/newsfirstlive-kannada/media/post_attachments/wp-content/uploads/2024/08/ROHIT-SHARMA-1-1.jpg)
ಇಂಡಿಯಾದ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಸಿಯೆಟ್ ಕ್ರಿಕೆಟ್ ಪ್ರಶಸ್ತಿ ಸಮಾರಂಭದಲ್ಲಿ (ceat cricket awards 2024) ಕಾಣಿಸಿಕೊಂಡರು. ರೋಹಿತ್ ಜೊತೆ ಪತ್ನಿ ರಿತಿಕಾ ಸಜ್ದೇಹ್ ಕೂಡ ಆಗಮಿಸಿದ್ದರು. ಈ ವೇಳೆ ರಿತಿಕಾಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.
ವಿಡಿಯೋದಲ್ಲಿ ರಿತಿಕಾ ಮತ್ತೊಮ್ಮೆ ಗರ್ಭಿಣಿಯಾದಂತೆ ಕಾಣ್ತಿದೆ. ಹಾಗಾಗಿ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ, ಮತ್ತೆ ತಂದೆ ಆಗುತ್ತಿದ್ದಾರೆ ಎಂದು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಅಲ್ಲದೇ ರಿತಿಕಾ ಗರ್ಭಿಣಿ ಆಗಿರುವ ಬಗ್ಗೆ ಹತ್ತಿರದ ಸಂಬಂಧಿಯೊಬ್ಬರು ಖಚಿತಪಡಿಸಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಆದರೆ ರೋಹಿತ್ ಹಾಗೂ ರಿತಿಕಾ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. 2018 ರಲ್ಲಿ ರೋಹಿತ್-ರಿತಿಕಾಗೆ ಸಮೈರಾ ಎಂಬ ಮಗಳು ಹುಟ್ಟಿದ್ದಾಳೆ.
ಇದನ್ನೂ ಓದಿ:ನಿವೃತ್ತಿ ವದಂತಿ ಬೆನ್ನಲ್ಲೇ.. ಮತ್ತೊಂದು ಬಿಗ್ ಸ್ಟೇಟ್ಮೆಂಟ್ ಕೊಟ್ಟ KL ರಾಹುಲ್..!
ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
2008ರಲ್ಲಿ ಜಾಹೀರಾತಿನ ಚಿತ್ರೀಕರಣದ ವೇಳೆ ರೋಹಿತ್ ಶರ್ಮಾ ಮೊದಲ ಬಾರಿಗೆ ರಿತಿಕಾರನ್ನು ಭೇಟಿಯಾಗಿದ್ದರು. ರಿತಿಕಾ ಸ್ಪೋರ್ಟ್ಸ್ ಈವೆಂಟ್ ಮ್ಯಾನೇಜರ್ ಆಗಿ ಚಿತ್ರೀಕರಣದಲ್ಲಿ ಹಾಜರಿದ್ದರು. ಈ ವೇಳೆ ಆಗಿದ್ದ ಪರಿಚಯ ಸ್ನೇಹವಾಗಿ, ಪ್ರೀತಿಯಾಗಿ 2015ರಲ್ಲಿ ಮದುವೆಯಾಗಿದ್ದರು.
ಇದನ್ನೂ ಓದಿ:IND vs BAN: ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಚಾನ್ಸ್..?
Junior Hitman 🔜🥹🧿🥹😭 pic.twitter.com/7CQCXsHy2i
— 𝐑𝐮𝐬𝐡𝐢𝐢𝐢⁴⁵ (@rushiii_12) August 23, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್