newsfirstkannada.com

ಚಿನ್ನದಂತ ಅವಕಾಶ ಕೈಚೆಲ್ಲಿದ ಸಂಜು ಸ್ಯಾಮ್ಸನ್.. ಹೀಗಾದರೆ ಪ್ಲೇಯಿಂಗ್-11 ಸ್ಥಾನ ಸಿಗೋದು ಡೌಟ್

Share :

Published June 2, 2024 at 3:42pm

    ಅಭ್ಯಾಸ ಪಂದ್ಯದಲ್ಲಿ ಸಂಜುಗೆ ಏನಾಯ್ತು? ಎಡವಿದ್ಯಾಕೆ?

    ಸಂಜು ಸ್ಯಾಮ್ಸನ್​ ಒಂದಕಿ ಆಟ ನೋಡಿ ಫ್ಯಾನ್ಸ್​ ಬೇಸರ

    ಭವಿಷ್ಯ ನುಡಿದ ಗಂಗೂಲಿ.. ಪ್ರತಿಭೆಗೆ ಕೊರತೆಯಿಲ್ಲ ಎಂದ ಮಾಜಿ ಪ್ಲೇಯರ್

ಟೀಂ ಇಂಡಿಯಾ ಈ ಬಾರಿ T20 ವಿಶ್ವಕಪ್​ನಲ್ಲಿ ಟ್ರೋಫಿ ಗೆಲ್ಲುವ ನಿರೀಕ್ಷೆಯನ್ನು ಬಹುತೇಕರು ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸ್ಪರ್ಧಿಸಿದರೆ ಗೆಲುವು ನಮ್ಮದೇ ಎಂಬ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ. ಅದರಲ್ಲೂ ನಿನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಜಯಿಸಿದೆ. ಇದು ಎಲ್ಲರ ಅಭಿಪ್ರಾಯವನ್ನು ಇಮ್ಮಡಿಗೊಳಿಸಿದೆ. ಆದರೆ ಸಂಜು ಸ್ಯಾಮ್ಸನ್ ಒಂದಕಿ​ ಆಟ ಮಾತ್ರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದೇ ಆಟ ಮುಂದುವರೆಸಿದರೆ ಪ್ಲೇಯಿಂಗ್​ 11ನಲ್ಲಿ ಸ್ಥಾನ ಪಡೆಯೋದು ಕಷ್ಟವಾಗಲಿದೆ.

ನಿನ್ನೆ ಭಾರತ ಮತ್ತು ಬಾಂಗ್ಲಾದೇಶ ತಂಡ ಅಭ್ಯಾಸದ ಪಂದ್ಯ ನಡೆಸಿತ್ತು. ಅದರಲ್ಲಿ ರೋಹಿತ್​ ನಾಯಕತ್ವದ ತಂಡ 60 ರನ್​ಗಳ ಜಯ ಸಾಧಿಸಿದೆ. ಇದು ಎಲ್ಲರಿಗೆ ಖುಷಿ ತಂದಿದೆ. ಆದರೆ ನಾಯಕನ ಜೊತೆಗೆ ಓಪನಿಂಗ್​​ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್​ ಕೇವಲ 1 ರನ್​ಗೆ ಔಟ್​ ಆಗಿದ್ದಾರೆ. 6 ಎಸೆತ ಎದುರಿಸಿ ಕೊನೆಗೆ ಶೋರಿಪುಲ್​ ಇಸ್ಲಾಂ ಎಸೆತಕ್ಕೆ LBW ಆಗುವ ಮೂಲಕ ಪೆವಿಲಿಯನತ್ತ ಸಾಗಿದರು.

ಇದನ್ನೂ ಓದಿ: INDvsPAK ಪಂದ್ಯಕ್ಕೆ ಡಿಮ್ಯಾಂಡೇ ಇಲ್ಲ! ಟಿಕೆಟ್​ ಖರೀದಿಸಲು ಮುಂದೆ ಬರುತ್ತಿಲ್ಲ ಫ್ಯಾನ್ಸ್​! ಯಾಕೆ?

ಸಂಜು ಆಟ ಈಗ ಟೀಂ ಇಂಡಿಯಾ ಫ್ಯಾನ್ಸ್​ಗೆ ಬೇಸರ ತರಿಸಿದೆ. ಅದರಲ್ಲೂ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿಸಿದ ಸಂಜುಗೆ ಈವಾಗ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ರಾಜಸ್ಥಾನ್​ ತಂಡವನ್ನು ಮುನ್ನಡೆಸಿದ್ದ ಸಂಜು ಅಭ್ಯಾಸ ಪಂದ್ಯದಲ್ಲಿ ಎಡವಿರೋದು ಅನೇಕರಿಗೆ ನೋವು ನೀಡಿದೆ.

ಭವಿಷ್ಯ ನುಡಿದ ಗಂಗೂಲಿ

ಸೌರವ್ ಗಂಗೂಲಿ ಟಿ20 ವಿಶ್ವಕಪ್ ಮತ್ತು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಟಿ20 ವಿಶ್ವಕಪ್ ಗೆಲ್ಲಲು ಭಾರತ ಪ್ರಬಲ ಸ್ಪರ್ಧಿ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾಗೆ ಸುವರ್ಣಾವಕಾಶವಿದೆ, ಆದರೆ ಭಾರತ ತಂಡದಂತೆ ಆಡಬೇಕಾಗುತ್ತದೆ. ತಂಡದ ಪ್ರತಿಭೆಗೆ ಕೊರತೆಯಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಫ್ಯಾನ್ಸ್​ಗೆ ಸಿಹಿ ಸುದ್ದಿ.. ವಿಶ್ವಕಪ್​ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್​​ ಕ್ರಿಕೆಟಿಗ

ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಾದ ನಂತರ ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಚಿನ್ನದಂತ ಅವಕಾಶ ಕೈಚೆಲ್ಲಿದ ಸಂಜು ಸ್ಯಾಮ್ಸನ್.. ಹೀಗಾದರೆ ಪ್ಲೇಯಿಂಗ್-11 ಸ್ಥಾನ ಸಿಗೋದು ಡೌಟ್

https://newsfirstlive.com/wp-content/uploads/2024/06/sanju-Samson.jpg

Load More