/newsfirstlive-kannada/media/media_files/2025/10/08/dk-shivakumar-kiccha-sudeep-2025-10-08-11-38-58.jpg)
ಬೆಂಗಳೂರು: ಬಿಗ್​ಬಾಸ್ (Bigg Boss) ಮನೆಗೆ ಬೀಗ ಜಡಿದಿರೋದನ್ನು ಜೆಡಿಎಸ್ (JDS)​ ನೇರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್​ ಎಂದು ಜೆಡಿಎಸ್​​ ಸೋಶಿಯಲ್ ಮೀಡಿಯಾದಲ್ಲಿ ಹೇಳಿದೆ.
ಜೆಡಿಎಸ್ ಮಾಡುತ್ತಿರುವ ಆರೋಪಕ್ಕೆ ಬೆಂಗಳೂರಲ್ಲಿ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಮತ್ತು ಜೆಡಿಎಸ್ ನವರು ರಾಜಕೀಯ ಮಾಡಲಿ. ನಾನು ಅದರ ಬಗ್ಗೆ ತಲೆ ಕಡಿಸಿಕೊಳ್ಳಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಾಡಿದ್ದಾರೆ.
ಇದನ್ನೂ ಓದಿ:ರೋಹಿತ್ ನಾಯಕತ್ವ ತಲೆದಂಡದ ಹಿಂದೆ ಡ್ರೆಸ್ಸಿಂಗ್ ರೂಮ್ ಸೀಕ್ರೆಟ್..!
ನಾನು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೀನಿ. ಉದ್ಯೋಗ ಮುಖ್ಯ. ಏನೇ ಇದ್ದರೂ ಅವರಿಗೆ ಒಂದು ಅವಕಾಶ ಸಿಗಬೇಕು. ಸಮಸ್ಯೆ ಬಗೆಹರಿಸಿಕೊಳ್ಳಲ್ಲಿ ಎಂದು ಹೇಳಿದ್ದೇನೆ.ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೂ ಕಾಲ್ ಮಾಡಿದ್ದೆ. ನಮ್ಮಲ್ಲಿ ಮನರಂಜನೆ ಸಹ ಮುಖ್ಯ. ನಾನೇ ಉದ್ಘಾಟನೆ ಮಾಡಿದ್ದೀನಿ. ಅವರಿಗೆ ನನ್ನ ಬಗ್ಗೆ ಮಾತಾಡಿಲ್ಲ ಅಂದ್ರೆ ನೆಮ್ಮದಿ ಇರಲ್ಲ. ಅವರಿಗೆ ಶಕ್ತಿ ಬರಲ್ಲ, ನಿದ್ದೆ ಬರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಗ್ ಬಾಸ್ ಆಗಲಿ, ಯಾವುದೇ ಆಗಲಿ, ಮನೋರಂಜನೆ ಇರಬೇಕು. ಹೊಡಿಕೆ ಮಾಡಿರುತ್ತಾರೆ ಏನೋ ತಪ್ಪು ಮಾಡಿರ್ತಾರೆ. ತಪ್ಪನ್ನು ಸರಿ ಮಾಡಿಕೊಳ್ಳಲು ಅವಕಾಶ ಕೋಡಬೇಕು. ಇದು ನನ್ನ ಸಲಹೆ ಎಂದರು.
ಇದನ್ನೂ ಓದಿ: ಬಿಗ್ ಬಾಸ್​​ ಮನೆಗೆ ಬೀಗ.. ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