Advertisment

ಕೈ ಪಾಳಯದ ಆಪತ್ಬಾಂಧವ ಅಭಿಷೇಕ್ ಮನು ಸಿಂಘ್ವಿ: ಆದಾಯವೆಷ್ಟು, ವಿವಾದವೆಷ್ಟು?

author-image
Gopal Kulkarni
Updated On
ಕೈ ಪಾಳಯದ ಆಪತ್ಬಾಂಧವ ಅಭಿಷೇಕ್ ಮನು ಸಿಂಘ್ವಿ: ಆದಾಯವೆಷ್ಟು, ವಿವಾದವೆಷ್ಟು?
Advertisment
  • ತಂದೆಯೂ ಪ್ರಭಾವಿ ವಕೀಲ, ವಿದೇಶದಲ್ಲಿ ಸಿಕ್ಕಿದ್ದರು ಪ್ರಚಂಡ ಗುರು!
  • ವರ್ಷಕ್ಕೆ 300 ಕೋಟಿ ಆದಾಯ.. ಇವ್ರು ₹1800 ಕೋಟಿಯ ಕುಬೇರ ವಕೀಲ!
  • ಹಲವು ವಿವಾದಗಳಿಂದಲೂ ಸುದ್ದಿಯಾಗಿದ್ದ ಅಭಿಷೇಕ್ ಮನು ಸಿಂಘ್ವಿ!

ನವದೆಹಲಿ: ಮುಡಾ ಹಗರಣ ಆರೋಪ ಕೇಸ್‌ನಲ್ಲಿ ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿರೋದು ದೇಶದ ಖ್ಯಾತ ವಕೀಲರಾದ ಅಭಿಷೇಕ್ ಮನು ಸಿಂಘ್ವಿ. ಅಭಿಷೇಕ್ ಮನು ಸಿಂಘ್ವಿ ಕಾಂಗ್ರೆಸ್ ಹೊರತುಪಡಿಸಿದ ಅನೇಕ ಪಕ್ಷಗಳ ನಾಯಕರ ಪರವಾಗಿ ಕಾನೂನು ಯುದ್ಧ ಮಾಡಿದ್ದಾರಾದ್ರೂ ಇವರನ್ನ ಕಾಂಗ್ರೆಸ್ ಕಟ್ಟಪ್ಪ ಅಂತಾ ಕರೆಯೋದಕ್ಕೆ ಮುಖ್ಯ ಕಾರಣವಿದೆ. ಕಾಂಗ್ರೆಸ್ ಪಕ್ಷದ ಸದಸ್ಯ, ಹಿರಿಯ ವಕ್ತಾರರೂ ಆಗಿರುವಂತಾ ಅಭಿಷೇಕ್ ಮನು ಸಿಂಘ್ವಿ ರಾಜೀವ್ ಗಾಂಧಿಯಿಂದ ಹಿಡಿದು ಈಗ ಸಿದ್ದರಾಮಯ್ಯವರೆಗೂ ಅನೇಕ ಕಾಂಗ್ರೆಸ್ ನಾಯಕರ ಪರ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ ಮತ್ತು ಅನೇಕ ಬಾರಿ ಕಾಂಗ್ರೆಸ್ ನಾಯಕರನ್ನು ಕಾನೂನು ಸುಳಿಯಿಂದ ಪಾರು ಮಾಡಿದ್ದಾರೆ.

Advertisment

publive-image

ಕ್ರಿಮಿನಲ್ ಕೇಸ್‌ಗಳಿರಲಿ. ಸಾಂವಿಧಾನಿಕ ಸಂಘರ್ಷದ ಕೇಸ್‌ಗಳಿರಲಿ. ಆಡಳಿತಕ್ಕೆ ಸಂಬಂಧಪಟ್ಟ ಕೇಸ್‌ಗಳೇ ಇರಲಿ, ಅಷ್ಟೇ ಯಾಕೆ, ಕಾರ್ಪೋರೇಟ್ ಕಾನೂನು ಕೇಸ್‌ಗಳನ್ನೂ ಸೇರಿದಂತೆ ಅತ್ಯಂತ ಕಠಿಣ ಕೇಸ್‌ಗಳಲ್ಲಿ ವಾದ ಮಂಡಿಸಿ ಎದುರಾಳಿ ವಕೀಲರನ್ನು ತಬ್ಬಿಬ್ಬು ಮಾಡಿರೋ ಅನೇಕ ಉದಾಹರಣೆಗಳಿವೆ. ಹಾಗಾದ್ರೆ, ಕಾಂಗ್ರೆಸ್ ಹಿರಿಯ ನಾಯಕ, ದೇಶದ ಹಿರಿಯ ವಕೀಲ ಆಗಿರುವಂತಾ ಅಭಿಷೇಕ್ ಮನು ಸಿಂಘ್ವಿ ಎಲ್ಲಿಯವರು? ಅವರ ಹಿನ್ನೆಲೆಯೇನು? ಲಾಯರ್ ಆಗಿದ್ದುಕೊಂಡೇ ರಾಜಕೀಯ ಜರ್ನಿ ಆರಂಭಿಸಿದ್ದು ಹೇಗೆ? ಇವರ 1800 ಕೋಟಿ ರೂಪಾಯಿ ಆಸ್ತಿಯ ರಹಸ್ಯವೇನು ಎಂಬುದೆಲ್ಲವನ್ನೂ ಹೇಳ್ತೀವಿ ಕೇಳಿ.

publive-image

ರಾಜಸ್ಥಾನದ ಜೋಧ್​ಪುರ್​ನಲ್ಲಿನ ಜನನ

ಅಭಿಷೇಕ್ ಮನು ಸಿಂಘ್ವಿ ಜನಿಸಿದ್ದು ರಾಜಸ್ಥಾನದ ಜೋಧ್‌ಪುರ್‌ನಲ್ಲಿ. 1959ರಲ್ಲಿ ರಾಜಸ್ಥಾನದ ಜೋಧ್‌ಪುರ್‌ನಲ್ಲಿ ಜನಿಸಿದ ಸಿಂಘ್ವಿಯವರ ತಂದೆ ಕೂಡ ಪ್ರಭಾವಿ ವಕೀಲರಾಗಿದ್ರು. ಅಭಿಷೇಕ್ ಮನುಸಿಂಘ್ವಿ ತಂದೆ ಎಲ್‌.ಎಂ.ಸಿಂಘ್ವಿ ದೇಶದ ಖ್ಯಾತ ಕಾನೂನು ಪಂಡಿತರು. ತಾಯಿ ಕಮಲಾ ಹಿಂದಿ ಸಾಹಿತಿಯಾಗಿದ್ದರು. ದೆಹಲಿಯ ಸೇಂಟ್ ಕೊಲಂಬಸ್ ಸ್ಕೂಲ್​ನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ಅಭಿಷೇಕ ಮನುಸಿಂಘ್ವಿ, ಬಳಿಕ ದೆಹಲಿಯ ಪ್ರತಿಷ್ಠಿತ ಸೇಂಟ್ ಸ್ಟೀಫನ್ ಕಾಲೇಜ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಮರ್ಜೆನ್ಸಿ ಅಧಿಕಾರಗಳ ಬಗ್ಗೆ ಪಿಎಚ್‌ಡಿ ಥೀಸೀಸ್ ಬರೆದು ಡಾಕ್ಟರೇಟ್ ಪಡೆದಿದ್ದಾರೆ.

ಇದನ್ನೂ ಓದಿ:300 ಮಂದಿ ಕೆಲಸ ಮಾಡುತ್ತಿದ್ದಾಗ ಕಂಪನಿಯಲ್ಲಿ ಭಯಾನಕ ಸ್ಫೋಟ; ಸಾವಿನ ಸಂಖ್ಯೆ 15ಕ್ಕೆ ಏರಿಕೆ!

Advertisment

ವಿಶೇಷ ಅಂದ್ರೆ, ಅಭಿಷೇಕ್‌ ಮನು ಸಿಂಘ್ವಿ ಲಂಡನ್‌ನ ಕೇಂಬ್ರಿಡ್ಜ್ ವಿವಿಯಲ್ಲಿ ಸರ್ ವಿಲಿಯಮ್ ವೇಡ್ ಎಂಬುವವರ ಶಿಷ್ಯರಾಗಿದ್ರು. ಅವರ ಮಾರ್ಗದರ್ಶನದಲ್ಲೇ ಪಿಎಚ್‌ಡಿ ಪೂರ್ಣಗೊಳಿಸಿದ್ರು. ಇವ್ರು ಈ ಮಟ್ಟಿಗಿನ ಕಾನೂನು ಪಾಂಡಿತ್ಯ ಪಡೆದುಕೊಂಡಿದ್ದರ ಹಿಂದೆ ಆ ಕೇಂಬ್ರಿಡ್ಜ್ ವಿವಿಯ ಗುರುವಿನ ಪಾತ್ರವೂ ಇದೆ ಎನ್ನಲಾಗಿದೆ. ಇನ್ನು, ಅಭಿಷೇಕ್ ಸಿಂಘ್ವಿ ಅವರು ಗಜಲ್ ಮತ್ತು ಸೂಫಿ ಗಾಯಕಿ ಅನಿತಾ ಸಿಂಘ್ವಿ ಅವರನ್ನು ವಿವಾಹವಾಗಿದ್ದು, ಸಿಂಘ್ವಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಹೆಸರು ಅನುಭವ ಮತ್ತು ಅವಿಷ್ಕರ್.

