Advertisment

‘ಅವಕಾಶ ಸಿಕ್ಕರೆ ಹಿಂಗೆ.. ಸಿಗದಿದ್ದರೆ ಹಂಗೆ..’ ದುಲೀಪ್ ಟ್ರೋಫಿಯಲ್ಲಿ ಸಂಜು ಮಾಡಿದ್ದು ಸರೀನಾ?

author-image
Ganesh
Updated On
‘ಅವಕಾಶ ಸಿಕ್ಕರೆ ಹಿಂಗೆ.. ಸಿಗದಿದ್ದರೆ ಹಂಗೆ..’ ದುಲೀಪ್ ಟ್ರೋಫಿಯಲ್ಲಿ ಸಂಜು ಮಾಡಿದ್ದು ಸರೀನಾ?
Advertisment
  • ಸಂಜು ಸ್ಯಾಮ್ಸನ್ ಮತ್ತೆ ಟ್ರೋಲಿಗರಿಗೆ ಆಹಾರ ಆಗಿದ್ದಾರೆ
  • ಸಂಜು ಬ್ಯಾಟಿಂಗ್ ಸಮರ್ಥಿಸಿಕೊಂಡವರಿಗೆ ಮುಖಭಂಗ
  • ದುಲೀಪ್ ಟ್ರೋಫಿಯಲ್ಲಿ ಸಂಜು ಮಾಡಿದ್ದೇನು ಗೊತ್ತಾ?

ಆಂಧ್ರಪ್ರದೇಶದ ಅನಂತಪುರದಲ್ಲಿ ದುಲೀಪ್ ಟ್ರೋಫಿಯ ಮೂರನೇ ಪಂದ್ಯ ನಡೆಯುತ್ತಿದೆ. ಮೂರನೇ ಪಂದ್ಯದಲ್ಲಿ ಇಂಡಿಯಾ A, ಇಂಡಿಯಾ D ಪೈಪೋಟಿ ನಡೆಸುತ್ತಿವೆ. ಶ್ರೇಯಸ್ ಅಯ್ಯರ್ ಅಂಡರ್ ಅಡಿಯಲ್ಲಿ ಆಡುತ್ತಿರುವ ಇಂಡಿಯಾ D ತಂಡದ ಭಾಗವಾಗಿರುವ ಸಂಜು ಸ್ಯಾಮ್ಸನ್ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

Advertisment

ಬ್ಯಾಟಿಂಗ್​ನಲ್ಲಿ ಸಂಜು ಸ್ಯಾಮ್ಸನ್ ಫೇಲ್ ಆಗಿದ್ದು ಕೇವಲ ಐದು ರನ್​ಗೆ ಸುಸ್ತಾಗಿದ್ದಾರೆ. 6 ಬಾಲ್ ಎದುರಿಸಿರುವ ಸ್ಯಾಮ್ಸನ್ ಒಂದು ಬೌಂಡರಿ ಬಾರಿಸಿ ಐದು ರನ್​ಗಳಿಸಿ ಔಟ್ ಆಗಿದ್ದಾರೆ. ಈ ಮೂಲಕ ಸಂಜು ತಮ್ಮ ಅಭಿಮಾನಿಗಳಿಗೆ ಹಾಗೂ ಅವರ ಸಮರ್ಥಿಸಿಕೊಳ್ತಿದ್ದ ಕ್ರಿಕೆಟ್ ತಜ್ಞರಿಗೆ ನಿರಾಸೆ ಮೂಡಿಸಿದ್ದಾರೆ. ಅವಕಾಶ ಕೊಟ್ಟಿಲ್ಲ ಅಂತಾ ಬಿಸಿಸಿಐ ವಿರುದ್ಧ ಸಂಜು ಅಭಿಮಾನಿಗಳು ಕಿಡಿಕಾರ್ತಾರೆ. ಆದರೆ ಸಿಕ್ಕ ಅವಕಾಶವನ್ನೆಲ್ಲ ಹೀಗೆ ಕೈಚೆಲ್ಲಿದರೆ ಹೇಗೆ? ಸಂಜು ತಮಗೆ ಒಂದೇ ಮೋಸ ಮಾಡ್ತಿಲ್ಲ. ಇಡೀ ತಂಡಕ್ಕೂ ಮಾಡಿದ ಮೋಸ ಅಲ್ಲವೇ ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ.

ಇದನ್ನೂ ಓದಿ:ಗಂಭೀರ್ ವಾರ್ನಿಂಗ್​ಗೆ ಹೆದರಿದ ಆಟಗಾರರು; ಸೂಪರ್​​ ಸ್ಟಾರ್​​ಗಳ ಪವರ್ ಕೂಡ ​ಕಟ್..!

ಪಂದ್ಯ ಎರಡನೇ ದಿನವಾದ ಇವತ್ತು ಇಂಡಿಯಾ ಡಿ ಬ್ಯಾಟಿಂಗ್ ನಡೆಸುತ್ತಿದ್ದು, 5 ವಿಕೆಟ್ ಕಳೆದುಕೊಂಡು 185 ರನ್​ಗಳ ಹಿನ್ನಡೆ ಅನುಭವಿಸಿದೆ. ಇನ್ನು ಮೊದಲು ಬ್ಯಾಟ್ ಮಾಡಿರುವ ಇಂಡಿಯಾ ಎ, 290 ರನ್​ಗಳಿಸಿದೆ.

Advertisment

ಇದನ್ನೂ ಓದಿ:ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment