newsfirstkannada.com

ಅಭಿಮಾನಿಗಳಿಗೆ ಕೊಹ್ಲಿ ಏಕಮಾತ್ರ ಭರವಸೆ; ನೆಟ್ಸ್​ನಿಂದಲೇ ವಾರ್ನಿಂಗ್​ ಕೊಟ್ಟ ವಿರಾಟ್..!

Share :

Published April 15, 2024 at 1:33pm

  ಇಂದು ರಾಯಲ್​ ಚಾಲೆಂಜರ್ಸ್​​ಗೆ ಹೈದ್ರಾಬಾದ್​ ಸವಾಲ್​

  ವಿರಾಟ್​ ಕೊಹ್ಲಿಯೇ ಇಂದಿನ ಪಂದ್ಯದ ಕೇಂದ್ರಬಿಂದು

  ಫೇವರಿಟ್​​ ಗ್ರೌಂಡ್​​ನಲ್ಲಿ ವಿರಾಟ ರೂಪ ದರ್ಶನ ಪಕ್ಕಾ

ಆರ್​​​ಸಿಬಿ vs ಎಸ್​​ಆರ್​​ಹೆಚ್​​.. ಇಂದಿನ ಈ ಹೈವೋಲ್ಟೆಜ್​ ಕದನದ ಸೆಂಟರ್​​ ಆಫ್​ ಅಟ್ರಾಕ್ಷನ್​​ ವಿರಾಟ್​​ ಕೊಹ್ಲಿ. ಆರೆಂಜ್​ ಆರ್ಮಿ ವಿರುದ್ಧ ಆರ್​​ಸಿಬಿ ಪರ ಕಣಕ್ಕಿಳಿಯೋದು 11 ಮಂದಿ ಆಟಗಾರರಾದ್ರೂ, ಫ್ಯಾನ್ಸ್​ ಭರವಸೆ ಇಟ್ಟಿರೋದು ಕೊಹ್ಲಿ ಮೇಲೆ ಮಾತ್ರ. ಹಾಗಾದ್ರೆ ಇಂದು ಕಿಂಗ್​ಡಮ್​ನಲ್ಲಿ ಕಿಂಗ್​ ಕೊಹ್ಲಿ ಕಮಾಲ್​ ಮಾಡ್ತಾರಾ? ಎಂಬ ಪ್ರಶ್ನೆ ಎದ್ದಿದೆ.

ಹೊಸ ಅಧ್ಯಾಯ ಅಂತಾ ಸೀಸನ್​ 17ರ ಐಪಿಎಲ್​ ಆರಂಭಿಸಿದ ಆರ್​​ಸಿಬಿ, ನಿರೀಕ್ಷೆಯೂ ಮಾಡದಂತಹ ಕಳಪೆ ಪರ್ಫಾಮೆನ್ಸ್​​ ನೀಡ್ತಿದೆ. ಆಟಗಾರರು ನೀಡ್ತಿರುವ ಹೀನಾಯ ಪ್ರದರ್ಶನ ಅಭಿಮಾನಿಗಳ ವಲಯದಲ್ಲಿ ಅಸಮಾಧಾನ ಹುಟ್ಟಿಸಿದೆ. ಈ ಸಲ ಕಪ್​ ನಮ್ದೇ ಅಂತಿದ್ದ ಫ್ಯಾನ್ಸ್​, ಸತತ ಸೋಲುಗಳನ್ನ ನೋಡಿದ ಮೇಲೆ ತೀವ್ರ ನಿರಾಶರಾಗಿದ್ದಾರೆ.

ಇದನ್ನೂ ಓದಿ:ಕೈಕೊಟ್ಟ ಸ್ಟೇರಿಂಗ್.. ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಜಾರಿದ ಕಾರು..

ಆಡಿದ 6 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು, 5 ಪಂದ್ಯ ಸೋತಿರೋ ಆರ್​​ಸಿಬಿ ಈ ಸಲ ಚಾಂಪಿಯನ್​ ಪಟ್ಟಕ್ಕೇರೋದು ಕನಸಿನ ಮಾತೇ. ಮುಂಬೈ ವಿರುದ್ಧ ಹೀನಾಯ ಸೋಲನ್ನು ಕಂಡ ಮೇಲಂತೂ ಅಭಿಮಾನಿಗಳ ಆತ್ಮ ವಿಶ್ವಾಸ ಕುಸಿದೇ ಹೋಗಿದೆ. ಒಂದು ಭರವಸೆಯು ಹಾಗೆಯೇ ಉಳಿದಿದೆ. ಆ ಭರವಸೆಯೇ ಕಿಂಗ್​ ಕೊಹ್ಲಿ.

