಹೇಳಲಿ ಅನ್ನೋ ಕಾರಣಕ್ಕೆ ನಿಮ್ಮ ಸಾಧನೆ ಮತ್ತು ಪುರಸ್ಕಾರಗಳನ್ನು ಬಾಗಿಲಲ್ಲೇ ಬಿಟ್ಟು ಬಂದ್ರಿ. ಅದು ನಿಮ್ಮ ಮಾನವೀಯತೆ ಮತ್ತು ಈ ಆಟದ ಮೇಲೆ ನಿಮಗಿರೋ ಪ್ರೀತಿಯನ್ನ ತೋರಿಸುತ್ತೆ. ನಾನು ನಿಮ್ಮಿಂದ ತುಂಬಾ ಕಲಿತಿದ್ದೇನೆ. ನನ್ನ ಪತ್ನಿ ನಿಮ್ಮನ್ನ ‘ವರ್ಕಿಂಗ್​ ವೈಫ್​​’ ಎಂದು ಕರೆಯುತ್ತಾರೆ. ಹಾಗೆ ಕರೆಸಿಕೊಳ್ಳಲು ನನಗೂ ಇಷ್ಟ. ಇದೊಂದನ್ನ ನಾನು ಮಿಸ್​ ಮಾಡಿಕೊಳ್ಳುತ್ತೇನೆ. ನಾವಿಬ್ಬರು ಒಟ್ಟಾಗಿ ಸಾಧಿಸಿದ್ದಕ್ಕೆ ನನಗೆ ಖುಷಿಯಿದೆ. ರಾಹುಲ್​ ಭಾಯ್​​, ನಿಮ್ಮನ್ನ ನನ್ನ ಆತ್ಮೀಯ, ನನ್ನ ಕೋಚ್​ ಮತ್ತು ನನ್ನ ಗೆಳೆಯ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ-ರೋಹಿತ್​ ಶರ್ಮಾ, ಕ್ರಿಕೆಟಿಗ

ಒಂದೇ ಗುರಿ, ಎರಡು ಮನಸು..!
2013ರ ಚಾಂಪಿಯನ್ಸ್​ ಟ್ರೋಫಿ ಬಳಿಕ ಐಸಿಸಿ ಟ್ರೋಫಿ ಗೆಲ್ಲಲಾಗದ ಕೊರಗು ಟೀಮ್ ಇಂಡಿಯಾವನ್ನ ಬಿಡದೇ ಕಾಡಿತ್ತು. ಆ ಕೊರಗನ್ನ ನೀಗಿಸಿ, ಭಾರತದ ಧ್ವಜವನ್ನ ಹಾರಿಸೋ ಪಣ ತೊಟ್ಟಿತ್ತು ರೋಹಿತ್​ ಶರ್ಮಾ – ರಾಹುಲ್​ ದ್ರಾವಿಡ್​ ಜೋಡಿ. ಕೋಚ್​ – ಕ್ಯಾಪ್ಟನ್​ ಆದ ದಿನದಿಂದ ಐಸಿಸಿ ಟ್ರೋಫಿ ಗೆಲುವಿಗಾಗಿ ಹಾಕಿದ ಶ್ರಮ ಅಷ್ಟಿಷ್ಟಲ್ಲ. ಅನುಭವಿಸಿದ್ದು ನಿರಾಸೆಯನ್ನ.

ಇದನ್ನೂ ಓದಿ:IND vs ZIM: ಜೈಸ್ವಾಲ್, ದುಬೆ, ಸಂಜು ತಂಡಕ್ಕೆ ಎಂಟ್ರಿ.. ಪ್ಲೇಯಿಂಗ್​-11ನಿಂದ ಮೂವರು ಔಟ್​..?

