newsfirstkannada.com

×

ಗಂಭೀರ್ ವಾರ್ನಿಂಗ್​ಗೆ ಹೆದರಿದ ಆಟಗಾರರು; ಸೂಪರ್​​ ಸ್ಟಾರ್​​ಗಳ ಪವರ್ ಕೂಡ ​ಕಟ್..!

Share :

Published September 13, 2024 at 12:00pm

Update September 13, 2024 at 12:25pm

    ಟೀಮ್​ ಇಂಡಿಯಾದಲ್ಲಿ ಗೌತಮ್ ಗಂಭೀರ್​ ದರ್ಬಾರ್

    ಗೌತಮ್ ಗಂಭೀರ್​​ ಎಚ್ಚರಿಕೆಗೆ ತಲೆ ಬಾಗಿದ ನಾಯಕ

    ಗುರುವಿನ ವಾರ್ನಿಂಗ್​ಗೆ ಶಿಷ್ಯರೆಲ್ಲಾ ಸರೆಂಡರ್ ಆಗಿದ್ದೇಗೆ?

ಗೌತಮ್​ ಗಂಭೀರ್​ ಕೋಚ್​ ಆಗಿದ್ದೇ ಬಂತು ಟೀಮ್​ ಇಂಡಿಯಾದಲ್ಲಿ ಸ್ಟಾರ್​ಗಳ ಆಟಕ್ಕೆ ಫುಲ್​ ಬ್ರೇಕ್​​ ಬಿದ್ದಿದೆ. ಗುರು ಗಂಭೀರ್​​​ ಹೇಳಿದ್ದೇ ವೇದವಾಕ್ಯ. ಇಡೀ ತಂಡ ಈಗ ಕೋಚ್​ ಕಂಟ್ರೋಲ್​ನಲ್ಲಿದೆ. ಗಂಭೀರ್​ ಕೊಟ್ಟ ಗಂಭೀರ ವಾರ್ನಿಂಗ್​ಗೆ ಕ್ಯಾಪ್ಟನ್​ ರೋಹಿತ್​ ಶರ್ಮಾನೇ ಥಂಡಾ ಹೊಡೆದಿದ್ದಾರೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ಕೊಟ್ಟ ಎಚ್ಚರಿಕೆಯನ್ನ ಶಿರಸಾವಹಿಸಿ ಪಾಲಿಸ್ತಿದ್ದಾರೆ.

ಇಂಡೋ-ಬಾಂಗ್ಲಾ ಟೆಸ್ಟ್​ ಸರಣಿಗೆ ಕೌಂಟ್​​ಡೌನ್​ ಶುರುವಾಗಿದೆ. ಶ್ರೀಲಂಕಾ ಪ್ರವಾಸದ ಬಳಿಕ ಸುದೀರ್ಘ ವಿಶ್ರಾಂತಿಗೆ ಜಾರಿದ್ದ ಆಟಗಾರರು ಮತ್ತೆ ಫೀಲ್ಡ್​ಗೆ ರೀ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಲಂಕಾ ಪ್ರವಾಸದ ಬಳಿಕ ತಿಂಗಳಿಗೂ ಹೆಚ್ಚು ಕಾಲ ಸಿಕ್ಕ ಅವಧಿಯಲ್ಲಿ ಆಟಗಾರರು ಏನು ಮಾಡಿದ್ರೋ, ಬಿಟ್ರೋ ಗೊತ್ತಿಲ್ಲ. ಕೋಚ್​ ಗಂಭೀರ್​ ಕೊಟ್ಟ ವಾರ್ನಿಂಗ್​ಗೆ ತಲೆ ಬಾಗಿರೋದಂತೂ ಸತ್ಯ.

ಇದನ್ನೂ ಓದಿ: ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!

ಕೋಚ್​ ಗಂಭೀರ್​​ ವಾರ್ನಿಂಗ್..
ಟೀಮ್​ ಇಂಡಿಯಾದ ಹೆಡ್​ ಕೋಚ್​ ಪಟ್ಟವೇರಿದ ಟಿ20 ಸರಣಿಯಲ್ಲಿ ಸಿಂಹಳೀಯರ ಸಂಹರಿಸಿ ಗಂಭೀರ್​​ ಶುಭಾರಂಭ ಮಾಡಿದ್ರು. ಈ ಸರಣಿ ಗೆದ್ದ ಬೆನ್ನಲ್ಲೇ, ಗುರು ಗೌತಮ್​ ಡ್ರೆಸ್ಸಿಂಗ್​ ರೂಮ್​ನಲ್ಲಿ ಒಂದು ಖಡಕ್​ ವಾರ್ನಿಂಗ್​ ಕೊಟ್ಟಿದ್ರು. ಆ ಎಚ್ಚರಿಕೆಯ ಎಫೆಕ್ಟ್​​ ಬಾಂಗ್ಲಾ ಸರಣಿ ಆರಂಭಕ್ಕೂ ಮುನ್ನ ಗೊತ್ತಾಗ್ತಿದೆ.

ಕೆಲ ಆಟಗಾರರು ಏಕದಿನ ಸರಣಿಯಲ್ಲಿ ಇಲ್ಲ. ಅವರಿಗೆ ಸುದೀರ್ಘ ಬ್ರೇಕ್ ಸಿಗಲಿದೆ. ನೀವು ಕಮ್​​ಬ್ಯಾಕ್​ ಮಾಡೋದು ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ. ನೀವು ವಿಶ್ರಾಂತಿ ತೆಗೆದುಕೊಳ್ಳಿ. ಅದಕ್ಕೆ ನೀವು ಅರ್ಹರು. ಆದ್ರೆ, ನಿಮ್ಮ ಸ್ಕಿಲ್ಸ್​ ಹಾಗೂ ಫಿಟ್ನೆಸ್​​ ಮೇಲೆ ವರ್ಕೌಟ್ ಮಾಡಿ. ಆ ಸರಣಿಗೂ ಮುನ್ನ ಫಿಟ್ನೆಸ್​ ಮೇಲೆ ಫೋಕಸ್ ಮಾಡ್ತೇವೆ ಅಂದ್ರೆ ಆಗಲ್ಲ. ಆ ಸಮಯದಲ್ಲಿ ಸಂಪೂರ್ಣ ಫಿಟ್ನೆಸ್ ಇರಬೇಕು-ಗಂಭೀರ್

ನಾಯಕ ರೋಹಿತ್​ ಶರ್ಮಾ ಫಿಟ್ನೆಸ್​ ಧ್ಯಾನ
ಲಂಕಾ ಸರಣಿ ಅಂತ್ಯದ ಬಳಿಕ ಮುಂಬೈಗೆ ವಾಪಾಸ್ಸಾಗಿರೋ ರೋಹಿತ್​ ಶರ್ಮಾ, ಫಿಟ್ನೆಸ್​ ಧ್ಯಾನ ಮಾಡ್ತಿದ್ದಾರೆ. ಜಿಮ್​​​​ನಿಂದ ಹೆಚ್ಚು ಅಂತರ ಕಾಯ್ದಿಟ್ಟುಕೊಳ್ತಿದ್ದ ರೋಹಿತ್​ ಶರ್ಮಾ, ಇದೀಗ ಭರ್ಜರಿ ವರ್ಕೌಟ್​ ಮಾಡ್ತಿದ್ದಾರೆ. ರನ್ನಿಂಗ್​, ಕಾರ್ಡಿಯೋ, ವೇಟ್​​ ಲಿಫ್ಟಿಂಗ್​ ಅಂತೆಲ್ಲಾ ಬೆವರಿಳಿಸ್ತಿದ್ದಾರೆ.

ಇದನ್ನೂ ಓದಿ:ಮಿಸ್ಟರಿ ಸ್ಪಿನ್ನರ್​​ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!

ಗುರುವಿನ ವಾರ್ನಿಂಗ್​ಗೆ ಶಿಷ್ಯರೆಲ್ಲಾ ಸರೆಂಡರ್​
ರೋಹಿತ್​ ಶರ್ಮಾ ಮಾತ್ರವಲ್ಲ.. ಹಾರ್ದಿಕ್​ ಪಾಂಡ್ಯ, ಶುಭ್​ಮನ್​ ಗಿಲ್​, ಯಶಸ್ವಿ ಜೈಸ್ವಾಲ್​​, ಕೆ.ಎಲ್​ ರಾಹುಲ್​ ಸೇರಿದಂತೆ ಎಲ್ಲಾ ಆಟಗಾರರು ಸೀರಿಯಸ್ಸಾಗಿ ವರ್ಕೌಟ್ ಆರಂಭಿಸಿದ್ದಾರೆ. ಜಿಮ್​​ನಲ್ಲಿ ಗಂಟೆಗಟ್ಟಲೇ ಬೆವರಿಳಿಸ್ತಾ ಫಿಟ್​ನೆಸ್​ ಕಾಯ್ದುಕೊಳ್ಳೋ ಸರ್ಕಸ್​​ ಆರಂಭಿಸಿದ್ದಾರೆ.

ಸೂಪರ್​​ ಸ್ಟಾರ್​​ಗಳೆಲ್ಲರ ಪವರ್​​ ಕಟ್
ಗಂಭೀರ್​ ಕೋಚ್​ ಪಟ್ಟವೇರಿದ ಬಳಿಕ ಟೀಮ್​ ಇಂಡಿಯಾ ಬದಲಾಗ್ತಿದೆ. ಮೊದಲೆಲ್ಲಾ ಸ್ಟಾರ್​​ಗಿರಿಗೆ ಹೆಚ್ಚಿನ ಆದ್ಯತೆಯಿತ್ತು. ಈಗ ಅದ್ಯಾವುದೂ ನಡೀತಿಲ್ಲ. ಸ್ಟಾರ್​ಗಳ ರೆಕ್ಕೆ ಪುಕ್ಕ ಕಟ್​ ಆಗಿದೆ. ಈಗೇನಿದ್ರೂ ಗಂಭೀರ್​ ಹೇಳಿದ್ದೇ ವೇದವಾಕ್ಯ. ಗುರುವಿನ ಮಾತೇ ಅಂತಿಮ.

ಹಾರ್ದಿಕ್​ಗೆ ಶಾಕ್​.. ಸೂರ್ಯನಿಗೆ ನಾಯಕತ್ವ
ಗಂಭೀರ್​ ಕೋಚ್​ ಆದ ಬಳಿಕ ಮೊದಲ ಮೀಟಿಂಗ್​ನಲ್ಲೇ ಬಿಗ್​ ಶಾಕ್​ ಕೊಟ್ಟಿದ್ರು. ನೆಕ್ಸ್ಟ್​​ ಕ್ಯಾಪ್ಟನ್​​ ಎಂದೇ ಬಿಂಬಿತವಾಗಿದ್ದ ಹಾರ್ದಿಕ್​​ ಪಾಂಡ್ಯಗೆ ಕೊಕ್​​ ಕೊಟ್ಟು, ಸೂರ್ಯ ಕುಮಾರ್​ಗೆ ಪಟ್ಟ ಕಟ್ಟಿದ್ರು. ಈ ಸರ್​​​ಪ್ರೈಸ್​ ನಿರ್ಧಾರದ ಹಿಂದೆ ಗಂಭೀರ್​ ಪಾತ್ರ ಮಹತ್ವದ್ದು. ಅಸಲಿಗೆ ಈ ಹಿಂದಿನ ಲಂಕಾ ಎದುರಿನ ಏಕದಿನ ಸರಣಿಯಿಂದ ವಿರಾಟ್​​ ಕೊಹ್ಲಿ-ರೋಹಿತ್​​ ಶರ್ಮಾ ವಿಶ್ರಾಂತಿ ಬಯಸಿದ್ರು. ಕೋಚ್​ ಗಂಭೀರ್​ ಈ ಸೂಪರ್​​​ ಸ್ಟಾರ್​​ಗಳ ಮನವಿಯನ್ನೇ ರಿಜೆಕ್ಟ್​ ಮಾಡಿದ್ರು. ಪರಿಣಾಮ ಅನಿವಾರ್ಯವಾಗಿ ಇಬ್ಬರೂ ಸರಣಿಯನ್ನಾಡಿದ್ರು.

ಇದನ್ನೂ ಓದಿ:ಬಳ್ಳಾರಿ ಜೈಲಲ್ಲಿ ದರ್ಶನ್ ಭೇಟಿಯಾದ ಸುಶಾಂತ್ ನಾಯ್ಡು; ಯಾರಿವರು..?

ಸಪೋರ್ಟ್​​ ಸ್ಟಾಫ್​ಗಳ ಆಯ್ಕೆಯಲ್ಲೂ​ ಮೇಲುಗೈ
ಸಪೋರ್ಟ್​​ ಸ್ಟಾಫ್​ಗಳ ಆಯ್ಕೆ ವಿಚಾರದಲ್ಲೂ ಗಂಭೀರ್​​ ಮೇಲುಗೈ ಸಾಧಿಸಿದ್ರು. ತಮಗೆ ಯಾವೆಲ್ಲಾ ಸಪೋರ್ಟ್​​ ಸ್ಟಾಫ್​​ಗಳು ಬೇಕೆಂದು ಬೇಡಿಕೆ ಇಟ್ಟಿದ್ರು. ಬಿಸಿಸಿಐ ಬಾಸ್​ಗಳು ಚಕಾರವೆತ್ತದೆ ಗಂಭೀರ್​ ಬೇಡಿಕೆಯನ್ನ ಪೂರೈಸಿದ್ರು. ಒಟ್ಟಿನಲ್ಲಿ ಗಂಭೀರ್​ ಕೋಚ್​ ಗಾದಿಗೇರಿದ ಮೇಲೆ ಟೀಮ್​ ಇಂಡಿಯಾಗೆ ಸಂಭಂದಿಸಿದ ಪ್ರತಿ ವಿಚಾರದಲ್ಲೂ ಗಂಭೀರ್​ ಬಿಗಿಹಿಡಿತ ಸಾಧಸಿರೋದು ಸ್ಪಷ್ಟವಾಗ್ತಿದೆ. ತಂಡದ ಆಯ್ಕೆ, ಕ್ಯಾಪ್ಟನ್​ ಸೆಲೆಕ್ಷನ್​, ಸಪೋರ್ಟ್​ ಸ್ಟಾಫ್​ ಆಯ್ಕೆ, ಫಿಟ್​ನೆಸ್​ ಮಾನದಂಡ. ಹೀಗೆ ಪ್ರತಿಯೊಂದು ವಿಚಾರದಲ್ಲೂ ಗಂಭೀರ್​​ ಮಾತೇ ವೇದವಾಕ್ಯವಾಗಿದೆ. ಒಂದೇ ಮಾತಲ್ಲಿ ಹೇಳಬೇಕಂದ್ರೆ, ಇಂಡಿಯನ್​ ಕ್ರಿಕೆಟ್​ನಲ್ಲೀಗ ಗಂಭೀರ್​ ದರ್ಬಾರ್​​ ಶುರುವಾಗಿದೆ.

ಇದನ್ನೂ ಓದಿ:24 ನಿಮಿಷಗಳ ಮಾತುಕತೆ..! ಪ್ರಸಾದ ಅಷ್ಟೇ ಅಲ್ಲ, ದರ್ಶನ್​​ಗಾಗಿ ವಿಜಯಲಕ್ಷ್ಮಿ ಏನೇನು ತಂದಿದ್ದರು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗಂಭೀರ್ ವಾರ್ನಿಂಗ್​ಗೆ ಹೆದರಿದ ಆಟಗಾರರು; ಸೂಪರ್​​ ಸ್ಟಾರ್​​ಗಳ ಪವರ್ ಕೂಡ ​ಕಟ್..!

https://newsfirstlive.com/wp-content/uploads/2024/07/Kohli_Rohit_Gambhir-IND.jpg

Load More