ಇದನ್ನೂ ಓದಿ:ಮುಡಾ ಕೇಸ್​ನಿಂದ ಸಿದ್ದರಾಮಯ್ಯರನ್ನು ಬಚಾವ್​ ಮಾಡಿದ್ದು ಮನು ಸಿಂಘ್ವಿ; ಯಾರು ಈ ಆಪತ್ಭಾಂದವ? 
ಅಭಿಷೇಕ್ ಸಿಂಘ್ವಿಯವರ ಲಾಯರ್ ಮತ್ತು ರಾಜಕಾರಣದ ಜರ್ನಿಯೇ ಒಂದು ರೋಚಕ ಅಧ್ಯಾಯ. ವಿದೇಶದಲ್ಲಿ ಉನ್ನತ ವ್ಯಾಸಂಗ ಮುಗಿಸಿಕೊಂಡು ಬಂದು ಸುಪ್ರೀಂ ಕೋರ್ಟ್‌ನಲ್ಲಿ ವಕೀಲಗಿರಿ ಆರಂಭಿಸಿದ ಮನು ಸಿಂಘ್ವಿಯವರು ತಮ್ಮ 37 ರ ವಯಸ್ಸಿಗೇ . ಅಂದ್ರೆ, 1997 ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರ್ ಹುದ್ದೆಗೇರಿದ್ರು. ಅತಿ ಚಿಕ್ಕ ವಯಸ್ಸಿಗೆ ಹೆಚ್ಚುವರಿ ಸಾಲಿಸಿಟರ್ ಜನರ್ ಆದಂತಾ ಹೆಗ್ಗಳಿಕೆ ಸಿಂಘ್ವಿಯವರದ್ದು.

ಇದನ್ನೂ ಓದಿ:ಚಂದ್ರನಂಗಳದಲ್ಲಿ ಮತ್ತೊಂದು ಮಹತ್ವದ ಸಾಧನೆಗೆ ಇಸ್ರೋ ಸಜ್ಜು; ಏನೆಲ್ಲಾ ಸಿದ್ಧತೆ ನಡೆದಿದೆ?

Advertisment

2001ರಿಂದ ರಾಜಕಾರಣಕ್ಕೂ ಕಾಲಿಟ್ಟ ಸಿಂಘ್ವಿಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಜವಾಬ್ದಾರಿ ವಹಿಸಿಕೊಂಡ್ರು. 2006 ರಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದರು. 2010 ರಲ್ಲಿ ವಿದೇಶಾಂಗ ಇಲಾಖೆಯ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಸಿಂಘ್ವಿಯವರು 2018 ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ಪಕ್ಷ ಸಿಂಘ್ವಿಯವರಿಗೆ ಪಶ್ಚಿಮಬಂಗಾಳದಿಂದ ರಾಜ್ಯಸಭೆಗೆ ನಿಲ್ಲಿಸಿ ಗೆಲ್ಲಿಸಿಕೊಂಡಿತ್ತು. ಆದ್ರೆ, ಈ ವರ್ಷ ಹಿಮಾಚಲಪ್ರದೇಶದಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯಸಭೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು.