ಸೋತಾಗ ಸಂತೈಸಿ, ಗೆದ್ದಾಗ ಸಂಭ್ರಮಿಸಿದ್ದ ದ್ರಾವಿಡ್​
2022ರ ಟಿ20 ವಿಶ್ವಕಪ್​ ಸೆಮಿಸ್​ನಲ್ಲಿ ಸೋತಾಗ ಡಗೌಟ್​ನಲ್ಲಿ ರೋಹಿತ್​ ಶರ್ಮಾ ಭಾವುಕರಾಗಿದ್ರು. ಅಂದು ರೋಹಿತ್​ ಬಿಕ್ಕಿ ಬಿಕ್ಕಿ ಅಳ್ತಿದ್ರು. ಕೋಚ್​ ದ್ರಾವಿಡ್​ರ ಕಣ್ಣಾಲಿಗಳೂ ತುಂಬಿದ್ವು. ಕ್ಯಾಪ್ಟನ್​ ಬಳಿ ಬಂದಿದ್ದ ದ್ರಾವಿಡ್ ಸಂತೈಸಿದ್ರು. 2022ರ T20 ವಿಶ್ವಕಪ್​ ಮಾತ್ರವಲ್ಲ.. ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​, ನಂತರ ತವರಲ್ಲೇ ನಡೆದ ಏಕದಿನ ವಿಶ್ವಕಪ್​ ಸೋತಾಗಲೂ ರೋಹಿತ್​ ಬೆನ್ನಿಗೆ ನಿಂತಿದ್ರು, ರಾಹುಲ್​ ದ್ರಾವಿಡ್​.!

ಪ್ರತಿ ಐಸಿಸಿ ಟೂರ್ನಿ ಸೋತಾಗಲೂ, ರೋಹಿತ್ ವಿರುದ್ಧ ಟೀಕೆಗಳ ಸುರಿಮಳೆ ಸುರಿದಿತ್ತು. ಆಗ ಕೋಚ್​ ದ್ರಾವಿಡ್​​ ಬ್ಯಾಕ್​ ಮಾಡಿದ್ರು. ನಾಯಕನ್ನ ಯಾವ ಕಾರಣಕ್ಕೂ ಬಿಟ್ಟುಕೊಟ್ಟಿರಲಿಲ್ಲ. ಇಬ್ಬರ ನಡುವಿನ ಭಾಂದವ್ಯ ಹಾಗಿತ್ತು.

3ಕ್ಕೆ ಮುಕ್ತಾಯ.. 4ನೇ ಬಾರಿ ದಿಗ್ವಿಜಯ
3 ಐಸಿಸಿ ಟೂರ್ನಿ ಸೋತ್ರೂ ಇಬ್ಬರಲ್ಲಿ ಗೆಲುವಿನ ಹಠ, ಸಾಧಿಸೋ ಛಲ ಕಡಿಮೆಯಾಗಿರಲಿಲ್ಲ. 3ಕ್ಕೆ ಮುಕ್ತಾಯ ಹಾಡೋ ಪಣ ತೊಟ್ಟು ಹೋರಾಡಿದ ಈ ಜೋಡಿ ಕೊನೆಯಲ್ಲಿ ಯಶಸ್ಸು ಕಂಡಿದೆ. ಟಿ20 ವಿಶ್ವಕಪ್​​ ಗೆದ್ದು ಭಾರತವೇ ಸಂಭ್ರಮದಲ್ಲಿ ತೇಲುವಂತೆ ಮಾಡಿದೆ. ರಾಹುಲ್​ ದ್ರಾವಿಡ್​​ರ ನಿವೃತ್ತಿ, ರೋಹಿತ್​ ಶರ್ಮಾ ಮನಸ್ಸಲ್ಲಿ ಎಷ್ಟು ನೋವು ತಂದಿದ್ಯೋ.. ಅಷ್ಟೇ ಕ್ರಿಕೆಟ್​ ಅಭಿಮಾನಿಗಳಲ್ಲೂ ಬೇಸರ ತರಿಸಿರೋದು ಸುಳ್ಳಲ್ಲ. ಹಳೆ ನೀರು ಹರಿಯಲೇಬೇಕು.. ಹೊಸ ನೀರು ಬರಲೇಬೇಕು.. ಕಾಲದ ನಿಯಮವೇ ಹಾಗಲ್ಲವೇ..?

ಇದನ್ನೂ ಓದಿ:ಹೈಕೋರ್ಟ್​​ನಲ್ಲಿ ದರ್ಶನ್​​ಗೆ ಭಾರೀ ನಿರಾಸೆ.. ಜುಲೈ 18 ವರೆಗೆ ಕಾಯಲೇಬೇಕು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಡಿಯರ್​ ರಾಹುಲ್​ ಭಾಯ್​..’ ಇದ್ದಕ್ಕಿದ್ದಂತೆ ರೋಹಿತ್​ ಶರ್ಮಾ ಭಾವುಕ.. ಹೃದಯದಾಳದಿಂದ ಕ್ಯಾಪ್ಟನ್ ಹೇಳಿದ್ದೇನು?

https://newsfirstlive.com/wp-content/uploads/2024/07/Rohit-sharma-15.jpg

Load More