ಹರಿಣಗಳಿಗೆ ಕಾದಿಗೆ ‘ಫೈವ್​ ಸ್ಟಾರ್’​ ಪಂಚ್.. ಪಂದ್ಯಕ್ಕೂ ಮುನ್ನವೇ ಭಯ ಹುಟ್ಟಿಸಿದ ಸ್ಟಾರ್..!

ಇಂಡೋ-ಆಫ್ರಿಕಾ ಸೂಪರ್​ -8 ಸಮರ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ನಮೋ ಅಂಗಳದಲ್ಲಿ ನಡೆಯೋ ಹೈವೋಲ್ಟೆಜ್​ ಕದನದಲ್ಲಿ ಟೀಮ್​ ಇಂಡಿಯಾನೇ ಗೆಲ್ಲೋ ಫೇವರಿಟ್​. ಈ ಐವರು ಆಟಗಾರರು ಎದುರಾಳಿ ಸೌತ್​ ಆಫ್ರಿಕಾ ಪಡೆಯಲ್ಲಿ ಪಂದ್ಯಕ್ಕೂ ಮುನ್ನವೇ ಭಯ ಹುಟ್ಟಿಸಿದ್ದಾರೆ.

author-image
Ganesh Kerekuli
team india (22)
Advertisment
  • ಇಂಡೋ-ಆಫ್ರಿಕಾ ಸೂಪರ್​-8 ಸಮರಕ್ಕೆ ಕೌಂಟ್​​ಡೌನ್
  • ಸೌತ್​ ಆಫ್ರಿಕಾ ಎದುರು ತಿಲಕ್​ ಫೆಂಟಾಸ್ಟಿಕ್ ಆಟ
  • ಆಫ್ರಿಕನ್​ ಬೌಲರ್ಸ್​ಗೆ ಸುಡುವ ಸೂರ್ಯನ ಭಯ

ಇಂಡೋ-ಆಫ್ರಿಕಾ ಸೂಪರ್​ 8 ಸಮರಕ್ಕೆ ಕೌಂಟ್​​ಡೌನ್ ಆರಂಭವಾಗಿದೆ. ಸೋಲಿಲ್ಲದ ಸರದಾರನಾಗಿ ಸೂಪರ್​​-8ಗೆ ಎಂಟ್ರಿ ಕೊಟ್ಟಿರೋ ಮೆನ್​ ಇನ್​ ಬ್ಲ್ಯೂ ಅಜೇಯ ಓಟ ಮುಂದುವರೆಸೋಕೆ ತುದಿಗಾಲಲ್ಲಿ ನಿಂತಿದೆ. ಟಿ20 ಕ್ರಿಕೆಟ್​​ನಲ್ಲಿ ಸೌತ್​ ಆಫ್ರಿಕಾ ಬಲಿಷ್ಠ ತಂಡವೇ.  ಟೀಮ್​ ಇಂಡಿಯಾ ಮುಂದೆ ಆಫ್ರಿಕಾದ ಆರ್ಭಟ ನಡೆಯಲ್ಲ. ಈ ಐವರು ಆಟಗಾರರು ಸಾಕು ಸೌತ್​ ಆಫ್ರಿಕಾನ ಉಡೀಸ್​ ಮಾಡೋಕೆ.

ವಿಶ್ವಕಪ್​ ಟೂರ್ನಿಯಲ್ಲಿ ಇನ್ನೂ ಅಸಲಿ ತಿಲಕ್​ ವರ್ಮಾ ದರ್ಶನವಾಗಿಲ್ಲ. ಆ್ಯಂಕರ್​ ರೋಲ್​ ಪ್ಲೇ ಮಾಡ್ತಾ ಡಿಸೆಂಟ್​ ಇನ್ನಿಂಗ್ಸ್​ ಕಟ್ಟಿರೋ ಹೈದ್ರಾಬಾದ್​ ಬ್ಯಾಟರ್​​ ಇಂದು ಘರ್ಜಿಸೋದು ಪಕ್ಕಾ. ಸೌತ್​​ ಆಫ್ರಿಕಾ ಎದುರು ತಿಲಕ್​ ವರ್ಮಾ ಸಾಲಿಡ್​ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಆಡಿದ 10 ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 70.85ರ ಸರಾಸರಿಯಲ್ಲಿ 496 ರನ್​ ಚಚ್ಚಿದ್ದಾರೆ. 2 ಸೆಂಚುರಿ, 2 ಹಾಫ್​ ಸೆಂಚುರಿ ಸಿಡಿಸಿ ಆರ್ಭಟಿಸಿರೋ ತಿಲಕ್​ ವರ್ಮಾ ಇಂದೂ ಆಫ್ರಿಕನ್​ ಬೌಲರ್​​ಗಳ ಮೇಲೆ ಸವಾರಿ ಮಾಡೋಕೆ ಸಜ್ಜಾಗಿದ್ದಾರೆ. 

ಇದನ್ನೂ ಓದಿ:ಈ ದೃಶ್ಯದ ಹಿಂದೆ ಸಹಿಸಲಾಗದ ಸಂಕಟ, ತೀರಲಾರದ ನೋವು.. ಅಮ್ಮ ಎಲ್ಲಿಗೆ ಹೋದ್ಲು..?

Team india

ಟಿ20 ವಿಶ್ವಕಪ್​ನಲ್ಲಿ ಸಾಲಿಡ್​​ ರಿಧಮ್​ನಲ್ಲಿ ಬ್ಯಾಟಿಂಗ್​ ನಡೆಸ್ತಾ ಇರೋ ಟೀಮ್​ ಇಂಡಿಯಾ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ ಕೂಡ ಸೌತ್​ ಆಫ್ರಿಕಾ ಕ್ಯಾಂಪ್​ನಲ್ಲಿ ಭಯ ಹುಟ್ಟಿಸಿದ್ದಾರೆ. ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಸೂರ್ಯ ಕುಮಾರ್​​ ಬೊಂಬಾಟ್​ ಬ್ಯಾಟಿಂಗ್ ನಡೆಸಿದ್ದಾರೆ. ಆಡಿದ 14 ಇನ್ನಿಂಗ್ಸ್​ಗಳಲ್ಲೇ 406 ರನ್​ಗಳಿಸಿರೋ 156 ಸ್ಟ್ರೈಕ್​ರೇಟ್​ನಲ್ಲಿ ಘರ್ಜಿಸಿದ್ದಾರೆ. 4 ಹಾಫ್​ ಸೆಂಚುರಿ, 1 ಸೆಂಚುರಿ ಸಿಡಿಸಿ ಆಫ್ರಿಕನ್​ ಬೌಲರ್​ಗಳನ್ನ ಕಾಡಿದ್ದಾರೆ. 

ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ, ಬ್ಯಾಟಿಂಗ್​, ಬೌಲಿಂಗ್​ ಎರಡೂ ವಿಭಾಗದಲ್ಲಿ ಹರಿಣಗಳನ್ನ ಕಾಡಿದ್ದಾರೆ. 15 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿ 140+ ಸ್ಟ್ರೈಕ್​​ರೇಟ್​​​ನಲ್ಲಿ 373 ರನ್​ ಚಚ್ಚಿರುವ ಹಾರ್ದಿಕ್ ಪಾಂಡ್ಯ, ಬೌಲಿಂಗ್​ನಲ್ಲಿ 14 ವಿಕೆಟ್​ಗಳನ್ನ ಬೇಟೆಯಾಡಿದ್ದಾರೆ. ವಿಶ್ವಕಪ್​ ಟೂರ್ನಿಯ ಲೀಗ್​ ಹಂತದ ಪಂದ್ಯಗಳಲ್ಲೂ ಸಾಲಿಡ್​ ಪರ್ಫಾಮೆನ್ಸ್​ ನೀಡಿರುವ ಹಾರ್ದಿಕ್​ ಪಾಂಡ್ಯ, ಇಂದು ಸೌತ್​ ಆಫ್ರಿಕಾಗೂ ಸವಾಲಾಗೋದ್ರಲ್ಲಿ ಅನುಮಾನವೇ ಬೇಡ. 

Team india (16)

ನಮೋ ಅಂಗಳದಲ್ಲಿ ಇಂದು ಸೌತ್​ ಆಫ್ರಿಕಾಗೆ ಎದುರಾಗೋ ಬಿಗ್ಗೆಸ್ಟ್​ ಥ್ರೆಟ್​ ಸ್ಪಿನ್​ ಮೆಜಿಶಿಯನ್ ವರುಣ್​ ಚಕ್ರವರ್ತಿ. ಇದೇ ಮೈದಾನದಲ್ಲಿ ಕೆಲ ದಿನಗಳ ಹಿಂದಷ್ಟೇ ಆಡಿದ್ದ ಪಂದ್ಯದಲ್ಲಿ ಡಚ್ಚರಿಗೆ ಡಿಚ್ಚಿ ಕೊಟ್ಟಿದ್ದ ಚಕ್ರವರ್ತಿ 3 ಓವರ್​ ಬೌಲಿಂಗ್​ ಮಾಡಿ 3 ವಿಕೆಟ್​​ ಕಬಳಿಸಿ ಮಿಂಚಿದ್ರು. ಜೊತೆಗೆ ಸೌತ್​ ಆಫ್ರಿಕಾ ವಿರುದ್ಧ ಆಡಿದ 8 ಪಂದ್ಯಗಳಲ್ಲೇ 22 ವಿಕೆಟ್​ ಕಬಳಿಸಿದ ಅದ್ಭುತ ಟ್ರ್ಯಾಕ್​ ರೆಕಾರ್ಡ್​ನ ವರುಣ್ ಚಕ್ರವರ್ತಿ ಹೊಂದಿದ್ದಾರೆ. ಹೀಗಾಗಿ ಚಕ್ರವರ್ತಿ ಚಮತ್ಕಾರದ ಭಯ ಸೌತ್​ ಆಫ್ರಿಕಾ ಪಡೆಯನ್ನ ಈಗಾಗಲೇ ಆವರಿಸಿದೆ. 

14 ಪಂದ್ಯ, 23 ವಿಕೆಟ್​.. 

ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​ ಕೂಡ ಸೌತ್​ ಆಫ್ರಿಕಾ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ. 2022ರಿಂದ ಈವರೆಗೆ ಸೌತ್​ ಆಫ್ರಿಕಾ ವಿರುದ್ಧ ಆಡಿದಾಗೆಲ್ಲಾ ಆರ್ಷ್​​ದೀಪ್ ಸಿಂಗ್ ಕನ್ಸಿಸ್ಟೆಂಟ್​ ಆಗಿ ಆರ್ಭಟಸಿದ್ದಾರೆ. 14 ಪಂದ್ಯಗಳಿಂದ ಹಾಕಿ 48 ಓವರ್​ಗಳಲ್ಲಿ 23 ವಿಕೆಟ್​ಗಳನ್ನ ಬೇಟೆಯಾಡಿದ್ದಾರೆ. ಆದ್ರಲ್ಲೂ ಪವರ್​ ಪ್ಲೇನಲ್ಲೇ ಪಂಚ್​ ನೀಡಿ ಆರಂಭದಲ್ಲೇ ಸೌತ್​ ಆಫ್ರಿಕಾ ಬ್ಯಾಟಿಂಗ್​ಗೆ ಹಲವು ಬಾರಿ ಡ್ಯಾಮೇಜ್​ ಮಾಡಿದ್ದಾರೆ. ಇಂದಿನ ಪಂದ್ಯಕ್ಕೂ ಮುನ್ನ ಆಫ್ರಿಕಾದ ಟಾಪ್​ ಆರ್ಡರ್​ ಬ್ಯಾಟರ್ಸ್​ನ ಆರ್ಷ್​ದೀಪ್ ಆರ್ಭಟದ ಭಯ ಆವರಿಸಿದೆ. 

ಇದನ್ನೂ ಓದಿ: ಹೆತ್ತೋಳು ದೂರಾದ್ಲು.. ತಬ್ಬಲಿ ಮರಿಗೆ ಜೀವವಿಲ್ಲದ ಗೊಂಬೆಯೇ ಅಮ್ಮ.. ಕರುಣಾಜನಕ ಕಥೆ ಕೇಳಿ

team india (21)

ಸೌತ್​ ಆಫ್ರಿಕಾ ಎದುರು ಸೂಪರ್ಬ್​ ಪರ್ಫಾಮೆನ್ಸ್​ ನೀಡಿರುವ ಈ ಐವರು ಆಟಗಾರರೇ ಇಂದಿನ ಪಂದ್ಯದಲ್ಲಿ ಟೀಮ್​ ಇಂಡಿಯಾದ ಅಸ್ತ್ರ​.! ನಮೋ ಅಂಗಳದಲ್ಲಿ ಈ ಅಸ್ತ್ರಗಳ ಪ್ರಯೋಗಿಸಿ ಸೂಪರ್​-8ನಲ್ಲೂ ಗೆಲುವಿನ ಓಟ ಮುಂದುವರೆಸೋಕೆ ಟೀಮ್​ ಇಂಡಿಯಾ ಸಜ್ಜಾಗಿ ನಿಂತಿದೆ. ಟೀಮ್ ಇಂಡಿಯಾ ಫೈವ್​​ಸ್ಟಾರ್ಸ್​ ಪಂಚ್​ಗೆ ಸೌತ್​ ಆಫ್ರಿಕಾ ಆನ್ಸರ್​ ಕೊಡುತ್ತಾ? ಕಾದು ನೋಡೋಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs South Africa Ind vs SA T20 world cup
Advertisment