publive-image

ಸಿಂಘ್ವಿ ಕಾಂಗ್ರೆಸಿಗರೇ ಆದ್ರೂ. ಇವ್ರನ್ನ ಆಪ್‌ ಪಕ್ಷದ ಪಾಲಿನ ಆಪದ್ಭಾಂದವ ಅಂತಲೂ ಕರೀತಾರೆ. ಯಾಕಂದ್ರೆ, ದೆಹಲಿ ಲಿಕ್ಕರ್ ಕೇಸ್, ಅಕ್ರಮ ಹಣ ಹೂಡಿಕೆ ಕೇಸ್, ದೆಹಲಿ ವಕ್ಫ್ ಬೋರ್ಟ್ ಕೇಸ್, ಆಕ್ಸಿಜನ್ ಸಿಲಿಂಡರ್ ಕೇಸ್, ಮುಖ್ಯ ಕಾರ್ಯದರ್ಶಿಗೆ ಸಂಬಂಧಿಸಿದ ಪ್ರಕರಣ, ಏಮ್ಸ್ ಆಸ್ಪತ್ರೆ ಕೇಸ್, ಸೇರಿದಂತೆ ಹಲವಾರು ಕೇಸ್‌ಗಳಲ್ಲಿ ಆಪ್ ಪಕ್ಷದ ಪರವಾಗಿ ವಕಾಲತ್ತು ವಹಿಸಿ ಭುಜಬಲದಂತೆ ನಿಂತಿದ್ದವರು ಮನು ಸಿಂಘ್ವಿ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸೋಮನಾಥ್ ಭಾರತಿ ಸೇರಿದಂತೆ ಹಲವಾರು ಖ್ಯಾತ ಆಪ್ ನಾಯಕರಿಗಾಗಿ ಮನು ಸಿಂಘ್ವಿಯೇ ಆಪ್ತರಕ್ಷಕನಂತೆ ಕಾನೂನು ಹೋರಾಟ ಮಾಡಿದ್ರು.. ಮತ್ತು ಈಗಲೂ ವಕಾಲತ್ತು ವಹಿಸ್ತಿದ್ದಾರೆ..!

ದೇಶದ ಹಲವು ರಾಜಕೀಯ ನಾಯಕರು ಕಾನೂನು ಸಂಕಷ್ಟಕ್ಕೆ ಸಿಲುಕಿದಾಗ ಕಾನೂನು ಹೋರಾಟ ನಡೆಸಿ ಪಾರು ಮಾಡಿರೋ ಅಭಿಷೇಕ್ ಮನು ಸಿಂಘ್ವಿಯವರು.. ತಾವೇ ಹಲವು ಬಾರಿ ವಿವಾದಗಳಿಂದ ಸುದ್ದಿಯಾಗಿದ್ದಿದೆ. 2012 ರಲ್ಲಿ ಅಭಿಷೇಕ ಮನುಸಿಂಘ್ವಿ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಲೀಕ್ ಆಗಿತ್ತು.

Advertisment

ಆ ವೇಳೆ ಹೈಕೋರ್ಟ್ ನಿಂದ ವಿಡಿಯೋ ಹರಡದಂತೆ ತಡೆಯಾಜ್ಞೆ ಪಡೆದಿದ್ದರು. ಜೊತೆಗೆ ಆಗ ತಾವು ಹೊಂದಿದ್ದ ಕಾಂಗ್ರೆಸ್ ವಕ್ತಾರ ಹುದ್ದೆಗೆ ಹಾಗೂ ಪಾರ್ಲಿಮೆಂಟ್ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. 2014 ರಲ್ಲಿ ಅಭಿಷೇಕ ಮನುಸಿಂಘ್ವಿಗೆ ಇನ್ ಕಮ್ ಟ್ಯಾಕ್ಸ್ ಸೆಟ್ಲಮೆಂಟ್ ಕಮೀಷನ್ , ತಮ್ಮ ಕಚೇರಿಯ ನಿರ್ವಹಣೆಯ ಖರ್ಚುವೆಚ್ಚಗಳನ್ನು ಸರಿಯಾಗಿ ನೀಡದೇ ಇರೋದಕ್ಕೆ 57 ಕೋಟಿ ರೂ ದಂಡ ವಿಧಿಸಿತ್ತು.
ವರ್ಷಕ್ಕೆ 300 ಕೋಟಿಗೂ ಹೆಚ್ಚಿನ ಆದಾಯ ಹೊಂದಿರೋ ಟಾಪ್ ಲಾಯರ್!

ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ 1872 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯ ಒಡೆಯ . ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಮ್ಯೂಚುವಲ್ ಫಂಡ್ ಸೇರಿದಂತೆ ಷೇರುಪೇಟೆಯಲ್ಲಿನ ಹೂಡಿಕೆಯ ವಿವರಗಳೂ ಇವೆ. ಸಿಂಘ್ವಿ ಅವರ ಪಿಪಿಎಫ್ ಖಾತೆಯಲ್ಲಿ 76 ಲಕ್ಷಕ್ಕೂ ಹೆಚ್ಚು ಹಣ ಜಮೆಯಾಗಿದೆ. ಚಿನ್ನ ಮತ್ತು ಬೆಳ್ಳಿಯ ಆಭರಣಗಳು 71 ಲಕ್ಷಕ್ಕೂ ಹೆಚ್ಚು ಮೌಲ್ಯದ್ದಾಗಿದೆ. ಅದೇ ವೇಳೆ ಅವರ ಪತ್ನಿ ಬಳಿ 58 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳಿವೆ.

