Advertisment

ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

author-image
Ganesh
Updated On
ಕರೆಂಟ್ ಶಾಕ್ ಕೊಟ್ಟಿದ್ದ ಎನ್ನಲಾದ ಆರೋಪಿಯೂ ಅರೆಸ್ಟ್.. ಮತ್ತೊಬ್ಬ ದರ್ಶನ್ ಆಪ್ತ ಲಾಕ್..!
Advertisment
  • ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳ ಬಂಧನ ಆಗಿದೆ
  • ಕೊಲೆ ಮಾಡಲು ಮೂಲ ಕಾರಣವೇ ಪವಿತ್ರಾಗೌಡ
  • ಸೂಚನೆ ನೀಡಿ ರೇಣುಕಾ ಕಿಡ್ನಾಪ್​ ಮಾಡಿಸಿದ್ದ ದರ್ಶನ್

ಒಂದು ಕೊಲೆ.. ಒಬ್ಬ ದೊಡ್ಡ ಸ್ಟಾರ್​ ಆರೋಪಿ.. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಇದುವರೆಗೆ 17 ಜನ ಅರೆಸ್ಟ್​ ಆಗಿದ್ದಾರೆ.. ಈ ಎಲ್ಲ ಆರೋಪಿಗಳು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದಾರೆ.. ಒಬ್ಬೊಬ್ಬರು ಒಂದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಅಭಿಮಾನ.. ವ್ಯಾಮೋಹ.. ಹಣದ ಹಿಂದೆ ಬಿದ್ದವರು ಇದೀಗ ಕಂಬಿ ಎಣೆಸುವಂತಾಗಿದೆ.

Advertisment

ನಟ ದರ್ಶನ್​ ಗೆಳತಿ ಪವಿತ್ರಾಗೌಡ ಅಶ್ಲೀಲ ಸಂದೇಶ ಕಳಿಸಿ.. ಭೀಕರವಾಗಿ ಕೊಲೆಯಾದ ರೇಣುಕಾಸ್ವಾಮಿ ಪ್ರಕರಣದಲ್ಲಿ ಒಂದೊಂದೇ ಇಂಟ್ರೆಸ್ಟಿಂಗ್​ ಮತ್ತು ರೋಚಕ ಮಾಹಿತಿಗಳು ಹೊರಗೆ ಬರುತ್ತಿವೆ.. ರೇಣುಕಾಸ್ವಾಮಿ ಹತ್ಯೆಯಲ್ಲಿ ಇದುವರೆಗೆ 17 ಆರೋಪಿಗಳ ಬಂಧನವಾಗಿದೆ. ಈ ಪೈಕಿ 9ನೇ ಆರೋಪಿ ರಾಜು, ತಲೆ ಮರೆಸಿಕೊಂಡಿದ್ದಾನೆ. ಉಳಿದವರು ಪೊಲೀಸರ ಕೈಯಲ್ಲಿ ಲಾಕ್​ ಆಗಿದ್ದಾರೆ. ವಿಚಾರಣೆ ವೇಳೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಒಬ್ಬೊಬ್ಬರದು ಒಂದೊಂದು ಪಾತ್ರ ಅನ್ನೋದು ಬೆಳಕಿಗೆ ಬಂದಿದೆ. ಇದರಿಂದ ರೇಣುಕಾಸ್ವಾಮಿ ಭೀಕರ ಹತ್ಯೆ ಹೇಗೆಲ್ಲ ಆಯ್ತು ಅನ್ನೋದು ಬಯಲಿಗೆ ಬಂದಿದೆ.

ಇದನ್ನೂ ಓದಿ:‘ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!

A1 ಪವಿತ್ರಾಗೌಡ
ನಟ ದರ್ಶನ್​ ಗೆಳತಿ ಪವಿತ್ರಾಗೌಡ.. ಈ ಕೊಲೆ ಕೇಸ್​ನ ಎ1 ಆರೋಪಿ.. ರೇಣುಕಾಸ್ವಾಮಿ ಕೊಲೆಯಾಗಲು ಮೂಲ ಕಾರಣವೇ ಪವಿತ್ರಾಗೌಡ.. ಹಾಗೂ ರೇಣುಕಾಸ್ವಾಮಿಗೆ ಚಪ್ಪಲಿಯಿಂದಲೂ ಪವಿತ್ರಾಗೌಡ ಥಳಿಸಿದ್ದಾಳಂತೆ..

Advertisment

publive-image

A2 ದರ್ಶನ್
ನಟ ದರ್ಶನ್​ ಈ ಕೇಸ್​ನಲ್ಲಿ 2ನೇ ಆರೋಪಿ.. ರಾಘವೇಂದ್ರ ಎಂಬಾತನಿಗೆ ಸೂಚನೆ ನೀಡಿ ರೇಣುಕಾಸ್ವಾಮಿಯನ್ನು ಕಿಡ್ನಾಪ್​ ಮಾಡಿಸಿದ್ದ. ಹಾಗೂ ಕೊಲೆಯನ್ನು ಮುಚ್ಚಿ ಹಾಕಲು ಹಣ ನೀಡಿದ್ದ ಆರೋಪವಿದೆ.

publive-image

A3 ಪವನ್
3ನೇ ಆರೋಪಿ ಪವನ್​ ಪವಿತ್ರಾ ಜೊತೆಗಿದ್ದುಕೊಂಡೇ ರಘು ಜೊತೆ ಸಂಪರ್ಕ ಸಾಧಿಸಿದ್ದ.. ಮತ್ತು ರೇಣುಕಾಸ್ವಾಮಿ ಮೇಲೆ ಪವನ್ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪ ಇದೆ.

ಇದನ್ನೂ ಓದಿ:ಅಪ್ಪನ ಜೀವ ತೆಗೆದ ದರ್ಶನ್ ಮೇಲಿನ ಅಭಿಮಾನ.. ಪ್ರಕರಣದಲ್ಲಿ ಅನು ಪಾತ್ರ ಏನು..?

Advertisment

publive-image

A4 ರಾಘವೇಂದ್ರ
4ನೇ ಆರೋಪಿ ರಾಘವೇಂದ್ರ.. ಚಿತ್ರದುರ್ಗದ ದರ್ಶನ್​ ಅಭಿಮಾನಿಗಳ ಸಂಘದ ಅಧ್ಯಕ್ಷ. ಈತನ ಮೂಲಕವೇ ರೇಣುಕಾಸ್ವಾಮಿಯನ್ನು ದರ್ಶನ್​ ಹುಡುಕಿಸಿ, ಬೆಂಗಳೂರಿಗೆ ಕರೆಸಿಕೊಂಡಿದ್ದು.. ರೇಣುಕಾಸ್ವಾಮಿ, ಕಿಡ್ನಾಪ್ ಮಾಡುವಲ್ಲಿ ಈತನದ್ದೇ ಪ್ರಮುಖ ಪಾತ್ರ.. ಹಲ್ಲೆಯನ್ನೂ ಮಾಡಿದ್ದು, ಕೊಲೆಯಾದ ಸ್ಥಳದಲ್ಲೂ ಹಾಜರಿದ್ದನು

publive-image

A5 ನಂದೀಶ್
ನಂದೀಶ್​ 5ನೇ ಆರೋಪಿ.. ರೇಣುಕಾಸ್ವಾಮಿಗೆ ಹಲ್ಲೆ ಮಾಡುವಾಗ ಸ್ಥಳದಲ್ಲಿ ನಂದೀಶ್​ ಇದ್ದವ.. ಹಾಗೂ ಎಲ್ಲರ ಜೊತೆ ಸೇರಿ ರೇಣುಕಾಸ್ವಾಮಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದ.

publive-image

A6 ಜಗದೀಶ್ ಅಲಿಯಾಸ್ ಜಗ್ಗ
6ನೇ ಆರೋಪಿ ಜಗದೀಶ್​ ಅಲಿಯಾಸ್ ಜಗ್ಗ, ಆಟೋ ಚಾಲಕ.. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದವರಲ್ಲಿ ಒಬ್ಬ.. ಮೊದಲು ಆಟೋ, ಬಳಿಕ ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದರು.

Advertisment

A7 ಅನುಕುಮಾರ್ ಅಲಿಯಾಸ್ ಅನು
7ನೇ ಆರೋಪಿ ಅನು ಕೂಡ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದ ತಂಡದ ಸದಸ್ಯರಲ್ಲಿ ಒಬ್ಬ.. ಕೊಲೆ ಬಳಿಕ ಎಸ್ಕೇಪ್​ ಆಗಿದ್ದ ಅನು, ಸದ್ಯ ಶರಣಾಗತಿಯಾಗಿದ್ದಾನೆ.

publive-image

A8 - ರವಿ ಅಲಿಯಾಸ್ ರವಿಶಂಕರ್
8ನೇ ಆರೋಪಿ ರವಿ ಅಲಿಯಾಸ್​ ರವಿಶಂಕರ್​, ಕಾರು ಚಾಲಕ.. ರವಿಯ ಕಾರಿನಲ್ಲೇ ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕರೆ ತರಲಾಗಿತ್ತು..

A10 ವಿನಯ್
10ನೇ ಆರೋಪಿ ವಿನಯ್​ ದರ್ಶನ್ ಆಪ್ತನಾಗಿದ್ದು, ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ.. ಈತ ರೇಣುಕಾಸ್ವಾಮಿಗೆ ಲಾಠಿ ಬೀಸಿ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ

Advertisment

publive-image

A11 ನಾಗರಾಜು
11ನೇ ಆರೋಫಿ ನಾಗರಾಜು, ದರ್ಶನ್​ನ ಅನಧಿಕೃತ ಮ್ಯಾನೇಜರ್ ಆಗಿದ್ದಾನೆ.. ಹಲ್ಲೆ ವೇಳೆ ರೇಣುಕಾಸ್ವಾಮಿಗೆ ಕಾಲಿನಿಂದ ಒದ್ದಿದ್ದ ಎಂದು ಹೇಳಲಾಗಿದೆ.

publive-image

A12 ಲಕ್ಷ್ಮಣ್
12ನೇ ಆರೋಪಿ ಲಕ್ಷ್ಮಣ್​ ನಟ ದರ್ಶನ್​ ಅವರ ಕಾರು ಚಾಲಕ.. ಈತ ಕೂಡ ಕೊಲೆ ವೇಳೆ ಸ್ಥಳದಲ್ಲೇ ಇದ್ದ.. ಮೃತದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆಯನ್ನು ಲಕ್ಷ್ಮಣ್ ಮಾಡಿದ್ದ ಎನ್ನಲಾಗ್ತಿದೆ.

