newsfirstkannada.com

6 ಬಾಲ್​ಗೆ 6 ಸಿಕ್ಸ್ ಸಿಡಿಸಿದ ಆರ್ಯ​​.. RCBಗೆ ಟ್ರೋಫಿ ಗೆಲ್ಲಿಸಿ ಕೊಡುವುದೇ ನನ್ನ ಕನಸು- ಯಂಗ್ ಪ್ಲೇಯರ್

Share :

Published September 3, 2024 at 12:05pm

    ಒಂದೇ ಓವರ್​​ನಲ್ಲಿ 6 ಸಿಕ್ಸ್​​, ಕ್ರಿಕೆಟ್​​​ ಲೋಕ ಫುಲ್ ಶಾಕ್

    RCB ಪರ ಆಡುವುದೇ ಮುಖ್ಯ ಗುರಿ- ಯುವ ಪ್ಲೇಯರ್

    576 ರನ್​​​, ಒಂದೇ ಓವರ್​ನಲ್ಲಿ ಸತತ 6 ಸಿಕ್ಸರ್​ಗಳ ದಾಖಲೆ

ಸುನಾಮಿ, ಸುಂಟರಗಾಳಿ ಒಟ್ಟಿಗೆ ಬರೋದೆ ಕಮ್ಮಿ. ಆದ್ರೀಗ ಅದೆರಡು ಒಟ್ಟಾಗಿ ಕ್ರಿಕೆಟ್ ಲೋಕಕ್ಕೆ ಅಪ್ಪಳಿಸಿದೆ. ಆ ನಯಾ ಸುನಾಮಿ, ಸುಂಟರಗಾಳಿನೇ ಪ್ರಿಯಾಂಶ್​​​ ಆರ್ಯ. 3 ದಿನದ ಹಿಂದೆ ಈ ಡೆಡ್ಲಿ ಹಿಟ್ಟರ್​​ ಹೆಸರು ಯಾರಿಗೂ ಗೊತ್ತಿರ್ಲಿಲ್ಲ. ಆದ್ರೀಗ ಎಲ್ಲರ ಬಾಯಲ್ಲಿ ಈತನದ್ದೇ ಆರಾಧನೆ. ಈತನದ್ದೇ ಜಪ. ಆ ಮಟ್ಟಿಗೆ ಹವಾ ಸೃಷ್ಟಿಸಿದ್ದಾನೆ. ಇದೀಗ ಈ ಚಂಡ ಪ್ರಚಂಡನ ಮೇಲೆ ಐಪಿಎಲ್​ನ ಬಲಿಷ್ಠ ತಂಡ ಕಣ್ಣಿಟ್ಟಿದೆ. ಆ ಟೀಮ್​ ಯಾವುದು?. ಪ್ರಿಯಾಂಶ್​​ ತೋಳ್ಬಲದ ಪರಾಕ್ರಮವೇನು?.

T20 ಕ್ರಿಕೆಟ್​ ಅಂದ್ರೇನೆ ಹೊಡಿಬಡಿ ಆಟ. ಇಲ್ಲಿ ಸುನಾಮಿ, ಸುಂಟರಗಾಳಿಯಂತ ಬ್ಯಾಟಿಂಗ್​​ ಆರ್ಭಟ ಹೊಸತೇನಲ್ಲ. ಆದ್ರೆ ಇವೆರಡು ಒಟ್ಟಿಗೆ ಕಾಣಿಸಿಕೊಳ್ಳೋದು ವಿರಳ. ಆದ್ರೀಗ ಅವೆರಡನ್ನ ಒಟ್ಟೊಟ್ಟಿಗೆ ನೋಡುವ ಭಾಗ್ಯ ಕ್ರಿಕೆಟ್ ಪ್ರೇಮಿಗಳಿಗೆ ಬಂದೊದಗಿದೆ. ಚುಟುಕು ಕ್ರಿಕೆಟ್​​​ ಲೋಕಕ್ಕೆ ನಯಾ ತೂಫಾನ್​​ ಎಂಟ್ರಿಕೊಟ್ಟಿದ್ದಾನೆ. ಅಂದಹಾಗೆ ಈ ಹೊಸ ತೂಫಾನ್​ ಮತ್ಯಾರು ಅಲ್ಲ, ಪ್ರಿಯಾಂಶ್​​​ ಆರ್ಯ.

ಇದನ್ನೂ ಓದಿ: ಕೊಹ್ಲಿ ಬಳಿ ಎಷ್ಟು ಐಷಾರಾಮಿ ಕಾರುಗಳಿವೆ.. ಅರಮನೆ ರೀತಿಯ ₹80 ಕೋಟಿ ನಿವಾಸ ಇರುವುದು ಎಲ್ಲಿ?

ಫೈರಿ ಯಂಗ್​​ಗನ್​ ಮೇಲೆ ರೆಡ್​​ ಆರ್ಮಿ ಕಣ್ಣಿಟ್ಟಿದ್ದೇಕೆ..?

ಜಂಟಲ್​​​ಮನ್​​ ಗೇಮ್​​​.. ಇಲ್ಲಿ ಬ್ಯಾಟ್​​​​ ಇರೋದೆ ದಂಡಿಸೋಕೆ ಅನ್ನೋ ಮಾತಿದೆ. ಅದನ್ನ 23ರ ಆಂಗ್ರಿ ಯಂಗ್​​ಮ್ಯಾನ್​ ಪ್ರಿಯಾಂಶ್​ ಆರ್ಯ ಅಕ್ಷರಶಃ ನಿಜವಾಗಿಸಿದ್ದಾರೆ. ಡೆಲ್ಲಿ ಪ್ರೀಮಿಯರ್ ಲೀಗ್​ನಲ್ಲಿ ಒಂದೇ ಓವರ್​ನಲ್ಲಿ ಸತತ 6 ಸಿಕ್ಸರ್​​​ಗಳನ್ನ ಸಿಡಿಸಿ ಕ್ರಿಕೆಟ್ ಲೋಕವನ್ನೇ ನಿಬ್ಬೆರಗಾಗಿಸಿದ್ದಾರೆ. ಕಳೆದೆರಡು ದಿನಗಳಿಂದ ಈತ ಸೋಷಿಯಲ್ ಮೀಡಿಯಾವನ್ನ ಸಂಪೂರ್ಣ ಆವರಿಸಿದ್ದಾನೆ.

DPL ನಲ್ಲಿ ಧೂಳೆಬ್ಬಿಸಿದ ಸಿಡಿಗುಂಡು ಪ್ರಿಯಾಂಶ್ ಆರ್ಯ..!

ಅಬ್ಬಬ್ಬಾ ಅದೇನ್​ ಬ್ಯಾಟಿಂಗ್ ಗುರು?. ಪವರ್​​ ಹಿಟ್ಟಿಂಗ್​​​​​​​​​​​​, ಬ್ಯಾಟಿಂಗ್ ಸ್ಕಿಲ್​​​​​, ಮುನ್ನುಗ್ಗಿ ಹೋಗಿ ದಂಡಿಸುವ ಪರಿ, ಮಾರುದ್ದದ ಸಿಕ್ಸರ್​​ಗಳು ನಿಜಕ್ಕೂ ಬೆಂಕಿನೇ ಬಿಡಿ. ಇದು ಬರೀ ಒಂದು ಪಂದ್ಯದ ವಂಡರ್ ಕಥೆಯಲ್ಲ. ಇಡೀ ಡೆಲ್ಲಿ ಪ್ರೀಮಿಯರ್​​​​​ ಲೀಗ್​​​​ನ ಉದ್ದಕ್ಕೂ ಪ್ರಿಯಾಂಶ್ ಆರ್ಯ ಹೀಗೆ​​​ ಬ್ಯಾಟಿಂಗ್ ರೌದ್ರ ನರ್ತನ ನಡೆಸಿದ್ದಾರೆ.

DPL ನಲ್ಲಿ ಪ್ರಿಯಾಂಶ್​​​ ಆರ್ಯ

ಸದ್ಯ ನಡೆಯುತ್ತಿರುವ ಡೆಲ್ಲಿ ಪ್ರೀಮಿಯರ್ ಲೀಗ್​​ನಲ್ಲಿ ಪ್ರಿಯಾಂಶ್​​ ಆರ್ಯ 8 ಪಂದ್ಯವಾಡಿ ಬರೋಬ್ಬರಿ 576 ರನ್ ಸಿಡಿಸಿದ್ದಾರೆ. ಇವರೇ ಅತ್ಯಧಿಕ ರನ್ ಗಳಿಸಿದ್ದಾರೆ. 4 ಹಾಫ್​​ಸೆಂಚುರಿ ಹಾಗೂ 2 ಅಮೋಘ ಶತಕ ಮೂಡಿ ಬಂದಿವೆ. ಇನ್ನೂ 120 ರನ್ ಇವರ ​​ ಬೆಸ್ಟ್​ ಸ್ಕೋರ್​​​​​ ಆಗಿದೆ.

ಹರಾಜಿನಲ್ಲಿ ಪ್ರಿಯಾಂಶ್​​ ಆರ್​ಸಿಬಿಯ ಮೇನ್ ಟಾರ್ಗೆಟ್​​..

