/newsfirstlive-kannada/media/post_attachments/wp-content/uploads/2024/04/RCB-28.jpg)
ಐಪಿಎಲ್ ಟೂರ್ನಿಯಲ್ಲಿ ಇವತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್​ ಹಾಗೂ ಸನ್ ರೈಸರ್ಸ್​​ ಹೈದ್ರಾಬಾದ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 7.30 ರಿಂದ ಪಂದ್ಯ ಆರಂಭವಾಗಲಿದೆ.
ಫಾಫ್ ಡುಪ್ಲೆಸಿಸ್​ ನೇತೃತ್ವದ ಆರ್​ಸಿಬಿ ತಂಡವು ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಮಾತ್ರ ಗೆಲುವು ಕಂಡಿದೆ. ಕಳೆದ ನಾಲ್ಕು ಪಂದ್ಯಗಳನ್ನು ಸತತವಾಗಿ ಆರ್​ಸಿಬಿ ಸೋತಿದೆ. ಇವತ್ತಿನ ಪಂದ್ಯವನ್ನು ಗೆಲ್ಲುವ ಮೂಲಕ ಗೆಲುವಿನ ಹಳಿಗೆ ಮರಳಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಕೊಹ್ಲಿ ಏಕಮಾತ್ರ ಭರವಸೆ; ನೆಟ್ಸ್​ನಿಂದಲೇ ವಾರ್ನಿಂಗ್​ ಕೊಟ್ಟ ವಿರಾಟ್..!
ಇದೇ ಕಾರಣಕ್ಕೆ ಆರ್​ಸಿಬಿ ತಂಡ ಇವತ್ತು ಪ್ಲೇಯಿಂಗ್-11ನಲ್ಲಿ ದೊಡ್ಡ ಬದಲಾವಣೆ ಮಾಡುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಪ್ಯಾಟ್ ಕಮ್ಮಿನ್ಸ್ ಸಾರಥ್ಯದ ಹೈದ್ರಾಬಾದ್ ತಂಡವು 5 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಹೀಗಿರುವಾಗ ಕಮ್ಮಿನ್ಸ್​ ತಮ್ಮ ವಿಜೇತ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ತೀರ್ಮಾನದಲ್ಲಿ ಇದ್ದಂತಿಲ್ಲ.
ಕಳೆದ 5 ಪಂದ್ಯಗಳಲ್ಲಿ ಬೆಂಗಳೂರು ಮೇಲುಗೈ..!
ಆರ್​ಸಿಬಿ ಮತ್ತು ಎಸ್​ಆರ್​ಹೆಚ್​ ನಡುವಿನ ಪಂದ್ಯಗಳು ತುಂಬಾ ರೋಚಕವಾಗಿವೆ. ಎರಡು ತಂಡಗಳು ಇದುವರೆಗೆ 23 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಹೈದರಾಬಾದ್ 12 ಪಂದ್ಯಗಳನ್ನು ಗೆದ್ದುಕೊಂಡರೆ, ಆರ್​ಸಿಬಿ 10 ಬಾರಿ ಗೆದ್ದಿದೆ. ಒಂದು ಪಂದ್ಯವು ಫಲಿತಾಂಶ ಬಂದಿಲ್ಲ. ಹಿಂದಿನ ಐದು ಪಂದ್ಯಗಳ ಬಗ್ಗೆ ನೋಡೋದಾದ್ರೆ ಆರ್​ಸಿಬಿ ಮೇಲುಗೈ ಸಾಧಿಸಿದೆ.
ಇದನ್ನೂ ಓದಿ:ಕೈಕೊಟ್ಟ ಸ್ಟೇರಿಂಗ್.. ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಜಾರಿದ ಕಾರು..
ಆರ್​ಸಿಬಿ ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್/ಸೌರಭ್ ಚೌಹಾಣ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಲೋಮ್ರರ್, ವೈಶಾಖ್, ಆಕಾಶ್ ದೀಪ್, ಸಿರಾಜ್, ಟೋಪ್ಲಿ ತಂಡದಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us