ಕೇರಳದಲ್ಲಿ MeToo ಪ್ರಕರಣ ಕೋಲಾಹಲ ಸೃಷ್ಟಿಸಿದೆ
ನ್ಯಾಯಮೂರ್ತಿ ಹೇಮಾ ಕಮಿಟಿ ರಿಪೋರ್ಟ್ ಬಹಿರಂಗ
ಕೇರಳ WCC ನಿರಂತರ ಪ್ರಯತ್ನ ಪ್ರಶಂಸಿದ ಸಮಂತಾ
ಕೇರಳದಲ್ಲಿ MeToo ಪ್ರಕರಣಗಳು ಭಾರೀ ಕೋಲಾಹಲ ಸೃಷ್ಟಿಸಿವೆ. ನ್ಯಾಯಮೂರ್ತಿ ಹೇಮಾ ಕಮಿಟಿ ರಿಪೋರ್ಟ್ (Hema Committee report) ಬೆನ್ನಲ್ಲೇ ಕೆಲವು ಆಘಾತಕಾರಿ ವಿಚಾರಗಳು ಬಹಿರಂಗಗೊಂಡಿವೆ.
MeToo ಪ್ರಕರಣಗಳು ಮಲಯಾಳಂ ಚಿತ್ರರಂಗದಲ್ಲಿ ಭಾರೀ ಗದ್ದಲ ಎಬ್ಬಿಸಿವೆ. ಇದರ ಮಧ್ಯೆ ಹೇಮಾ ಕಮಿಟಿ ವರದಿಯನ್ನು ಸ್ಟಾರ್ ನಟಿ ಸಮಂತಾ ಸ್ವಾಗತಿಸಿದ್ದಾರೆ. ಕೇರಳದ ವುಮೆನ್ ಇನ್ ಸಿನಿಮಾ ಕಲೆಕ್ಟೀವ್ (WCC) ನಿರಂತರ ಪ್ರಯತ್ನವನ್ನು ಪ್ರಶಂಸಿದ ಅವರು, ತೆಲಂಗಾಣ ಸರ್ಕಾರಕ್ಕೂ ಸಮಂತಾ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ತುಂಬಾ ವರ್ಷಗಳ ನಂತರ.. ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ RCB ಮೂವರು ಹಳೇ ಆಟಗಾರರು..!
ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಬರೆದುಕೊಂಡಿರುವ ಸಮಂತಾ.. ನಾವು, ತೆಲುಗು ಚಿತ್ರರಂಗದ ಮಹಿಳೆಯರು, ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ. ಇದೇ ವೇಳೆ ಕೇರಳದಲ್ಲಿ WCC ಯ ನಿರಂತರ ಪ್ರಯತ್ನಗಳನ್ನು ಪ್ರಶಂಸಿಸುತ್ತೇವೆ. WCC ಪ್ರೇರಣೆಯ ಮೇರೆಗೆ ದಿ ವಾಯ್ಸ್ ಆಫ್ ವುಮೆನ್, TFI (ತೆಲುಗು ಚಲನಚಿತ್ರೋದ್ಯಮ)ದಲ್ಲಿ ಮಹಿಳೆಯರಿಗಾಗಿ ಸಹಾಯವಾಣಿಯನ್ನು 2019ರಲ್ಲಿ ತೆರೆಯಲಾಯಿತು. ಲೈಂಗಿಕ ಕಿರುಕುಳದ ಕುರಿತು ಉಪಸಮಿತಿ ಸಲ್ಲಿಸಿದ ವರದಿಯನ್ನು ಪ್ರಕಟಿಸಲು ತೆಲಂಗಾಣ ಸರ್ಕಾರವನ್ನು ವಿನಂತಿಸುತ್ತೇವೆ. ತೆಲಂಗಾಣ ಸರ್ಕಾರ ಕೇರಳ ಮಾದರಿಯ ಸಮಿತಿ ರಚಿಸಿದರೆ ಟಾಲಿವುಡ್ಗೆ ಹೆಚ್ಚಿನ ಲಾಭ ಆಗಲಿದೆ ಎಂದು ಸಮಂತಾ ಒತ್ತಾಯಿಸಿದ್ದಾರೆ. ಟಿಎಫ್ಐನಲ್ಲಿ ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಸ್ಥಾಪಿಸಲು ಸರ್ಕಾರ ಮತ್ತು ಉದ್ಯಮ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಮುಜುಗರದ ಪರಿಸ್ಥಿತಿ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ವರದಿಯನ್ನು ಸಿದ್ಧಪಡಿಸಿತ್ತು. ಅದರಲ್ಲಿರುವ ಕೆಲವು ಆಘಾತಕಾರಿ ವಿಚಾರಗಳು ಬಹಿರಂಗವಾಗಿವೆ. ಇದು ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಇದನ್ನೂ ಓದಿ:ಸ್ಟಾರ್ಗಳಿಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