/newsfirstlive-kannada/media/media_files/2025/10/08/bigg-boss-11-2025-10-08-14-56-22.jpg)
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಖುಷಿ ಸುದ್ದಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಬಿಗ್​ಬಾಸ್​ಗೆ ಮತ್ತೆ ಶಾಕ್ ಆಗಿದೆ. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ.. 10 ದಿನದ ಕಾಲಾವಕಾಶ ವಿಚಾರ ಬಗ್ಗೆ ನಾವು ತೀರ್ಮಾನ ಮಾಡಿಲ್ಲ. ನಮ್ಮ ಹತ್ತಿರ ಯಾವುದೇ ಅರ್ಜಿ ಬಂದಿಲ್ಲ. ಡಿಸಿಎಂ ಹೇಳಿರಬಹುದು, ನಮಗೆ ಮನವಿ ಬಂದಿಲ್ಲ, ಮನವಿ ಬಂದ್ರೆ ನೋಡಬಹುದು ಎಂದಿದ್ದಾರೆ.
ನಾವು ಬಿಗ್ ಬಾಸ್ ವಿರೋಧಿ ಅಲ್ಲ. ನಾವು ಬಿಗ್ ಬಾಸ್ ವಿರುದ್ಧ ಇಲ್ಲ. ಅಲ್ಲಿ ಜಾಲಿವುಡ್ ವೇಲ್ಸ್ ಹೆಸರಲ್ಲಿ ಸ್ಟುಡಿಯೋ ನಡೀತಿದೆ. ಅಲ್ಲಿ ಬಿಗ್ ಬಾಸ್ ನಡೆಯೋದೇ ನಮಗೆ ಗೊತ್ತಿರಲಿಲ್ಲ. ನಾವು ಬಿಗ್​ಬಾಸ್​ಗೆ ವಿರೋಧ ಇಲ್ಲ. ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ. ಬಿಗ್​ಬಾಸ್ ಬಗ್ಗೆ ನಮಗೆ ಮನವಿಯೇ ಬಂದಿಲ್ಲ.
ಜಾಲಿವುಡ್​ಗೆ ನಾವು ಪದೇ ಪದೇ ನೋಟಿಸ್ ಕೊಟ್ಟಿದ್ದೇವೆ. ನೋಟಿಸ್ ಕೊಟ್ಟಾಗ ಅವರು ಸ್ಪಂದಿಸಿಲ್ಲ. ಅವರಿಗೆ ಬೇರೆ ವಿಷಯ ಮಾತಾಡೋಕೆ ಹಕ್ಕು ಇಲ್ಲ. ಬಿಗ್ ಬಾಸ್ ವಿರುದ್ಧ ನಾವು ಅಲ್ಲ. ಸೆಪ್ಟೆಂಬರ್​ನಲ್ಲಿ ಸಮಸ್ಯೆ ಆಗಿತ್ತು. ಹೀಗಾಗಿ ನನ್ನ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಸೆಪ್ಟೆಂಬರ್ 16ಕ್ಕೆ ನಾವು ನಿರ್ಣಯ ಮಾಡಿ ಕ್ಲೋಸರ್ ಆರ್ಡರ್ ಕೊಟ್ಟಿದ್ದೀವಿ. ಅಕ್ಟೋಬರ್ 6 ರಂದು ಕ್ಲೋಸರ್ ಆರ್ಡರ್ ಕೊಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಈ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಅವಕಾಶ ಇಲ್ಲ. ಬಿಗ್ ಬಾಸ್ ಬರೀ ಒಂದೂವರೆ ಎಕರೆಯಲ್ಲಿ ನಡೀತಿದೆ. ನಾವು ಪೂರ್ತಿ 30/35 ಎಕರೆ ಕ್ಲೋಸರ್​ಗೆ ನೋಟಿಸ್ ಕೊಟ್ಟಿರೋದು ಎಂದಿದ್ದಾರೆ.
ರೆಡ್ ಕ್ಯಾಟಗರಿಯಲ್ಲಿ ಜಾಲಿವುಡ್
ಮನವಿ ಬಂದ್ರೆ ಕಾನೂನಿನಲ್ಲಿ ಕಾಲಾವಕಾಶ ಕೊಡಲು ಅವಕಾಶ ಇದೆ. 90 ದಿನಗಳ ಕಾಲ ಕೂಡ ಕಾಲಾವಕಾಶ ಕೊಡಲು ಅನುಮತಿ ಇದೆ. ಆದ್ರೆ ಇದುವರೆಗೂ ಯಾವುದೇ ಮನವಿ ಬಂದಿಲ್ಲ. ಸ್ಪಾಟ್ ಮಹಜರ್ ಮಾಡಿ 3 ಬಾರಿ ನೋಟಿಸ್ ಕೊಟ್ಟಿದ್ದೇವೆ. ಮಹಜರ್ ಮಾಡಿದಾಗಲೂ ಎಚ್ಚೆತ್ತುಕೊಂಡಿಲ್ಲ. ಈಗ ಮನವಿ ಕೊಟ್ಟರೇ ಅವರಿಗೆ ಕಾಲಾವಕಾಶ ಕೊಡ್ತೀವೆ. ಇಷ್ಟು ದಿನದಲ್ಲಿ ಸರಿಪಡಿಸ್ತೀವೆ ಅಂತಾ ಮನವಿ ಕೊಟ್ಟರೆ ಅವಕಾಶ ಕೊಡ್ತೀವೆ. ರೆಡ್ ಕ್ಯಾಟಗರಿಯಲ್ಲಿ ಜಾಲಿವುಡ್ ಇದೆ. ಅವರು ಮನವಿ ಕೊಟ್ಟರೇ ಕಾನೂನು ಪ್ರಕಾರ ಏನಿದೆ ನಿರ್ಧಾರ ಆಗುತ್ತೆ ಎಂದಿದ್ದಾರೆ.
ಇದನ್ನೂ ಓದಿ:ಜಾಲಿವುಡ್ ಸ್ಟುಡಿಯೋಗೆ ಬೀಗ.. ಕಲುಷಿತ ನೀರು ಕುಡಿದು 10 ಜಾನುವಾರು ಸಾ*ನ್ನಪ್ಪಿರೋ ಆರೋಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