ಬಿಗ್​ ಬಾಸ್​ ಫಿನಾಲೆ: ಮೂರನೇ ರನ್ನರ್ ಅಪ್ ಆದ ಕಾವ್ಯ ಶೈವ..!

ಬಿಗ್​ ಬಾಸ್​ ಫಿನಾಲೆ ಪ್ರವೇಶ ಮಾಡಿದ್ದ ಕಾವ್ಯ ಶೈವ ಮೂರನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ವೀಕ್ಷಕರ ಬಹುಮತದ ಆಯ್ಕೆ ಪ್ರಕಾರ, ಕಾವ್ಯ ಶೈವ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

author-image
Ganesh Kerekuli
Kavya Shaiva (2)
Advertisment

ಬಿಗ್​ ಬಾಸ್​ ಫಿನಾಲೆ ಪ್ರವೇಶ ಮಾಡಿದ್ದ ಕಾವ್ಯ ಶೈವ ಮೂರನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ವೀಕ್ಷಕರ ಬಹುಮತದ ಆಯ್ಕೆ ಪ್ರಕಾರ, ಕಾವ್ಯ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಮನೆಯಿಂದ ಎವಿಕ್ಟ್‌ ಆಗ್ತಿರುವ ಸ್ಪರ್ಧಿ ಯಾರು ಅಂತಾ ವೀಕ್ಷಕರಿಗೆ ತಿಳಿಸಿಕೊಡಲು ಕ್ರೇಜಿ ಸ್ಟಾರ್‌ ಬಿಗ್‌ ಬಾಸ್‌ ಮನೆಗೆ ಬಂದಿದ್ದರು. 

ಎಲಿಮಿನೇಷನ್‌ ಪ್ರಕ್ರಿಯೆ ಮುಗಿದ ಬಳಿಕ ಕಾವ್ಯ ಶೈವ, ರವಿ ಮಾಮಾ ಜೊತೆ ಬಿಗ್‌ ಬಾಸ್‌ ವೇದಿಕೆಗೆ ಆಗಮಿಸಿದರು. ಕಿಚ್ಚ ಸುದೀಪ್‌ ಕಾವ್ಯ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. 

ಕನ್ನಡ ಬಿಗ್​ ಬಾಸ್​ ಸೀಸನ್-12 ರ ಅಂತಿಮ 6 ಸ್ಪರ್ಧಿಗಳ ಪೈಕಿಯಲ್ಲಿ ಕಾವ್ಯ ಶೈವ ಕೂಡ ಒಬ್ಬರಾಗಿದ್ದರು. ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಮ್ಯೂಟಂಟ್ ರಘು, ಧನುಷ್ ಗೌಡ ಫೈನಲಿಸ್ಟ್ ಸ್ಪರ್ಧಿಗಳಾಗಿದ್ದರು. ಇದೀಗ ಧನುಷ್ 6ನೇ ಸ್ಥಾನ ಪಡೆದುಕೊಂಡ್ರೆ ರಘು ಅವರು ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. 

ಇದನ್ನೂ ಓದಿ: ಬಿಗ್ ಬಾಸ್​ ಮನೆ ಎದುರು ಗಿಲ್ಲಿ ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ

Kavya shaiv

ಕಾವ್ಯ ಶೈವ ಕನ್ನಡ ಕಿರುತೆರೆಯ ನಟಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದರು. ಇದೀಗ ಬಿಗ್ ಬಾಸ್​​ ಮೂಲಕ ಹೆಚ್ಚು ಜನಪ್ರಿಯತೆ ಪಡೆದು ಕರ್ನಾಟಕದ ಮನೆ ಮಾತಾಗಿದ್ದಾರೆ.

ಟಿವಿ ವಾಹಿನಿಗಳ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​ಗೆ ಭಾರೀ ಜನಪ್ರಿಯತೆ ಇದೆ. ದೇಶದಲ್ಲಿ ಬಿಗ್ ಬಾಸ್ ಮೊದಲು ಆರಂಭವಾಗಿದ್ದು, ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು. ಬಿಗ್​ ಬಾಸ್ ಅಂದ್ರೆ ವ್ಯಕ್ತಿತ್ವದ ಆಟ. ಪ್ರತಿಭೆಯನ್ನು ಶೋಧಿಸುತ್ತ ವ್ಯಕ್ತಿತ್ವವನ್ನು ಅನಾವರಣ ಮಾಡುವ ಕಲೆಗಾರಿಕೆಯೇ ಬಿಗ್​ ಬಾಸ್​ನ ತಾಖತ್ತು. ವ್ಯಕ್ತಿತ್ವದ ಆಟದಲ್ಲಿ ಈ ವರ್ಷ ಒಟ್ಟು 24 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದರು. 

ಇದನ್ನೂ ಓದಿ: ಗಿಲ್ಲಿ ನಟ ಬಿಗ್​ ಬಾಸ್​ ಗೆದ್ದರೆ 20 ಲಕ್ಷ ರೂಪಾಯಿ ಕೊಡ್ತೀನಿ -ಶರವಣ ಘೋಷಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Bigg boss bigg boss kavya Kavya Shaiva
Advertisment