A13 ದೀಪಕ್
ದರ್ಶನ್​ ಆಪ್ತನಾಗಿರುವ ದೀಪಕ್​, ಮೃತದೇಹ ಎಸೆದು ಸರೆಂಡರ್​ ಆದ ನಿಖಿಲ್, ಕೇಶವಮೂರ್ತಿ, ಕಾರ್ತಿಕ್​ಗೆ ಹಣ ಹಂಚಿಕೆ ಮಾಡಿದ್ದ.. ದರ್ಶನ್, ಪ್ರದೋಶ್ ಸೂಚನೆಯಂತೆ ತಲಾ ಐದು ಲಕ್ಷ ಹಣ ನೀಡಿದ್ದು ತನಿಖೆಯಲ್ಲಿ ಗೊತ್ತಾಗಿದೆ

A14 ಪ್ರದೋಶ್
14ನೇ ಆರೋಪಿ ಪ್ರದೋಶ್​, ಕೊಲೆ ಮಾಡಿದ್ದವರ ಖರ್ಚಿಗಾಗಿ 30 ಲಕ್ಷ ಹಣದ ವ್ಯವಸ್ಥೆ ಮಾಡಿದ್ದ.. ಆರೋಪಿಗಳನ್ನು ದರ್ಶನ್​ಗೆ ಭೇಟಿ ಮಾಡಿಸಿ ಸರಂಡರ್ ಮಾಡಿಸುವ ಪಾತ್ರವನ್ನು ನಿರ್ವಹಿಸಿದ್ದ ಎನ್ನಲಾಗ್ತಿದೆ.

publive-image

A15 ಕಾರ್ತಿಕ್
15ನೇ ಆರೋಪಿ ಕಾರ್ತಿಕ್​, ವಿನಯ್​ ಶೆಡ್​ನಲ್ಲಿ ಕೆಲಸಗಾರನಾಗಿದ್ದ.. ಈತ ಡಿ-ಗ್ಯಾಂಗ್​ ಸೂಚನೆಯಂತೆ ರೇಣುಕಾಸ್ವಾಮಿಯ ಶವ ಸಾಗಿಸಿ, ಪೊಲೀಸರ ಮುಂದೆ ಸರಂಡರ್ ಆಗಿದ್ದ..

A16 ಕೇಶವಮೂರ್ತಿ
ಆರೋಪಿ ಕೇಶವ ಮೂರ್ತಿ, ಐದು ಲಕ್ಷ ಹಣ ಪಡೆದು ಮೃತ ದೇಹ ಸಾಗಿಸಿದ್ದ. ಬಳಿಕ ಬಳಿಕ ಪೊಲೀಸರ ಮುಂದೆ ಸರಂಡರ್ ಆಗಿದ್ದ..

publive-image

A17 ನಿಖಿಲ್
17ನೇ ಆರೋಪಿ ನಿಖಿಲ್​ ಕೂಡ ಐದು ಲಕ್ಷ ಹಣ ಪಡೆದು ಮೃತ ದೇಹ ಸಾಗಿಸಿದ್ದ. ಬಳಿಕ ಬಳಿಕ ಪೊಲೀಸರ ಮುಂದೆ ಸರಂಡರ್ ಆಗಿದ್ದ..

ನಾಪತ್ತೆ ಆಗಿರುವ 9ನೇ ಆರೋಪಿ ರಾಜುಗಾಗಿ ಶೋಧ
ಇದಿಷ್ಟು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನವಾಗಿರುವ 16 ಆರೋಪಿಗಳ ಪಾತ್ರ.. ಆದ್ರೆ 9ನೇ ಆರೋಪಿ ರಾಜು ಸದ್ಯ ನಾಪತ್ತೆಯಾಗಿದ್ದಾನೆ.. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.. ಉಳಿದಂತೆ ಶವ ಸಾಗಿಸಲು ಬಳಸಿದ ಸ್ಕಾರ್ಪಿಯೋ ವಾಹನದ ಮಾಲೀಕ ಪುನೀತ್‌ ಹಾಗೂ ಹೇಮಂತ್‌ ಕೂಡಾ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಒಟ್ಟಾರೆಯಾಗಿ ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾದಂತಾಗುತ್ತೆ. ಒಟ್ನಲ್ಲಿ ಉಗುರಲ್ಲಿ ಹೋಗೋ ಮ್ಯಾಟ್ರಿಗೆ ಕೊಡಲಿ ತೆಗೆದುಕೊಂಡ ನಟ ದರ್ಶನ್​ ಸದ್ಯ ಜೈಲು ಪಾಲಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment