Advertisment

ಪೋಷಕರೇ ಎಚ್ಚರ.. ಲೂಡೋ ಕಾಯಿನ್ ನುಂಗಿ ಬಾಲಕಿ ದುರಂತ ಅಂತ್ಯ

ಮನೆಯಲ್ಲಿ ಸಹೋದರರೊಂದಿಗೆ ಖುಷಿಯಿಂದ ಲೂಡೋ ಆಟವಾಡುತ್ತಿದ್ದ ಬಾಲಕಿಯೊಬ್ಬಳು, ಆಕಸ್ಮಿಕವಾಗಿ ಪ್ಲಾಸ್ಟಿಕ್ ಕಾಯಿನ್ ನುಂಗಿ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಕೊಲ್ಯ ಎಂಬಲ್ಲಿ ನಡೆದಿದೆ.

author-image
Ganesh Kerekuli
mangaluru ludo
Advertisment

ಮಂಗಳೂರು: ಮನೆಯಲ್ಲಿ ಸಹೋದರರೊಂದಿಗೆ ಖುಷಿಯಿಂದ ಲೂಡೋ ಆಟವಾಡುತ್ತಿದ್ದ ಬಾಲಕಿಯೊಬ್ಬಳು, ಆಕಸ್ಮಿಕವಾಗಿ ಪ್ಲಾಸ್ಟಿಕ್ ಕಾಯಿನ್ ನುಂಗಿ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಕೊಲ್ಯ ಎಂಬಲ್ಲಿ ನಡೆದಿದೆ.

Advertisment

ಘಟನೆಯ ವಿವರ

ಮೃತ ಬಾಲಕಿಯನ್ನು ತನುಷ್ಕಾ (8) ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿಗಳಾದ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ.

ಇದನ್ನೂ ಓದಿ: ಸೂಪರ್​ ಸಂಡೆಯ ಮಹಾ ಕದನಕ್ಕೆ ಕೌಂಟ್​​ಡೌನ್​.. ಈ 6 ಪವರ್ ಹಿಟ್ಟರ್​​ಗಳ ಬಗ್ಗೆ ಗೊತ್ತಾ ನಿಮ್ಗೆ..?

ಮನೆಯಲ್ಲಿ ತನ್ನ ಸಹೋದರ-ಸಹೋದರಿಯರೊಂದಿಗೆ ತನುಷ್ಕಾ ಲೂಡೋ ಆಟವಾಡುತ್ತಿದ್ದಳು. ಆಟದ ಭರಾಟೆಯಲ್ಲಿ ಪ್ಲಾಸ್ಟಿಕ್ ಕಾಯಿನ್ ಒಂದನ್ನು ಬಾಯಿಗೆ ಹಾಕಿಕೊಂಡಿದ್ದಾಳೆ. ಅದು ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ ಬಾಲಕಿಗೆ ಉಸಿರಾಡಲು ಕಷ್ಟವಾಗಿ, ಉಸಿರುಗಟ್ಟಿ ತೀವ್ರ ಅಸ್ವಸ್ಥಗೊಂಡಿದ್ದಾಳೆ.

Advertisment

ತಕ್ಷಣ ಇದನ್ನು ಗಮನಿಸಿದ ಪೋಷಕರು ಹಾಗೂ ಸ್ಥಳೀಯರು ಬಾಲಕಿಯನ್ನು ಉಳಿಸಿಕೊಳ್ಳಲು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ. ಆಟದ ಸಮಯದಲ್ಲಿ ಸಂಭವಿಸಿದ ಈ ಅನಿರೀಕ್ಷಿತ ಘಟನೆ ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಹರಿಣಗಳಿಗೆ ಕಾದಿಗೆ ‘ಫೈವ್​ ಸ್ಟಾರ್’​ ಪಂಚ್.. ಪಂದ್ಯಕ್ಕೂ ಮುನ್ನವೇ ಭಯ ಹುಟ್ಟಿಸಿದ ಸ್ಟಾರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment