/newsfirstlive-kannada/media/media_files/2025/10/22/ashwini-gowda-4-2025-10-22-11-09-09.jpg)
ಬಿಗ್​ಬಾಸ್ ಸೀಸನ್​​ ಶುರುವಾಗಿ ಮೂರು ವಾರ ಕಳೆದರೂ ಮನೆಯಲ್ಲಿ ಯಾರೂ ಕ್ಯಾಪ್ಟನ್ ಇರಲಿಲ್ಲ. ಇದೀಗ ಬಿಗ್​ಬಾಸ್​ ಬಿಗ್ ಅನೌನ್ಸ್​​ಮೆಂಟ್ ಮಾಡಿದ್ದು, ಮುಂದಿನ ವಾರದಿಂದ ದೊಡ್ಮನೆಯಲ್ಲಿ ಕ್ಯಾಪ್ಟನ್ ಹವಾ ಇರಲಿದೆ.
ಸೀಸನ್​​ 12 ಮೊದಲ ಕ್ಯಾಪ್ಟನ್ ಯಾರು?
ಬಿಗ್​ಬಾಸ್ ಮಾಡಿರುವ ಘೋಷಣೆ ಪ್ರಕಾರ, ಈ ವಾರ ಮನೆಯು ತನ್ನ ಮೊಟ್ಟ ಮೊದಲ ಕ್ಯಾಪ್ಟನ್ ಅನ್ನು ಗಳಿಸಲಿದೆ. ಅರ್ಹತೆ ಇಲ್ಲದ ಸದಸ್ಯರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡಬೇಕು ವೈಲ್ಡ್ ಕಾರ್ಡ್​ ಸ್ಪರ್ಧಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಶ್ವೇತಭವನದಲ್ಲಿ ಟ್ರಂಪ್ ದೀಪಾವಳಿ ಆಚರಣೆ.. ಬಳಿಕ ಹೇಳಿದ್ದೇನು?
ಅಂತೆಯೇ ವೈಲ್ಡ್​ಕಾರ್ಡ್ ಸದಸ್ಯರು ಚರ್ಚೆ ಮಾಡಿದ್ದಾರೆ. ಒಬ್ಬೊಬ್ಬರೇ ತಮಗೆ ಇಷ್ಟವಿಲ್ಲದ ಅಭ್ಯರ್ಥಿಗಳ ಹೆಸರನ್ನು ಸೂಚಿಸಿದ್ದಾರೆ. ನಾವೇ ಅವರನ್ನು ಸ್ಟಾರ್ ಮಾಡೋದು ಬೇಡ ಎನ್ನುತ್ತ ಅಶ್ವಿನಿ ಗೌಡ ಹೆಸರನ್ನು ಹೇಳಿದ್ದಾರೆ. ಇದನ್ನು ಸಹಿಸದ ಅವರು, ಆಯ್ಕೆ ನಡೆಯುತ್ತಿದ್ದ ಸ್ಥಳದಿಂದ ಹೊರಟು ಹೋಗಿದ್ದಾರೆ.
ರಾಶಿ ಮತ್ತು ಜಾಹ್ನವಿ ಜೊತೆ ತಮ್ಮ ಕಣ್ಣೀರು ಒರೆಸುತ್ತ ಮನದಾಳವನ್ನು ಹಂಚಿಕೊಂಡಿದ್ದಾರೆ. ನಾನು ತುಂಬಾ ಕಷ್ಟಪಟ್ಟು ಆಡವಾಡಿದ್ದೀನಿ. ರೇಸ್​​ನಲ್ಲೇ ಬಿಟ್ಟಿಲ್ಲ ಅಂದ್ರೆ ಯಾವ ಕುದುರೆ ಗಟ್ಟಿ ಎಂದು ಹೇಗೆ ಗೊತ್ತಾಗುತ್ತೆ? ಬಿಗ್​ಬಾಸ್ ಮನೆಯಲ್ಲಿ ಅವಮಾನಗಳು ಆದಾಗ ಮರೆಯೋಕೂ ಸಾಧ್ಯವಿಲ್ಲ. ಅದನ್ನು ಮರೆತು ಮುಂದಕ್ಕೆ ಹೋಗೋದಕ್ಕೂ ಆಗಲ್ಲ ಎಂದಿದ್ದಾರೆ.
ಇದನ್ನೂ ಓದಿ: ದೀಪಾವಳಿ ಹಬ್ಬದಂದೇ ಇಬ್ಬರು ಮುದ್ದಾದ ಹೆಣ್ಮಕ್ಕಳೊಂದಿಗೆ ಜೀವಬಿಟ್ಟ ತಂದೆ..
ಕ್ಯಾಪ್ಟನ್ಸಿ ಓಟದಿಂದ ಅಶ್ವಿನಿ ಗೌಡ ಹೊರಕ್ಕೆ! ಎಲ್ಲಾ ವೈಲ್ಡ್ ಕಾರ್ಡ್ಸ್ ಮಹಿಮೆ.
— Colors Kannada (@ColorsKannada) October 22, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/msrhdRF3vM
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