newsfirstkannada.com

ಕೊಹ್ಲಿ ಬಳಿ ಎಷ್ಟು ಐಷಾರಾಮಿ ಕಾರುಗಳಿವೆ.. ಅರಮನೆ ರೀತಿಯ ₹80 ಕೋಟಿ ನಿವಾಸ ಇರುವುದು ಎಲ್ಲಿ?

Share :

Published September 1, 2024 at 1:14pm

    ಮುಂಬೈಯಲ್ಲೂ ದುಬಾರಿ ಮನೆ ಖರೀದಿಸಿರುವ ವಿರಾಟ್​

    ವಿರಾಟ್ ಕೊಹ್ಲಿ ಕೈಗೆ ಕಟ್ಟುವ ವಾಚ್​ ಬೆಲೆ ಎಷ್ಟು ಗೊತ್ತಾ.?

    ಫುಟ್ಬಾಲ್ ಟೀಮ್ ಅನ್ನು ಖರೀದಿಸಿರುವ ಸ್ಟಾರ್ ಪ್ಲೇಯರ್

ನಿಮಗೆಲ್ಲಾ ವಿರಾಟ್ ಕೊಹ್ಲಿ ಯಾರು, ಅವರ ಸಾಧನೆಗಳೇನು? ಅವರ ಪ್ರಖ್ಯಾತಿ ಎಷ್ಟು ಅನ್ನೋದು ಗೊತ್ತಿದೆ. ಆದರೆ ಅವರ ಬಳಸುವ 10 ದುಬಾರಿ ವಸ್ತುಗಳ ಬಗ್ಗೆ ನಿಮಗೆ ಗೊತ್ತಿದೆಯಾ? ವಿಶ್ವದ ಶ್ರೀಮಂತ ಕ್ರಿಕೆಟಿಗನ LUXYRIOUS ಲೈಫ್​​ಸ್ಟೈಲ್ ಇಲ್ಲಿದೆ.

ಕೊಹ್ಲಿ ವಿಶ್ವದ ಅಗ್ರಗಣ್ಯ ಕ್ರಿಕೆಟಿಗ. ಮನೋಜ್ಞ ಆಟದಿಂದ ಕ್ರಿಕೆಟ್ ಲೋಕದ ಚಕ್ರಾಧಿಪತಿಯಾಗಿ ಮೆರೆದಾಡ್ತಿದ್ದಾರೆ. ವಿರಾಟ್​ ದೇಶದ 2ನೇ ಶ್ರೀಮಂತ ಕ್ರಿಕೆಟರ್​​. ಒಂದಲ್ಲ, ಹತ್ತಲ್ಲ ಬರೋಬ್ಬರಿ 1,050 ಕೋಟಿ ರೂಪಾಯಿ ಒಡೆಯ. ಅಂದ್ಮೇಲೆ ಐಷಾರಾಮಿ ಜೀವನ ನಡೆಸದೇ ಇರ್ತಾರಾ ಹೇಳಿ? ಅವರದ್ದು ಅತಿ ವರ್ಣರಂಜಿತ ಜೀವನ.

ಇದನ್ನೂ ಓದಿ: Avani Lekhara: ಚಿನ್ನದ ಪದಕ ಗೆದ್ದು ದಾಖಲೆ ಬರೆದ ಪ್ಯಾರಾ ಒಲಿಂಪಿಯನ್.. ಯಾರು ಈ ಅವನಿ ಲೇಖರ?

ಗುರುಗ್ರಾಮ್​​ನಲ್ಲಿ 80 ಕೋಟಿಯ ಭವ್ಯ ಬಂಗಲೆ..!

ಅದ್ಧೂರಿ ಲೈಫ್​​ಸ್ಟೈಲ್​ ಅನ್ನ ಇಷ್ಟಪಡುವ ಕಿಂಗ್ ಕೊಹ್ಲಿ ಹರಿಯಾಣದ ಗುರುಗ್ರಾಮ್​ನಲ್ಲಿ ಭವ್ಯ ಬಂಗಲೆಯನ್ನ ನಿರ್ಮಿಸಿದ್ದಾರೆ. ಇದರ ವೆಚ್ಚ 80 ಕೋಟಿ ರೂಪಾಯಿ. ಅರಮನೆಯಂತೆ ಕಾಣುವ ಈ ಬಂಗಲೆಯನ್ನ ಮರದ ಪೀಠೋಪಕರಣಗಳಿಂದ ವಿನ್ಯಾಸಗೊಳಿಸಲಾಗಿದೆ.

4.6 ಕೋಟಿಯ ಐಷಾರಾಮಿ ರೊಲೆಕ್ಸ್​​​ ಡೇಟೋನಾ ವಾಚ್​​​​..!

ಇದು ಅಚ್ಚರಿ ಅನ್ನಿಸಿದ್ರೂ ಸತ್ಯ. ಸೆಂಚುರಿ ಸ್ಪೆಶಲಿಸ್ಟ್ ಕೊಹ್ಲಿ 4.6 ಕೋಟಿ ಬೆಲೆ ಬಾಳುವ ರೊಲೆಕ್ಸ್​​​ ಡೇಟೋನಾ ವಾಚ್​​ ಅನ್ನ ಕಟ್ಟುತ್ತಾರೆ. ಇದು ಅತ್ಯಂತ ಐಷಾರಾಮಿ ವಾಚ್​​ಗಳಲ್ಲಿ ಒಂದೆನಿಸಿಕೊಂಡಿದೆ.

3.97 ಕೋಟಿಯ ದುಬಾರಿ ಬೆಂಟ್ಲಿ ಕಾರಿನಲ್ಲಿ ಓಡಾಟ..!

ವಿಶ್ವಮೆಚ್ಚಿದ ವಿರಾಟ್ ಮನೆಯಲ್ಲಿ ಐಷಾರಾಮಿ ಕಾರುಗಳಿವೆ. ಆ ಪೈಕಿ ಬೆಂಟ್ಲಿ ಫ್ಲೈಯಿಂಗ್​​​ ಸ್ಪರ್​​ ಕಾರ್ ಹೆಚ್ಚು ದುಬಾರಿಯದ್ದಾಗಿದೆ. 2019ರಲ್ಲಿ ಬರೋಬ್ಬರಿ 3.97 ಕೋಟಿ ರೂಪಾಯಿ ನೀಡಿ ಈ ಕಾರನ್ನ ಖರೀದಿಸಿದ್ದಾರೆ. ಇದ್ರಲ್ಲಿ ಅಟೋಮೆಟಿಕ್​​ ಕ್ಕೈಮೇಟ್​ ಕಂಟ್ರೋಲ್​​ ಸೇರಿದಂತೆ ಅನೇಕ ಉತ್ಕೃಷ್ಟ ಪೀಚರ್ಸ್​ಗಳನ್ನ ಹೊಂದಿದೆ.

33 ಕೋಟಿಯ ಎಫ್​​ಸಿ ಗೋವಾ ತಂಡದ ಮಾಲೀಕ..!

ಕ್ರಿಕೆಟ್​​ ಜೊತೆ ಫುಟ್ಬಾಲ್​​ ಅನ್ನ ಹೆಚ್ಚು ಇಷ್ಟಪಡುವ ಕಿಂಗ್ ಕೊಹ್ಲಿ ಇಂಡಿಯನ್ ಸೂಪರ್​​ ಲೀಗ್​ನಲ್ಲಿ ಎಫ್​ಸಿ ಗೋವಾ ತಂಡದ ಖರೀದಿಸಿದ್ದಾರೆ. ಇದರ ವ್ಯಾಲ್ಯೂ 33 ಕೋಟಿ ರೂಪಾಯಿ ಎಂದು ಹೇಳಲಾಗ್ತಿದೆ.

ಮುಂಬೈನ ವರ್ಲಿಯಲ್ಲಿದೆ 34 ಕೋಟಿ ರೂಪಾಯಿ ಮನೆ..!

ಬರೀ 80 ಕೋಟಿಯ ಗುರುಗ್ರಾಮ್ ಬಂಗಲೆ ಅಷ್ಟೇ ಅಲ್ಲ, ಮುಂಬೈನ ವರ್ಲಿಯಲ್ಲಿ ಬರೋಬ್ಬರಿ 34 ಕೋಟಿ ಬೆಲೆಬಾಳುವ ಮನೆ ಕೂಡ ಖರೀದಿಸಿದ್ದಾರೆ. ಸಮುದ್ರಕ್ಕೆ ಮುಖ ಮಾಡಿರುವ ಅಪಾರ್ಟ್‌ಮೆಂಟ್‌ನಲ್ಲಿ 4 ಬೆಡ್ ರೂಮ್​​​ಗಳಿದ್ದು, 2016 ರಿಂದ ಇಲ್ಲೆ ನೆಲೆಸುತ್ತಿದ್ದಾರೆ.

ಇದನ್ನೂ ಓದಿ: ಯಂಗ್ ಕ್ರಿಕೆಟ್​ ಪ್ಲೇಯರ್ ಹೃದಯಲ್ಲಿ ಹೋಲ್​.. U-19 ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ಕಮ್​ಬ್ಯಾಕ್​ ಯಾವಾಗ?

13.2 ಕೋಟಿ ಮೌಲ್ಯದ WROGN ಉದ್ಯಮ

ಕಿಂಗ್ ಕೊಹ್ಲಿ One-8 ಕಮ್ಯೂನ್​​ ರೆಸ್ಟೋರೆಂಟ್ ಅನ್ನ ಕೂಡ ಆರಂಭಿಸಿದ್ದಾರೆ. ಬೆಂಗಳೂರು ಸೇರಿದಂತೆ ಪಂಜಾಬ್​​ನಲ್ಲಿ ಐಷಾರಾಮಿ ರೆಸ್ಟೋರೆಂಟ್​​ಗಳನ್ನ ತೆರೆಯಲಾಗಿದೆ. ಅಲ್ಲದೇ ಕಿಂಗ್ ಕೊಹ್ಲಿ ಬಳಿ 2.7 ಕೋಟಿ ರೂಪಾಯಿ ರೇಂಜ್ ರೋವರ್ ಕಾರಿದೆ. ಅಲ್ಲದೇ 13.2 ಕೋಟಿ ಮೌಲ್ಯದ ಬಟ್ಟೆ ಉತ್ಪನ್ನಗಳ WROGN ಉದ್ಯಮ ಹೊಂದಿದ್ದಾರೆ.

ಇದು ಕಿಂಗ್ ಕೊಹ್ಲಿ ಐಷಾರಾಮಿ ಲೈಫ್​​ಸ್ಟೈಲ್​. ಒಂದು ಟೈಮ್​ನಲ್ಲಿ ಕ್ರಿಕೆಟ್ ಕಿಟ್ ಕೊಳ್ಳೋಕೆ ಪರದಾಡಿದ್ದ ಕೊಹ್ಲಿ, ವರ್ಣರಂಜಿತ ಜೀವನ ಸಾಗಿಸ್ತಿದ್ದಾರೆ. ಕಠಿಣ ಪರಿಶ್ರಮ, ಛಲವೊಂದಿದ್ರೆ ಏನು ಬೇಕಾದ್ರೂ ಸಾಧಿಸಬಹುದು, ಹೇಗೆ ಬೇಕಾದ್ರೂ ಬದುಕಬಹುದು ಅನ್ನೋದಕ್ಕೆ ಕಿಂಗ್ ಕೊಹ್ಲಿ ಉತ್ತಮ ನಿದರ್ಶನ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ಬಳಿ ಎಷ್ಟು ಐಷಾರಾಮಿ ಕಾರುಗಳಿವೆ.. ಅರಮನೆ ರೀತಿಯ ₹80 ಕೋಟಿ ನಿವಾಸ ಇರುವುದು ಎಲ್ಲಿ?

https://newsfirstlive.com/wp-content/uploads/2024/09/VIRAT_KOHLI_ANUSHKA.jpg

Load More