/newsfirstlive-kannada/media/media_files/2026/02/22/annayya-2026-02-22-15-44-15.jpg)
ಅಣ್ಣಯ್ಯ ಧಾರಾವಾಹಿಯಲ್ಲಿ ಸದ್ಯ ರತ್ನ ಮದುವೆ ಸಂಭ್ರಮ ಶುರುವಾಗಿದೆ. ಈ ಗ್ಯಾಪ್​ನಲ್ಲಿಯೇ ಪ್ರೇಮಿಗಳ ದಿನವನ್ನೂ ಆಚರಿಸಲಾಗಿದೆ. ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಶಿವುಗೆ ಪಾರು ಸಖತ್​ ಸರ್ಪ್ರೈಸ್ ನೀಡಿದ್ದಾಳೆ. ಸದ್ಯ ಶಿವು ಮತ್ತು ಪಾರು ಪ್ರೇಮ ಪರ್ವ ನಡೆಯುತ್ತಿದೆ.
ಪ್ರೀತಿ ಅಂದ್ರೆ ಮಧುರವಾದ ಭಾವನೆ. ಅದನ್ನ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಣ್ಣಯ್ಯ ಧಾರವಾಹಿಯಲ್ಲೂ ಹಾಗೇ ಶಿವು ಮತ್ತು ಪಾರ್ವತಿ ನಡುವಿನ ಪ್ರೀತಿಯನ್ನ ವರ್ಣಿಸಲು ಸಾಧ್ಯವಿಲ್ಲ. ಈ ಜೋಡಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.. ಸದ್ಯ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಬಾಲ್ಯದ ಪ್ರೀತಿ ದಿನಗಳನ್ನ ಶಿವುಗೆ ನೆನಪಿಸಿದ್ದಾಳೆ ಪಾರು.
ಒಂದು ಕಡೆ ಮಾಕಾಳವ್ವನ ಪವಾಡದಿಂದಾಗಿ ಶಿವು, ತಾನು ದ್ವೇಷಿಸುವ ತಾಯಿ ಶಾರದಮ್ಮಳನ್ನು ಮನೆಗೆ ಕರೆತಂದಿದ್ದಾನೆ. ಮಾವ ಶಂಕರಣ್ಣನ ಜೊತೆ ಸೇರಿಕೊಂಡ ಪಾರು, ತನ್ನ ಅತ್ತೆ ಮನೆಯಲ್ಲಿಯೇ ಉಳಿಯುವಂತೆ ಮಾಡಿಕೊಂಡಿದ್ದಾಳೆ. ಮತ್ತೊಂದು ಕಡೆ ಶಿವು ಮೊದಲ ತಂಗಿ ರತ್ನಾಳ ಮದುವೆ ತಯಾರಿ ನಡೆಯುತ್ತಿದೆ. ಈ ಮಧ್ಯೆ ಅಣ್ಣಯ್ಯ ಧಾರಾವಾಹಿಯಲ್ಲಿ ಪ್ರೇಮಿಗಳ ದಿನದ ಸಂಭ್ರಮ ನಡೆಯುತ್ತಿದೆ.
ಶಿವುಗೆ ಪಾರು ಸಖತ್​ ಸರ್ಪ್ರೈಸ್ ನೀಡಿದ್ದಾಳೆ. ಶಿವು ಬಾಲ್ಯದಲ್ಲಿ ತನಗೆ ನೀಡಿದ ಚಾಕ್​ಲೇಟ್​ ಪೇಪರ್​, ನವಿಲುಗರಿ, ಬುಗುರಿ ಈಗೇ ಕೆಲ ವಸ್ತುಗಳನ್ನ ಕಲೆಕ್ಟ್​ ಮಾಡಿ ಶಿವು ಮುಂದೆ ತಂದು ಬಾಲ್ಯದ ನೆನಪುಗಳನ್ನ ಮರಳಿ ನೆನಪಿಸಿದ್ದಾಳೆ. ಇನ್ನು ಪಾರು ಕೊಟ್ಟ ಕ್ಯೂಟ್​ ಸರ್ಪ್ರೈಸ್​ಗೆ ಶಿವು ಫುಲ್​ ಖುಷ್​ ಆಗಿದ್ದಾನೆ..
ಪಾರ್ವತಿಗೆ ಮಂಡಿಯೂರಿ ಈ ಜಗತ್ತೇ ಕೈ ಮೀರಿ ಹೋದ್ರು ನನಗೆ ನಿನ್ನ ಮೇಲೆ ಇರೋ ಪ್ರೀತಿ ಮೀತಿ ಮೀರೊ ಹೋಗ್ತಾ ಇರುತ್ತೆ. ನೀನು ಈ ಪ್ರೀತಿಯನ್ನ ಹಣದಲ್ಲಿ ಅಲೆಯೋದಾದ್ರೆ ಈ ಜಗತ್ತಿನನಲ್ಲಿ ನನಗಿಂತ ಸಿರಿವಂತ ಇನ್ಯಾರು ಇಲ್ಲಾ. ಭಕ್ತಿಯಲ್ಲಿ ಅಲೆಯೋದಾದ್ರೆ ಪ್ರತಿಯೊಂದು ಕ್ಷಣಕ್ಕೂ ಮುಕ್ತಿ ಪಡೆದುಕೊಳ್ಳೊ ಭಕ್ತ ನಾನು. ಅದೇ ಶಕ್ತಿಯಾಗಿ ಅಲೆಯೋದಾದ್ರೆ ಬಲರಾಮ , ಬೀಮ ಇಬ್ಬರು ನನ್ನ ಭುಜ ತಟ್ಟಬೇಕು ಅಂತಾ ಶಕ್ತಿವಂತ ನಾನು... ನಾವು ನಿಮ್ಮವರು ನೀವು ನಮ್ಮವರು.. ಯಾವತ್ತು ನಿನ್ನನ್ನ ಬಿಟ್ಟೇ ಕೊಡದ ಬೆಲ್ಲದಂತ ಪ್ರೀತಿ ನಂದು ಅಂತ ಪ್ರಪೋಸ್​ ಮಾಡಿದ್ದಾನೆ.. ಇನ್ನು ಶಿವು ಪ್ರಫೊಸ್​ಗೆ ಪಾರು ಕರಗಿ ನೀರಾಗಿದ್ದಾಳೆ..
ಒಟ್ನಲ್ಲಿ ಇಬ್ಬರ ಪ್ರೀತಿಯ ಕ್ಷಣಗಳನ್ನ ವೀಕ್ಷಕರು ಎಂಜಾಯ್ ಮಾಡ್ತಿದ್ದಾರೆ. ಜೊತೆಗೆ ರಿಯಲ್ ಲೈಫ್‌ನಲ್ಲೂ ಈ ಜೋಡಿ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ಪೋಷಕರೇ ಎಚ್ಚರ.. ಲೂಡೋ ಕಾಯಿನ್ ನುಂಗಿ ಬಾಲಕಿ ದುರಂತ ಅಂತ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us