newsfirstkannada.com

ರೋಹಿತ್ ಲೇಜಿಯಾಗಿ, ಕ್ಯಾಸುವೆಲ್ ಆಗಿ ಕಾಣುತ್ತಾರೆ.. ಆದ್ರೆ ಸತ್ಯವಾಗಲೂ..; ಅಂಪೈರ್ ಬಿಗ್​ ಸ್ಟೇಟ್​ಮೆಂಟ್!

Share :

Published September 3, 2024 at 2:50pm

    ಹಿಟ್​ಮ್ಯಾನ್​ ಕುರಿತು ಭಾರತದ ಅಂಪೈರ್ ಇನ್ನೇನು ಹೇಳಿದರು.?

    ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್ ಮ್ಯೂಸಿಕ್​​ನಂತೆ ಇರುತ್ತೆ

    ನಿಜವಾಗ್ಲೂ ರೋಹಿತ್ ಲೇಜಿಯಾಗಿ ಇಲ್ವಾ, ಸ್ಮಾರ್ಟ್​ ಪ್ಲೇಯರ್..?

ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕ. ಯಾವಾಗಲೂ ಮೈದಾನದಲ್ಲಿ ಶಾಂತಸ್ವರೂಪದಿಂದ ಇರುವ ಹಿಟ್​ಮ್ಯಾನ್ ಕ್ಯಾಪ್ಟನ್ಸಿಯಲ್ಲಿ ಸಖತ್ ಚುರುಕಾಗಿ ಇರುತ್ತಾರಂತೆ. ಅವರು ನೋಡಲು ಲೇಜಿಯಾಗಿ ಕಾಣುತ್ತಾರೆ ಅಷ್ಟೇ. ಆದರೆ ಅವರು ಆಡುವ ಪಂದ್ಯದಲ್ಲಿ ಅಂಪೈರಿಂಗ್ ಮಾಡುವುದು ಸಖತ್ ಸುಲಭ. ರೋಹಿತ್ ಶರ್ಮಾ ಸ್ಮಾರ್ಟ್ ಹಾಗೂ ಬಾಲ್​ ಸೆನ್ಸ್​ ಗೊತ್ತಿರುವ ಪ್ಲೇಯರ್ ಎಂದು ಭಾರತದ ಅಂಪೈರ್ ಒಬ್ಬರು ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸೂರ್ಯಕುಮಾರ್​​ಗೆ ಬಿಗ್ ಶಾಕ್.. ದುಲೀಪ್ ಟ್ರೋಫಿಯಲ್ಲಿ ಮಿಸ್ಟರ್ 360 ಬ್ಯಾಟ್​ ಬೀಸಲ್ವಾ, ಯಾಕೆ?

ಇಂಟರ್​​ವ್ಯೂವ್​ನಲ್ಲಿ ಮಾತನಾಡಿದ ಭಾರತದ ಅಂಪೈರ್ ಅನಿಲ್ ಚೌಧರಿ, ಟೀಮ್ ಇಂಡಿಯಾದ ಕ್ಯಾಪ್ಟನ್​ ರೋಹಿತ್ ಶರ್ಮಾ ಕ್ಯಾಸುವೆಲ್​ ಆಗಿ ಕಾಣುತ್ತಾರೆ. ಬಟ್ ಅವರು ತುಂಬಾ ಶಾರ್ಪ್ ಹಾಗೂ ಕ್ರಿಕೆಟ್​ನ ಒಳನೋಟದ ಬಗ್ಗೆ ತಿಳಿದುಕೊಂಡ ಸ್ಮಾರ್ಟ್​ ಪ್ಲೇಯರ್. ಕ್ರಿಕೆಟ್​ನ ಐಕ್ಯೂ ಬಗ್ಗೆ ರೋಹಿತ್ ಚೆನ್ನಾಗಿ ತಿಳಿದುಕೊಂಡಿದ್ದಾರೆ. ನಿಜವಾಗಲೂ ಅವರು ಕ್ಯಾಸುವೆಲ್ ಅಥವಾ ಲೇಜಿಯಾಗಿ ಇಲ್ಲ. ಇಂಟಲಿಜೆಂಟ್ ಪ್ಲೇಯರ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: 6 ಬಾಲ್​ಗೆ 6 ಸಿಕ್ಸ್ ಸಿಡಿಸಿದ ಆರ್ಯ​​.. RCBಗೆ ಟ್ರೋಫಿ ಗೆಲ್ಲಿಸಿ ಕೊಡುವುದೇ ನನ್ನ ಕನಸು- ಯಂಗ್ ಪ್ಲೇಯರ್

ರೋಹಿತ್ ಆಡುವಾಗ ಅಂಪೈರಿಂಗ್ ಮಾಡುವುದು ತುಂಬಾ ಈಜಿ. ಔಟ್, ನಾಟೌಟ್ ಬಗ್ಗೆನೇ ಪಂದ್ಯ ಮುಗಿಯುವವರೆಗೂ ಮಾತಾಡಲ್ಲ. ಔಟ್, ನಾಟೌಟ್ ಇರುವುದನ್ನು ನೇರ ನೇರ ಹೇಳಿ ಹೋಗುತ್ತಾರೆ. ಅಲ್ಲೇ ಪಿಚ್​​ನಲ್ಲಿ ಕುಟ್​.. ಕುಟ್..​ ಎಂದು ಬ್ಯಾಟ್​ ಬೀಸಲ್ಲ. ಹೊಡಿಬಡಿ ಎಂದು ಸಿಕ್ಸ್, ಫೋರ್ ಬಾರಿಸಿ ಬಿಡುತ್ತಾರೆ. ರೋಹಿತ್ ಶರ್ಮಾ ನ್ಯಾಚುರಲ್ ಆಗಿರುತ್ತಾರೆ. ಅವರ ಫುಟ್​ವರ್ಕ್​ ಚೆನ್ನಾಗಿದೆ. ಎಲ್ಲ ಗೊತ್ತಿದೆ ಎಂದು ಮುಂದೆ ಓಡಲ್ಲ. ಹಿಂದೆ ನಿಂತು ಬಾಲ್​ಗಾಗಿ ವೇಟ್ ಮಾಡುತ್ತಾರೆ. ಬಾಲ್​ ಸೆನ್ಸ್​ ಸಖತ್ ಆಗಿ ಗೊತ್ತಿದೆ. ಹೀಗಾಗಿಯೇ ಯಾವ ಬಾಲ್ ಎಲ್ಲಿ, ಹೇಗೆ ಹೋಗುತ್ತೆಂದು ಸೆನ್ಸ್ ಮಾಡಿ ಸಿಕ್ಸ್​, ಫೋರ್ ಬಾರಿಸುತ್ತಾರೆ ಎಂದಿದ್ದಾರೆ.

ನಾನು ಒಂದು ಮ್ಯಾಚ್​ಗೆ ಟಿವಿ ಅಂಪೈರ್ ಆಗಿದ್ದೆ. ಆ ಪಂದ್ಯದಲ್ಲಿ ರೋಹಿತ್ 200ಕ್ಕೂ ಅಧಿಕ ರನ್​ ಗಳಿಸಿ ಆಡುತ್ತಿದ್ದರು. ಯಾರ್ಕರ್ ಬಾಲ್​ಗೂ ಸಿಕ್ಸ್​ ಸಿಡಿಸುತ್ತಿದ್ದರು. ಅದು ಅಲ್ಲಿದ್ದವರೆಗೆಲ್ಲ ಆಶ್ವರ್ಯ ಎನಿಸಿತ್ತು. ಅವರು ಲೇಜಿ ಆಗಿ ಕಾಣುತ್ತಾರೆ. ಆದ್ರೆ ತುಂಬಾ ಐಡಿಯಾಗಳಿದ್ದಾವೆ. ಡಿಫ್ರೆಂಟ್ ಕ್ಲಾಸಿ ಪ್ಲೇಯರ್. ಬಾಲ್ ಸ್ವಿಂಗ್ ಆಗುವುದರ ಬಗ್ಗೆಯೂ ಐಡಿಯಾ ಇದೆ. ರೋಹಿತ್ ಒನ್ ಮ್ಯಾನ್ ಆರ್ಮಿ ಇದ್ದಂಗೆ. ರೋಹಿತ್ ಬ್ಯಾಟಿಂಗ್ ಮ್ಯೂಸಿಕ್​ನಂತೆ ಇರುತ್ತೆ. ಎಲ್ಲೋ ಕುಳಿತವನು ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದರೆ ಬಂದು ನೋಡುತ್ತಾನೆ ಎಂದು ಅಂಪೈರ್ ಅನಿಲ್ ಚೌಧರಿ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್ ಲೇಜಿಯಾಗಿ, ಕ್ಯಾಸುವೆಲ್ ಆಗಿ ಕಾಣುತ್ತಾರೆ.. ಆದ್ರೆ ಸತ್ಯವಾಗಲೂ..; ಅಂಪೈರ್ ಬಿಗ್​ ಸ್ಟೇಟ್​ಮೆಂಟ್!

https://newsfirstlive.com/wp-content/uploads/2024/09/ROHIT_SHARMA.jpg

Load More