/newsfirstlive-kannada/media/post_attachments/wp-content/uploads/2024/08/Samsung-1.jpg)
ಸ್ಯಾಮ್​​ಸಂಗ್​​ ಜನಪ್ರಿಯ ಟೆಕ್​ ಕಂಪನಿಗಳಲ್ಲಿ ಒಂದು. ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್​ ಈಗಾಗಲೇ ತನ್ನ ಉತ್ಪನ್ನದಿಂದ ಸಾಕಷ್ಟು ಜನಮನ್ನಣೆ ಪಡೆದಿದೆ. ಸ್ಮಾರ್ಟ್​ಫೋನ್​, ಸ್ಮಾರ್ಟ್​ಟಿವಿ, ಫ್ರಿಡ್ಜ್, ವಾಷಿಂಗ್​ ಮೆಷಿನ್​ ಹೀಗೆ ನಾನಾ ಉತ್ಪನ್ನಗಳನ್ನು ತಯಾರಿಸುತ್ತಾ ಗ್ರಾಹಕರ ಮನಗೆಲ್ಲುತ್ತಾ ಬಂದಿದೆ. ಆದರೀಗ ಸ್ಯಾಮ್​ಸಂಗ್​ ಕಂಪನಿ ಕುರಿತು ಐಫಿಕ್ಸಿಟ್​​ ಮಾಡಿದ ವರದಿಯೊಂದು ಗ್ರಾಹಕರ ಅಚ್ಚರಿಗೆ ಕಾರಣವಾಗಿದೆ.
ಸ್ಯಾಮ್​​ಸಂಗ್​​ ಸದಾ ಆವಿಷ್ಕಾರದಲ್ಲಿ ತೊಡಗಿರುವ ಕಂಪನಿ. ಪ್ರಸ್ತುತ ಜಗತ್ತಿಗೆ ಈ ಕಂಪನಿ ಗ್ಯಾಲಕ್ಸಿ ಸ್ಮಾರ್ಟ್​ರಿಂಗ್​ ಅನ್ನು ಉತ್ಪಾದಿಸಿ ಪರಿಚಯಿಸಿದೆ. ಇದನ್ನು ಕೈ ಬೆರಳಿಗೆ ಉಂಗುರದಂತೆ ಧರಿಸುವ ಮೂಲಕ ಸ್ಮಾರ್ಟ್​ ಆಗಿ ಕೆಲಸ ಮಾಡಬಹುದಾಗಿದೆ.
ಇದನ್ನೂ ಓದಿ: 154 ರೂಪಾಯಿಯ ಪ್ಲಾನ್​ಗೆ ಮುಗಿಬಿದ್ದ ಜನ​.. 14ಕ್ಕೂ ಹೆಚ್ಚು OTT ಸಂಪೂರ್ಣ ಉಚಿತ!
ಅಚ್ಚರಿಯ ಸಂಗತಿ ಎಂದರೆ ಈ ಸ್ಮಾರ್ಟ್​ರಿಂಗ್​​ ಆರೋಗ್ಯದ ಕಾಳಜಿಯನ್ನು ವಹಿಸುತ್ತದೆ. ಆರೋಗ್ಯದ ಡೇಟಾವನ್ನು ಒದಗಿಸುತ್ತದೆ. ಆದರೆ ಬೇಸರದ ಸಂಗತಿ ಎಂದರೆ ಸ್ಮಾರ್ಟ್​ರಿಂಗ್​​ ಹಾನಿಗೊಳಗಾದರೆ ಅಥವಾ ಬ್ಯಾಟರಿ ಹಾನಿಯಾದರೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಐಫಿಕ್ಸಿಟ್ ವರದಿ ಮಾಡಿದೆ.
/newsfirstlive-kannada/media/post_attachments/wp-content/uploads/2024/04/Smart-Ring.jpg)
ಇದನ್ನೂ ಓದಿ: ಸುನೀತಾ ವಿಲಿಯಮ್ಸ್​​ ವಾಪಾಸಾತಿ ಸದ್ಯ ಭಾರೀ ಅಪಾಯಕಾರಿ.. ನಾಸಾದಿಂದ ಅಚ್ಚರಿಯ ಹೇಳಿಕೆ!
ಗ್ಯಾಲಕ್ಸಿ ಸ್ಮಾರ್ಟ್​ರಿಂಗ್​​ ಹಾಳಾದರೆ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ಐಫಿಕ್ಸಿಟ್ ತನ್ನ ವರದಿಯಲ್ಲಿ ಹೇಳಿದೆ. ಮಾತ್ರವಲ್ಲದೆ ಅದಕ್ಕೆ ಕಾರಣವನ್ನು ಬಿಚ್ಚಿಟ್ಟಿದೆ. ರಿಂಗ್​ನಲ್ಲಿರುವ ಲಿಥಿಯಂ-ಐಯಾನ್​​ ಬ್ಯಾಟರಿಯೇ ಪ್ರಮುಖ ಕಾರಣವಾಗಿದೆ. ಸ್ಮಾರ್ಟ್​​ರಿಂಗ್​ನಲ್ಲಿ ಕಾಣಿಸುವ ಬ್ಯಾಟರಿಯು 400mAh ಸಾಮರ್ಥ್ಯವನ್ನು ಹೊಂದಿದೆ. ಒಂದು ಬಾರಿ ಬ್ಯಾಟರಿ ಹಾಳಾದರೆ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಬ್ಯಾಟರಿ ಬದಲಾಯಿಸಲು ಸಾಧ್ಯವಿಲ್ಲ ಎಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us