576 ರನ್​​​, ಒಂದೇ ಓವರ್​ನಲ್ಲಿ ಸತತ 6 ಸಿಕ್ಸರ್​ಗಳ ದಾಖಲೆ. ಇದಕ್ಕೆ ಯಾರು ಇಂಪ್ರೆಸ್​ ಆಗಲ್ಲ ಹೇಳಿ?. ಅಸಲಿಗೆ ಐಪಿಎಲ್​ ಆಟಕ್ಕೆ ಬೇಕಿರೋದೆ ಇಂತ ಡಿಸ್ಟ್ರಿಕ್ಟಿವ್​ ಬ್ಯಾಟ್ಸ್​​ಮನ್​​. ಡಿಸೆಂಬರ್​​ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಬಲಿಷ್ಠ ಸೈನ್ ಕಟ್ಟುವಿಕೆಗೆ ಆರ್​ಸಿಬಿ ಎದುರು ನೋಡ್ತಿದ್ದು, ಪ್ರಿಯಾಂಶ್​​​ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಈಗಿನಿಂದಲೇ ತೆರೆಮರೆಯಲ್ಲೆ ಭರ್ಜರಿ ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ. ಹರಾಜಿನಲ್ಲಿ ರೆಡ್​ ಆರ್ಮಿ 23ರ ಯಂಗ್​ಟೈಗರ್ ಟಾರ್ಗೆಟ್​​ ಮಾಡಲು ಅನೇಕ ಕಾರಣಗಳಿವೆ.

RCB ಗೆ ಪ್ರಿಯಾಂಶ್​​​​ ಮೇಲೆ ಕಣ್ಣೇಕೆ..?

  • ಆಕ್ರಮಣಕಾರಿ ಶೈಲಿ ಆಟ ಪವರ್​ ಪ್ಲೇನಲ್ಲಿ ನೆರವು
  • ಲೆಫ್ಟಿ-ರೈಟಿ ಓಪನಿಂಗ್ ಕಾಂಬಿನೇಷನ್​ ತಂಡಕ್ಕೆ ನೆರವು
  • ಟಾಪ್​​​​ ಆರ್ಡರ್​ನಲ್ಲಿ ಎಡಗೈ ಬ್ಯಾಟರ್ಸ್​ ಕೊರತೆ ದೂರ
  • ಚಿನ್ನಸ್ವಾಮಿ ಸಣ್ಣ ಮೈದಾನ ಇದರ ಲಾಭ ಪಡೆಯಬಹುದು
  • ಭವಿಷ್ಯದ ದೃಷ್ಟಿಯಿಂದ ಪ್ರಿಯಾಂಶ್​​​​ ಖರೀದಿ ಉತ್ತಮ

ಇದನ್ನೂ ಓದಿ: ಯಂಗ್ ಕ್ರಿಕೆಟ್​ ಪ್ಲೇಯರ್ ಹೃದಯಲ್ಲಿ ಹೋಲ್​.. U-19 ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ಕಮ್​ಬ್ಯಾಕ್​ ಯಾವಾಗ?

ಕೊಹ್ಲಿ ಫೇವರಿಟ್​​​.. RCBಗೆ ಟ್ರೋಫಿ ಗೆಲ್ಲಿಸುವ ಕನಸು..!

ಬೆಂಕಿ ಬ್ಯಾಟರ್​​​ ಪ್ರಿಯಾಂಶ್​​​ ಆರ್​ಸಿಬಿಯ ದೊಡ್ಡ ಅಭಿಮಾನಿ. ರೆಡ್ ಆರ್ಮಿಗೆ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡಬೇಕೆಂಬ ಕನಸು ಕಾಣ್ತಿದ್ದಾರೆ.

ಯಂಗ್​ಗನ್​​​ ಪ್ರಿಯಾಂಶ್​​ಗೆ ಆರ್​ಸಿಬಿ ಪರ ಆಡಬೇಕೆಂಬ ಆಸೆ ಇದೆ. ಇನ್ನೊಂದೆಡೆ ಆರ್​ಸಿಬಿ ಫ್ರಾಂಚೈಸಿ ಕೂಡ ಡೇಂಜರಸ್​​​​​ ಲೆಫ್ಟಿ ಬ್ಯಾಟರ್​​ನನ್ನ ಸೆಳೆಯಲು ಒಲವು ತೋರಿದೆ ಎನ್ನಲಾಗ್ತಿದೆ. ಆದ್ರೆ ಮೆಗಾ ಹರಾಜಿನಲ್ಲಿ ರೆಡ್​ ಆರ್ಮಿ ನಿಜಕ್ಕೂ ಆರ್ಯರನ್ನ ಬಿಡ್ ಮಾಡುತ್ತಾ?. ಇಲ್ಲ ಬೇರೆ ಫ್ರಾಂಚೈಸಿಗಳ ಪಾಲಾಗ್ತಾರಾ ಅನ್ನೋದಕ್ಕೆ ಇನ್ನೂ ಸ್ವಲ್ಪ ದಿನದಲ್ಲೇ ಆನ್ಸರ್​ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6 ಬಾಲ್​ಗೆ 6 ಸಿಕ್ಸ್ ಸಿಡಿಸಿದ ಆರ್ಯ​​.. RCBಗೆ ಟ್ರೋಫಿ ಗೆಲ್ಲಿಸಿ ಕೊಡುವುದೇ ನನ್ನ ಕನಸು- ಯಂಗ್ ಪ್ಲೇಯರ್

https://newsfirstlive.com/wp-content/uploads/2024/09/priyansh_arya.jpg

Load More