/newsfirstlive-kannada/media/post_attachments/wp-content/uploads/2024/05/SHREYANKA-PATIL.jpg)
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅದ್ಭುತವಾಗಿ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇ ಆಫ್​​ಗೆ ಹೋಗುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆರ್​ಸಿಬಿ ಗೆಲುವು ಬೆನ್ನಲ್ಲೇ ಪ್ಲೇ-ಆಫ್​ಗೆ ಹೇಗೆ ಪ್ರವೇಶ ಮಾಡಬೇಕು ಅನ್ನೋದ್ರ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ.
ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ.. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿಗೆ ಭರ್ಜರಿ ಗೆಲುವು..!
ಈ ಬಗ್ಗೆ ಟ್ವೀಟ್ ಮಾಡಿರುವ ಕನ್ನಡತಿ, ಆರ್​ಸಿಬಿ ಮಹಿಳಾ ತಂಡದ ಸ್ಟಾರ್​ ಬೌಲರ್​ ಶ್ರೇಯಾಂಕಾ ಪಾಟೀಲ್​ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದಾರೆ. ನಮ್ಮ ಆರ್​ಸಿಬಿ ಪ್ಲೇ ಆಫ್​ಗೆ ಹೋಗಬೇಕು ಅಂದರೆ ಏನ್ಮಾಡಬೇಕು ಎಂದು ಕೇಳಿದ್ದಾರೆ. ‘ಈಗ ನೀವು ಹೇಳಿ.. ನಾವು ಸಿಎಸ್​ಕೆ ತಂಡವನ್ನು ಎಷ್ಟು ರನ್​ಗಳಿಂದ ಸೋಲಿಸಬೇಕು? ನನಗೆ ಗೊತ್ತು ನಮ್ಮ ಮುಂಬೈ ಇಂಡಿಯನ್ಸ್​ ಸ್ನೇಹಿತರು ಎಲ್​ಎಸ್​ಜಿ ತಂಡವನ್ನು ಸೋಲಿಸುತ್ತಾರೆ ಎಂದು. ಖಂಡಿತ ಭರವಸೆ ಇದೆ. Come onnnnn!!! ಆರ್​ಸಿಬಿ ಎಂದು ಟ್ವೀಟ್ ಮಾಡಿದ್ದಾರೆ.
Now tell me by how many runs we have to beat CSK? I know MI friends will beat LSG!!! Oh, the hope… Come onnnnn!!! #RCB
— Shreyanka Patil (@shreyanka_patil) May 12, 2024
ಅದಕ್ಕೆ ಕೆಲವರು ಕಮೆಂಟ್ ಮಾಡಿರುವ ಆರ್​​ಸಿಬಿ ಅಭಿಮಾನಿಗಳು.. ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಆರ್​ಸಿಬಿ 18 ರನ್​ಗಳಿಂದ ಸೋಲಿಸಬೇಕು ಅಥವಾ 11 ಬಾಲ್​ಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಬೇಕು ಎಂದು ತಿಳಿಸಿದ್ದಾರೆ. ಅಂದ್ಹಾಗೆ ನಾಳೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಎಲ್​ಎಸ್​ಜಿ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಎಲ್​ಎಸ್​ಜಿ ಗೆಲ್ಲಬೇಕು. ಜೊತೆಗೆ ಏಪ್ರಿಲ್ 17 ರಂದು ಮುಂಬೈ ಇಂಡಿಯನ್ಸ್​ ಜೊತೆ ಎಲ್​ಎಸ್​ಜಿ ಆಡಲಿದೆ. ಆ ಪಂದ್ಯವನ್ನು ಎಲ್​​ಎಸ್​ಜಿ ಸೋಲಬೇಕಿದೆ. ಅದರ ಜೊತೆಗೆ ಸಿಎಸ್​ಕೆ ವಿರುದ್ಧ ಆರ್​​ಸಿಬಿ ಭರ್ಜರಿ ಗೆಲುವು ಸಾಧಿಸುವ ಅಗತ್ಯ ಕೂಡ ಇದೆ.
ಇದನ್ನೂ ಓದಿ:ಕೊಹ್ಲಿ ವಿಚಾರದಲ್ಲಿ ಭಾರೀ ಗೊಂದಲ.. ವಿರಾಟ್​ಗೆ ಕಂಟಕವಾಗಿ ಬಿಟ್ರಾ ಈ ಆಟಗಾರ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್