ಸಿಂಘ್ವಿ ದಂಪತಿ 414 ಕೋಟಿ ರೂಪಾಯಿ ಮೌಲ್ಯದ ವಸತಿ ಆಸ್ತಿಯನ್ನೂ ಹೊಂದಿದ್ದಾರೆ. ಒಟ್ಟಾರೆ ಅಭಿಷೇಕ್ ಮನು ಸಿಂಘ್ವಿ 1458 ಕೋಟಿ ರೂ.ಗೂ ಹೆಚ್ಚು ಚರ ಆಸ್ತಿ ಹೊಂದಿದ್ದಾರೆ. ಅದೇ ವೇಳೆ ಅವರ ಒಡೆತನದ ಸ್ಥಿರಾಸ್ತಿಯ ಮೌಲ್ಯ 414 ಕೋಟಿ ರೂ. ಈ ಸಂಪತ್ತು ವಕೀಲರ ಶುಲ್ಕ, ಸಂಸದರ ವೇತನ ಮತ್ತು ಹೂಡಿಕೆ ಆದಾಯದಿಂದ ಬಂದಿದೆ. ಅವರ ಪತ್ನಿ ಸಂಗೀತಾ ಗಾಯಕಿ. ಅವನ ಸಂಪತ್ತಿನ ಮೂಲವು ಬಾಡಿಗೆ ಆದಾಯ, ಹೂಡಿಕೆ ಆದಾಯ ಮತ್ತು ರಾಯಧನ ಇತ್ಯಾದಿಗಳಿಂದ.

Advertisment

publive-image

ಅಲ್ಲದೇ, ಸಿಂಘ್ವಿಗೆ ದುಬಾರಿ ಕಾರುಗಳ ಕ್ರೇಜ್​ ಕೂಡ ಇದೆ. ಮರ್ಸಿಡಿಸ್ ಬೆಂಜ್ ಸೇರಿದಂತೆ ಇತರೆ ಐಶಾರಾಮಿ ಕಾರುಗಳು ಇವ್ರ ಬಳಿ ಇದೆ. ₹2.37 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಹೊರತುಪಡಿಸಿ, ಸಿಂಘ್ವಿ 22.34 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಫಾರ್ಚುನರ್ ಸೇರಿದಂತೆ 31 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಎರಡು ಕಿಯಾ ಕಂಪನಿಯ ಕಾರುಗಳನ್ನು ಹೊಂದಿದ್ದಾರೆ. ಅವರ ಪತ್ನಿ 32 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಯೊಟಾ ಕ್ಯಾಮ್ರಿ ಕಾರು ಹೊಂದಿದ್ದಾರೆ. ಸಿಂಘ್ವಿಗೆ 4 ಕೋಟಿ ಮೌಲ್ಯದ ಕೃಷಿ ಭೂಮಿ ಇದೆ. ಇದಲ್ಲದೇ ಕೃಷಿಯೇತರ ಭೂಮಿಯೂ ಇದೆ.

ತೆಲಂಗಾಣದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರೋ ಸಿಂಘ್ವಿ!

ಅಭಿಷೇಕ ಮನುಸಿಂಘ್ವಿ, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳದಿಂದ ಎರಡು ಭಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹಿಮಾಚಲ ಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಸೋಮವಾರವಷ್ಟೇ ತೆಲಂಗಾಣದ ರಾಜ್ಯಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಹುತೇಕ ಅವಿರೋಧ ಆಯ್ಕೆಯಾಗೋದು ಖಚಿತವಾಗಿದೆ. ಒಟ್ಟಾರೆ, ಕಾಂಗ್ರೆಸ್ ಕಟ್ಟಪ್ಪನಂತಿರೋ ಅಭಿಷೇಕ್ ಮನು ಸಿಂಘ್ವಿ ಈಗ ಸಿದ್ದು ಪಾಲಿನ ಆಪ್ತರಕ್ಷಕನಂತೆ ಬಂದಿದ್ದಾರೆ. ಈ ಹಿಂದೆ ಅನೇಕ ಕಾಂಗ್ರೆಸ್ ನಾಯಕರನ್ನು ಕಾನೂನು ಸುಳಿಯಿಂದ ಪಾರು ಮಾಡಿರೋ ಸಿಂಘ್ವಿ ಈಗ ಸಿಎಂ ಸಿದ್ದುರನ್ನು ಮುಡಾ ಚಕ್ರವ್ಯೂಹದಿಂದ ರಕ್ಷಿಸ್ತಾರಾ ಅನ್ನೋದೇ ಸದ್ಯದ ಅತಿದೊಡ್ಡ ಕುತೂಹಲ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment