newsfirstkannada.com

ಸೂರ್ಯಕುಮಾರ್​​ಗೆ ಬಿಗ್ ಶಾಕ್.. ದುಲೀಪ್ ಟ್ರೋಫಿಯಲ್ಲಿ ಮಿಸ್ಟರ್ 360 ಬ್ಯಾಟ್​ ಬೀಸಲ್ವಾ, ಯಾಕೆ?

Share :

Published September 3, 2024 at 1:56pm

    ಟೀಮ್ ಇಂಡಿಯಾದ ಟ್ವಿ20 ಕ್ಯಾಪ್ಟನ್​ ಸೂರ್ಯಗೆ ಏನಾಯಿತು?

    ಕೊನೆ ದಿನ ಬ್ಯಾಟಿಂಗ್ ಮಾಡಲು ಬಂದಿರಲಿಲ್ಲ ಸೂರ್ಯಕುಮಾರ್

    ದುಲೀಪ್ ಟ್ರೋಫಿಯಲ್ಲಿ ಸೂರ್ಯಕುಮಾರ್ ಕಾಣಿಸಿಕೊಳ್ತಾರಾ?

ಸೂರ್ಯಕುಮಾರ್​​ ಯಾದವ್ ವಿಶ್ವ ಕ್ರಿಕೆಟ್​ನ ಮೋಸ್ಟ್​​ ಡೇಂಜರಸ್​ ಬ್ಯಾಟ್ಸ್​​ಮನ್​​​. ಎಂತಹ ಬೌಲರ್​​ಗಳೇ​​​​​​​​​ ಆಗಿರಲಿ ಅವರನ್ನು ಸರಳವಾಗಿ ದಂಡಿಸುವ ಹಿಟ್ ಬ್ಯಾಟರ್ ಆಗಿದ್ದಾರೆ. ಇವರ ಬ್ಯಾಟ್​​ನಿಂದ ಸಿಡಿಯುವ ಒಂದೊಂದು ಶಾಟ್ಸ್​​​ ನೋಡುಗರ ಕಣ್ಣು ಕುಕ್ಕುತ್ತೆ. ಇಂತಹ ನಿರ್ಭೀತಿ ಬ್ಯಾಟ್ಸ್​​ಮನ್​ ಬಗ್ಗೆ ಹೀಗೊಂದು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.

ಇದನ್ನೂ ಓದಿ: 6 ಬಾಲ್​ಗೆ 6 ಸಿಕ್ಸ್ ಸಿಡಿಸಿದ ಆರ್ಯ​​.. RCBಗೆ ಟ್ರೋಫಿ ಗೆಲ್ಲಿಸಿ ಕೊಡುವುದೇ ನನ್ನ ಕನಸು- ಯಂಗ್ ಪ್ಲೇಯರ್

ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಅವರ ಕೈಗೆ ಗಂಭೀರ ಗಾಯವಾದ ಕಾರಣ ಅವರು ಮುಂದಿನ ದುಲಿಪ್ ಟ್ರೋಫಿಯ ಮೊದಲ ಸುತ್ತಿನಲ್ಲಿ ಆಡುವುದಿಲ್ಲ. ಈ ಬಗ್ಗೆ ಸೂರ್ಯಕುಮಾರ್ ಅವರು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ)ಗೆ ಗಾಯದ ಕುರಿತು ವರದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಿಸಿಸಿಐ ಮೂಲಗಳು ಕೂಡ ಸೂರ್ಯಕುಮಾರ್ ದುಲೀಪ್ ಟ್ರೋಫಿಯ ಫಸ್ಟ್​ ರೌಂಡ್​ನಲ್ಲಿ ಆಡುವುದಿಲ್ಲ ಎಂದು ಹೇಳಿವೆ.

ಇದನ್ನೂ ಓದಿ: ಸೂರ್ಯಕುಮಾರ್ ಎಷ್ಟೇ ಬೌಂಡರಿ, ಸಿಕ್ಸರ್ ಬಾರಿಸಿದ್ರೂ ಈ ಬೌಲರ್ ಅಂದ್ರೆ ಸಖತ್ ಭಯ, ಯಾಕೆ?

ಟಿಎನ್​ಸಿಎ ಇಲೆವೆನ್ ವಿರುದ್ಧ ಕೊಯಮತ್ತೂರಿನಲ್ಲಿ ನಡೆದ ಬುಚ್ಚಿಬಾಬು ಟೂರ್ನಿಯಲ್ಲಿ ಆಡುವಾಗ ಸೂರ್ಯಕುಮಾರ್ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರು ಕೊನೆ ದಿನ ಬ್ಯಾಟಿಂಗ್ ಮಾಡಿರಲಿಲ್ಲ. ದುಲೀಪ್ ಟ್ರೋಫಿಯ ಸಿ ಟೀಮ್​ನಲ್ಲಿ ಸೂರ್ಯಕುಮಾರ್ ಆಯ್ಕೆಯಾಗಿದ್ದು ಸೆ.5 ರಿಂದ 8ರವರೆಗೆ ಅನಂತಪುರದಲ್ಲಿ ನಡೆಯುವ ಮೊದಲ ರೌಂಡ್​​ನ ಮ್ಯಾಚ್​ನಲ್ಲಿ ಸೂರ್ಯಕುಮಾರ್ ಆಡುವುದಿಲ್ಲ ಎಂದು ತಿಳಿದು ಬಂದಿದೆ. ಮುಂದಿನ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್​ ಪಂದ್ಯಕ್ಕೆ ಭಾರತದ ಪ್ಲೇಯರ್ಸ್ ಆಯ್ಕೆ ಆಗಲು ಇದು ಅತ್ಯಂತ ಮುಖ್ಯವಾದ ಟೂರ್ನಿಯಾಗಿದೆ. ಸದ್ಯ ಗಾಯಗೊಂಡಿರುವ ಸೂರ್ಯಕುಮಾರ್​ಗೆ ಇದು ಎಫೆಕ್ಟ್ ಆಗಬಹುದು ಎಂದು ಎನ್ನುವ ಪ್ರಶ್ನೆ ಮೂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೂರ್ಯಕುಮಾರ್​​ಗೆ ಬಿಗ್ ಶಾಕ್.. ದುಲೀಪ್ ಟ್ರೋಫಿಯಲ್ಲಿ ಮಿಸ್ಟರ್ 360 ಬ್ಯಾಟ್​ ಬೀಸಲ್ವಾ, ಯಾಕೆ?

https://newsfirstlive.com/wp-content/uploads/2024/09/SURYA_KUMAR.jpg

Load More