ಅಭಿಮಾನಿಗಳಿಗೆ ಕೊಹ್ಲಿ ಏಕಮಾತ್ರ ಭರವಸೆ
ಆರ್​​ಸಿಬಿ ಅಂದರೆ ಕೊಹ್ಲಿ.. ಕೊಹ್ಲಿ ಅಂದ್ರೆ ಆರ್​​ಸಿಬಿ ಅನ್ನೋ ಮಾತಿದೆ. ಅದು ಈ ಸೀಸನ್​ನಲ್ಲಂತೂ ಅಕ್ಷರಶಃ ನಿಜವಾಗಿದೆ. ವಿರಾಟ್​ ಕೊಹ್ಲಿಯನ್ನ ಬಿಟ್ರೆ ಉಳಿದೆಲ್ಲಾ ಬ್ಯಾಟ್ಸ್​ಮನ್​ಗಳು ರನ್​ಗಳಿಕೆಗೆ ತಡಬಡಾಯಿಸ್ತಿದ್ದಾರೆ. ಕೊಹ್ಲಿ ಏಕಾಂಗಿಯಾಗಿ ಹೋರಾಡಿದ್ದಾರೆ. 2 ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದು ಬಿಟ್ರೆ, ಉಳಿದ ಪಂದ್ಯಗಳಲ್ಲಿ ಎದುರಾಳಿಯ ದಾಳಿಯನ್ನ ಹಿಮ್ಮೆಟ್ಟಿಸಿ ಕೆಚ್ಚೆದೆಯ ಬ್ಯಾಟಿಂಗ್​ ನಡೆಸಿದ್ದಾರೆ.

ಇದನ್ನೂ ಓದಿ: ಅಕ್ರಮ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್​ನ ಓವರ್ ಟೇಕ್ ಮಾಡುವಾಗ ಅನಾಹುತ; ಪೊಲೀಸ್ ಜೀಪ್ ಪಲ್ಟಿ

17ನೇ ಸೀಸನ್​ನಲ್ಲಿ ವಿರಾಟ್​ ಕೊಹ್ಲಿ
ಪ್ರಸಕ್ತ ಐಪಿಎಲ್​ನಲ್ಲಿ 6 ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 79.75ರ ಸರಾಸರಿಯಲ್ಲಿ 319 ರನ್​ಗಳಿಸಿದ್ದಾರೆ. 141.79ರ ಸ್ಟ್ರೈಕ್​ರೇಟ್​ ಹೊಂದಿರೋ ಕೊಹ್ಲಿ., 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ.

ಕಿಂಗ್​ಡಮ್​ಗೆ ಕಿಂಗ್​ ಕೊಹ್ಲಿ ಕಮ್​​ಬ್ಯಾಕ್​​​..!
2 ಅವೇ ಪಂದ್ಯಗಳನ್ನಾಡಿದ ಬಳಿಕ ಕಿಂಗ್​​ಡಮ್​ ಚಿನ್ನಸ್ವಾಮಿ ಮೈದಾನಕ್ಕೆ ಕಿಂಗ್​ ಕೊಹ್ಲಿ ಕಮ್​​ಬ್ಯಾಕ್​ ಮಾಡಿದ್ದಾರೆ. ಇಂದು ಸನ್​ರೈಸರ್ಸ್​ ಹೈದ್ರಾಬಾದ್​ನ ಸವಾಲು ಎದುರಾಗಲಿದ್ದು ರಣಕಣದಲ್ಲಿ ಆರ್ಭಟಿಸಲು ವಿರಾಟ್​, ಭರ್ಜರಿ ತಯಾರಿ ನಡೆಸಿದ್ದಾರೆ. ನೆಟ್ಸ್​ನಲ್ಲಿ ಗಂಟೆಗಟ್ಟಲೇ ಬೆವರಿಳಿಸಿರುವ ಕೊಹ್ಲಿ, ಅಭ್ಯಾಸದ ಕಣದಿಂದಲೇ ಹೈದ್ರಾಬಾದ್​ ಪಡೆಗೆ ವಾರ್ನಿಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ:ಧೋನಿ ಸಿಕ್ಸ್ ಹೊಡೆಯಲಿ ಅಂತಾ ಕೆಟ್ಟ ಬೌಲಿಂಗ್ -ಹಾರ್ದಿಕ್ ಪಾಂಡ್ಯ ಸುತ್ತ ಮತ್ತೊಂದು ವಿವಾದ

ಹೈದ್ರಾಬಾದ್​​ ಎದುರು ಅಬ್ಬರಿಸುತ್ತಾ ವಿರಾಟ್​ ಬ್ಯಾಟ್​?
ಐಪಿಎಲ್​ ಟೂರ್ನಿಯ ಮಹಾರಾಜನಾಗಿರುವ ವಿರಾಟ್​ ಕೊಹ್ಲಿ, ಸನ್​ರೈಸರ್ಸ್​ ಹೈದ್ರಾಬಾದ್​​ ಡಿಸೆಂಟ್​​ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. 1 ಶತಕ, 4 ಅರ್ಧಶತಕ ಸಿಡಿಸಿದ್ರೂ ಕೂಡ, ಕೇವಲ 31.21ರ ರನ್​ಗಳಿಕೆಯ ಸರಾಸರಿಯನ್ನ ಹೊಂದಿದ್ದಾರೆ. ಹೀಗಾಗಿಯೇ ನೆಟ್ಸ್​ನಲ್ಲಿ ಕಠಿಣ ಅಭ್ಯಾಸ ನಡೆಸಿರುವ ವಿರಾಟ್​ ಕೊಹ್ಲಿ, ಎಸ್​​​ಆರ್​​ಹೆಚ್​ ಬೌಲರ್​ಗಳ ಮೇಲೆ ಸವಾರಿ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಹೈದ್ರಾಬಾದ್​ ವಿರುದ್ಧ ವಿರಾಟ್​ ಕೊಹ್ಲಿ
ಹೈದ್ರಾಬಾದ್​ ವಿರುದ್ಧ 21 ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 31.21ರ ಸರಾಸರಿಯಲ್ಲಿ 669 ರನ್​ಗಳಿಸಿದ್ದಾರೆ. 1 ಶತಕ, 2 ಅರ್ಧಶತಕ ಸಿಡಿಸಿದ್ದು, 139.66ರ ಸ್ಟ್ರೈಕ್​ರೇಟ್​​ ಹೊಂದಿದ್ದಾರೆ. ಹೇಳಿ-ಕೇಳಿ ಚಿನ್ನಸ್ವಾಮಿ ಮೈದಾನ ವಿರಾಟ್​ ಕೊಹ್ಲಿ ಫೇವರಿಟ್​ ಗ್ರೌಂಡ್​​. ನೆಚ್ಚಿನ ಅಭಿಮಾನಿಗಳ ಎದುರು ಧಮ್​ಧಾರ್​ ಪರ್ಫಾಮೆನ್ಸ್​ ನೀಡಲು ವಿರಾಟ್​ ಸದಾ ರೆಡಿಯಾಗಿರ್ತಾರೆ. ಸಾಲಿಡ್​​ ಫಾರ್ಮ್​ನಲ್ಲಿ ಕೂಡ ಇರೋ ಕೊಹ್ಲಿ, ಹೈದ್ರಾಬಾದ್​​ ವಿರುದ್ಧ ತೊಡೆ ತಟ್ಟಲು ಭರ್ಜರಿಯಾಗಿ ಸಜ್ಜಾಗಿದ್ದಾರೆ. ಅಭಿಮಾನಿಗಳು ಕೂಡ ಕೊಹ್ಲಿ ಮೇಲೆ ಅಪಾರ ಭರವಸೆಯನ್ನ ಇಟ್ಟಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ಇಂದು ವಿರಾಟರೂಪ ದರ್ಶನವಾಗುತ್ತಾ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಭಿಮಾನಿಗಳಿಗೆ ಕೊಹ್ಲಿ ಏಕಮಾತ್ರ ಭರವಸೆ; ನೆಟ್ಸ್​ನಿಂದಲೇ ವಾರ್ನಿಂಗ್​ ಕೊಟ್ಟ ವಿರಾಟ್..!

https://newsfirstlive.com/wp-content/uploads/2024/04/VIRAT_KOHLI-6-1.jpg

Load More