ಜಾಲಿ ಮೂಡ್​ನಲ್ಲಿ ರೋಹಿತ್-ರಿತಿಕಾ.. ಅಬ್ದು ರೋಜಿಕ್ ಜೊತೆ ಪೋಸ್ ಕೊಟ್ಟಿದ್ದು ಎಲ್ಲಿ?

author-image
Bheemappa
Updated On
ಜಾಲಿ ಮೂಡ್​ನಲ್ಲಿ ರೋಹಿತ್-ರಿತಿಕಾ.. ಅಬ್ದು ರೋಜಿಕ್ ಜೊತೆ ಪೋಸ್ ಕೊಟ್ಟಿದ್ದು ಎಲ್ಲಿ?
Advertisment
  • ಬಾಲಿವುಡ್ ಬ್ಯೂಟಿ ದಿಶಾ ಪಟಾನಿ, ರೋಹಿತ್ ಜೊತೆ ಇದ್ರಾ?
  • ಟಿ20ಗೆ ನಿವೃತ್ತಿ ಘೋಷಣೆ ಮಾಡಿರುವ ರೋಹಿತ್ ಶರ್ಮಾ
  • ಕ್ಯಾಪ್ಟನ್ ರೋಹಿತ್ ಪತ್ನಿ ರಿತಿಕಾ ಜೊತೆ ಹೋಗಿದ್ದು ಎಲ್ಲಿಗೆ..?

ಬಾಂಗ್ಲಾ ಜೊತೆ ಎರಡು ಟೆಸ್ಟ್ ಪಂದ್ಯಗಳ ಸರಣಿ ಗೆದ್ದ ಖುಷಿಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಫ್ಯಾಮಿಲಿ ಜೊತೆ ದುಬೈ ಟ್ರಿಪ್​​ನಲ್ಲಿದ್ದಾರೆ. ಅಬುಧಾಬಿಯ ಎತಿಹಾದ್​ನ ಅರೆನಾದಲ್ಲಿ ನಡೆದ ನ್ಯಾಷನಲ್ ಬಾಸ್ಕೇಟ್​ಬಾಲ್ ಅಸೋಸಿಯೇಷನ್ (ಎನ್​​ಬಿಎ) ಪಂದ್ಯವನ್ನ ಪತ್ನಿ ರಿತಿಕಾ ಜೊತೆ ಸೇರಿ ವೀಕ್ಷಣೆ ಮಾಡಿದ್ದಾರೆ. ಇನ್ನು ಇದೇ ವೇಳೆ ಕೆಲ ಸೆಲೆಬ್ರಿಟಿಗಳನ್ನು ಹಿಟ್​ಮ್ಯಾನ್ ಮೀಟ್ ಮಾಡಿ ಫೋಟೋಗೂ ಪೋಸ್ ಕೊಟ್ಟಿದ್ದಾರೆ.

publive-image

ಇದನ್ನೂ ಓದಿ:2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ

ಅರೆನಾದಲ್ಲಿ ಎನ್​​ಬಿಎ ಮೊದಲ ಪಂದ್ಯ ಬೋಸ್ಟನ್ ಸೆಲ್ಟಿಕ್ಸ್ ಮತ್ತು ಡೆನ್ವರ್ ನುಗ್ಗೆಟ್ಸ್​​ ನಡುವೆ ನಡೆಯಿತು. ಇದರಲ್ಲಿ ಬೋಸ್ಟನ್ ಸೆಲ್ಟಿಕ್ಸ್ ಗೆಲುವು ಸಾಧಿಸಿದೆ. ಇಡೀ ಪಂದ್ಯವನ್ನು ವೀಕ್ಷಣೆ ಮಾಡಿದ ರೋಹಿತ್ ಶರ್ಮಾ ಹಾಗೂ ರಿತಿಕಾ ಇಬ್ಬರು ಖುಷಿ ಪಟ್ಟರು. ರೋಹಿತ್ ಶರ್ಮಾ ಅವರ ನೆಚ್ಚಿನ ಕ್ಲಬ್ ರಿಯಲ್ ಮ್ಯಾಡ್ರಿಡ್​​ನ ಸ್ಪ್ಯಾನಿಷ್ ಗೋಲ್‌ಕೀಪರ್ ಐಕರ್ ಕ್ಯಾಸಿಲ್ಲಾಸ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಇವರ ನಂತರ ತಜಕಿಸ್ತಾನದ ಹಿನ್ನೆಲೆ ಗಾಯಕ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಅಬ್ದು ರೋಜಿಕ್ ಕೂಡ ರೋಹಿತ್ ಜೊತೆ ಫೋಟೋಗೆ ತೆಗೆಸಿಕೊಂಡರು.

ಇದನ್ನೂ ಓದಿ: RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?

publive-image

ಬಾಲಿವುಡ್​ನ ಬ್ಯೂಟಿ ದಿಶಾ ಪಟಾನಿ ಕೂಡ ಇದೇ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದು ಪಂದ್ಯದ ವೇಳೆ ರೋಹಿತ್, ರಿತಿಕಾ ಪಕ್ಕದಲ್ಲೇ ಕುಳಿತುಕೊಂಡಿದ್ದರು. ಟೀಮ್ ಇಂಡಿಯಾದ ಟಿ20ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಮಾತ್ರ ನಾಯಕತ್ವ ವಹಿಸಲಿದ್ದಾರೆ. ಇನ್ನು ನಾಳೆಯಿಂದ ಬಾಂಗ್ಲಾ ವಿರುದ್ಧ ನಡೆಯುವ ಟಿ20 ಸರಣಿ ಸೂರ್ಯಕುಮಾರ್ ನೇತೃತ್ವದಲ್ಲಿ ಟೀಮ್ ಮುನ್ನಡೆಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment